ಕೇರಳ ಸಮೀಕ್ಷೆ: ‘ದೇವರ ನಾಡಲ್ಲಿ’ ಪಿಣರಾಯಿ ವಿಜಯನ್ ಪತನ? ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಅಧಿಕಾರ | Kerala Assembly Election Opinion Poll 2026 Manorama Cvoter Survey Udf Lead San

ಕೇರಳ ಸಮೀಕ್ಷೆ: ‘ದೇವರ ನಾಡಲ್ಲಿ’ ಪಿಣರಾಯಿ ವಿಜಯನ್ ಪತನ? ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಅಧಿಕಾರ | Kerala Assembly Election Opinion Poll 2026 Manorama Cvoter Survey Udf Lead San



ಕೇರಳ ಸಮೀಕ್ಷೆ: ‘ದೇವರ ನಾಡಲ್ಲಿ’ ಪಿಣರಾಯಿ ವಿಜಯನ್ ಪತನ? ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಅಧಿಕಾರ | Kerala Assembly Election Opinion Poll 2026 Manorama Cvoter Survey Udf Lead San

ಮುಂದಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೇರಲಿದೆ ಎಂದು ಮನೋರಮಾ ನ್ಯೂಸ್ ಸಿ-ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ. 140 ಸ್ಥಾನಗಳ ಪೈಕಿ ಯುಡಿಎಫ್ 69-81 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಆಡಳಿತಾರೂಢ ಎಲ್‌ಡಿಎಫ್ 57-69 ಸ್ಥಾನಗಳಿಗೆ ಸೀಮಿತವಾಗಲಿದೆ. 

ಕೊಚ್ಚಿ (ಮಾ.1): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಧಿಕಾರ ಪಡೆದುಕೊಳ್ಳಲಿದೆ ಎಂದು ಹೊಸ ಸಮೀಕ್ಷೆ ಭವಿಷ್ಯ ನುಡಿಯುತ್ತಿದ್ದಂತೆ ಕೇರಳ ಚುನಾವಣೆಯ ಪ್ರೆಡಿಕ್ಶನ್‌ಗಳು ಬಿಸಿ ಏರಿಸಿವೆ. ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವಾರದಷ್ಟು ಸಮಯ ಇರುವಾಗ, ಸಿಪಿಎಂ ನೇತೃತ್ವದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್), ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ರಂಗ (ಯುಡಿಎಫ್) ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ಸ್ಪರ್ಧೆ ಬಿಗಿಯಾಗಿದೆ. ಆದರೆ, ಹೊಸ ಸಮೀಕ್ಷೆಯೊಂದು ಎರಡೂ ರಂಗಗಳು ಮತ್ತು ಬಿಜೆಪಿ ನಡುವಿನ ತ್ರಿಕೋನ ಹೋರಾಟದ ಫಲಿತಾಂಶವನ್ನು ಭವಿಷ್ಯ ನುಡಿದಿದೆ.

ಮನೋರಮಾ ನ್ಯೂಸ್ ಸಿ-ವೋಟರ್ ಮೆಗಾ ಚುನಾವಣಾ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎನ್ನಲಾಗಿದೆ. 140 ಸ್ಥಾನಗಳ ವಿಧಾನಸಭೆಯಲ್ಲಿ 69-81 ಸ್ಥಾನಗಳನ್ನು ಗೆಲ್ಲಲಿದೆ. ಎಡರಂಗ 57 ರಿಂದ 69 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಎನ್‌ಡಿಎ ಒಂದರಿಂದ ಐದು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. 140 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 90,000 ಸ್ಯಾಂಪಲ್‌ಗಳನ್ನು ಬಳಸಿಕೊಂಡು ಸಮೀಕ್ಷೆಯನ್ನು ನಡೆಸಲಾಗಿದೆ.

ದಕ್ಷಿಣ ಕೇರಳ

ರಾಜಧಾನಿ ತಿರುವನಂತಪುರಂನಲ್ಲಿ, ಸಮೀಕ್ಷೆಯು ನೇಮಮ್ ಮತ್ತು ಕಜಕೂಟಂ ಎಂಬ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಅವಕಾಶವಿದೆ ಅನ್ನೋದನ್ನು ಸೂಚಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನೇಮಮ್‌ನಲ್ಲಿ ಗೆಲ್ಲುವ ಸಾಧ್ಯತೆಯಿದೆ, ಆದರೆ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಕೂಡ ಕಜಕೂಟಂ ಕ್ಷೇತ್ರದಲ್ಲಿ ಕೂಡ ಗೆಲ್ಲುವ ಅವಕಾಶ ಹೊಂದಿದ್ದಾರೆ ಎನ್ನುವ ಸೂಚನೆ ಸಿಕ್ಕಿದೆ. ಈ ಎರಡೂ ಕ್ಷೇತ್ರಗಳು ಪ್ರಬಲ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿವೆ.

14 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತಿರುವನಂತಪುರಂ ಜಿಲ್ಲೆಯಲ್ಲಿ ಎಡರಂಗವು 8- 10 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಯ ಫಲಿತಾಂಶಗಳು ಭವಿಷ್ಯ ನುಡಿದಿವೆ. ಯುಡಿಎಫ್ ಎರಡರಿಂದ ನಾಲ್ಕು ಸ್ಥಾನಗಳನ್ನು ಪಡೆಯಲಿದೆ ಎಂದು ಊಹಿಸಲಾಗಿದೆ. ಎನ್‌ಡಿಎ ಕೂಡ ಒಂದರಿಂದ ಮೂರು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಆಲಪ್ಪುಳದಲ್ಲಿ, ಎಲ್‌ಡಿಎಫ್ ಆರರಿಂದ ಎಂಟು ಸ್ಥಾನಗಳಲ್ಲಿ ಮತ್ತು ಯುಡಿಎಫ್ ಒಂದರಿಂದ ಮೂರು ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಎನ್‌ಡಿಎ ಇಲ್ಲಿ ಯಾವುದೇ ಸ್ಥಾನ ಗೆಲ್ಲೋದಿಲ್ಲ ಎನ್ನಲಾಗಿದೆ.

ಪಥಮತ್ತಿಟ್ಟ ಕ್ಷೇತ್ರದಲ್ಲಿ ಎಲ್‌ಡಿಎಫ್ ತನ್ನ ಪ್ರಾಬಲ್ಯ ಕಳೆದುಕೊಳ್ಳುಬಹುದು. 2021 ರಲ್ಲಿ, ಎಲ್‌ಡಿಎಫ್ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿತು, ಈ ಬಾರಿ ಯುಡಿಎಫ್ ಮೂರರಿಂದ ಐದು ಸ್ಥಾನಗಳನ್ನು ಗೆಲ್ಲಬಹುದು ಎನ್ನಲಾಗಿದೆ. ಎಡರಂಗವು ಸೊನ್ನೆಯಿಂದ ಎರಡು ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ನೀಡಿದೆ. ಈ ಬಾರಿಯೂ ಪಥನಂತಿಟ್ಟ ಜಿಲ್ಲೆಯಲ್ಲಿ ಎನ್‌ಡಿಎ ಗೆಲ್ಲುವ ಸಾಧ್ಯತೆ ಇಲ್ಲ ಎಂದು ಸಮೀಕ್ಷೆ ಹೇಳುತ್ತದೆ.

ಕೊಲ್ಲಂನಲ್ಲಿ, ಈ ಬಾರಿ ಎಡ ಅಲೆ ಇರುವುದಿಲ್ಲ ಎಂದು ಸಮೀಕ್ಷೆ ಭವಿಷ್ಯ ಹೇಳಿದ್ದು, ಆಡಳಿತಾರೂಢ ರಂಗವು ಯುಡಿಎಫ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜಿಲ್ಲೆಯಲ್ಲಿ ಎಡರಂಗವು ಐದರಿಂದ ಏಳು ಸ್ಥಾನಗಳನ್ನು ಮತ್ತು ಯುಡಿಎಫ್ ನಾಲ್ಕರಿಂದ ಆರು ಸ್ಥಾನಗಳನ್ನು ಪಡೆಯಬಹುದು. ಕೊಲ್ಲಂ ಜಿಲ್ಲೆಯಲ್ಲಿ ಎನ್‌ಡಿಎ ಗೆಲ್ಲುವ ಅವಕಾಶವಿರುವ ಯಾವುದೇ ಕ್ಷೇತ್ರಗಳಿಲ್ಲ ಎಂದು ಸಮೀಕ್ಷೆ ಸೂಚಿಸುತ್ತದೆ.

ಉತ್ತರ ಕೇರಳ

ಮಲಬಾರ್‌ನ ಐದು ಜಿಲ್ಲೆಗಳಾದ ಕಾಸರಗೋಡು, ಕಣ್ಣೂರು, ವಯನಾಡು, ಮಲಪ್ಪುರಂ ಮತ್ತು ಕೋಝಿಕ್ಕೋಡ್‌ನಲ್ಲಿ ಯುಡಿಎಫ್ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. 48 ರಲ್ಲಿ ಯುಡಿಎಫ್ 25 ರಿಂದ 34 ಸ್ಥಾನಗಳನ್ನು ಪಡೆಯಬಹುದು ಎನ್ನಲಾಗಿದೆ. ಎಲ್‌ಡಿಎಫ್ 14 ರಿಂದ 23 ಸ್ಥಾನಗಳನ್ನು ಪಡೆಯಲಿದೆ. ಕಾಸರಗೋಡಿನಲ್ಲಿ ಎಲ್‌ಡಿಎಫ್ ಎರಡರಿಂದ ನಾಲ್ಕು ಸ್ಥಾನಗಳೊಂದಿಗೆ ಮೇಲುಗೈ ಸಾಧಿಸಿದ್ದರೆ, ಯುಡಿಎಫ್ ಒಂದರಿಂದ ಮೂರು ಸ್ಥಾನಗಳನ್ನು ಪಡೆಯಬಹುದು. ಎನ್‌ಡಿಎ ಶೂನ್ಯದಿಂದ ಒಂದು ಸ್ಥಾನವನ್ನು ಪಡೆಯಬಹುದು ಆದರೆ ಯುಡಿಎಫ್ 39% ಮತಗಳ ಪಾಲನ್ನು ಪಡೆಯಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿಸಿದೆ.

ಕಣ್ಣೂರಿನಲ್ಲಿ, ಎಡರಂಗ ಪ್ರಾಬಲ್ಯ ಮುಂದುವರಿಸುತ್ತದೆ. ಅದು ಆರರಿಂದ ಎಂಟು ಸ್ಥಾನಗಳನ್ನು ಗೆಲ್ಲಬಹುದು, ಆದರೆ ವಯನಾಡ್‌ನಲ್ಲಿ, ಯುಡಿಎಫ್ ಮೇಲುಗೈ ಸಾಧಿಸಿದೆ. ಅದು ಆ ಸ್ಥಾನದಲ್ಲಿ ಎರಡರಿಂದ ಮೂರು ಸ್ಥಾನಗಳನ್ನು ಗೆಲ್ಲಬಹುದು.

ಕೋಝಿಕ್ಕೋಡ್‌ಗೆ ಸಂಬಂಧಿಸಿದಂತೆ, ಎಡರಂಗವು ಸ್ವಲ್ಪ ಮುನ್ನಡೆಯನ್ನು ಹೊಂದಿದೆ. ಅದು ಆರರಿಂದ ಎಂಟು ಸ್ಥಾನಗಳನ್ನು ಗೆಲ್ಲಬಹುದು. ಯುಡಿಎಫ್ ಐದರಿಂದ ಏಳು ಸ್ಥಾನಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ. ಮಲಪ್ಪುರಂನಲ್ಲಿ, ಎಲ್‌ಡಿಎಫ್ ಶೂನ್ಯದಿಂದ ಎರಡು ಸ್ಥಾನಗಳನ್ನು ಪಡೆಯಬಹುದು. ಆದರೆ, ಮುಸ್ಲಿಂ ಲೀಗ್‌ನ ಬಲದೊಂದಿಗೆ, ಯುಡಿಎಫ್ ಕೂಡ ಜಿಲ್ಲೆಯನ್ನು ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆಯಿದೆ. ಅದು 14-16 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅದು 49% ಮತಗಳ ಪಾಲನ್ನು ಪಡೆಯಬಹುದು.

ಮಧ್ಯ ಕೇರಳ

ಮಧ್ಯ ಕೇರಳದಲ್ಲಿ, ಪಾಲಕ್ಕಾಡ್‌ನಲ್ಲಿ ಎಲ್‌ಡಿಎಫ್ ಸ್ಪಷ್ಟ ಮುನ್ನಡೆ ಸಾಧಿಸಿದೆ. ಅದು 12 ಕ್ಷೇತ್ರಗಳ ಪೈಕಿ ಎಂಟರಿಂದ 10 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಯುಡಿಎಫ್ ಎರಡರಿಂದ ನಾಲ್ಕು ಸ್ಥಾನಗಳನ್ನು ಪಡೆಯಬಹುದು, ಆದರೆ ಎನ್‌ಡಿಎ ಗೆಲ್ಲುವ ಸಾಧ್ಯತೆಯಿಲ್ಲ. ತ್ರಿಶೂರ್‌ನಲ್ಲಿ, ಎಲ್‌ಡಿಎಫ್ 13 ಕ್ಷೇತ್ರಗಳ ಪೈಕಿ ಒಂಬತ್ತರಿಂದ 11 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಯುಡಿಎಫ್ ಎರಡರಿಂದ ನಾಲ್ಕು ಸ್ಥಾನಗಳನ್ನು ಪಡೆಯುತ್ತದೆ, ಆದರೆ ಎನ್‌ಡಿಎ ಒಂದು ಸ್ಥಾನವನ್ನು ಪಡೆಯಬಹುದು.

ಎರ್ನಾಕುಲಂನಲ್ಲಿ, 14 ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಯುಡಿಎಫ್ 12-14 ಸ್ಥಾನಗಳನ್ನು ಪಡೆಯಬಹುದು. ಎಲ್‌ಡಿಎಫ್ ಎರಡು ಸ್ಥಾನಗಳವರೆಗೆ ಪಡೆಯುವ ನಿರೀಕ್ಷೆಯಿದೆ. ಎನ್‌ಡಿಎಗೆ ಎಲ್ಲಿಯೂ ಅವಕಾಶವಿಲ್ಲ. ಇಡುಕ್ಕಿಗೆ ಸಂಬಂಧಿಸಿದಂತೆ, ಯುಡಿಎಫ್ ಐದು ಸ್ಥಾನಗಳಲ್ಲಿ ಎರಡರಿಂದ ಐದು ಸ್ಥಾನಗಳನ್ನು ಗೆಲ್ಲಬಹುದು. ಎಡರಂಗವು ಗರಿಷ್ಠ ಎರಡು ಸ್ಥಾನಗಳನ್ನು ಪಡೆಯುತ್ತದೆ ಮತ್ತು ಇಡುಕ್ಕಿಯಲ್ಲಿಯೂ ಎನ್‌ಡಿಎ ಗೆಲ್ಲುವ ಸಾಧ್ಯತೆಯಿಲ್ಲ. ಕೊಟ್ಟಾಯಂನಲ್ಲಿ ಯುಡಿಎಫ್ ಏಳರಿಂದ ಒಂಬತ್ತು ಸ್ಥಾನಗಳನ್ನು ಗೆಲ್ಲಬಹುದು ಮತ್ತು ಎಲ್‌ಡಿಎಫ್ ಎರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಎನ್‌ಡಿಎ ಯಾವುದೇ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿಲ್ಲ. ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಸ್ಥಾನಗಳಿವೆ.



Source link

Leave a Reply

Your email address will not be published. Required fields are marked *