Headlines

KPTCL ತುರ್ತು ನಿರ್ವಹಣೆ ಕಾಮಗಾರಿ, ಶನಿವಾರ ಬೆಂಗಳೂರಲ್ಲಿ ಹಲವೆಡೆ ಕರೆಂಟ್‌ ಇರಲ್ಲ..! | Bengaluru Power Cut Saturday December 20 Kptcl Maintenance Areas List San

KPTCL ತುರ್ತು ನಿರ್ವಹಣೆ ಕಾಮಗಾರಿ, ಶನಿವಾರ ಬೆಂಗಳೂರಲ್ಲಿ ಹಲವೆಡೆ ಕರೆಂಟ್‌ ಇರಲ್ಲ..! | Bengaluru Power Cut Saturday December 20 Kptcl Maintenance Areas List San



KPTCL ತುರ್ತು ನಿರ್ವಹಣೆ ಕಾಮಗಾರಿ, ಶನಿವಾರ ಬೆಂಗಳೂರಲ್ಲಿ ಹಲವೆಡೆ ಕರೆಂಟ್‌ ಇರಲ್ಲ..! | Bengaluru Power Cut Saturday December 20 Kptcl Maintenance Areas List San

ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆನಗರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

ಬೆಂಗಳೂರು (ಡಿ.18): ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ವಿದ್ಯುತ್‌ ವ್ಯತ್ಯಯವಾಗಲಿದೆ. KPTCL ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನಿಮಾನ್ಸ್, ಜಯದೇವ, ಆರ್. ಆರ್ ನಗರ, ಬನಶಂಕರಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶನಿವಾರ ಅಂದರೆ ಡಿಸೆಂಬರ್‌ 20ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ನಿಮ್ಹಾನ್ಸ್, ಕಿದ್ವಾಯಿ, ಜಯನಗರ, ವಿಲ್ಸನ್ ಗಾರ್ಡನ್ ಮತ್ತು ಬನ್ನೇರುಘಟ್ಟ ರಸ್ತೆ, ಆರ್‌ವಿ ರಸ್ತೆ, ಐಎಎಸ್ ಕಾಲೋನಿ, 4ನೇ ಟಿ ಬ್ಲಾಕ್ ಜಯನಗರ, 9ನೇ ಬ್ಲಾಕ್ ಜಯನಗರ, ಬಿಎಚ್ಇಎಲ್ ಲೇಔಟ್, ತಿಲಕ್ ನಗರ, 9ನೇ ಬ್ಲಾಕ್ ಜಯನಗರ, ಶಾಂತಿ ಪಾರ್ಕ್ ಮತ್ತು ಅಪಾರ್ಟ್‌ಮೆಂಟ್‌, ಜಯದೇವ ಆಸ್ಪತ್ರೆ, ಎನ್ಎಸ್ ಪಾಳ್ಯ ಮುಖ್ಯ ರಸ್ತೆ, ಜಿಆರ್‌ಬಿ ಮುಖ್ಯ ರಸ್ತೆ, ಜೈನ ದೇವಾಲಯ ರಸ್ತೆ, ಬಿಟಿಎಂ 4ನೇ ಹಂತದ ಕೆಲವು ಭಾಗಗಳು, ವೈಶ್ಯ ಬ್ಯಾಂಕ್ ಕಾಲೋನಿ, ಬಿಟಿಎಂ 2ನೇ ಹಂತ, ಎಂಸಿಎಚ್ಎಸ್ ಲೇಔಟ್, ಶಾಂತಿನಿಕೇತನ ಶಾಲೆ, ಮೈಕೋ ಲೇಔಟ್‌ನಲ್ಲಿ ಕರೆಂಟ್‌ ಇರೋದಿಲ್ಲ.

ಬನ್ನೇರುಘಟ್ಟ ಮುಖ್ಯರಸ್ತೆ ಮತ್ತು ಸುತ್ತಮುತ್ತಲಿನ, KEB ಕಾಲೋನಿ, BTM 1ನೇ ಹಂತ, ಉತ್ತರಹಳ್ಳಿ, ವಡ್ಡರಪಾಳ್ಯ, ಪೂರ್ಣ ಪ್ರಜ್ಞಾ ಲೇಔಟ್, ದ್ವಾರಕಾನಗರ, ಬನಶನಕರಿ 6ನೇ ಹಂತ, 80″ ರಸ್ತೆ, ಶ್ರೀನಗರ, ಹೊಸಕೆರೆಹಳ್ಳಿ, ತ್ಯಾಗರಾಜನಗರ, ಬಸವನ ಗುಡಿ, ಬನಶಂಕರಿ 3ನೇ ಹಂತ, ಕತ್ರಿಗುಪ್ಪೆ, ಗಿರಿನಗರ 4ನೇ ಹಂತ, ಐಟಿಐ ಲೇಔಟ್, 100 ಅಡಿ ವರ್ತುಲ ರಸ್ತೆ, ಕಾಮಕ್ಯಾ, ಕೆ.ಆರ್ ಲೇಔಟ್, ಶಾರದನಗರ, ಚುಂಚುಘಟ್ಟ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.



Source link

Leave a Reply

Your email address will not be published. Required fields are marked *