50 ಲಕ್ಷದ ಸ್ಯಾಲರಿ ಬಿಟ್ಟು ಮೊಮೊ ಶಾಪ್ ತೆಗೆದ ವ್ಯಕ್ತಿ, 2.5 ವರ್ಷದಲ್ಲಿ 5 ಕೋಟಿ ಗಳಿಕೆ | Gurgaon Man Quits Rs 50 Lpa Job To Start Momo Business Earned Rs 5 Crore

50 ಲಕ್ಷದ ಸ್ಯಾಲರಿ ಬಿಟ್ಟು ಮೊಮೊ ಶಾಪ್ ತೆಗೆದ ವ್ಯಕ್ತಿ, 2.5 ವರ್ಷದಲ್ಲಿ 5 ಕೋಟಿ ಗಳಿಕೆ | Gurgaon Man Quits Rs 50 Lpa Job To Start Momo Business Earned Rs 5 Crore



50 ಲಕ್ಷದ ಸ್ಯಾಲರಿ ಬಿಟ್ಟು ಮೊಮೊ ಶಾಪ್ ತೆಗೆದ ವ್ಯಕ್ತಿ, 2.5 ವರ್ಷದಲ್ಲಿ 5 ಕೋಟಿ ಗಳಿಕೆ | Gurgaon Man Quits Rs 50 Lpa Job To Start Momo Business Earned Rs 5 Crore

ಸೋಶಿಯಲ್ ಮೀಡಿಯಾದಲ್ಲಿ ಸಕ್ಸಸ್ ಉದ್ಯಮಿಯೊಬ್ಬರ ಕಥೆ ವೈರಲ್ ಆಗಿದೆ. ಲಕ್ಷಾಂತರ ರೂಪಾಯಿ ಸಂಬಳದ ಕೆಲ್ಸ ಬಿಟ್ಟು ಬ್ಯುಸಿನೆಸ್ ಶುರು ಮಾಡಿದ ವ್ಯಕ್ತಿ ಈಗ ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡ್ತಿದ್ದಾರೆ. 

ಲಕ್ಷಾಂತರ ರೂಪಾಯಿ ಸಂಬಳ ಬಿಟ್ಟು ಬ್ಯುಸಿನೆಸ್ (Business) ಗೆ ಇಳಿಯೋ ಧೈರ್ಯ ಮಾಡೋದು ಸುಲಭವಲ್ಲ. ಒಳ್ಳೆ ಕೆಲ್ಸ ಬಿಟ್ಟು, ಉದ್ಯೋಗ ಶುರು ಮಾಡಿದ ವ್ಯಕ್ತಿಯೊಬ್ಬರು ಈಗ ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೊಮೊ ಮಾರಾಟಗಾರನ ಯಶಸ್ಸಿನ ಕಥೆ ಎಲ್ಲರ ಗಮನ ಸೆಳೆದಿದೆ. ಯುವ ಉದ್ಯಮಿಗಳಿಗೆ ಸ್ಪೂರ್ತಿಯಾಗಿದೆ.

ಸಕ್ಸಸ್ ಕಂಡ ಮೊಮೊ ಬ್ಯುಸಿನೆಸ್

ಸಕ್ಸಸ್ ಸುಲಭವಾಗಿ ಸಿಗೋದಿಲ್ಲ. ಮೊದಲು ಧೈರ್ಯ ಮಾಡಿ ನದಿಗೆ ಇಳಿಬೇಕು. ಅದಾದ್ಮೇಲೆ ಈಜಿ ದಡ ಸೇರುವ ಪ್ರಯತ್ನ ನಡೆಸಬೇಕು. ನದಿ ಆಳವಾಗಿದೆ ಅಂತ ದೂರದಿಂದಲೇ ನಿರ್ಧಾರ ಮಾಡಿ ಕೈಚೆಲ್ಲಿ ಕುಳಿತ್ರೆ ಯಶಸ್ಸು ಎಂದಿಗೂ ನಿಮ್ಮ ಕೈಸೇರೋದಿಲ್ಲ. ಗುರುಗ್ರಾಮ್ ಉದ್ಯಮಿ ಸಾಕೇತ್ ಸೌರಭ್ ನಡೆದು ಬಂದ ದಾರಿ ಕೂಡ ಸುಲಭವಾಗಿರಲಿಲ್ಲ. 2023 ರಲ್ಲಿ, ಸಾಕೇತ್ ಸೌರಭ್, ವಾರ್ಷಿಕವಾಗಿ ಸುಮಾರು 50 ಲಕ್ಷ ಸಂಬಳ ಬರ್ತಿದ್ದ ಕೆಲ್ಸವನ್ನು ಬಿಟ್ಟು ಮೊಮೊ ವ್ಯವಹಾರವನ್ನು ಪ್ರಾರಂಭಿಸಿದ್ದರು. ಇಂದು ಅವರ ಬ್ರ್ಯಾಂಡ್, ದಿ ಮೊಮೊಸ್ ಮಾಫಿಯಾ (The Momos Mafia), ಕೋಟಿಗಳಲ್ಲಿ ಆದಾಯ ಗಳಿಸುತ್ತಿದೆ. ದೇಶಾದ್ಯಂತ ಹಲವಾರು ರಾಜ್ಯಗಳಲ್ಲಿ ಬ್ರ್ಯಾಂಚ್ ಹೊಂದಿದೆ.

ರೈತರಿಗೆ ಖುಷಿ ಸುದ್ದಿ, ಕಿಸಾನ್ ಕ್ರೆಡಿಟ್ ಕಾರ್ಡ್ ಬಳಕೆ ಇನ್ನಷ್ಟು ಈಸಿ

ಬೀದಿ ಬದಿಯಲ್ಲಿ ಶುರುವಾದ ಬ್ಯುಸಿನೆಸ್

ಸಾಕೇತ್, ದೆಹಲಿಯ NIFT ನಲ್ಲಿ ಅಧ್ಯಯನ ಮಾಡಿದ್ದರು. ಓದು ಮುಗಿದ್ಮೇಲೆ ಒಂದು ಸ್ಟಾರ್ಟ್ಅಪ್ ಪ್ರಾರಂಭಿಸಿದ್ದರು. ನಂತ್ರ ಕಂಪನಿಯೊಂದರಲ್ಲಿ ಉತ್ಪನ್ನ ಪ್ರೊಡಕ್ಟ್ ಮ್ಯಾನೇಜರ್ ಆಗಿದ್ರು. ಪ್ರತಿ ವರ್ಷ ಅವರ ಸಂಪಾದನೆ 52 ಲಕ್ಷವಾಗಿತ್ತು. ಈ ಸಮಯದಲ್ಲಿ ತಮ್ಮ ಸಹೋದರಿ, ಸೋದರ ಮಾವನೊಂದಿಗೆ ಗುರುಗ್ರಾಮ್ನಲ್ಲಿ ಒಂದು ಸಣ್ಣ ಕೆಫೆ ಶುರು ಮಾಡಿದ್ರು. ಕೆಫೆಯಲ್ಲಿ ನಾನಾ ವೆರೈಟಿ ಫುಡ್ಸ್ ನಿಮಗೆ ಸಿಕ್ತಾಯಿತ್ತು. ಆದ್ರೆ ಮೊಮೊಗಳಿಗೆ ಬೇಡಿಕೆ ಹೆಚ್ಚಿತ್ತು. ಇದನ್ನು ಮನಗಂಡ ಸಾಕೇತ್, ಕೆಫೆ ಹೊರಗೆ ಮೊಮೊಗಳಿಗೆ ಮಾತ್ರ ಮೀಸಲಾಗಿರುವ ಸಣ್ಣ ಕೌಂಟರ್ ಸ್ಥಾಪಿಸಿದರು. ಈ ಪ್ರಯೋಗ ಯಶಸ್ವಿಯಾಯಿತು. ಇದಾದ ನಂತರ, ಅವರು ಗುರುಗ್ರಾಮ್ ನಲ್ಲಿ ಮೊಮೊ ಕಾರ್ಟ್ ಶುರು ಮಾಡಿದ್ರು. ಇದರಲ್ಲಿ ದಿನಕ್ಕೆ 10,000–12,000 ರೂಪಾಯಿ ಮೌಲ್ಯದ ಮೊಮೊ ಮಾರಾಟವಾಗ್ತಿದೆ. ಅಲ್ಲಿಗೆ ಭೇಟಿ ನೀಡಿದ್ದ ಅನೇಕ ಉದ್ಯೋಗಿಗಳು ತಾವೂ ಮೊಮೊ ಬ್ಯುಸಿನೆಸ್ ಶುರು ಮಾಡುವ ಆಸಕ್ತಿ ತೋರಿದ್ದರು. ನಂತ್ರ ಸಾಕೇತ್ ಫ್ರಾಂಚೈಸಿ ನೀಡಲು ಶುರು ಮಾಡಿದ್ರು.

ಮುಂದಿನ 2 ವರ್ಷ ಭಾರತದಲ್ಲಿ ಚಿನ್ನ ಬೆಳ್ಳಿ ಅಲ್ಲ ಈ ಲೋಹದ ಬೆಲೆ ಡಬಲ್, ICRA ವರದಿ

ಮೊಮೊಸ್ ಮಾಫಿಯಾ ಜನವರಿ 2024 ರಲ್ಲಿ ಅಧಿಕೃತವಾಗಿ ತನ್ನ ಹೆಸರು ನೋಂದಾಯಿಸಿಕೊಂಡಿದೆ. ಕಂಪನಿ ಒಟ್ಟು ಐದು ಪಾರ್ಟನರ್ಸ್ ಹೊಂದಿದೆ. ಆರಂಭದಲ್ಲಿ ಮೊಮೊ ಕಾರ್ಟ್ಗಳನ್ನು ಶುರು ಮಾಡಲಾಗಿತ್ತು. ಆದ್ರೆ ಆಡಳಿತಾತ್ಮಕ ಕ್ರಮ, ಸಿಬ್ಬಂದಿ ಕೊರತೆ ಮತ್ತು ಹವಾಮಾನ ಸಮಸ್ಯೆಗಳು ಎದುರಾದ್ವು. ಇದಕ್ಕೆ ಸಾಕೇತ್ ಪರಿಹಾರ ಕಂಡುಕೊಂಡ್ರು. ಸಣ್ಣ ಮಳಿಗೆಗಳನ್ನು ತೆರೆದು ಅದ್ರ ಹೊರಗೆ ಕಾರ್ಟ್ ಹಾಕಲು ಶುರು ಮಾಡಿದ್ರು. ಇದನ್ನು ಸಿಎಸ್ಆರ್ ಮಾದರಿ (ಕಾರ್ಟ್ ಸರ್ವಿಸ್ ರೆಸ್ಟೋರೆಂಟ್) ಎಂದು ಕರೆದರು. ಪ್ರಸ್ತುತ, ಕಂಪನಿಯು ಸರಿಸುಮಾರು 40 ಮೊಮೊ ಕಾರ್ಟ್ಗಳು, 20 ಸಣ್ಣ ಮಳಿಗೆಗಳು ಮತ್ತು 2 ತ್ವರಿತ ಸೇವಾ ರೆಸ್ಟೋರೆಂಟ್ಗಳನ್ನು ಹೊಂದಿದೆ . ಈ ಬ್ರ್ಯಾಂಡ್ 7 ರಾಜ್ಯಗಳಲ್ಲಿ ತನ್ನ ವ್ಯವಹಾರ ನಡೆಸುತ್ತಿದೆ.



Source link

Leave a Reply

Your email address will not be published. Required fields are marked *