Headlines

ಯಾದಗಿರಿ: ಕಾಮುಕ ಮಾವನಿಂದಲೇ ಅಪ್ರಾಪ್ತ ಸೊಸೆ ಗರ್ಭಿಣಿ, ವೈದ್ಯರ ತಪಾಸಣೆ ವೇಳೆ ಆಘಾತಕಾರಿ ಘಟನೆ ಬೆಳಕಿಗೆ! | Yadgir Father In Law Assaults Minor Sister In Law Impregnates Her

ಯಾದಗಿರಿ: ಕಾಮುಕ ಮಾವನಿಂದಲೇ ಅಪ್ರಾಪ್ತ ಸೊಸೆ ಗರ್ಭಿಣಿ, ವೈದ್ಯರ ತಪಾಸಣೆ ವೇಳೆ ಆಘಾತಕಾರಿ ಘಟನೆ ಬೆಳಕಿಗೆ! | Yadgir Father In Law Assaults Minor Sister In Law Impregnates Her



ಯಾದಗಿರಿ: ಕಾಮುಕ ಮಾವನಿಂದಲೇ ಅಪ್ರಾಪ್ತ ಸೊಸೆ ಗರ್ಭಿಣಿ, ವೈದ್ಯರ ತಪಾಸಣೆ ವೇಳೆ ಆಘಾತಕಾರಿ ಘಟನೆ ಬೆಳಕಿಗೆ! | Yadgir Father In Law Assaults Minor Sister In Law Impregnates Her

ಯಾದಗಿರಿ ಜಿಲ್ಲೆಯಲ್ಲಿ, ಮಾವನಿಂದಲೇ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಆರೋಗ್ಯ ತಪಾಸಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ.

ಯಾದಗಿರಿ (ನ.19): ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಮಾವನಿಂದಲೇ ಅತ್ಯಾ*ಚಾರಕ್ಕೊಳಗಾಗಿ ಗರ್ಭಿಣಿಯಾದ ಆಘಾತಕಾರಿ ಘಟನೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಕರೆತಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪತ್ನಿಯ ತಂಗಿಯ ಮೇಲೆ ಕಾಮುಕನ ಅಟ್ಠಹಾಸ:

ಸಂಬಂಧದಲ್ಲಿ ಕಾಮುಕನ ಪತ್ನಿಯ ತಂಗಿಯಾಗಿರುವ ಬಾಲಕಿ. ಸಂತ್ರಸ್ತ ಅಪ್ರಾಪ್ತೆ ಈಗ ಯಾದಗಿರಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಆರೋಗ್ಯ ತಪಾಸಣೆ ವೇಳೆ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ವೈದ್ಯರಿಂದ ತಕ್ಷಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ. ಆರೋಪಿ ಮಾವ ಈಗ ನಾಪತ್ತೆಯಾಗಿದ್ದು, ಅವನನ್ನು ಬಂಧಿಸಲು ಕೆಂಭಾವಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಳ:

ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶೀಧರ್ ಕೋಸುಂಭೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಇದೊಂದು ಅತ್ಯಂತ ಗಂಭೀರ ವಿಚಾರ. ಘಟನೆ ನಡೆದರೂ ದೀರ್ಘಕಾಲ ಪ್ರಕರಣ ದಾಖಲಾಗದೇ ಇರುವುದು ದುರ್ದೈವ. ತಕ್ಷಣ ಪ್ರಕರಣ ದಾಖಲಿಸಿ, ಸಂತ್ರಸ್ತ ಅಪ್ರಾಪ್ತೆಗೆ ಸಂಪೂರ್ಣ ರಕ್ಷಣೆ ಮತ್ತು ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಆಯೋಗ ಸೂಚನೆ ನೀಡಿದೆ ಎಂದು ಶಶೀಧರ್ ಕೋಸುಂಭೆ ತಿಳಿಸಿದ್ದಾರೆ.

ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ. ಈ ದಾರುಣ ಘಟನೆ ಸಮಾಜದಲ್ಲಿ ಆಘಾತ ಮೂಡಿಸಿದ್ದು, ಬಾಲಕಿಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.



Source link

Leave a Reply

Your email address will not be published. Required fields are marked *