Trump: ಟ್ರಂಪ್‌ರ 'ಬೋರ್ಡ್ ಆಫ್ ಪೀಸ್'ಗೆ ಹಣದ ಹೊಳೆ! 700 ಕೋಟಿ ಡಾಲರ್ ನೀಡಿದ 9 ದೇಶಗಳು

Trump: ಟ್ರಂಪ್‌ರ 'ಬೋರ್ಡ್ ಆಫ್ ಪೀಸ್'ಗೆ ಹಣದ ಹೊಳೆ! 700 ಕೋಟಿ ಡಾಲರ್ ನೀಡಿದ 9 ದೇಶಗಳು

Trump: ಟ್ರಂಪ್‌ರ 'ಬೋರ್ಡ್ ಆಫ್ ಪೀಸ್'ಗೆ ಹಣದ ಹೊಳೆ! 700 ಕೋಟಿ ಡಾಲರ್ ನೀಡಿದ 9 ದೇಶಗಳು

ವಾಷಿಂಗ್ಟನ್: ಜಾಗತಿಕವಾಗಿ ಶಾಂತಿ ಸ್ಥಾಪಿಸಲು ಮತ್ತು ಗಾಝಾದ ಮರುನಿರ್ಮಾಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಹೊಸ ಅಂತರಾಷ್ಟ್ರೀಯ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ‘ಬೋರ್ಡ್ ಆಫ್ ಪೀಸ್’ ಹೆಸರಿನ ಈ ಯೋಜನೆಗೆ ಇದುವರೆಗೆ ಒಂಬತ್ತು ದೇಶಗಳು ಬರೋಬ್ಬರಿ 700 ಕೋಟಿ ಡಾಲರ್ ನೀಡುವುದಾಗಿ ಮುಂದೆ ಬಂದಿವೆ. ವಾಷಿಂಗ್ಟನ್‌ನಲ್ಲಿ ನಡೆದ ‘ಬೋರ್ಡ್ ಆಫ್ ಪೀಸ್’ನ ಮೊದಲ ಸಭೆಯಲ್ಲಿ ಸ್ವತಃ ಡೊನಾಲ್ಡ್ ಟ್ರಂಪ್ ಈ ವಿಷಯವನ್ನು ತಿಳಿಸಿದ್ದಾರೆ.

ಈ ಯೋಜನೆಯನ್ನು ಮೊದಲು ಗಾಝಾದ ಪುನರ್ನಿರ್ಮಾಣಕ್ಕಾಗಿ ಅಂತಾನೇ ಶುರು ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಪ್ರಕಾರ, ಇಂಡೋನೇಷ್ಯಾ, ಮೊರಾಕ್ಕೊ, ಕಝಕಿಸ್ತಾನ್, ಕೊಸೊವೊ ಮತ್ತು ಅಲ್ಬೇನಿಯಾ ದೇಶಗಳು 700 ಕೋಟಿ ಡಾಲರ್ ನೀಡಲು ಒಪ್ಪಿಗೆ ಸೂಚಿಸಿವೆ.

ಗಾಝಾ ಪುನರ್ನಿರ್ಮಾಣಕ್ಕಾಗಿ ತಾವು ಮುಂದಾಳತ್ವ ವಹಿಸುವುದಾಗಿ ಮತ್ತು ಅಂತರಾಷ್ಟ್ರೀಯ ಶಾಂತಿ ಪಾಲನಾ ಪಡೆಯ ಭಾಗವಾಗುವುದಾಗಿ ಈ ಐದು ದೇಶಗಳು ಸಭೆಯಲ್ಲಿ ತಿಳಿಸಿವೆ. ದಕ್ಷಿಣ ಗಾಝಾದ ರಫಾದಲ್ಲಿ ಈ ಶಾಂತಿ ಪಾಲನಾ ಪಡೆಯನ್ನು ನಿಯೋಜಿಸಲಾಗುತ್ತದೆ. ಈಜಿಪ್ಟ್ ಮತ್ತು ಜೋರ್ಡಾನ್ ದೇಶಗಳು ಈ ಪಡೆಗೆ ತರಬೇತಿ ನೀಡಲಿವೆ.

ಆರಂಭದಲ್ಲಿ ಗಾಝಾದ ಪುನರ್ನಿರ್ಮಾಣಕ್ಕಾಗಿ ಘೋಷಣೆಯಾದ ‘ಬೋರ್ಡ್ ಆಫ್ ಪೀಸ್’ ಯೋಜನೆ, ನಂತರ ವಿಶ್ವಸಂಸ್ಥೆಗೆ ಪರ್ಯಾಯ ಎಂಬಂತೆ ಬಿಂಬಿತವಾಯಿತು. ಇದೇ ಕಾರಣಕ್ಕೆ ಹಲವು ದೇಶಗಳು ಟ್ರಂಪ್ ಅವರ ಈ ಯೋಜನೆಗೆ ಸೇರಲು ನಿರಾಕರಿಸಿದವು.

Source link

Leave a Reply

Your email address will not be published. Required fields are marked *