Paid leave election day ಕರ್ನಾಟಕದ 2 ಕ್ಷೇತ್ರ, ಮೂರು ರಾಜ್ಯಗಳಲ್ಲಿ ನಾಳೆ ಮತದಾನ, ಉದ್ಯೋಗಿಗಳಿಗೆ ವೇತನ ಸಹಿತ ರಜೆ | Election 9 April 2 Seats In Karnataka 3 States Go To Polls Paid Leave For All Employees

ಕರ್ನಾಟಕದ 2 ಕ್ಷೇತ್ರ, ಮೂರು ರಾಜ್ಯಗಳಲ್ಲಿ ನಾಳೆ ಮತದಾನ, ಉದ್ಯೋಗಿಗಳಿಗೆ ವೇತನ ಸಹಿತ ರಜೆ, ಚುನಾವಣಾ ಆಯೋಗದ ಆದೇಶದಿಂದ ಮತದಾನ ದಿನ ಕಾರ್ಮಿಕರು, ನೌಕರರಿಗೆ ವೇತನ ಸಹಿತ ರಜೆ ಸಿಗಲಿದೆ. 

ನವದೆಹಲಿ (ಏ.08) ಪಂಚ ರಾಜ್ಯಗಳ ಚುನಾವಣೆ ಪೈಕಿ ಮೂರು ರಾಜ್ಯಗಳಲ್ಲಿ ನಾಳೆ ಮತದಾನ ನಡೆಯಲಿದೆ. ಇದರ ಜೊತೆಗೆ ಕರ್ನಾಟಕದ 2 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಏಪ್ರಿಲ್ 9 ರಂದು ಅಸ್ಸಾಂ, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮತದಾನ ನಡೆಯಲಿದೆ. ಕರ್ನಾಟಕದ ಬಾಗಲಕೋಟೆ ಹಾಗೂ ದಾವಣೆಗೆರೆ ದಕ್ಷಿಣ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಇತ್ತೀಚೆಗೆ ಚುನಾವಣಾ ಆಯೋಗ ಆದೇಶ ನೀಡಿದಂತೆ ಮತದಾನ ದಿನ ಮತದಾನ ನಡೆಯುವ ಕ್ಷೇತ್ರಗಳಲ್ಲಿ ನೌಕರರಿಗೆ ವೇತನ ಸಹಿತ ರಜೆ ಸಿಗಲಿದೆ.

ಕರ್ನಾಟಕ ಉಪ ಚುನಾವಣೆ ದಿನಾಂಕ

  1. ಬಾಗಲಕೋಟೆ: ಎಪ್ರಿಲ್ 9
  2. ದಾವಣಗೆರೆ ದಕ್ಷಿಣ: ಎಪ್ರಿಲ್ 9

ವಿಧಾನಸಭೆ ಚುನಾವಣೆ ದಿನಾಂಕ

  1. ಅಸ್ಸಾಂ: ಎಪ್ರಿಲ್ 9
  2. ಕೇರಳ: ಎಪ್ರಿಲ್ 9
  3. ಪುದುಚೇರಿ: ಎಪ್ರಿಲ್ 9

ವೇತನ ಸಹಿತ ರಜೆ

ಚುನಾವಣಾ ಆಯೋಗ ಇತ್ತೀಚೆಗೆ ಮಹತ್ವದ ಆದೇಶ ನೀಡಿತ್ತು. ಚುನಾವಣಾ ದಿನದಂದ ದಿನಗೂಲಿ ನೌಕರರು, ತಾತ್ಕಿಲಕ ನೌಕರರು ಸೇರಿದಂತೆ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಘೋಷಿಸಿತ್ತು. ಎಲ್ಲಾ ವರ್ಗದ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲು ಘೋಷಿಸಿತ್ತು. ಮತದಾನದಲ್ಲಿ ಎಲ್ಲರು ಪಾಲ್ಗೊಳ್ಳುವಂತೆ ಮಾಡಲು ಚುನಾವಣಾ ಆಯೋಗ ಈ ಹೆಜ್ಜೆ ಇಟ್ಟಿತ್ತು. ಸಾಮಾನ್ಯವಾಗಿ ವೇತನದ ಕಾರಣದಿಂದ ರಜೆ ಹಾಕದೇ ಕೆಲಸದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಚುನಾವಣಾ ಆಯೋಗ ಈ ಮಹತ್ವದ ಆದೇಶ ನೀಡಿತ್ತು.

ಜನಪ್ರತಿನಿದಿ ಕಾಯ್ದೆ 1951ರ ಸೆಕ್ಷನ್ 135ಬಿ ಅಡಿಯಲ್ಲಿ ಈ ನಿಯಮ ರೂಪಿಸಲಾಗಿದೆ. ಕೈಗಾರಿಕೆ, ಕಚೇರಿ, ದಿನಗೂಲಿ ಸೇರಿದಂತೆ ಯಾವುದೇ ವಲಯದಲ್ಲಿ ಕೆಲಸ ಮಾಡುತ್ತಿರುವ ನೌಕರನಿಗೆ ವೇತನ ಸಹಿತ ರಜೆ ನೀಡಬೇಕು. ಮತದಾರರ ಬೇರೆ ರಾಜ್ಯದಲ್ಲಿ ಅಥವಾ ಕ್ಷೇತ್ರದಿಂದ ಹೊರಗೆ ಕೆಲಸ ಮಾಡುತ್ತಿದ್ದರೂ, ಆತನ ಮತದಾನದ ದಿನದಂದು ವೇತನ ಸಹಿತ ರಜೆ ನೀಡಬೇಕು. ನಿಯಮ ಉಲ್ಲಂಘಿಸಿದರೆ ಉದ್ಯೋಗದಾತರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.

ಮತದಾನ ಪ್ರಮಾಣ ಹೆಚ್ಚು ಮಾಡುವುದು ಹಾಗೂ ಪ್ರತಿಯೊಬ್ಬ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಚುನಾವಣಾ ಆಯೋಗ ಈ ಕ್ರಮ ಜಾರಿಗೆ ತಂದಿದೆ. ಹೀಗಾಗಿ ನಾಳೆ ಕರ್ನಾಟಕದ ಬಾಗಲಕೋಟೆ ಹಾಗೂ ದಾವಣೆಗೆರೆ ದಕ್ಷಿಣ ಕ್ಷೇತ್ರದ ನೌಕರರಿಗೆ ವೇತನ ಸಹಿತ ರಜೆ ಸಿಗಲಿದೆ.

ವಿಧಾನಸಭೆ ಚುನಾವಣೆ

  • ತಮಿಳುನಾಡು: ಎಪ್ರಿಲ್ 23
  • ಪಶ್ಚಮ ಬಂಗಾಳ: ಎಪ್ರಿಲ್ 23, 29

Source link

Leave a Reply

Your email address will not be published. Required fields are marked *