ಏರ್ ಇಂಡಿಯಾದಿಂದ ಮಹಾ ಎಡವಟ್ಟು; 1 ಕೋಟಿ ದಂಡ, ವಿಷಯ ಕೇಳಿ ಪ್ರಯಾಣಿಕರು ಫುಲ್ ಗಢಗಢ | Air India Airlines Fined Rs 1 Crore For Flying Eight Times Without Fitness Certificate Passengers Shocked Mrq

ಏರ್ ಇಂಡಿಯಾದಿಂದ ಮಹಾ ಎಡವಟ್ಟು; 1 ಕೋಟಿ ದಂಡ, ವಿಷಯ ಕೇಳಿ ಪ್ರಯಾಣಿಕರು ಫುಲ್ ಗಢಗಢ | Air India Airlines Fined Rs 1 Crore For Flying Eight Times Without Fitness Certificate Passengers Shocked Mrq



ಏರ್ ಇಂಡಿಯಾದಿಂದ ಮಹಾ ಎಡವಟ್ಟು; 1 ಕೋಟಿ ದಂಡ, ವಿಷಯ ಕೇಳಿ ಪ್ರಯಾಣಿಕರು ಫುಲ್ ಗಢಗಢ | Air India Airlines Fined Rs 1 Crore For Flying Eight Times Without Fitness Certificate Passengers Shocked Mrq

ಏರ್‌ ಇಂಡಿಯಾದ ಮತ್ತೊಂದು ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ವಿಷಯ ಕೇಳಿದ ಪ್ರಯಾಣಿಕರು ದೇವರಿಗೊಂದು ಥ್ಯಾಂಕ್ಸ್ ಹೇಳುತ್ತಿದ್ದಾರೆ. ಈ ಘೋರ ಅಪರಾಧಕ್ಕಾಗಿ ಏರ್ ಇಂಡಿಯಾಗೆ ಭಾರತದ ನಾಗರಿಕ ವಿಮಾನಯಾನ ನಿಯಂತ್ರಕ (DGCA) ಬರೋಬ್ಬರಿ 1 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.

ನವದೆಹಲಿ: ಅಹಮಾದಾಬಾದ್ ವಿಮಾನ ಪತನದ ಬಳಿಕ ಏರ್‌ ಇಂಡಿಯಾ ಏರ್‌ಲೈನ್ಸ್ ಮೇಲಿನ ಪ್ರಯಾಣಿಕರ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ನಡುವೆಯೂ ಏರ್‌ ಇಂಡಿಯಾ ಸೇವೆಯನ್ನು ನೀಡುತ್ತಿದೆ. ಇದೀಗ ಏರ್‌ ಇಂಡಿಯಾದ ಮತ್ತೊಂದು ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ವಿಷಯ ಕೇಳಿದ ಪ್ರಯಾಣಿಕರು ದೇವರಿಗೊಂದು ಥ್ಯಾಂಕ್ಸ್ ಹೇಳುತ್ತಿದ್ದಾರೆ. ಈ ಘೋರ ಅಪರಾಧಕ್ಕಾಗಿ ಏರ್ ಇಂಡಿಯಾಗೆ ಭಾರತದ ನಾಗರಿಕ ವಿಮಾನಯಾನ ನಿಯಂತ್ರಕ (DGCA) ಬರೋಬ್ಬರಿ 1 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.

ನಿಯಮ ಉಲ್ಲಂಘನೆಗೆ 1 ಕೋಟಿ ರೂ. ದಂಡ

ವಾಯು ಯೋಗ್ಯತಾ ಪರಿಶೀಲನಾ ಪ್ರಮಾಣಪತ್ರ (ವಿಮಾನ ಫಿಟ್‌ನೆಸ್ ಪ್ರಮಾಣಪತ್ರ) ಇಲ್ಲದೆ ಏರ್ ಇಂಡಿಯಾ ಎಂಟು ಬಾರಿ ಹಾರಾಟ ನಡೆಸಿದೆ. ಈ ನಿಯಮ ಉಲ್ಲಂಘನೆಗೆ ಏರ್‌ ಇಂಡಿಯಾಗೆ $110,000 (ಸರಿಸುಮಾರು 1 ಕೋಟಿ ರೂ.) ದಂಡ ವಿಧಿಸಲಾಗಿದೆ. ಡಿಜಿಸಿಎ ವರದಿಯಿಂದಾಗಿ ದೇಶದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಏರ್ ಇಂಡಿಯಾ ಮೇಲಿನ ವಿಶ್ವಾಸವನ್ನು ಮತ್ತಷ್ಟು ಕುಗ್ಗಿದೆ.

ಪಿಟಿಐ ವರದಿ ಪ್ರಕಾರ, ಸ್ವತಃ ಏರ್‌ ಇಂಡಿಯಾ ಸಂಸ್ಥೆಯೇ ನಿಯಮ ಉಲ್ಲಂಘನೆ ವಿಷಯ ತಿಳಿಸಿದಾಗ ಡಿಜಿಸಿಎ ಗೆ ಗೊತ್ತಾಗಿದೆ. ಇದು ನವೆಂಬರ್ 26, 2025ರ ಘಟನೆಯಾಗಿದೆ. ಕಂಪನಿಯು ತನ್ನ ಏರ್‌ಬಸ್ A320neo ವಿಮಾನಗಳಲ್ಲಿ ಒಂದರ ವಾಯು ಯೋಗ್ಯತಾ ಪ್ರಮಾಣಪತ್ರದ ಅವಧಿ ಮುಗಿದಿದೆ ಎಂದು ವರದಿ ಮಾಡಿತ್ತು. ಈ ವರದಿ ಬಳಿಕ DGCA ಡಿಸೆಂಬರ್ 2ರಂದು ತನಿಖೆ ಆರಂಭಿಸಿತ್ತು. ಪರವಾನಿಗೆ ಮುಕ್ತಾಯವಾಗಿದ್ರೂ ಏರ್ ಇಂಡಿಯಾ, ನವೆಂಬರ್ 24 ಮತ್ತು 25 ರಂದು ಎಂಟು ಬಾರಿ ಹಾರಾಟ ನಡೆಸಿತ್ತು.

ಏರ್ ಇಂಡಿಯಾದಿಂದ ಸ್ಪಷ್ಟನೆ

2025ರಲ್ಲಿ ಡಿಜಿಸಿಗೆ ನಾವಾಗಿಯೇ ಹೇಳಿದ್ಮೇಲೆ ವಿಷಯ ಗೊತ್ತಾಗಿದೆ. ಡಿಜಿಸಿಎ ನೀಡಿದ ರಿಪೋರ್ಸ್ ಸ್ವೀಕರಿಸಲಾಗಿದ್ದು, ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲಾಗಿದೆ. ನಿಖೆಯ ಸಮಯದಲ್ಲಿ ನಾವು ಕಂಡುಕೊಂಡ ಎಲ್ಲಾ ನ್ಯೂನತೆಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ ಎಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನಕ್ಕೆ RAT ಕಾರಣ! ಅಮೆರಿಕ ನೌಕಾಪಡೆಯ ಮಾಜಿ ಪೈಲಟ್ ಬಿಚ್ಚಿಟ್ಟ ಮಾಹಿತಿ

ಟಾಟಾ ಸಂಸ್ಥೆ ಏರ್‌ ಇಂಡಿಯಾ ಸ್ವಾಧೀನಪಡಿಸಿಕೊಂಡ ನಂತರ ನಿರಂತರವಾಗಿ ವಿಮಾನಯಾನ ಸಂಸ್ಥೆ ತನ್ನ ಸೇವೆಗಳನ್ನು ಸುಧಾರಿಸಿಕೊಳ್ಳುತ್ತಿದೆ. ಈ ನಡುವೆಯೂ ನಿಯಂತ್ರಕ ಉಲ್ಲಂಘನೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಪೈಲಟ್‌ಗಳ ಅಸಮರ್ಪಕ ತರಬೇತಿ, ಸಿಬ್ಬಂದಿ ನಡವಳಿಕೆ ಮತ್ತು ತಾಂತ್ರಿಕ ನ್ಯೂನತೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಏರ್ ಇಂಡಿಯಾ ಸಂಸ್ಥೆ ದಂಡಕ್ಕೆ ತುತ್ತಾಗಿದೆ.

12ನೇ ಜೂನ್ 2025ರಂದು ಅಹಮದಾಬಾದ್ ನಿಲ್ದಾಣದಿಂದ ಟೇಕಾಫ್ ಆದ ಏರ್ ಇಂಡಿಯಾ ವಿಮಾನ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಈ ವಿಮಾನ ಲಂಡನ್‌ಗೆ ಹೊರಟಿತ್ತು. ಈ ದುರ್ಘಟನೆಯಲ್ಲಿ 260 ಜನರು ಸಾವನ್ನಪ್ಪಿದ್ದರು. ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದರು.

ಇದನ್ನೂ ಓದಿ: 260 ಜನರನ್ನು ಬಲಿ ಪಡೆದ ಅಹಮದಾಬಾದ್ ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ ರಿವೀಲ್!



Source link

Leave a Reply

Your email address will not be published. Required fields are marked *