ಬಿಸಿಲಿಗೆ ಚಿಲ್ಲಡ್ ಬಿಯರ್ ತಂದವನಿಗೆ ಶಾಕ್! ಸೀಲ್ಡ್ ಬಾಟಲಿಯೊಳಗೆ ಈಜಾಡುತ್ತಿತ್ತು ಮೀನು! ವಿಡಿಯೋ ವೈರಲ್ | Live Fish Found Swimming Inside Sealed Kingfisher Beer Bottle In Hyderabad Video Goes Viral

ಕಿಂಗ್‌ಫಿಶರ್ ಬಿಯರ್‌ನ ಸೀಲ್ ಮಾಡಿದ ಬಾಟಲಿಯೊಳಗೆ ಜೀವಂತ ಮೀನಿನ ಮರಿ ಪತ್ತೆಯಾಗಿದೆ. ಇದನ್ನು ನೋಡಿ ಬಿಯರ್ ಖರೀದಿಸಿದ್ದ ವ್ಯಕ್ತಿ ಶಾಕ್ ಆಗಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೈದರಾಬಾದ್: ಬಿಸಿಲಿನ ಬೇಗೆಯಿಂದ ರಿಲ್ಯಾಕ್ಸ್‌ ಪಡೆಯಲು ಮಧ್ಯವಯಸ್ಕರೊಬ್ಬರು ಬಿಯರ್ ಖರೀದಿಸಿದ್ದಾರೆ. ಆದರೆ, ಸೀಲ್ ಕೂಡ ಓಪನ್ ಮಾಡದ ಬಾಟಲಿಯೊಳಗೆ ಜೀವಂತ ಮೀನು ಕಂಡು ಅವರಿಗೆ ಶಾಕ್ ಆಗಿದೆ. ಹೈದರಾಬಾದ್‌ನ ಮಲ್ಲಾಪುರ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಚಿಲ್ಲಡ್ ಬಿಯರ್ ಖರೀದಿಸಿದವನಿಗೆ ಶಾಕ್

ನಾಚಾರಂ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ಯದಂಗಡಿಯೊಂದರಲ್ಲಿ ಈ ವ್ಯಕ್ತಿ ತಣ್ಣನೆಯ ಬಿಯರ್ ಖರೀದಿಸಿದ್ದರು. ಬೇಸಿಗೆಯ ಧಗೆಯಿಂದ ಬಳಲಿ, ಬಿಯರ್ ಕುಡಿದು ರಿಲ್ಯಾಕ್ಸ್ ಆಗೋಣ ಎಂದುಕೊಂಡಿದ್ದರು. ಆದರೆ, ಬಾಟಲಿ ತೆರೆಯುವ ಮುನ್ನವೇ ಅದರೊಳಗೆ ಏನೋ ಚಲಿಸುತ್ತಿರುವುದನ್ನು ಅವರು ಗಮನಿಸಿದ್ದಾರೆ. ಹತ್ತಿರದಿಂದ ನೋಡಿದಾಗ, ಸೀಲ್ ಮಾಡಿದ ಬಿಯರ್ ಬಾಟಲಿಯೊಳಗೆ ಮೀನಿನ ಮರಿಯೊಂದು ಈಜುತ್ತಿರುವುದು ಸ್ಪಷ್ಟವಾಗಿ ಕಂಡಿದೆ.

ತಕ್ಷಣವೇ ಆ ವ್ಯಕ್ತಿ ಬಿಯರ್ ಬಾಟಲಿಯೊಂದಿಗೆ ಅಂಗಡಿಗೆ ವಾಪಸ್ ಹೋಗಿ, ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ, “ಬಿಯರ್ ಅನ್ನು ನಾವು ತಯಾರಿಸುವುದಿಲ್ಲ, ಕಂಪನಿಯಿಂದ ಬಂದಿದ್ದನ್ನು ಮಾರಾಟ ಮಾಡುತ್ತೇವೆ ಅಷ್ಟೇ” ಎಂದು ಸಿಬ್ಬಂದಿ ಹೇಳಿದ್ದಾರೆ. ಈ ವಿಚಾರವಾಗಿ ಗ್ರಾಹಕ ಮತ್ತು ಅಂಗಡಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಘಟನೆಯ ದೃಶ್ಯಗಳು ವೈರಲ್ ಆದ ನಂತರ, ಸೀಲ್ ಮಾಡಿದ ಬಾಟಲಿಯೊಳಗೆ ಮೀನು ಹೇಗೆ ಬಂತು ಎಂಬ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಫ್ಯಾಕ್ಟರಿಯಲ್ಲಿ ಬಾಟಲಿಗಳನ್ನು ಸ್ವಚ್ಛಗೊಳಿಸುವಾಗ ಅಥವಾ ಬಿಯರ್ ತುಂಬುವಾಗ ಈ ತಪ್ಪು ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ವೈರಲ್

Scroll to load tweet…

ಇನ್ನು ಕೆಲವರ ಪ್ರಕಾರ, ಬಿಯರ್ ತಯಾರಿಕೆಗೆ ಬಳಸಿದ ನೀರು ಯಾವುದಾದರೂ ಕೆರೆಯಿಂದ ತಂದಿರಬಹುದು. ಆದರೆ, ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. “ಕುಡಿಯುವ ಮುನ್ನ ಯಾವಾಗಲೂ ಬಾಟಲಿಯನ್ನು ಪರೀಕ್ಷಿಸುವುದು ಒಳ್ಳೆಯದು” ಎಂದು ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಘಟನೆಯು ಮದ್ಯ ತಯಾರಿಕಾ ಕಂಪನಿಗಳ ಗುಣಮಟ್ಟ ನಿಯಂತ್ರಣದ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

Source link

Leave a Reply

Your email address will not be published. Required fields are marked *