ಪಿಎಫ್‌ ಹಣ ಪಡೆಯೋದು ಇನ್ನು Paytm, GPay ಮಾಡೋವಷ್ಟೇ ಸುಲಭ, ಹೊಸ ಅಪ್ಲಿಕೇಶನ್‌ ಮಾರ್ಚ್‌ ಅಂತ್ಯದಲ್ಲಿ ಲಾಂಚ್‌! | Epfo New App Upi Based Pf Withdrawal Launch By March End San

ಪಿಎಫ್‌ ಹಣ ಪಡೆಯೋದು ಇನ್ನು Paytm, GPay ಮಾಡೋವಷ್ಟೇ ಸುಲಭ, ಹೊಸ ಅಪ್ಲಿಕೇಶನ್‌ ಮಾರ್ಚ್‌ ಅಂತ್ಯದಲ್ಲಿ ಲಾಂಚ್‌! | Epfo New App Upi Based Pf Withdrawal Launch By March End San



ಪಿಎಫ್‌ ಹಣ ಪಡೆಯೋದು ಇನ್ನು Paytm, GPay ಮಾಡೋವಷ್ಟೇ ಸುಲಭ, ಹೊಸ ಅಪ್ಲಿಕೇಶನ್‌ ಮಾರ್ಚ್‌ ಅಂತ್ಯದಲ್ಲಿ ಲಾಂಚ್‌! | Epfo New App Upi Based Pf Withdrawal Launch By March End San

UMANG ಅಪ್ಲಿಕೇಶನ್‌ಗಿಂತ ಭಿನ್ನವಾಗಿರುವ ಹೊಸ EPFO ​​ಅಪ್ಲಿಕೇಶನ್ ಯೂಸರ್‌ಗಳ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಲಿದ್ದು. ಇದು BHIM ಅಪ್ಲಿಕೇಶನ್ ಮತ್ತು ಇತರ UPI ಅಪ್ಲಿಕೇಶನ್‌ಗಳಿಗೂ ಲಿಂಕ್ ಆಗುತ್ತದೆ. 

ನವದೆಹಲಿ (ಫೆ.9): ಮಾರ್ಚ್ ಅಂತ್ಯದ ವೇಳೆಗೆ ಕೇಂದ್ರವು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಹೊರತರುವ ಸಾಧ್ಯತೆಯಿದೆ, ಇದು ಪಿಎಫ್‌ ಅಕೌಂಟ್‌ ಹೊಂದಿರುವವರು ಯುಪಿಐ ಮೂಲಕ ಭವಿಷ್ಯ ನಿಧಿಯ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಈ ವಿಷಯದ ಬಗ್ಗೆ ಪರಿಚಿತವಾಗಿರುವ ಇಬ್ಬರು ಹಿರಿಯ ಅಧಿಕಾರಿಗಳು ಇದನ್ನು ತಿಳಿಸಿದ್ದಾರೆ.UMANG ಅಪ್ಲಿಕೇಶನ್‌ಗಿಂತ ಭಿನ್ನವಾಗಿರುವ ಹೊಸ EPFO ​​ಅಪ್ಲಿಕೇಶನ್ ಯೂಸರ್‌ಗಳ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಲಿದ್ದು. ಇದು BHIM ಅಪ್ಲಿಕೇಶನ್ ಮತ್ತು ಇತರ UPI ಅಪ್ಲಿಕೇಶನ್‌ಗಳಿಗೂ ಲಿಂಕ್ ಆಗುತ್ತದೆ.

‘ಇದು ಇಪಿಎಫ್‌ಓ ಅಕೌಂಟ್‌ ಹೊಂದಿರಹ ವ್ಯಕ್ತಿಗಳಿಗೆ ತಮ್ಮ ಫಂಡ್‌ನಲ್ಲಿರುವ ಹಣವನ್ನು ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಲಿ ಅವಕಾಶ ಮಾಡಿಕೊಡುತ್ತದೆ. ಯುಪಿಐ ಮೂಲಕ ಅವರು ಈ ವಿತ್‌ಡ್ರಾ ಮಾಡಿಕೊಳ್ಳಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಇಪಿಎಫ್‌ಓ ವಿತ್‌ಡ್ರಾಗಳನ್ನು ಯುಎಎನ್‌ ಪೋರ್ಟಲ್‌ ಮುಖಾಂತರವೇ ಮಾಡುವುದು ಕಡ್ಡಾಯವಾಗಿದೆ. ಯುಪಿಐ ಅಥವಾ ಬೇರೆ ಯಾವುದೇ ಮೂಲಗಳ ಮೂಲಕ ಹಣವನ್ನು ಹಿಂಪಡೆಯುವ ಅವಕಾಶ ನೀಡಲಾಗಿಲ್ಲ.

ಮೂಲಗಳ ಪ್ರಕಾರ ಮಾರ್ಚ್‌ ಅಂತ್ಯದ ವೇಳೆಗೆ ಈ ಅಪ್ಲಿಕೇಶನ್‌ ಬಿಡುಗಡೆ ಆಗಬಹುದು. ಈಗಾಗಲೇ ಇದರ ಟೆಸ್ಟಿಂಗ್‌ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ‘ಈ ಅಪ್ಲಿಕೇಶನ್‌ ಬಂದ ಬಳಿಕ ಪಿಎಫ್‌ ಅಕೌಂಟ್‌ ಹೊಂದಿರುವ ವ್ಯಕ್ತಿಗಳು ಫಂಡ್‌ನಲ್ಲಿರುವ ಶೇ. 75ರಷ್ಟು ಹಣವನ್ನು ತಮ್ಮ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ’ ಎಂದು ತಿಳಿಸಿದ್ದಾರೆ. ಪ್ರಸ್ತುತ ಇಪಿಎಫ್‌ಓದಲ್ಲಿ ಒಟ್ಟು 30 ಕೋಟಿ ಮಂದಿ ಸದಸ್ಯರಿದ್ದಾರೆ.

26 ಲಕ್ಷ ಕೋಟಿ ರೂಪಾಯಿ ಹೊಂದಿರುವ ಇಪಿಎಫ್‌ಓ

ನಿಯಮಗಳ ಪ್ರಕಾರ, ಇಪಿಎಫ್ ಬಾಕಿಯ ಕನಿಷ್ಠ 25 ಪ್ರತಿಶತವು ಚಂದಾದಾರರ ಖಾತೆಯಲ್ಲಿ ಉಳಿಯಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಸದಸ್ಯರು ಈಗ ಕಡ್ಡಾಯ ಕನಿಷ್ಠ ಬಾಕಿಯನ್ನು ಕಾಯ್ದುಕೊಳ್ಳುವಾಗ ತಮ್ಮ ಇಪಿಎಫ್ ನಿಧಿಯ 75 ಪ್ರತಿಶತದಷ್ಟು ಹಣವನ್ನು ಮಾತ್ರವೇ ಹಿಂಪಡೆಯಬಹುದು. ಉದ್ಯೋಗ ನಷ್ಟವಾದರೆ, ಉಳಿದ 25 ಪ್ರತಿಶತವನ್ನು 12 ತಿಂಗಳ ನಂತರ ಮಾತ್ರ ಹಿಂಪಡೆಯಬಹುದು.

ಇಪಿಎಫ್‌ಒದ ಒಟ್ಟು ನಿಧಿ 26 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಸಕ್ರಿಯ ಚಂದಾದಾರರು ಅಥವಾ ಕೊಡುಗೆ ನೀಡುವ ಸದಸ್ಯರ ಒಟ್ಟು ಸಂಖ್ಯೆ ಸುಮಾರು 7.5 ಕೋಟಿ ಎಂದು ಮೂಲಗಳು ತಿಳಿಸಿವೆ.



Source link

Leave a Reply

Your email address will not be published. Required fields are marked *