Rajamouli ಮಗ ಕಾರ್ತಿಕೇಯ ಡೈರೆಕ್ಟರ್ ಆಗ್ತಾರಾ? ಸ್ಟಾರ್ ನಟನಿಗೆ ಆ್ಯಕ್ಷನ್ ಕಟ್ ಹೇಳ್ತಾರಾ? | Ss Rajamouli Son Karthikeya To Make Directorial Debut With Akhil Akkineni Gvd

Rajamouli ಮಗ ಕಾರ್ತಿಕೇಯ ಡೈರೆಕ್ಟರ್ ಆಗ್ತಾರಾ? ಸ್ಟಾರ್ ನಟನಿಗೆ ಆ್ಯಕ್ಷನ್ ಕಟ್ ಹೇಳ್ತಾರಾ? | Ss Rajamouli Son Karthikeya To Make Directorial Debut With Akhil Akkineni Gvd



Rajamouli ಮಗ ಕಾರ್ತಿಕೇಯ ಡೈರೆಕ್ಟರ್ ಆಗ್ತಾರಾ? ಸ್ಟಾರ್ ನಟನಿಗೆ ಆ್ಯಕ್ಷನ್ ಕಟ್ ಹೇಳ್ತಾರಾ? | Ss Rajamouli Son Karthikeya To Make Directorial Debut With Akhil Akkineni Gvd

ಟಾಲಿವುಡ್ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಲುಗು ಸಿನಿಮಾಗೆ ಗೌರವ ತಂದುಕೊಟ್ಟ ನಿರ್ದೇಶಕರಲ್ಲಿ ಎಸ್.ಎಸ್.ರಾಜಮೌಳಿ ಮುಂಚೂಣಿಯಲ್ಲಿದ್ದಾರೆ. ರಾಜಮೌಳಿ ಪುತ್ರ ಕಾರ್ತಿಕೇಯ ಕೂಡ ನಿರ್ದೇಶಕರಾಗಲು ಸಜ್ಜಾಗಿದ್ದಾರೆ.

ತೆಲುಗು ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ನಿರ್ದೇಶಕ ಎಸ್.ಎಸ್.ರಾಜಮೌಳಿ. ಸದ್ಯ ಅವರು ಟಾಲಿವುಡ್ ಸೂಪರ್‌ಸ್ಟಾರ್ ಜೊತೆ ಹಾಲಿವುಡ್ ರೇಂಜ್‌ನ ಸಿನಿಮಾ ಮಾಡುತ್ತಿದ್ದಾರೆ. ಈಗ ರಾಜಮೌಳಿ ಪುತ್ರ ಕಾರ್ತಿಕೇಯ ಕೂಡ ನಿರ್ದೇಶಕರಾಗಿ ಸ್ಟಾರ್ ನಟರೊಬ್ಬರ ಜೊತೆ ಸಿನಿಮಾ ಶುರು ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು?

ಟಾಲಿವುಡ್ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಲುಗು ಸಿನಿಮಾಗೆ ಗೌರವ ತಂದುಕೊಟ್ಟ ನಿರ್ದೇಶಕರಲ್ಲಿ ಎಸ್.ಎಸ್.ರಾಜಮೌಳಿ ಮುಂಚೂಣಿಯಲ್ಲಿದ್ದಾರೆ. ಅವರ ‘ಬಾಹುಬಲಿ’ ಮತ್ತು ‘RRR’ ಚಿತ್ರಗಳು ಭಾರತೀಯ ಚಿತ್ರರಂಗಕ್ಕೆ ವಿಶೇಷ ಮನ್ನಣೆ ತಂದುಕೊಟ್ಟಿವೆ. ಈ ಚಿತ್ರಗಳು ತೆಲುಗು ಸಿನಿಮಾದ ಬೇಡಿಕೆಯನ್ನುಹೆಚ್ಚಿಸಿವೆ.

ಸದ್ಯ ರಾಜಮೌಳಿ ಅವರು ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ತಮ್ಮ ಮುಂದಿನ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ವಾರಣಾಸಿಯಲ್ಲಿ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ, ಅಂದುಕೊಂಡ ದಿನಾಂಕಕ್ಕೆ ಸಿನಿಮಾ ಬಿಡುಗಡೆ ಮಾಡಲು ನಿರ್ದೇಶಕರು ಪ್ಲ್ಯಾನ್ ಮಾಡುತ್ತಿದ್ದಾರೆ.

ಈಗ ಅಸಲಿ ವಿಷಯವೇನೆಂದರೆ, ರಾಜಮೌಳಿ ಪುತ್ರ ಕಾರ್ತಿಕೇಯ ಕೂಡ ನಿರ್ದೇಶಕರಾಗಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕಾರ್ತಿಕೇಯ ಅವರು ‘ಆಕ್ಸಿಜನ್’ ಎಂಬ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರದ ನಂತರ ಕಾರ್ತಿಕೇಯ ನಿರ್ದೇಶಕರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಅಕ್ಕಿನೇನಿ ನಟನಿಗೆ ಕಾರ್ತಿಕೇಯ ಸಿನಿಮಾ?

ವರದಿಗಳ ಪ್ರಕಾರ, ಅಕ್ಕಿನೇನಿ ಅಖಿಲ್ ನಾಯಕರಾಗಿ ನಟಿಸಲಿರುವ ಚಿತ್ರಕ್ಕೆ ಕಾರ್ತಿಕೇಯ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಕಾರ್ತಿಕೇಯ ಅವರಿಗೆ ಈ ಹಿಂದೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ ಎನ್ನಲಾಗಿದೆ. ಆದರೆ, ಈ ಪ್ರಾಜೆಕ್ಟ್ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.



Source link

Leave a Reply

Your email address will not be published. Required fields are marked *