Headlines

‘ಒಂದಿಷ್ಟೂ ಪರಿಜ್ಞಾನ ಇಲ್ಲವೇ?’ ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂದ ಡಿಕೆಶಿ ವಿರುದ್ಧ ಅಶ್ವತ್ಥನಾರಾಯಣ ಕಿಡಿ | Mysuru Chamundi Betta Controversy Cn Ashwathnarayana Slams Dk Shivakumar

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಸರಾ ವಿಚಾರದಲ್ಲಿ ಶಿವಕುಮಾರ್ ಜವಾಬ್ದಾರಿ ಮರೆತು ಮಾತನಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. 

ಬೆಂಗಳೂರು (ಆ.30): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜವಾಬ್ದಾರಿ ಮರೆತು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೂಕ್ಷ್ಮತೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಂಡು ಶಿವಕುಮಾರ್‌ ಮಾತನಾಡಬೇಕು. ಈಗಾಗಲೇ ಈ ವಿಚಾರದಲ್ಲಿ ಪ್ರಮೋದಾದೇವಿ, ಯದುವೀರ್, ಪ್ರತಾಪ್ ಸಿಂಹ ಮಾತಾಡಿದ್ದಾರೆ. ದಸರಾ ಸಾಂಸ್ಕೃತಿಕ ಹಬ್ಬವೂ ಹೌದು, ಧಾರ್ಮಿಕ ಹಬ್ಬವೂ ಹೌದು  ಎಂದರು.

ಇದನ್ನೂ ಓದಿ: ಕನ್ನಡಾಂಬೆ ಕುರಿತ ಹೇಳಿಕೆಗೆ ಮೊದಲು ಸ್ಪಷ್ಟನೆ ಕೊಡಲಿ..’ ಬಾನು ಮುಷ್ತಾಕ್ ಆಯ್ಕೆಗೆ ಸಂಸದ ಯದುವೀರ್ ಯು-ಟರ್ನ್?

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ಸಿಗರು ಎಲ್ಲಿ ಸೆಕ್ಯುಲರ್‌ ತೋರಿಸಬೇಕೋ ಅಲ್ಲಿ ತೋರಿಸಲಿ. ನಂಬಿಕೆ ಇಲ್ಲದವರಿಂದ ದಸರಾ ಉದ್ಘಾಟಿಸಲು ಹೊರಟ್ಟಿದ್ದಾರೆ. ಎಲ್ಲಾ ಹಂತಗಳಲ್ಲೂ ಈ ಸರ್ಕಾರ ಅಪಪ್ರಚಾರಕ್ಕೆ ಕಾರಣವಾಗಿದೆ. ಶಿವಕುಮಾರ್‌ ಜನರ ಭಾವನೆಗಳಿಗೆ ನೋವು ತಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ‘ಮುಸ್ಲಿಂರ ಧಾರ್ಮಿಕ ಕಾರ್ಯಕ್ರಮಗಳನ್ನ ಹಿಂದೂಗಳಿಂದ ಉದ್ಘಾಟಿಸಲಿ..’; ಕಾಂಗ್ರೆಸ್‌ ಸರ್ಕಾರಕ್ಕೆ ಶಾಸಕ ಸಮೃದ್ಧಿ ಮಂಜುನಾಥ ಸವಾಲು!

ಡಿಕೆಶಿ ಜನರ ಕ್ಷಮೆ ಕೇಳಲಿ:

ಚಾಮುಂಡಿ ಬೆಟ್ಟ ಮುಜರಾಯಿ ಇಲಾಖೆಗೆ ಬಂದ ಮೇಲೆ ಅದು ಹಿಂದೂಗಳ ಆಸ್ತಿ ಅಂತ ಆಗಿದೆ. ಬೇರೆ ಧರ್ಮದವರು ಅಲ್ಲಿ ವಸ್ತುಗಳ ಮಾರಾಟಕ್ಕೆ ನಿರ್ಬಂಧವಿದೆ. ಡಿ.ಕೆ.ಶಿವಕುಮಾರ್‌ಗೆ ಇಷ್ಟು ಪರಿಜ್ಞಾನ ಇಲ್ಲವೇ? ಹೇಳಿಕೆ ಕೊಡುವಾಗ ಜವಾಬ್ದಾರಿಯಿಂದ ಕೊಡಬೇಕು. ಕೂಡಲೇ ಅವರು ಈ ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಅಶ್ವತ್ಥನಾರಾಯಣ ಆಗ್ರಹಿಸಿದರು.

Source link

Leave a Reply

Your email address will not be published. Required fields are marked *