ರಕ್ಷಿತ್ ಶೆಟ್ಟಿ, ಸುದೀಪ್ ಜೊತೆ ಬಾಲನಟಿಯಾಗಿ ನಟಿಸಿದ್ದ ಮುದ್ದು ಗೊಂಬೆ ಈಗ ಹೇಗಿದ್ದಾರೆ ಗೊತ್ತಾ? | Child Artist Who Acted With Sudeep And Rakshith Shetty Is Grown Up Now

ರಕ್ಷಿತ್ ಶೆಟ್ಟಿ, ಸುದೀಪ್ ಜೊತೆ ಬಾಲನಟಿಯಾಗಿ ನಟಿಸಿದ್ದ ಮುದ್ದು ಗೊಂಬೆ ಈಗ ಹೇಗಿದ್ದಾರೆ ಗೊತ್ತಾ? | Child Artist Who Acted With Sudeep And Rakshith Shetty Is Grown Up Now



ರಕ್ಷಿತ್ ಶೆಟ್ಟಿ, ಸುದೀಪ್ ಜೊತೆ ಬಾಲನಟಿಯಾಗಿ ನಟಿಸಿದ್ದ ಮುದ್ದು ಗೊಂಬೆ ಈಗ ಹೇಗಿದ್ದಾರೆ ಗೊತ್ತಾ? | Child Artist Who Acted With Sudeep And Rakshith Shetty Is Grown Up Now

ಕಿಚ್ಚ ಸುದೀಪ್ ಜೊತೆ, ರಕ್ಷಿತ್ ಶೆಟ್ಟಿ ಜೊತೆ ಕೆಲವು ವರ್ಷಗಳ ಹಿಂದೆ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿ, ಜನಮನ ಗೆದ್ದಿದ್ದ ಮುದ್ದು ಬಾಲಕಿ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಅಯ್ಯೋ ನೋಡ ನೋಡುತ್ತಲೇ ಮಗು ಇಷ್ಟು ದೊಡ್ಡವಳಾದ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಈ ಬಾಲನಟಿ ನೆನಪಿದೆಯಾ?

ಕಿಚ್ಚ ಸುದೀಪ್ ಜೊತೆ ‘ಪೈಲ್ವಾನ್’ ಚಿತ್ರದಲ್ಲಿ ಹಾಗೂ ‘ಚಾರ್ಲಿ 777’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿಸಿದ್ದ ಬಾಲ ಕಲಾವಿದೆ ನೆನಪಿದ್ಯಾ? ಖಂಡಿತಾ ನೆನಪಿರಬೇಕು ಅಲ್ವಾ? ತಮ್ಮ ಮುದ್ದು ಮುದ್ದು ಮುಖ, ಮಾತುಗಳಿಂದಲೇ ಗಮನ ಸೆಳೆದಿದ್ದರು ಇವರು. ಸೀರಿಯಲ್ ಗಳಲ್ಲೂ ಕಾಣಿಸಿಕೊಂಡಿದ್ದ ಆ ಪುಟ್ಟ ಹುಡುಗಿ ಈಗ ಸೀರೆಯುಟ್ಟು, ಡ್ಯಾನ್ಸ್ ಮಾಡುವಷ್ಟು ದೊಡ್ಡ ಹುಡುಗಿಯಾಗಿ ಬದಲಾಗಿದ್ದಾಳೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದೆ.

ರಕ್ಷಿತ್ ಶೆಟ್ಟಿ- ಕಿಚ್ಚ ಸುದೀಪ್ ಜೊತೆ ನಟನೆ

ಇವರ ಹೆಸರು ಶಾರ್ವರಿ ವಿ. ನಾಲ್ಕು ಐದು ವರ್ಷ ಇರುವಾಗಲೇ ‘ಡ್ರಾಮಾ ಜೂನಿಯಸ್ 2’ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಕಿರುತೆರೆಗೆ ಪರಿಚಿತರಾದರು. ಅಲ್ಲಿಂದ ಶುರುವಾಯ್ತು ಚಂದನವನದ ಕಡೆಗಿನ ಜರ್ನಿ. ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಈಕೆಯ ನಟನೆ ನೋಡಿ, ಶಾರ್ವರಿಗೆ ಸಿಕ್ತು ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾನದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ಕಿಚ್ಚ ಮಗಳಾಗಿ, ಕಿಚ್ಚನ ಹೆಗಲೇರಿ ಕೂರುವ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ಶಾರ್ವರಿ ನಟಿಸಿದ ಚಿತ್ರ ‘777 ಚಾರ್ಲಿ’ .2022ರಲ್ಲಿ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿದ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನೆರೆ ಮನೆಯ ಬಾಲಕಿಯಾಗಿ ಶಾರ್ವರಿ ನಟಿಸಿದ್ದರು. ಈ ಪಾತ್ರ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ರಕ್ಷಿತ್ ಬೇಡ ಎಂದು ಪಾರ್ಕಲಿ ಬಿಟ್ಟು ಬಂದ ನಾಯಿಮರಿಯಲ್ಲಿ ಸ್ಕೂಲ್ ಬ್ಯಾಗಲ್ಲಿ ಹಾಕಿ, ಮತ್ತೆ ರಕ್ಷಿತ್ ಮನೆಗೆ ತಂದು ಕೊಡುವ ದೃಶ್ಯ, ಚಾರ್ಲಿ ಜೊತೆಗಿನ ಆಕೆಯ ಸ್ನೇಹ, ಚಾರ್ಲಿ ಥ್ಯಾಂಕ್ಸ್ ಹೇಳುವಂತೆ ಆಕೆ ಹೇಳಿಕೊಡುವ ಸೀನ್ ಎಲ್ಲವೂ ಅದ್ಭುತವಾಗಿತ್ತು. ಅಷ್ಟೇ ಅಲ್ಲದೇ 2024ರಲ್ಲಿ ಬಿಡುಗಡೆಯಾದ ‘O2’ ಸಿನಿಮಾದಲ್ಲೂ ಸಹ ಶಾರ್ವರಿ ನಟಿಸಿದ್ದರು.

ಸೀರಿಯಲ್ ಗಳಲ್ಲೂ ಮಿಂಚು ಹರಿಸಿದ್ದ ಬಾಲಕಿ

ಶಾರ್ವರಿ ಕನ್ನಡ ಕಿರುತೆರೆಯಲ್ಲೂ ಮಿಂಚಿದ್ದರು. ‘ನಾಗಿಣಿ 2’ ಧಾರಾವಾಹಿಯಲ್ಲಿ ನಮೃತಾ ಗೌಡ ಬಾಲ್ಯದ ಪಾತ್ರದಲ್ಲಿ ಶಾರ್ವರಿ ನಟಿಸಿದ್ದರು. ಅಲ್ಲದೇ ‘ಉಧೋ ಉಧೋ ರೇಣುಕಾ ಯಲ್ಲಮ್ಮ’ ಧಾರಾವಾಹಿಯಲ್ಲಿ ಯುವರಾಣಿ ರೇಣುಕೆಯಾಗಿ ಆರಂಭದಲ್ಲಿ ಶಾರ್ವರಿ ನಟಿಸಿ ಕಿರುತೆರೆಯ ಪ್ರೇಕ್ಷಕರ ಮನ ಗೆದ್ದಿದ್ದರು. ಬಳಿಕ ಸೀರಿಯಲ್ ನಿಂದ ಹೊರ ಬಂದಿದ್ದರು. ಇದೀಗ ಬಾಲಕಿ ಬೆಳೆದು ದೊಡ್ಡವಳಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಇವರು ಹಂಚಿಕೊಂಡ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಶಾರ್ವರಿ ಬಹುಮುಖ ಪ್ರತಿಭೆಯಾಗಿದ್ದು, ಇತ್ತೀಚೆಗಷ್ಟೇ 14-15 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇವರು ಭರತನಾಟ್ಯ ಕಲಾವಿದೆಯಾಗಿದ್ದು, ಹಲವು ಕಡೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೇ ಇವರು ತಬಲಾ ವಾದಕಿ, ವೀಣಾ ವಾದಕಿ, ಸಂಗೀತ ವಿದ್ಯಾರ್ಥಿನಿ, ಕರಾಟೆ ಕೂಡ ಕಲಿತ್ತಿದ್ದಾರೆ. ಇತ್ತೀಚೆಗೆ ಶಾರ್ವರಿ ಇನ್ನೂನು ಬೇಕಾಗಿದೆ ಎನ್ನುವ ಕನ್ನಡ ಹಾಡಿಗೆ ಅಭಿನಯಿಸಿ, ವಿಡೀಯೋ ಶೇರ್ ಮಾಡಿದ್ದು, ಈ ವಿಡೀಯೋ ವೈರಲ್ ಆಗುತ್ತಿದೆ. ಓ ಹೋ ಚಾರ್ಲಿ ಸಿನಿಮಾ ಪುಟ್ಟ ಹುಡುಗಿನ ಎಷ್ಟು ಬೇಗ ಬೆಳೆದು ಬಿಟ್ಯಮ್ಮ ,100 ವರ್ಷ ಚನ್ನಾಗಿರು, ಈಗಷ್ಟೇ ಡ್ರಾಮಾ ಜೂನಿಯರ್ ನಲ್ಲಿ ನೋಡಿದ ಹಾಗೆ ಆಗ್ತಿತ್ತು. ಎಷ್ಟು ಬೇಗ ಸೀನಿಯರ್ ಆಗ್ಬಿಟ್ಟಿದ್ದೀಯ ಶಾರ್ವರಿ ಪುಟ್ಟ. ಸಕಲಕಲಾವಲ್ಲಭೆ , ನನಗಂತೂ ಪುಟ್ಟ ಭಾರತಿ ಅಭಿನಯ ಶಾರದೆ ಕಂಡ ಹಾಗೆ ಆಯ್ತು . ಬೇಗ ಕನ್ನಡ ನಾಯಕ ನಟಿಯರ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಲಿ ಕಂದಮ್ಮ ಎಂದು ಹಾಡಿ ಹೊಗಳಿದ್ದಾರೆ ಜನ.



Source link

Leave a Reply

Your email address will not be published. Required fields are marked *