ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಬಳಿಕ ಸಹಪಾಠಿಯನ್ನ ಕೊಂದ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು | Three Students Kill Classmate Sanketh After Special Class In Shivamogga Mrq

ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಬಳಿಕ ಸಹಪಾಠಿಯನ್ನ ಕೊಂದ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು | Three Students Kill Classmate Sanketh After Special Class In Shivamogga Mrq



ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಬಳಿಕ ಸಹಪಾಠಿಯನ್ನ ಕೊಂದ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು | Three Students Kill Classmate Sanketh After Special Class In Shivamogga Mrq

ಶಿವಮೊಗ್ಗದ ಸೂಳೆಬೈಲಿನಲ್ಲಿ, ಸಹಪಾಠಿ ಗಿರೀಶ್‌ನ ಸಹಾಯಕ್ಕೆ ಹೋದ 15 ವರ್ಷದ ಸಂಕೇತ್‌ನನ್ನು ಮೂವರು ವಿದ್ಯಾರ್ಥಿಗಳು ಹಲ್ಲೆ ನಡೆಸಿ ಕೊಂದಿದ್ದಾರೆ. ಈ ಘಟನೆಯು ಕೋಮುಘರ್ಷಣೆಯ ಆತಂಕವನ್ನು ಸೃಷ್ಟಿಸಿದ್ದು, ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಶಿವಮೊಗ್ಗ: ಶಿವಮೊಗ್ಗ ಹೊರವಲಯದ ಸೂಳೆಬೈಲು ಪ್ರದೇಶದಲ್ಲಿ 15 ವರ್ಷದ ಸಂಕೇತ್‌ ಎಂಬಾತನನ್ನು ಸಹಪಾಠಿಗಳೇ ಹೊಡೆದು ಕೊ*ಲೆ ಮಾಡಿರುವ ಘಟನೆ ನಡೆದಿದೆ. ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಹಿಂದಿರುಗುತ್ತಿರುವ ವೇಳೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಗಿರೀಶ್ ಎಂಬಾತನ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು ಹಲ್ಲೆ ನಡೆಸುತ್ತಿದ್ದರು. ಈ ವೇಳೆ ಗಿರೀಶ್ ಸಹಾಯಕ್ಕೆ ಸಂಕೇತ್ ತೆರಳಿದ್ದಾನೆ. ಈ ಸಂದರ್ಭದಲ್ಲಿ ಸಂಕೇತ್ ಮೇಲೆ ಮೂವರು ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ಸಂಕೇತ್ ಸ್ಥಳದಲ್ಲಿಯೇ ಕುಸಿದು ಸಾವನ್ನಪ್ಪಿದ್ದಾನೆ. ಆಸ್ಪತ್ರೆಗೆ ಸೇರಿಸುವ ಮೊದಲೇ ಸಂಕೇತ್ ಸಾವು ಆಗಿತ್ತು ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಸದ್ಯ ಸಂಕೇತ್ ಸಾವು ಕೋಮುಘರ್ಷಣೆಯಾಗಿ ಬದಲಾಗುವ ಆತಂಕ ಎದುರಾಗಿದ್ದು, ತುಂಗಾನಗರ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ ಪಿ ನಿಖಿಲ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಹಲ್ಲೆಗೊಳಗಾದ ಗಿರೀಶ್ ಹೇಳಿದ್ದೇನು?

ಸ್ಕೂಲಿಂದ ಹೊರಗಡೆ ಬಂದಾಗ ಫೀಲ್ಡ್ ಗೆ ಕರೆದುಕೊಂಡು ಹೋಗಿ ಐದಾರು ಜನರು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ನನಗೆ ಹೊಡೆತ ಬಿದ್ದ ತಕ್ಷಣ ಪ್ರಜ್ಞೆ ತಪ್ಪಿದಂತಾಯಿತು. ಪ್ರಜ್ಞೆ ಬಂದ ನಂತರ ಸಂಕೇತ ಕೆಳಗಡೆ ಬಿದ್ದಿದ್ದನ್ನು ನೋಡಿ ಸರ್‌ ಅವರನ್ನು ಕರೆದುಕೊಂಡು ಬಂದೆ. ಸರ್ ಕೂಡಲೇ ಸಂಕೇತ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಸೂಳೇಬೈಲು ಈದ್ಗಾ ನಗರದ ಹುಡುಗರಿಂದ ಹಲ್ಲೆ ನಡೆದಿದೆ. 10ನೇ ತರಗತಿ ಫೇಲ್ ಆಗಿರುವ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಕುಳಿತುಕೊಂಡು ಗಲಾಟೆ ಮಾಡುತ್ತಾರೆ. ಶಾಲೆಯ ಹೆಡ್ ಮಾಸ್ಟರ್ ಇದ್ರೂ ಗಲಾಟೆ ಮಾಡ್ತಾರೆ. ಬೆಳಗ್ಗೆ 8:30 ಗೆ ಹೋದವರು ರಾತ್ರಿ 9:30ವರೆಗೂ ಶಾಲೆ ಇರುತ್ತದೆ. ಸ್ಪೆಷಲ್ ಕ್ಲಾಸ್ ಇರುವ ಹಿನ್ನೆಲೆಯಲ್ಲಿ ಪೋಷಕರು ಬಂದು ಕರೆದುಕೊಂಡು ಹೋಗುತ್ತಾರೆ ಎಂದು ಗಿರೀಶ್ ಹೇಳಿದ್ದಾನೆ.

ಪೊಲೀಸ್ ಇಲಾಖೆಯ ಬೇಜವಾಬ್ದಾರಿಯೇ ಕಾರಣ

ಇನ್ನು ಘಟನೆ ಕುರಿತು ಶಾಸಕ ಚನ್ನಬಸಪ್ಪ ಪ್ರತಿಕ್ರಿಯೆ ನೀಡಿದ್ದು, ರಾತ್ರಿ 9:30ವರೆಗೆ ಗಲಾಟೆ ನಡೆದು ಸಂಕೇತ ಸಾವನ್ನಪ್ಪಿದ್ದಾನೆ. ಹಲ್ಲೆಗೊಳಗಾದ ಗಿರೀಶ್ ಘಟನೆಯ ವಿಷಯಗಳನ್ನು ತಿಳಿಸುತ್ತಿದ್ದಾನೆ. ಶಾಲೆಯ ವಿದ್ಯಾರ್ಥಿಗಳಲ್ಲಿ ಗಲಾಟೆ ನಡೆಯುತ್ತಿರುತ್ತದೆ. ಶಾಲೆಯ ಶಿಕ್ಷಕರು ಮತ್ತು ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ಇದೆ ಎನ್ನುತ್ತಾರೆ. ಹಿಂದುಗಳ ಹಣವನ್ನು ಹೊರಲಿಕ್ಕೆ ಇರುವ ಪೊಲೀಸ್ ಇಲಾಖೆ ಇದೆಯಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಜಮಖಂಡಿ ಬಳಿ ಭೀಕರ ದುರಂತ: ಟ್ರ್ಯಾಕ್ಟರ್ ಪಲ್ಟಿಯಾಗಿ 2 ವರ್ಷದ ಮಗು ಸೇರಿದಂತೆ ನಾಲ್ವರ ಸಾವು

9ನೇ ತರಗತಿ ಫೇಲ್ ಆದವರು ಬಂದು ಅಲ್ಲಿ ಆಟ ಆಡುತ್ತಾರೆ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದ ಶಾಸಕರು, ಪೊಲೀಸ್ ಇಲಾಖೆಯ ಬೇಜವಾಬ್ದಾರಿ ನಡೆಯಿಂದ ಸಂಕೇತನ ಜೀವ ಹೋಗಿದೆ. ಅಪ್ರಾಪ್ತನ ಹೆಸರು ಹೇಳಬೇಡಿ ಎನ್ನುತ್ತಾರೆ. ಹುಟ್ಟಬೇಕಾದರೆ ನಾವು ನಾಮಕರಣ ಮಾಡಿರುತ್ತೇವೆ ನಿಮ್ಮ ಕಾನೂನು ತೆಗೆದುಕೊಂಡು ಹೋಗಿ ತಿಪ್ಪೆ ಗುಂಡಿಗೆ ಬಿಸಾಕಿ ಎಂದು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಪ್ರತ್ಯೇಕ ಅಗ್ನಿ ಅವಘಡ: ದಾವಣಗೆರೆಯಲ್ಲಿ ಕಾರುಗಳು, ಇಳಕಲ್‌ನಲ್ಲಿ ಬೈಕ್‌ಗಳು ಸುಟ್ಟು ಕರಕಲು: ಲಕ್ಷಾಂತರ ರೂ. ಹಾನಿ!



Source link

Leave a Reply

Your email address will not be published. Required fields are marked *