Healthcare Budget 2026–27 ಆರೋಗ್ಯ ಬಜೆಟ್ 2026-27: ಪ್ರಮುಖ ಯೋಜನೆಗಳು ಮತ್ತು ಹಂಚಿಕೆ | Big Boost For Healthcare 2026 Focus One Lakh Therapists Plan And Digital Health

Healthcare Budget 2026–27 ಆರೋಗ್ಯ ಬಜೆಟ್ 2026-27: ಪ್ರಮುಖ ಯೋಜನೆಗಳು ಮತ್ತು ಹಂಚಿಕೆ | Big Boost For Healthcare 2026 Focus One Lakh Therapists Plan And Digital Health



Healthcare Budget 2026–27 ಆರೋಗ್ಯ ಬಜೆಟ್ 2026-27: ಪ್ರಮುಖ ಯೋಜನೆಗಳು ಮತ್ತು ಹಂಚಿಕೆ | Big Boost For Healthcare 2026 Focus One Lakh Therapists Plan And Digital Health

ಕೇಂದ್ರ ಸರ್ಕಾರವು 2026-27ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ₹1,06,530.42 ಕೋಟಿ ಮೀಸಲಿಟ್ಟಿದೆ, ಇದು ಶೇ.10ರಷ್ಟು ಹೆಚ್ಚಳವಾಗಿದೆ. ಈ ಬಜೆಟ್ ವೈದ್ಯಕೀಯ ಪ್ರವಾಸೋದ್ಯಮ, 1 ಲಕ್ಷ ಅಲೈಡ್ ಹೆಲ್ತ್‌ಕೇರ್ ವೃತ್ತಿಪರರ ಸೃಷ್ಟಿ ಮತ್ತು ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ಬಳಿಕ ಆರೋಗ್ಯ ಕ್ಷೇತ್ರಕ್ಕೆ ಹಂಚಿಕೆ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯಕ್ಕೆ 2026-27ರ ಬಜೆಟ್‌ನಲ್ಲಿ 1,06,530.42 ಕೋಟಿ ರು. ಹಂಚಿಕೆ ಮಾಡಲಾಗಿದೆ, ಇದು 2025-26ಕ್ಕೆ ಹೋಲಿಸಿದರೆ ಶೇ.10 ರಷ್ಟು ಹೆಚ್ಚಳವಾಗಿದೆ.

ಭಾರತವನ್ನು ಪ್ರಮುಖವಾಗಿ ವೈದ್ಯಕೀಯ ಪ್ರವಾಸೋದ್ಯಮ ತಾಣವಾಗಿ ಉತ್ತೇಜಿಸಲು ಖಾಸಗಿ ವಲಯದ ಸಹಭಾಗಿತ್ವದಲ್ಲಿ 5 ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ರಾಜ್ಯಗಳನ್ನು ಬೆಂಬಲಿಸುವ ಯೋಜನೆಯನ್ನು ಸರ್ಕಾರ ಪ್ರಸ್ತಾಪಿಸಿದೆ. ಈ ಕೇಂದ್ರಗಳು ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳನ್ನು ಸಂಯೋಜಿಸುವ ಸಮಗ್ರ ಆರೋಗ್ಯ ರಕ್ಷಣಾ ಸಂಕೀರ್ಣಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ ವೇಳೆ ಹೇಳಿದರು.

1 ಲಕ್ಷ ಥೆರಪಿಸ್ಟ್‌ಗಳ ಸೃಷ್ಟಿ

ಅಲೈಡ್ ಹೆಲ್ತ್‌ಕೇರ್ ಪ್ರೊಫೆಷನಲ್‌ಗಳ (ಎಎಚ್‌ಪಿ) (ಸೈಕೋಥೆರಪಿಸ್ಟ್, ಫಿಸಿಯೋಥೆರಪಿಸ್ಟ್‌ರಂಥ ವೃತ್ತಿಪರರು) ಸೃಷ್ಟಿಗಾಗಿ ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಮತ್ತು ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಹೊಸ ಎಎಚ್‌ಪಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಇವು ಆಪ್ಟೋಮೆಟ್ರಿ, ರೇಡಿಯಾಲಜಿ, ಅರೆವಳಿಕೆ, ಒ.ಟಿ. ತಂತ್ರಜ್ಞಾನ, ಅನ್ವಯಿಕ ಮನೋವಿಜ್ಞಾನ ಸೇರಿದಂತೆ 10 ಆಯ್ದ ವಿಭಾಗಗಳನ್ನು ಒಳಗೊಂಡಿರುತ್ತದೆ ಮತ್ತು ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಎಎಚ್‌ಪಿ ವೃತ್ತಿಪರರು ಸೃಷ್ಟಿಯಾಗಲಿದ್ದಾರೆ.

ಆರೈಕೆ ಸೇವೆಗಳಿಗೆ ಆದ್ಯತೆ:

ವೃದ್ಧಾಪ್ಯದ ಮತ್ತು ಸಂಬಂಧಿತ ಆರೈಕೆ ಸೇವೆಗಳನ್ನು ಒಳಗೊಂಡ ಬಲವಾದ ಆರೈಕೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಗುವುದು ಮತ್ತು ಮುಂಬರುವ ವರ್ಷದಲ್ಲಿ 1.5 ಲಕ್ಷ ಆರೈಕೆದಾರರಿಗೆ ಕ್ಷೇಮ, ಯೋಗ ಮತ್ತು ವೈದ್ಯಕೀಯ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುವುದು,

ಯಾವುದಕ್ಕೆ ಎಷ್ಟು ಮೀಸಲು?:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನಿಗದಿಪಡಿಸಲಾದ 1,06,530.42 ಕೋಟಿ ರು.ಗಳಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 1,01,709.21 ಕೋಟಿ ರು. ಮತ್ತು ಆರೋಗ್ಯ ಸಂಶೋಧನಾ ಇಲಾಖೆಗೆ 4,821.21 ಕೋಟಿ ರು.ಗಳನ್ನು ಮೀಸಲಿಡಲಾಗಿದೆ.

ಇದೇ ಮೊದಲ ಬಾರಿಗೆ, ಕೇಂದ್ರ ಆರೋಗ್ಯ ಸಚಿವಾಲಯವು ಅಲೈಡ್ ಹೆಲ್ತ್ ಕೇರ್ ಪ್ರೊಫೆಷನಲ್ಸ್ (ಎಎಚ್‌ಪಿ) ಯೋಜನೆಗೆ 1,000 ಕೋಟಿ ರು.ಗಳನ್ನು ಹಂಚಿಕೆ ಮಾಡಿದೆ.

ಕೇಂದ್ರೀಯ ಪ್ರಾಯೋಜಿತ ಯೋಜನೆ:

ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ, ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ 2025-36 ರಲ್ಲಿ 37,100 ಕೋಟಿ ರು.ಗಳಿದ್ದ ಹಂಚಿಕೆಯನ್ನು 2026-27 ರಲ್ಲಿ 39,390 ಕೋಟಿ ರು.ಗಳಿಗೆ ಹೆಚ್ಚಿಸಲಾಗಿದೆ. ಇದಲ್ಲದೆ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ) ಅನುದಾನವನ್ನು 8,995 ಕೋಟಿ ರು.ಗಳಿಂದ 9,500 ಕೋಟಿ ರು.ಗಳಿಗೆ ಹೆಚ್ಚಿಸಲಾಗಿದೆ. ಇದು ಶೇ.5.6 ರಷ್ಟು ಹೆಚ್ಚಳವಾಗಿದೆ.

ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕಾಗಿ, ಬಜೆಟ್ ಹಂಚಿಕೆಯನ್ನು 45 ಕೋಟಿ ರು.ಗಳಿಂದ 51 ಕೋಟಿ ರು.ಗಳಿಗೆ ಸ್ವಲ್ಪ ಹೆಚ್ಚಿಸಲಾಗಿದೆ ಮತ್ತು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್‌ಗೆ 2026-27ರ ಆರ್ಥಿಕ ವರ್ಷದಲ್ಲಿ 324.26 ಕೋಟಿ ರು. ಬದಲು 350 ಕೋಟಿ ರು.ಗಳನ್ನು ಮೀಸಲಿಡಲಾಗಿದೆ.

ಸ್ವಾಯತ್ತ ಸಂಸ್ಥೆಗಳಿಗೆ ಬಜೆಟ್ ಹಂಚಿಕೆ 2024-25 ರಲ್ಲಿ ಇದ್ದ 21,901.98 ಕೋಟಿ ರು.ನಿಂದ 2026-27ರಲ್ಲಿ 22,343.97 ರು. ಕೋಟಿಗೆ ಏರಿದೆ.

ನವದೆಹಲಿಯ ಏಮ್ಸ್‌ಗೆ ಹಂಚಿಕೆಯನ್ನು 5,238.70 ಕೋಟಿ ರು.ಗಳಿಂದ 5500.92 ಕೋಟಿ ರು.ಗಳಿಗೆ ಹೆಚ್ಚಿಸಲಾಗಿದೆ. ಕೋವಿಡ್‌ ವೇಳೆ ಸಾಕಷ್ಟು ಸಂಶೋಧನೆ ನಡೆಸಿ ನಿಗಾ ಇರಿಸಿದ್ದ ಐಸಿಎಂಆರ್‌ಗೆ 4821.21 ಕೋಟಿ ರು.ಗಳನ್ನು ಮೀಸಲಿಡಲಾಗಿದ್ದು, ಸುಮಾರು 10 ಪ್ರತಿಶತ ಹೆಚ್ಚಳವಾಗಿದೆ.



Source link

Leave a Reply

Your email address will not be published. Required fields are marked *