Headlines

114 ದೇಶಗಳ ಶಾಲಾ ಮಕ್ಕಳಿಗೆ ಮೊಬೈಲ್‌ ಬಳಕೆ ಪೂರ್ಣ ಬ್ಯಾನ್‌ ಎಚ್ಚರಿಕೆ-ಹುಡುಗಿಯರಿಗೇ ಹೆಚ್ಚು ಅಪಾಯ | Mobile Phone Use In Schools Banned Across 114 Countries Warns Unesco

114 ದೇಶಗಳ ಶಾಲಾ ಮಕ್ಕಳಿಗೆ ಮೊಬೈಲ್‌ ಬಳಕೆ ಪೂರ್ಣ ಬ್ಯಾನ್‌ ಎಚ್ಚರಿಕೆ-ಹುಡುಗಿಯರಿಗೇ ಹೆಚ್ಚು ಅಪಾಯ | Mobile Phone Use In Schools Banned Across 114 Countries Warns Unesco



114 ದೇಶಗಳ ಶಾಲಾ ಮಕ್ಕಳಿಗೆ ಮೊಬೈಲ್‌ ಬಳಕೆ ಪೂರ್ಣ ಬ್ಯಾನ್‌ ಎಚ್ಚರಿಕೆ-ಹುಡುಗಿಯರಿಗೇ ಹೆಚ್ಚು ಅಪಾಯ | Mobile Phone Use In Schools Banned Across 114 Countries Warns Unesco

ಮೊಬೈಲ್‌ ಫೋನ್‌ ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಪಾಠದ ಮೇಲಿನ ಗಮನ ಕುಂಠಿತ ಹಾಗೂ ಸೈಬರ್‌ ಬುಲ್ಲಿಂಗ್‌ನಂತಹ ಸಮಸ್ಯೆಗಳು ಕಳವಳ ಹುಟ್ಟಿಸುತ್ತಿರುವ ನಡುವೆಯೇ, ಜಗತ್ತಿನ ಶೇ.58ರಷ್ಟು ದೇಶಗಳು ಶಾಲೆಗಳಲ್ಲಿ ಮೊಬೈಲ್‌ ಫೋನ್‌ ಬಳಕೆಯನ್ನು ನಿಷೇಧಿಸಿವೆ

ನವದೆಹಲಿ : ಮೊಬೈಲ್‌ ಫೋನ್‌ ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಪಾಠದ ಮೇಲಿನ ಗಮನ ಕುಂಠಿತ ಹಾಗೂ ಸೈಬರ್‌ ಬುಲ್ಲಿಂಗ್‌ನಂತಹ ಸಮಸ್ಯೆಗಳು ಕಳವಳ ಹುಟ್ಟಿಸುತ್ತಿರುವ ನಡುವೆಯೇ, ಜಗತ್ತಿನ ಶೇ.58ರಷ್ಟು ದೇಶಗಳು ಶಾಲೆಗಳಲ್ಲಿ ಮೊಬೈಲ್‌ ಫೋನ್‌ ಬಳಕೆಯನ್ನು ನಿಷೇಧಿಸಿವೆ ಎಂದು ಯುನೆಸ್ಕೊದ ಜಾಗತಿಕ ಶಿಕ್ಷಣ ನಿಗಾ ಸಮಿತಿಯ ವರದಿ ತಿಳಿಸಿದೆ.

‘ವಿಶ್ವದ 114 ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳ ಮೇಲೆ ನಿಷೇಧ ಹೇರಿವೆ. ಇದು ಪ್ರಪಂಚದಾದ್ಯಂತ ಶೇ.58ರಷ್ಟು ದೇಶಗಳನ್ನು ಪ್ರತಿನಿಧಿಸುತ್ತದೆ. 2023ರ ಜೂನ್‌ನಲ್ಲಿ 4 ದೇಶಗಳಲ್ಲಿ 1ಕ್ಕಿಂತ ಕಡಿಮೆ (ಶೇ.24) ದೇಶಗಳು ನಿಷೇಧ ಹೇರಿದ್ದವು. ಆದರೆ 2025ರ ವೇಳೆಗೆ, ಇದು ಶೇ.40ರಷ್ಟು ಏರಿಕೆಯಾಗಿದೆ. 2026ರ ಮಾರ್ಚ್ ಹೊತ್ತಿಗೆ ಮತ್ತೂ ಶೇ.20ರಷ್ಟು ಏರಿಕೆಯಾಗಿದೆ’ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಹುಡುಗಿಯರಿಗೇ ಹೆಚ್ಚು ಅಪಾಯ!:

ಸಾಮಾಜಿಕ ಮಾಧ್ಯಮ ಬಳಕೆಯಿಂದ ಆಹಾರ ಸೇವನೆಯ ಅಸ್ವಸ್ಥತೆ ಹೆಚ್ಚುತ್ತಿದೆ. ಇದರಿಂದ ಹುಡುಗರಿಗಿಂತ ಹುಡುಗಿಯರು 2 ಪಟ್ಟು ಹೆಚ್ಚು ಬಳಲುತ್ತಿದ್ದಾರೆ. ಇನ್‌ಸ್ಟಾಗ್ರಾಂ ಬಳಕೆಯಿಂದಾಗಿ ಶೇ.32ರಷ್ಟು ಹದಿಹರೆಯದ ಹೆಣ್ಣುಮಕ್ಕಳು ತಮ್ಮ ದೇಹದ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದಾರೆ. 10ನೇ ವಯಸ್ಸಿನಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಆರಂಭಿಸುವ ಮಕ್ಕಳು ವಯಸ್ಸಾದಂತೆ ಸಾಮಾಜಿಕ-ಭಾವನಾತ್ಮಕ ತೊಂದರೆಗಳನ್ನು ಅನುಭವಿಸುತ್ತಾರೆ. ಆದರೆ ಈ ಸಮಸ್ಯೆ ಗಂಡುಮಕ್ಕಳಲ್ಲಿ ಕಂಡುಬಂದಿಲ್ಲ ಎಂದು ವರದಿ ತಿಳಿಸಿದೆ.

ಆಸ್ಟ್ರೇಲಿಯಾ, ಫ್ರಾನ್ಸ್, ಪೋರ್ಚುಗಲ್ ಮತ್ತು ಸ್ಪೇನ್‌ ಮೊದಲಾದ ದೇಶಗಳು ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಗೆ ನಿರ್ಬಂಧ ವಿಧಿಸಿವೆ. ಇನ್ನು ಕೆಲವು ದೇಶಗಳಲ್ಲಿ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಕರ್ನಾಟಕ ಸರ್ಕಾರವೂ ಈ ಕ್ರಮಕ್ಕೆ ಮುಂದಾಗಿದೆ.

ಕರ್ನಾಟಕದಲ್ಲೂ ಜಾಲ ತಾಣ ನಿಷೇಧ ಪ್ರಸ್ತಾಪ

ಕರ್ನಾಟಕ ಸರ್ಕಾರ ಕೂಡಾ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ ಮಾಡುವ ಕುರಿತು ಇತ್ತೀಚಿನ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿತ್ತು. ಮಕ್ಕಳಿಗೆ ಪೂರ್ಣ ಮೊಬೈಲ್‌ ನಿಷೇಧಿಸುವ ಕೆಲವೊಂದು ಸಮಸ್ಯೆಗಳಿಗೆ ಕಾರಣವಾಗುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧಿಸುವ ಬಗ್ಗೆ ಘೋಷಣೆ ಮಾಡಿತ್ತು. ಈ ಮೂಲಕ ಇಂಥ ನಿರ್ಧಾರ ಕೈಗೊಂಡ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಿತ್ತು. ಬಳಿಕ ತೆಲಂಗಾಣ ಸರ್ಕಾರ ಕೂಡಾ ಇಂಥದ್ದೇ ಘೋಷಣೆ ಮಾಡಿತ್ತು.



Source link

Leave a Reply

Your email address will not be published. Required fields are marked *