
ಇತ್ತೀಚೆಗೆ ಪುಟ್ಟ ಮಕ್ಕಳಿಗೂ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತದೆ. ಗ್ಯಾಸ್ಟಿಕ್ ಸಮಸ್ಯೆ ಇಲ್ಲದೇ ಇರೋರೆ ಕಡಿಮೆ. ಅನೇಕರು ಹೊಟ್ಟೆನೋವು ಕಾಣಿಸಿಕೊಂಡಾಗ ಗ್ಯಾಸ್ಟಿಕ್ ಎಂದು ತಾವೇ ಯಾವುದಾದರೂ ಗ್ಯಾಸ್ಟಿಕ್ ಮಾತ್ರೆಯನ್ನೋ ಅಥವಾ ಸೀರಪ್ ಅನ್ನೋ ತೆಗೆದುಕೊಂಡು ಸುಮ್ಮನಾಗುವವರೇ ಹೆಚ್ಚು ಆದರೆ..
ಆಗಾಗ ಕಾಣಿಸುವ ಸಣ್ಣ ಹೊಟ್ಟೆನೋವನ್ನು ಅನೇಕರು ನಿರ್ಲಕ್ಷಿಸುವುದೇ ಹೆಚ್ಚು
ಇತ್ತೀಚೆಗೆ ಪುಟ್ಟ ಮಕ್ಕಳಿಗೂ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತದೆ. ಗ್ಯಾಸ್ಟಿಕ್ ಸಮಸ್ಯೆ ಇಲ್ಲದೇ ಇರೋರೆ ಕಡಿಮೆ. ಅನೇಕರು ಹೊಟ್ಟೆನೋವು ಕಾಣಿಸಿಕೊಂಡಾಗ ಗ್ಯಾಸ್ಟಿಕ್ ಎಂದು ತಾವೇ ಯಾವುದಾದರೂ ಗ್ಯಾಸ್ಟಿಕ್ ಮಾತ್ರೆಯನ್ನೋ ಅಥವಾ ಸೀರಪ್ ಅನ್ನೋ ತೆಗೆದುಕೊಂಡು ಸುಮ್ಮನಾಗುತ್ತಾರೆ. ಹಾಗೆಯೇ ಕಿರುತೆರೆ ನಟಿ ದೀಪಿಕಾ ಕಾಕರ್ ಅವರು ಕೂಡ ಈ ಆಗಾಗ ಬರುತ್ತಿದ್ದ ಹೊಟ್ಟೆನೋವನ್ನು ಗ್ಯಾಸ್ಟಿಕ್ ಎಂದು ಮೊದಲಿಗೆ ಸುಮ್ಮನಾಗಿದ್ದರು. ಆದರೆ ನಂತರದಲ್ಲಿ ಈ ಸಣ್ಣ ಹೊಟ್ಟೆನೋವು ಯಕೃತ್ ಕ್ಯಾನ್ಸರ್‌ಗೆ ಬದಲಾದ ಆಘಾತಕಾರಿ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆರೋಗ್ಯವನ್ನು ನಿರ್ಲಕ್ಷಿಸುವ ಅನೇಕರಿಗೆ ಇದೊಂದು ಮುನ್ಸೂಚನೆಯಾಗಿದೆ.
‘ಸಸುರಲ್ ಸಿಮರ್ ಕಾ’ ಸೀರಿಯಲ್ ನಟಿ ದೀಪಿಕಾ ತಮ್ಮ ಯಕೃತ್ತಿ( liver)ಗೆ 22% ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು, ಆದರೆ ಅವರ ನೋವು ಅಲ್ಲಿಗೆ ಕೊನೆಗೊಂಡಿರಿಲಿಲ್ಲ. ಅವರ ಇತ್ತೀಚಿನ CT ಸ್ಕ್ಯಾನ್ ವರದಿಗಳ ಪ್ರಕಾರ, ಆರೋಗ್ಯ ತೊಡಕುಗಳಿಂದಾಗಿ ಅವರ ಯಕೃತ್ತಿನ ಮೇಲೆ ಹೊಸ ಚೀಲ(cyst) ಬೆಳೆಯಿತು. ಯಕೃತ್ತಿನ ಕ್ಯಾನ್ಸರ್ ಚಿಕಿತ್ಸೆಯಿಂದ ಬಂದ ಈ ಆರೋಗ್ಯ ಸಮಸ್ಯೆಯೂ ಹೊಟ್ಟೆ ನೋವನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಸೂಚಿಸುತ್ತವೆ. ನಿಮ್ಮ ದೇಹ ಮತ್ತು ಅದರ ಆಂತರಿಕ ಕಾರ್ಯನಿರ್ವಹಣೆಯಲ್ಲಿ ಏನಾದರೂ ದೋಷವಿರಬಹುದು ಎಂದು ಸೂಚಿಸಲು ದೇಹವು ನೋವಿನಂತಹ ಪ್ರಾಥಮಿಕ ಚಿಹ್ನೆಗಳನ್ನು ಕಳುಹಿಸುತ್ತದೆ. ಆದರೆ ಸಣ್ಣ ಹೊಟ್ಟೆ ನೋವನ್ನು ಸಾಮಾನ್ಯವಾಗಿ ಬಹುತೇಕರು ಲಘುವಾಗಿ ಪರಿಗಣಿಸುವುದು ಅಷ್ಟೇ ಸಾಮಾನ್ಯವಾಗಿದೆ.
ಇದನ್ನೂ ಓದಿ: ಕನ್ನಡ್ ಗೊತ್ತಿಲ್ಲ ಅನ್ನೋರ್ ಮಧ್ಯೆ ಮಾತನಾಡುವುದಲ್ಲದೇ ಕನ್ನಡ ಓದಲು ಬರೆಯಲು ಕಲಿತ ಮೇಘಾಲಯದ ಹುಡುಗ
ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ ಶೇ 50% ಕ್ಕಿಂತ ಹೆಚ್ಚು ಜನರು ವೈದ್ಯರನ್ನು ಸಂಪರ್ಕಿಸುವ ಬದಲು ಪುನರಾವರ್ತಿತ ಹೊಟ್ಟೆಯ ಅಸ್ವಸ್ಥತೆಗಾಗಿ ಆಂಟಾಸಿಡ್‌ಗಳೊಂದಿಗೆ ಸ್ವಯಂ ಔಷಧಿ ಮಾಡಿಕೊಳ್ಳುತ್ತಾರೆ. ಈ ನಡವಳಿಕೆಯು ಹೊಟ್ಟೆ ಹುಣ್ಣುಗಳು, ಜಠರದುರಿತ ಮತ್ತು ಹೊಟ್ಟೆಯ ಕ್ಯಾನ್ಸರ್‌ನ ಆರಂಭಿಕ ಪತ್ತೆಹಚ್ಚುವಿಕೆಯನ್ನು ತಪ್ಪಿಸುತ್ತದೆ ಎಂದು ಅಧ್ಯಯನವು ಎತ್ತಿ ತೋರಿಸಿದೆ. ಆದ್ದರಿಂದ, ನಿಮ್ಮ ವೈದ್ಯರ ಸಲಹೆಯಂತೆ ಸಣ್ಣ ಪುಟ್ಟ ನೋವುಗಳು ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ದೀಪಿಕಾ ಕಾಕರ್ ಅವರ ಪ್ರಕರಣದಂತೆ, ಪ್ರಮುಖ ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆ ನೋವು ಉಂಟಾದರೆ, ಅದು ತೀವ್ರವಾಗುವ ಮೊದಲು ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಐಸಿಎಂಆರ್ ತನ್ನ ರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಕಾರ್ಯಕ್ರಮದಲ್ಲಿ, 60% ಕ್ಕಿಂತ ಹೆಚ್ಚು ಲಿವರ್ ಕ್ಯಾನ್ಸರ್ ಪ್ರಕರಣಗಳು ಮುಂದುವರಿದ ಹಂತಗಳಲ್ಲಿ ಪತ್ತೆಯಾಗುತ್ತವೆ. ಏಕೆಂದರೆ ರೋಗಿಗಳು ದಿನನಿತ್ಯದ ತಪಾಸಣೆಗಳನ್ನು ತಪ್ಪಿಸುತ್ತಾರೆ ಅಥವಾ ಆರಂಭಿಕ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಅದಕ್ಕಾಗಿಯೇ ನೀವು ನಿರಂತರ ಹೊಟ್ಟೆ ನೋವನ್ನು ನಿರ್ಲಕ್ಷಿಸಬಾರದು ಮತ್ತು ಅದನ್ನು ಕೇವಲ ಗ್ಯಾಸ್ಟಿಕ್‌ಗೆ ಹೋಲಿಸಬಾರದು.
ಇದನ್ನೂ ಓದಿ: ಆಕೆಯ ವೆಚ್ಚ ಭರಿಸಲಾಗದು: ಹೆಂಡ್ತಿಯನ್ನೇ ಬಾಡಿಗೆಗೆ ನೀಡುವುದಾಗಿ ಘೋಷಿಸಿದ ಗಂಡ
ವಿಶೇಷವಾಗಿ ಪ್ರಮುಖ ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆ ಪ್ರದೇಶದಲ್ಲಿ ನಿರಂತರ ಮತ್ತು ಮರುಕಳಿಸುವ ನೋವು ಕಾಣಿಸಿಕೊಂಡರೆ ಆಹಾರವನ್ನು ತಿನ್ನುವಾಗ, ಊಟ ಮಾಡಿದ ನಂತರ ಅಥವಾ ಹಗಲು ಅಥವಾ ರಾತ್ರಿಯ ಯಾವುದೇ ಸಮಯದಲ್ಲಿ ವಿವರಿಸಲಾಗದ ಅಸ್ವಸ್ಥತೆ, ಕಂಡುಬಂದರೆ, ನಿಮಗೆ ಕ್ಯಾನ್ಸರ್ ಇತಿಹಾಸವಿದ್ದರೆ , ಸಿಸ್ಟ್ ಅಥವಾ ಇತರ ಸಮಸ್ಯೆಗಳು ಅಥವಾ ವೈದ್ಯಕೀಯ ಪರಿಸ್ಥಿತಿಗಳ ಬಗ್ಗೆ ತಿಳಿಯಲು ನಿಮ್ಮ ವೈದ್ಯರು ಸಲಹೆ ನೀಡಿದಂತೆ ಇಮೇಜಿಂಗ್ ಪರೀಕ್ಷೆಗಳು ಅಥವಾ ಸ್ಕ್ಯಾನ್‌ಗಳನ್ನು ಮಾಡಿಸಬೇಕು. ದೀಪಿಕಾ ಕಾಕರ್ ಅವರ ಪ್ರಕರಣವು ದೈನಂದಿನ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳಬಾರದು ಎಂಬುದನ್ನು ನೆನಪಿಸುತ್ತದೆ, ಆರಂಭಿಕ ವೈದ್ಯಕೀಯ ಪರೀಕ್ಷೆಯೂ ಪ್ರಮುಖ ವೈದ್ಯಕೀಯ ತೊಡಕುಗಳನ್ನು ತಪ್ಪಿಸಲು ಕಾರಣವಾಗಬಹುದು.
2025 ರಲ್ಲಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ, ತನ್ನ ಯಕೃತ್ತಿನಲ್ಲಿ ಟೆನಿಸ್ ಚೆಂಡಿನ ಗಾತ್ರದ ಕ್ಯಾನ್ಸರ್ ಗೆಡ್ಡೆ ಪತ್ತೆಯಾಗಿದೆ ಎಂದು ನಟಿ ಬಹಿರಂಗಪಡಿಸಿದರು ಮತ್ತು ಅದಕ್ಕೆ ಚಿಕಿತ್ಸೆ ನೀಡಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ 14 ಗಂಟೆಗಳ ಕಾಲ ನಡೆಯಿತು. ಆದರೆ ನಂತರದ ತಪಾಸಣೆಯಲ್ಲಿ, ವೈರಲ್ ಸೋಂಕಿಗೆ ಒಳಗಾಗಿದ್ದು ಕಂಡು ಬಂದಿದ್ದು, ವೈದ್ಯರು ಅವರ ಯಕೃತ್‌ನಲ್ಲಿ 13 ಎಂಎಂ ಸಿಸ್ಟ್ ಅನ್ನು ಪತ್ತೆ ಮಾಡಿದರು. ಅದನ್ನು ಮತ್ತೆ ಶಸ್ತ್ರಚಿಕಿತ್ಸೆ ನಡೆಸಿ ತೆಗೆಯಬೇಕಾಯ್ತು.
ಹೊಟ್ಟೆಯ ಚೀಲ ಅಥವಾ ಸಿಸ್ಟ್ ದ್ರವದಿಂದ ತುಂಬಿದ ಸಣ್ಣ ಗುಳ್ಳೆ ಅಥವಾ ಚೀಲವಾಗಿದ್ದು, ಪ್ರಮುಖ ಶಸ್ತ್ರಚಿಕಿತ್ಸೆಯ ನಂತರ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಈ ಸಿಸ್ಟ್ ಸಾಮಾನ್ಯವಾಗಿ ಹೊಟ್ಟೆಯ ಒಳಪದರ ಅಥವಾ ಅಂಗಾಂಶಗಳಲ್ಲಿ ಕಾಣಿಸಬಹುದು ಮತ್ತು ಅದರ ಸರಾಸರಿ ಉದ್ದವನ್ನು ಅವಲಂಬಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಚೇತರಿಕೆಯ ಹಂತವನ್ನು ಇನ್ನಷ್ಟು ಹದಗೆಡಿಸುವ ದ್ವಿತೀಯ ಸೋಂಕು ಅಥವಾ ಉರಿಯೂತದಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸುವುದಕ್ಕೆ ತುರ್ತು ಚಿಕಿತ್ಸೆ ಅಗತ್ಯವಾಗಿದೆ. ಹೀಗಾಗಿ ಹೊಟ್ಟೆನೋವನ್ನು ಗ್ಯಾಸ್ಟಿಕ್ ಎಂದು ನಿರ್ಲಕ್ಷಿಸುವ ಮೊದಲು ತಜ್ಞರಿಂದ ಪರೀಕ್ಷಿಸಿಕೊಳ್ಳಿ ಇದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ.