Headlines

Bengaluru student dies in America: ಅಮೆರಿಕಾದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಸಾವು: ಮಗನ ಸಾವು ಒಪ್ಪಿಕೊಳ್ಳಲಾಗದೇ ಪೋಷಕರ ಗೋಳು | Bengaluru Student Dies In America Parents Mourn Sons Death Unable To Accept It

Bengaluru student dies in America: ಅಮೆರಿಕಾದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಸಾವು: ಮಗನ ಸಾವು ಒಪ್ಪಿಕೊಳ್ಳಲಾಗದೇ ಪೋಷಕರ ಗೋಳು | Bengaluru Student Dies In America Parents Mourn Sons Death Unable To Accept It



Bengaluru student dies in America: ಅಮೆರಿಕಾದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಸಾವು: ಮಗನ ಸಾವು ಒಪ್ಪಿಕೊಳ್ಳಲಾಗದೇ ಪೋಷಕರ ಗೋಳು | Bengaluru Student Dies In America Parents Mourn Sons Death Unable To Accept It

Bengaluru student dies in America: ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಯೋರ್ವ ನಾಪತ್ತೆಯಾದ ಕೆಲ ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾನೆ. ಸಾಕೇತ್ ಶ್ರೀನಿವಾಸಯ್ಯ ಮೃತ ವಿದ್ಯಾರ್ಥಿ.

ಬೆಂಗಳೂರು: ಕಳೆದ ವಾರ ಅಮೆರಿಕದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ಸ್ನಾತಕೋತ್ತರ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಕರ್ನಾಟಕ ಮೂಲದ ಈ ವಿದ್ಯಾರ್ಥಿ ಮೃತಪಟ್ಟಿರುವ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ಮಾಹಿತಿ ನೀಡಿದೆ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಸೋಮವಾರದಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹವನ್ನು ಸ್ಥಳೀಯ ಅಧಿಕಾರಿಗಳು ಪತ್ತೆ ಮಾಡಿದ್ದು, ಅವರ ಪೋಷಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಮೃತದೇಹವನ್ನ ಭಾರತಕ್ಕೆ ಕರೆ ತರಲು ಕಾನೂನು ಪ್ರಕ್ರಿಯೆ ಆರಂಭವಾಗಿದೆ ಎಂಬ ಮಾಹಿತಿ ಇದೆ.

ಮಗನ ಸಾವು ಒಪ್ಪಿಕೊಳ್ಳಲಾಗದೇ ಪೋಷಕರ ಗೋಳು

ಮದ್ರಾಸ್‌ ಐಐಟಿ ಪದವೀಧರನಾಗಿದ್ದ ಸಾಕೇತ್ ನಾಲ್ಕೈದು ತಿಂಗಳ ಹಿಂದಷ್ಟೇ ಕ್ಯಾಲಿಫೋರ್ನಿಯಾಗೆ ಹೋಗಿದ್ದ. ಆದರೀಗ ಅವರು ಹಠಾತ್ ಸಾವನ್ನಪ್ಪಿದ್ದು, ಅವರ ಹಠಾತ್ ಸಾವನ್ನು ಪೋಷಕರಿಗೆ ಒಪ್ಪಿಕೊಳ್ಳಲಾಗುತ್ತಿಲ್ಲ, ಅವರು ತಮ್ಮ ಪುತ್ರ ಸತ್ತಿಲ್ಲ ಎಂದು ಹೇಳಿಕೊಂಡು ಗೋಳಾಡುತ್ತಿದ್ದಾರೆ. ನನ್ನ ಮಗ ಇನ್ನೂ ಸತ್ತಿಲ್ಲ, ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ, ಅನುಮಾನ ವ್ಯಕ್ತ ಆಗಿದೆ ಅಷ್ಟೇ, ಸಿಕ್ಕಿರುವ ಶವ ನನ್ನ ಪುತ್ರನದಲ್ಲ ಎಂದು ಸಾಕೇತ್ ಪೋಷಕರು ಹೇಳುತ್ತಿದ್ದಾರೆ. ಸಾಕೇತ್ ಪೋಷಕರು ಬೆಂಗಳೂರಿನ ಶ್ರೀಗಂಧ ಕಾವಲ್‌ನಲ್ಲಿ ನೆಲೆಸಿದ್ದಾರೆ. ಸಾಕೇತ್ ತಂದೆ ಶ್ರೀನಿವಾಸಯ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸಾಕೇತ್ ನಾಲ್ಕೈದು ತಿಂಗಳ‌ ಹಿಂದೆಯಷ್ಟೇ ಕ್ಯಾಲಿಫೋರ್ನಿಯಾಗೆ ಹೋಗಿದ್ದರು. ಈಗ ಅವರ ಸಾವಿನ ಸುದ್ದಿ ತಿಳಿದು ಪೋಷಕರು ಕಣ್ಣೀರಿಡುತ್ತಿದ್ದಾರೆ.

ಸ್ನೇಹಿತ ಸಾಕೇತ್ ಶ್ರೀನಿವಾಸಯ್ಯ ನೆನೆದು ರೂಂ ಮೇಟ್ ಭಾವುಕ ಪೋಸ್ಟ್

ಮತ್ತೊಂದೆಡೆ ಸ್ನೇಹಿತ ಸಾಕೇತ್ ಶ್ರೀನಿವಾಸನ್‌ ಮೃತಪಟ್ಟಿರುವುದನ್ನು ನೆನೆದು ಅವರ ರೂಮೇಟ್ ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ. ಪಂಜಾಬ್ ಮೂಲದ ಬನೀಟ್ ಸಿಂಗ್ ಎಂಬುವವರು ಭಾವುಕ ಪೋಸ್ಟ್ ಮಾಡಿದ್ದಾರೆ. ಸಾಕೇತ್ ನನ್ನ ಜೊತೆ ಬದುಕುತ್ತಿದ್ದ, ಊಟ ಮಾಡುತ್ತಿದ್ದ, ಪ್ರಯಾಣಿಸುತ್ತಿದ್ದ, ನಗುತ್ತಿದ್ದ ಮತ್ತು ತಮಾಷೆ ಮಾಡುತ್ತಿದ್ದ, ಇಂತಹ ನನ್ನ ಸ್ನೇಹಿತನಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಜಮಾತ್ ಸೋಲಿನಿಂದ ಭಾರತ ನಿರಾಳ: ಬಾಂಗ್ಲಾದೇಶ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ಗೆಲುವಿನಿಂದ ಭಾರತಕ್ಕೇನು ಲಾಭ?

ಜನವರಿ 21ರಂದು ಸಾಕೇತ್ ನನ್ನ ಬಳಿ ಅನ್ಝಾ ಕೆರೆಯತ್ರ ಹೋಗೋಣ ಅಂದಿದ್ದ. ಅಂದು‌ ಆ ಕೆರೆಯತ್ರ ನಾನು‌ ಹೋಗಿರ್ಲಿಲ್ಲ, ಕೆಲದಿನದಲ್ಲಿಯೇ ಅದೇ ಕೆರೆಯಲ್ಲಿ ಅವನ ಜೀವನ ಮುಗಿಯುತ್ತೆಂದು ಅಂದುಕೊಂಡಿರ್ಲಿಲ್ಲ ಎಂದು ಸಾಕೇತ್ ರೂಮ್‌ಮೇಟ್ ಬನೀಟ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ಶ್ರೀನಿವಾಸಯ್ಯ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.

ಇದನ್ನೂ ಓದಿ: ಗಂಡು ಮಗು ಆಗಿದೆ ಎಂದು ತಂದೆಗೆ ಸಂತಾನಹರಣ ಚಿಕಿತ್ಸೆ ಮಾಡಿ ಹೆಣ್ಣು ಮಗು ನೀಡಿದ ವೈದ್ಯರು.



Source link

Leave a Reply

Your email address will not be published. Required fields are marked *