
ಬೆಂಗಳೂರಿನ ಸಂಪಿಗೆಹಳ್ಳಿ ಬಳಿ ತಾಯಿಯೊಬ್ಬಳು ತನ್ನ ಮಗಳನ್ನು ದೇವಸ್ಥಾನಕ್ಕೆ ಕರೆದೊಯ್ದು ಮಚ್ಚಿನಿಂದ ಹಲ್ಲೆ ಮಾಡಿದ್ದಾಳೆ. ಅಮಾವಾಸ್ಯೆಯ ದಿನದಂದು ನಡೆದ ಈ ಘಟನೆಯು, ಅನಾರೋಗ್ಯದಿಂದ ಬಳಲುತ್ತಿದ್ದ ಮಗಳನ್ನು ನರಬಲಿ ನೀಡುವ ಯತ್ನವಿರಬಹುದು ಎಂಬ ಬಲವಾದ ಶಂಕೆ ಮೂಡಿಸಿದೆ.
ಬೆಂಗಳೂರು: ಗಂಡನನ್ನ ಬಿಟ್ಟು ತವರು ಮನೆಗೆ ಬಂದಿದಕ್ಕೆ ತಾಯಿಯಿಂದಲೇ ಮಗಳು ಹಲ್ಲೆಗೊಳಗಾದ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಾಯಿ ತನ್ನ ಮಗಳನ್ನು ನರಬಲಿ ಕೊಡಲು ಪ್ಲಾನ್ ಮಾಡಿದ್ದಳು ಎಂಬ ಅನುಮಾನ ಮೂಡಿದೆ. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್ ಹರಿಹರೇಶ್ವರ ದೇವಸ್ಥಾನದ ಬಳಿ ಘಟನೆ ಈ ಘಟನೆ ನಡೆದಿದ್ದು, ಇವತ್ತು ಬೆಳಗ್ಗೆ ತಾಯಿ ಸರೋಜಮ್ಮ ತನ್ನ ಮಗಳು ರಮ್ಯ(22)ಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದು ಮಚ್ಚಿನಿಂದ ಮಗಳ ಕುತ್ತಿಗೆಗೆ ಕಡಿದಿದ್ದಾಳೆ.
ದೇವಸ್ಥಾನಕ್ಕೆ ಅಂತಾ ಕರೆತಂದು ಮಗಳ ಕೊಲೆಗೆ ಯತ್ನ ನಡೆಸಿದ್ದು, ತಲೆಬಾಗಿ ನಮಸ್ಕರಿಸುವಾಗ ಮಗಳ ಕುತ್ತಿಯನ್ನು ಕತ್ತರಿಸಿಸಲು ತಾಯಿ ಪ್ರಯತ್ನಿಸಿದ್ದಾಳೆ. ಮಗಳು ರಮ್ಯಾ ಆನೇಕಲ್ ನಲ್ಲಿ ವಾಸವಾಗಿದ್ದಳು. ಇಬ್ಬರು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ರು. ರಮ್ಯಾಗೆ ಕೂಡ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಗಂಡ ಸೋಮಶೇಖರ್ ಜೊತೆಗೆ ರಮ್ಯಾ ತಾಯಿ ಮನೆಗೆ ಬಂದಿದ್ದಳು. ಮೂರು ದಿನಗಳ ಹಿಂದೆ ತವರು ಮನೆಗೆ ಬಂದಿದ್ರು. ಬೆಳಗಿನ ಜಾವ 3.45 ಗಂಟೆಗೆ ಪೂಜೆಗೆ ಅಂತಾ ಮನೆಯಿಂದ ಸ್ವಲ್ಪ ದೂರ ಇರುವ ದೇವಸ್ಥಾನಕ್ಕೆ ರಮ್ಯಾಳನ್ನು ತಾಯಿ ಸುಜಾತ ಕರೆ ತಂದಿದ್ದಳು.
ತಲೆಬಾಗಿ ನಮಸ್ಕರಿಸ್ತಿದ್ದ ವೇಳೆ ಮಚ್ಚಿನಿಂದ ಹಲ್ಲೆ
ದೇವರಿಗೆ ಪೂಜೆ ಮಾಡುವಾಗ ರಮ್ಯಾ ತಲೆಬಾಗಿ ನಮಸ್ಕರಿಸ್ತಿದ್ದ ವೇಳೆ ಮಚ್ಚಿನಿಂದ ಮಗಳ ಕುತ್ತಿಗೆಗೆ ಮಚ್ಚಿನಿಂದ ಕಡಿದಿದ್ದಾಳೆ. ಘಟನೆ ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಇಷ್ಟೆಲ್ಲ ಘಟನೆ ವೇಳೆ ರಮ್ಯಾಳ ಗಂಡ ಸೋಮಶೇಖರ್ ಮನೆಯಲ್ಲಿದ್ದ. ಹೀಗಾಗಿ ಈ ಪ್ರಕರಣವೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಗಳ ನರಬಲಿಗೆ ಮುಂದಾದ್ಲಾ ತಾಯಿ!
ಮಗಳನ್ನ ನರಬಲಿ ಕೊಡೊದಕ್ಕೆ ಮುಂದಾಗಿದ್ಲಾ ತಾಯಿ..? ಯಾಕೆಂದರೆ ಇವತ್ತು ಅಮವಾಸೆ ಹಿನ್ನೆಲೆ ದೇವಸ್ಥಾನಕ್ಕೆ ಸುಜಾತಾ ಮಗಳನ್ನು ಕರೆ ತಂದಿದ್ದಳು. ಬೆಳಗಿನ ಜಾವ ಪೂಜೆಗೆ ಎಂದು ಕರೆ ತಂದಿದ್ದು, ದೇವಸ್ಥಾನದ ಅಕ್ಕ ಪಕ್ಕದ ಮನೆಯವ್ರು ಪೂಜೆ ನೋಡಿದಾಗ ಬೈದು ಕಳಿಸಿದ್ದಳು. ಪೂಜೆ ವಸ್ತುಗಳು, ಮಚ್ಚು ಸಮೇತ ದೇವಸ್ಥಾನಕ್ಕೆ ಬಂದಿದ್ರು ಮಗಳು ತಲೆಬಾಗಿ ನಮಸ್ಕರಿಸುವ ವೇಳೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಬಳಿಕ ತಲೆಮರೆಸಿಕೊಂಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ರಮ್ಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಮತ್ತೊಂದು ತಂಡ ಎಸ್ಕೇಪ್ ಆಗಿರುವ ಸುಜಾತಗಾಗಿ ಹುಡುಕಾಟ ನಡೆಸುತ್ತಿದೆ.