indias private gold reserves: ಭಾರತೀಯರ ಬಳಿ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ | Gold Wealth Of Indians Exceeds Gdp Of Even The Worlds Most Powerful Countries

indias private gold reserves: ಭಾರತೀಯರ ಬಳಿ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ | Gold Wealth Of Indians Exceeds Gdp Of Even The Worlds Most Powerful Countries



indias private gold reserves: ಭಾರತೀಯರ ಬಳಿ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ | Gold Wealth Of Indians Exceeds Gdp Of Even The Worlds Most Powerful Countries

ಭಾರತೀಯರ ಮನೆಗಳು ಮತ್ತು ದೇಗುಲಗಳಲ್ಲಿ ಸುಮಾರು 50 ಸಾವಿರ ಟನ್ ಚಿನ್ನವಿದ್ದು, ಇದರ ಮೌಲ್ಯ 830 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಈ ಅಪಾರ ಸಂಪತ್ತು ವಿಶ್ವದ ಹಲವು ದೇಶಗಳ ಜಿಡಿಪಿಗಿಂತ ಹೆಚ್ಚಾಗಿದೆ.

ಅಮೆರಿಕಾ-ಚೀನಾ ಬ್ಯಾಂಕುಗಳಿಗೂ ಸವಾಲು ಹಾಕುವಂತಿದೆ ಭಾರತೀಯರ ಚಿನ್ನದ ದಾಸ್ತಾನು

ಭಾರತೀಯರಿಗೆ ಇರುವ ಚಿನ್ನದ ಹುಚ್ಚು ಇಂದು ನಿನ್ನೆಯದಲ್ಲ, ಭಾರತೀಯರು ಅನಾದಿ ಕಾಲದಿಂದಲೂ ಚಿನ್ನವನ್ನು ಬರೀ ಆಭರಣವಾಗಿ ಅಲ್ಲ ಆಸ್ತಿಯಂತೆ ನೋಡುತ್ತಾ ಬಂದಿದ್ದಾರೆ. ಮನೆಯಲ್ಲಿರುವ ಚಿನ್ನದ ಮೂಲಕ ಜನರ ಶ್ರೀಮಂತಿಕೆ ಅಳೆಯಬಹುದಾಗಿದೆ. ಭಾರತದಲ್ಲಿ ಚಿನ್ನವಿರದ ಮನೆ ಹುಡುಕಿದರು ಸಿಗಲಾರದು. ಹೀಗಿರುವಾಗ ಭಾರತದ ಮನೆಗಳಲ್ಲಿ ಚಿನ್ನದ ಒಟ್ಟು ಮೌಲ್ಯ ಎಷ್ಟು ಎಂದು ತಿಳಿದರೆ ನಿಮಗೆ ಅಚ್ಚರಿಯಾಗದೇ ಇರದು.

ಭಾರತೀಯ ಮನೆಗಳಲ್ಲಿ ಇರುವ ಚಿನ್ನದ ಮೌಲ್ಯ 830 ಲಕ್ಷ ಕೋಟಿ

ಹೌದು ಭಾರತದ ಮನೆಗಳು ಹಾಗೂ ದೇಗುಲಗಳಲ್ಲಿ ಒಟ್ಟು 50 ಸಾವಿರ ಟನ್‌ ಮೌಲ್ಯದ ಬಂಗಾರವಿದೆ. ಇವುಗಳ ಮೊತ್ತ 10 ಟ್ರಿಲಿಯನ್ ಡಾಲರ್ ಅಥವಾ 830 ಲಕ್ಷ ಕೋಟಿ ರೂಪಾಯಿಗಳಾಗಿವೆ. ಅಸ್ಚೊಮ್ (The Associated Chambers of Commerce and Industry of India)ವರದಿಯ ಪ್ರಕಾರ ಇದು ವಿಶ್ವದ 10 ದೊಡ್ಡ ಕೇಂದ್ರ ಬ್ಯಾಂಕುಗಳ ಒಟ್ಟು ಮೀಸಲು ಚಿನ್ನಕ್ಕಿಂತ ಅಧಿಕವಾಗಿದೆ.

ಭಾರತೀಯರು ಎಷ್ಟೊಂದು ಚಿನ್ನವನ್ನು ಹೊಂದಿದ್ದಾರೆಂದರೆ ಅದು ದೇಶದ ಎರಡು ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾವನ್ನು ಹೊರತುಪಡಿಸಿ, ಪ್ರಪಂಚದ ಬಹುತೇಕ ಎಲ್ಲಾ ದೇಶಗಳ ವಾರ್ಷಿಕ ಜಿಡಿಪಿಯನ್ನು ಮೀರುವಷ್ಟು. ಜನರ ಬಳಿ ಇರುವ ಈ ಚಿನ್ನವನ್ನು ದೇಶದ ಬ್ಯಾಂಕಿಂಗ್ ವ್ಯವಸ್ಥೆ ಅಥವಾ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದರೆ, ಭಾರತೀಯ ಆರ್ಥಿಕತೆಯ ವೇಗ ಹಲವು ಪಟ್ಟು ವೇಗ ಪಡೆಯಬಹುದು ಎಂದು ಅಸ್ಸೋಚಾಮ್ ಹೇಳುತ್ತದೆ.

ವಿಶ್ವ ಗೋಲ್ಡ್ ಕೌನ್ಸಿಲ್‌ ನೀಡಿದ ಮಾಹಿತಿಯ ಪ್ರಕಾರ, ಭಾರತದ ಅಧಿಕೃತ ಸರ್ಕಾರಿ ಬ್ಯಾಂಕ್ ಆಗಿರುವ ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾವೂ ಭಾರತದಲ್ಲಿ 880.3 ಟನ್ ಚಿನ್ನವನ್ನು ಹೊಂದಿದೆ. ಈ ಮೂಲಕ ಅದು ಅತೀ ಹೆಚ್ಚು ಚಿನ್ನ ಹೊಂದಿರುವ ದೇಶಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಆದರೆ ಅಮೆರಿಕಾಗೆ ಹೋಲಿಕೆ ಮಾಡಿದರೆ ಈ ಚಿನ್ನದ ಪ್ರಮಾಣ ತೀರಾ ಕಡಿಮೆ. ಅಮೆರಿಕಾವು 8,133 ಟನ್ ಆಭರಣವನ್ನು ಹೊಂದಿದೆ. ಆದರೆ ಭಾರತದ ಖಾಸಗಿ ಚಿನ್ನವನ್ನು ಸೇರಿಸಿದರೆ ಭಾರತ ಎಲ್ಲಾ ದೇಶಗಳಿಗಿಂತ ಮುಂದಿರಲಿದೆ.

ಇದನ್ನೂ ಓದಿ: ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ: ಬಾಲ್ಕನಿಯಿಂದ ಹಾರುವಂತೆ ಪುಟ್ಟ ಮಗುವಿಗೆ ಒತ್ತಾಯ: ವೀಡಿಯೋ

ಕೋಟಕ್ ಇನ್‌ಸ್ಟಿಟ್ಯೂಷನಲ್ ಇಕ್ವಿಟೀಸ್ ಅಂದಾಜಿನ ಪ್ರಕಾರ, 2024 ಮತ್ತು 2026 ರ ನಡುವೆ ಚಿನ್ನದ ಬೆಲೆಯಲ್ಲಿನ ಏರಿಕೆಯು ಭಾರತೀಯ ಮನೆಗಳಲ್ಲಿರುವ ಚಿನ್ನದ ಮೌಲ್ಯವನ್ನು ಏರಿಕೆ ಮಾಡಿದ್ದು, ಅವರ ಸಂಪತ್ತಿನ ಏರಿಕೆಗೆ ಕಾರಣವಾಗಿದೆ. ಭಾರತೀಯ ಮನೆಗಳಲ್ಲಿ ಇರುವ ಚಿನ್ನದ ಮೌಲ್ಯ ಜನವರಿ 2026 ರ ವೇಳೆಗೆ $5 ಟ್ರಿಲಿಯನ್ ಮೀರಿದೆ, ಇದು ಭಾರತದ ಒಟ್ಟು GDPಯ ಸರಿಸುಮಾರು 125% ರಷ್ಟು ಆಗಿದೆ. ಭಾರತದಲ್ಲಿರುವ ಚಿನ್ನದ ಮೌಲ್ಯವು ಇಲ್ಲಿನ ಕುಟುಂಬಗಳು ಹೊಂದಿರುವ ಬ್ಯಾಂಕ್ ಠೇವಣಿಗಳು ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಒಟ್ಟು ಹಣಕ್ಕಿಂತ 175% ಪಟ್ಟು ಹೆಚ್ಚಾಗಿದೆ. ಇದರರ್ಥ ಭಾರತೀಯರು ಇನ್ನೂ ಚಿನ್ನವನ್ನೇ ಹೆಚ್ಚು ನಂಬುತ್ತಾರೆ.

ಇದನ್ನೂ ಓದಿ: ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ: ಯುವ ಕಾಂಗ್ರೆಸ್ ನಾಯಕನ ಮರ್ಡರ್ ಕೇಸ್‌ನಲ್ಲಿ ಸ್ನೇಹಿತರ ಬಂಧನ

ಭಾರತೀಯರ ಒಟ್ಟು ಆಸ್ತಿಯೇತರ ಸಂಪತ್ತಿನಲ್ಲಿ (ಭೂಮಿ ಮತ್ತು ಮನೆಗಳನ್ನು ಹೊರತುಪಡಿಸಿ) ಚಿನ್ನದ ಪಾಲು ಶೇ. 65 ರಷ್ಟಿದೆ. ವರದಿಯ ಪ್ರಕಾರ, ಒಂದು ಆಸ್ತಿಯ ಬೆಲೆ ಹೆಚ್ಚಾದಾಗ, ಜನರು ಶ್ರೀಮಂತರಾಗುತ್ತಾರೆ ಮತ್ತು ಹೆಚ್ಚು ಖರ್ಚು ಮಾಡುತ್ತಾರೆ ಆದರೆ ಭಾರತದಲ್ಲಿ 75-80% ಚಿನ್ನವು ಆಭರಣ ರೂಪದಲ್ಲಿದೆ. ಜನರು ಇದನ್ನು ದೀರ್ಘಕಾಲೀನ ಉಳಿತಾಯ ಮತ್ತು ಸಂಪ್ರದಾಯವೆಂದು ನೋಡುತ್ತಾರೆ. ಜನರು ಅದನ್ನು ಮಾರಾಟ ಮಾಡದ ಕಾರಣ, ಬೆಲೆಗಳ ಹೆಚ್ಚಳವು ಅವರ ದೈನಂದಿನ ಬಳಕೆ ಅಥವಾ ಖರೀದಿಗಳ ಮೇಲೆ ಯಾವುದೇ ಗಮನಾರ್ಹ ಪರಿಣಾಮ ಬೀರುವುದಿಲ್ಲ.



Source link

Leave a Reply

Your email address will not be published. Required fields are marked *