
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ, ಇಸ್ರೇಲ್ ರಕ್ಷಣಾ ಪಡೆಯಾದ ಐಡಿಎಫ್ ಶನಿವಾರ ಇರಾನ್ನ ಟೆಹ್ರಾನ್ನಲ್ಲಿರುವ ಹಲವಾರು ಇರಾನಿನ ಇಂಧನ ಡಿಪೋಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಇರಾನ್ ತೈಲಾಗಾರಗಳ ಮೇಲೆ ಇಸ್ರೇಲ್ ದಾಳಿ
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ, ಇಸ್ರೇಲ್ ರಕ್ಷಣಾ ಪಡೆಯಾದ ಐಡಿಎಫ್ ಶನಿವಾರ ಇರಾನ್ನ ಟೆಹ್ರಾನ್ನಲ್ಲಿರುವ ಹಲವಾರು ಇರಾನಿನ ಇಂಧನ ಡಿಪೋಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ತೈಲ ಘಟಕಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ಆಕಾಶದೆತ್ತರಕ್ಕೆ ಬೆಂಕಿಯ ಜ್ವಾಲೆಗಳು ಏಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇರಾನ್ ತೈಲಾಗಾರಗಳಿಂದ ಆಕಾಶದೆತ್ತರಕ್ಕೆ ದಟ್ಟವಾದ ಕಪ್ಪು ಹೊಗೆ ಹಾಗೂ ಆಕಾಶದೆತ್ತರಕ್ಕೆ ಜ್ವಾಲೆಗಳು ಏಳುವುದನ್ನು ಕಾಣಬಹುದು.
ಅಮೆರಿಕಾ ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಮೂಲಸೌಕರ್ಯವನ್ನು ಒದಗಿಸಲು ಬಳಸಲಾಗುತ್ತಿದೆ ಎನ್ನಲಾದ ಇಂಧನ ಸಂಗ್ರಹಣಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಈ ದಾಳಿ ನಡೆಸಿದೆ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯ ನಂತರ ಟೆಹ್ರಾನ್ನ ಶಹ್ರಾನ್ ತೈಲ ಡಿಪೋದಲ್ಲಿ ದೊಡ್ಡ ಜ್ವಾಲೆಗಳು ಮತ್ತು ಸ್ಫೋಟಗಳುಂಟಾಗಿ ಬೆಂಕಿಯ ಜ್ವಾಲೆ ಆಕಾಶದೆತ್ತರಕ್ಕೆ ಏರಿದ್ದನ್ನು ಕಾಣಬಹುದಾಗಿದೆ.
ಈ ದಾಳಿಯನ್ನು ಇಸ್ರೇಲ್ನ ಐಡಿಎಫ್ ದೃಢಪಡಿಸಿದ್ದು, ‘ಇರಾನ್ನ ಭಯೋತ್ಪಾದಕ ಆಡಳಿತದ ಮಿಲಿಟರಿ ಪಡೆಗಳು ಮಿಲಿಟರಿ ಮೂಲಸೌಕರ್ಯವನ್ನು ನಿರ್ವಹಿಸಲು ಈ ಇಂಧನ ಟ್ಯಾಂಕ್ಗಳನ್ನು ನೇರವಾಗಿ ಮತ್ತು ಆಗಾಗ್ಗೆ ಬಳಸುತ್ತವೆ’ ಇರಾನ್ನ ಮಿಲಿಟರಿ ಸಾಮರ್ಥ್ಯಗಳನ್ನು ಮತ್ತಷ್ಟು ಹಾನಿ ಮಾಡುವ ಗುರಿಯೊಂದಿಗೆ ಈ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ಹೇಳಿದೆ.
ಇದಕ್ಕೂ ಮೊದಲು, ಇರಾನ್ ರಾಜಧಾನಿಯ ಮುಖ್ಯ ತೈಲ ಸಂಸ್ಕರಣಾಗಾರ ಸಂಕೀರ್ಣದ ಬಳಿಯ ದಕ್ಷಿಣ ಟೆಹ್ರಾನ್ನಲ್ಲಿರುವ ತೈಲ ಡಿಪೋ ಮೇಲೆಯೂ ದಾಳಿ ನಡೆದಿದೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿತ್ತು. ಐಎಲ್ಎನ್ಎ ಸುದ್ದಿ ಸಂಸ್ಥೆ ಪ್ರಕಾರ, ಸಂಸ್ಕರಣಾಗಾರಕ್ಕೆ ಯಾವುದೇ ಹಾನಿಯಾಗಿಲ್ಲ. ವಾಯುವ್ಯ ಟೆಹ್ರಾನ್ನಲ್ಲಿರುವ ಇಂಧನ ಡಿಪೋದ ಮೇಲೂ ಹೆಚ್ಚುವರಿ ದಾಳಿಗಳು ವರದಿಯಾಗಿವೆ, ಅಲ್ಲಿ ಸ್ಥಳದಿಂದ ಜ್ವಾಲೆಗಳು ಮತ್ತು ದಟ್ಟ ಹೊಗೆ ಏರುತ್ತಿರುವುದು ಕಂಡುಬಂದಿದೆ ಎಂದು ಎಎಫ್ಪಿ ಪತ್ರಕರ್ತರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ವರ್ಷದ 8 ದಿನ ಬಿಟ್ಟು ಉಳಿದೆಲ್ಲಾ ದಿನ ಸಾಲ ಮಾಡಿಯೇ ಬದುಕಿದ ಆಂಧ್ರ ಸರ್ಕಾರ: ಸಿಎಜಿ ವರದಿಯಲ್ಲಿ ಮಾಹಿತಿ
ಈ ನಡುವೆ ಇರಾನ್ನ ದಕ್ಷಿಣ ಕೌಂಟಿಯಾದ ಮಿನಾಬ್ನಲ್ಲಿರುವ 165 ಮಕ್ಕಳ ಬಲಿ ಪಡೆದ ಶಾಲೆಯ ಮೇಲೆ ನಡೆದ ಮಾರಕ ದಾಳಿಗೆ ಡೊನಾಲ್ಡ್ ಟ್ರಂಪ್ ಶನಿವಾರ ಇರಾನ್ ಅನ್ನೇ ದೂಷಿಸಿದ್ದಾರೆ. ಇದನ್ನು ಇರಾನ್ ಮಾಡಿದೆ ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಅವರು ತಮ್ಮ ಯುದ್ಧಸಾಮಗ್ರಿಗಳೊಂದಿಗೆ ತುಂಬಾ ನಿಖರವಾಗಿಲ್ಲ ಎಂದು ನಿಮಗೆ ತಿಳಿದಿದೆ. ಅವರಿಗೆ ಯಾವುದೇ ನಿಖರತೆ ಇಲ್ಲ ಎಂದು ಟ್ರಂಪ್ ಏರ್ ಫೋರ್ಸ್ ಒನ್ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಶನಿವಾರ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 165 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ವರದಿಯಾದ ಈದಾಳಿಯ ಹೊಣೆಯನ್ನು ಇಸ್ರೇಲ್ ಅಥವಾ ಅಮೆರಿಕ ಹೊತ್ತಿಲ್ಲ. ಆದರೆ ಈ ದಾಳಿಗೆ ಪ್ರತಿಯಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್ನ ಅಲ್ ಧಫ್ರಾ ವಾಯುನೆಲೆಯ ಮೇಲೆ ಡ್ರೋನ್ಗಳು ಮತ್ತು ನಿಖರ ಕ್ಷಿಪಣಿಗಳಿಂದ ದಾಳಿ ಮಾಡಿವೆ. ಈ ನೆಲೆಯನ್ನು ಶಾಲಾ ದಾಳಿಗೆ ಉಡಾವಣಾ ಕೇಂದ್ರವಾಗಿ ಬಳಸಲಾಗಿದೆ ಎಂದು ಇರಾನ್ ಆರೋಪಿಸಿದೆ.
ಇದನ್ನೂ ಓದಿ: KSRTCಯಲ್ಲಿ ಕೆಲಸ ಕೊಡಿಸುವ ಆಮಿಷ: ಹೆಂಡತಿ, ಮಕ್ಕಳ ಮೇಲೆ ಆಣೆ ಮಾಡಿ 12 ಲಕ್ಷಕ್ಕೂ ಹೆಚ್ಚು ವಂಚನೆ
ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಯುನೈಟೆಡ್ ಸ್ಟೇಟ್ಸ್ ರಕ್ಷಣಾ ಇಲಾಖೆ ದೃಢಪಡಿಸಿದೆ. ಆದರೆ ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮಾರ್ಕೊ ರೂಬಿಯೊ ಯುನೈಟೆಡ್ ಸ್ಟೇಟ್ಸ್ ಉದ್ದೇಶಪೂರ್ವಕವಾಗಿ ಶಾಲೆಯನ್ನು ಗುರಿಯಾಗಿಸಿಲ್ಲ ಎಂದು ಹೇಳಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಅಮೆರಿಕದ ಪಡೆಗಳು ಹಾರ್ಮುಜ್ ಜಲಸಂಧಿಯ ಬಳಿ ಇರಾನ್ ನೌಕಾ ನೆಲೆ ಮೇಲೆ ದಾಳಿ ಮಾಡುತ್ತಿವೆ, ಅಲ್ಲಿ ಇರಾನ್ನ ರೆವಲ್ಯೂಷನರಿ ಗಾರ್ಡ್ ನೆಲೆ ಇದೆ.