Headlines

Eye Care: ಬೇಸಿಗೆಯಲ್ಲಿ ಕಣ್ಣುಗಳ ಕಾಳಜಿ ಮರೀಬೇಡಿ! ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ | Summer Eye Care 5 Essential Tips To Protect Your Vision From Heat And Uv Rays

Eye Care: ಬೇಸಿಗೆಯಲ್ಲಿ ಕಣ್ಣುಗಳ ಕಾಳಜಿ ಮರೀಬೇಡಿ! ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ | Summer Eye Care 5 Essential Tips To Protect Your Vision From Heat And Uv Rays



Eye Care: ಬೇಸಿಗೆಯಲ್ಲಿ ಕಣ್ಣುಗಳ ಕಾಳಜಿ ಮರೀಬೇಡಿ! ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ | Summer Eye Care 5 Essential Tips To Protect Your Vision From Heat And Uv Rays

ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಸನ್‌ಗ್ಲಾಸ್ ಧರಿಸುವುದನ್ನು ಮರೆಯಬೇಡಿ. ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಣೆ ನೀಡುವ ಉತ್ತಮ ಗುಣಮಟ್ಟದ ಗ್ಲಾಸ್‌ಗಳನ್ನು ಬಳಸಿ. ಇದು ಕಣ್ಣು ಒಣಗುವುದು ಮತ್ತು ಉರಿಯಾಗುವುದನ್ನು ತಡೆಯುತ್ತದೆ.

ಬೇಸಿಗೆ ಬಂತೆಂದರೆ ಸಾಕು, ನಾವು ನಮ್ಮ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ, ನಮ್ಮ ಕಣ್ಣುಗಳಿಗೂ ರಕ್ಷಣೆ ಬೇಕು ಎನ್ನುವುದನ್ನು ಮರೆತುಬಿಡುತ್ತೇವೆ. ಬೇಸಿಗೆಯ ಧೂಳು, ಬಿಸಿಲು ಮತ್ತು ಶಾಖ ನಮ್ಮ ದೃಷ್ಟಿಯ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ, ಈ ಸಮಯದಲ್ಲಿ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಕಣ್ಣಿನ ಆರೈಕೆಗಾಗಿ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಪುಣೆಯ NIO ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಣ್ಣಿನ ಪೊರೆ, ಕಾರ್ನಿಯಾ ಮತ್ತು ವಕ್ರೀಕಾರಕ ಶಸ್ತ್ರಚಿಕಿತ್ಸಾ ಸಲಹೆಗಾರರಾದ ಡಾ. ಯೋಗೇಶ್ ಚೌಗುಲೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

1. ಹೊರಗೆ ಹೋಗುವಾಗ ಸನ್‌ಗ್ಲಾಸ್ ಧರಿಸಿ

ನೀವು ಮನೆಯಿಂದ ಹೊರಗೆ ಕಾಲಿಡುವಾಗ ಸನ್‌ಗ್ಲಾಸ್ ಹಾಕಿಕೊಳ್ಳುವುದನ್ನು ಮರೆಯಬೇಡಿ. ಸೂರ್ಯನ ಹಾನಿಕಾರಕ ಯುವಿ ಕಿರಣಗಳನ್ನು ತಡೆಯುವ ಉತ್ತಮ ಗುಣಮಟ್ಟದ ಗ್ಲಾಸ್‌ಗಳನ್ನೇ ಬಳಸಿ. ಇದು ಕಣ್ಣುಗಳಿಗೆ ಬಿಸಿಲಿನಿಂದ ಆಗುವ ಹಾನಿ, ಕಣ್ಣು ಒಣಗುವುದು ಮತ್ತು ಉರಿಯನ್ನು ತಡೆಯಲು ಸಹಾಯ ಮಾಡುತ್ತದೆ.

2. ಧೂಳು, ಬಿಸಿ ಗಾಳಿಗೆ ನೇರವಾಗಿ ಒಡ್ಡಿಕೊಳ್ಳಬೇಡಿ

ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಮತ್ತು ಯುವಿ ಕಿರಣಗಳು ಹೆಚ್ಚಾಗಿರುತ್ತವೆ. ಈ ಹೊತ್ತಿನಲ್ಲಿ ಹೊರಗೆ ಹೋಗುವುದನ್ನು ಆದಷ್ಟು ತಪ್ಪಿಸಿ. ಒಂದು ವೇಳೆ ಹೋಗಲೇಬೇಕಿದ್ದರೆ, ಕನ್ನಡಕ ಅಥವಾ ಟೋಪಿ ಧರಿಸಿ. ಬಿಸಿ ಗಾಳಿಗೆ ನೇರವಾಗಿ ಮೈಯೊಡ್ಡುವುದನ್ನು ಕಡಿಮೆ ಮಾಡಿ. ಯಾಕೆಂದರೆ ಇದು ಕಣ್ಣುಗಳನ್ನು ಒಣಗುವಂತೆ ಮಾಡಿ, ಕಿರಿಕಿರಿ ಉಂಟುಮಾಡಬಹುದು. ಅಷ್ಟೇ ಅಲ್ಲ, ಫ್ಯಾನ್ ಅಥವಾ ಎಸಿ ಗಾಳಿಯು ನೇರವಾಗಿ ಕಣ್ಣಿಗೆ ಬಡಿಯುವುದರಿಂದಲೂ ಕಣ್ಣು ಡ್ರೈ ಆಗಬಹುದು.

3. ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ

ಬೇಸಿಗೆಯಲ್ಲಿ ಧೂಳು ಮತ್ತು ಬೆವರಿನಿಂದ ಕಣ್ಣುಗಳಲ್ಲಿ ಕಿರಿಕಿರಿ ಆಗುವುದು ಸಹಜ. ಆದರೆ ಅದಕ್ಕಾಗಿ ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿ, ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಬದಲಾಗಿ, ಶುದ್ಧವಾದ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ.

4. ಲೂಬ್ರಿಕೇಟಿಂಗ್ ಐ ಡ್ರಾಪ್ಸ್ ಬಳಸಿ

ನೀವು ಬಿಸಿಲು ಮತ್ತು ಒಣ ಹವೆಯಲ್ಲಿ ಹೆಚ್ಚು ಹೊತ್ತು ಹೊರಗಡೆ ಸಮಯ ಕಳೆದರೆ, ಕಣ್ಣುಗಳ ತೇವಾಂಶ ಕಾಪಾಡಲು ಲೂಬ್ರಿಕೇಟಿಂಗ್ ಐ ಡ್ರಾಪ್ಸ್ ಬಳಸುವುದು ಒಳ್ಳೆಯದು.

5. ಸಾಕಷ್ಟು ನೀರು ಕುಡಿಯಿರಿ

ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ನಿಮ್ಮ ಕಣ್ಣುಗಳ ಆರೋಗ್ಯವನ್ನೂ ರಕ್ಷಿಸುತ್ತದೆ. ಆಲ್ಕೋಹಾಲ್ ಮತ್ತು ಕೆಫೀನ್ ಇರುವ ಪಾನೀಯಗಳನ್ನು ಕಡಿಮೆ ಮಾಡಿ. ಯಾಕೆಂದರೆ ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ (dehydration).



Source link

Leave a Reply

Your email address will not be published. Required fields are marked *