‘ಪ್ರೇಮಲೋಕ’ದಿಂದ ಜಾರಿಬಿದ್ದ ಸಿತಾರ್ ವಾದಕ-ನಟಿ ಜೋಡಿ; ಬ್ರೇಕಪ್ ಸುದ್ದಿಗೆ ಸಾಕ್ಷಿನೂ ಸಿಕ್ತು.. ಆದ್ರೆ ರೀಸನ್? | Rishab Rikhiram Sharma And Sanya Malhotra Love Break Up News Becomes Viral In Social Media Now

‘ಪ್ರೇಮಲೋಕ’ದಿಂದ ಜಾರಿಬಿದ್ದ ಸಿತಾರ್ ವಾದಕ-ನಟಿ ಜೋಡಿ; ಬ್ರೇಕಪ್ ಸುದ್ದಿಗೆ ಸಾಕ್ಷಿನೂ ಸಿಕ್ತು.. ಆದ್ರೆ ರೀಸನ್? | Rishab Rikhiram Sharma And Sanya Malhotra Love Break Up News Becomes Viral In Social Media Now



‘ಪ್ರೇಮಲೋಕ’ದಿಂದ ಜಾರಿಬಿದ್ದ ಸಿತಾರ್ ವಾದಕ-ನಟಿ ಜೋಡಿ; ಬ್ರೇಕಪ್ ಸುದ್ದಿಗೆ ಸಾಕ್ಷಿನೂ ಸಿಕ್ತು.. ಆದ್ರೆ ರೀಸನ್? | Rishab Rikhiram Sharma And Sanya Malhotra Love Break Up News Becomes Viral In Social Media Now

ಆದರೆ ರಿಷಬ್ ಅವರ ಸಂಗೀತ ಕಚೇರಿಗಳಲ್ಲಿ ಸಾನ್ಯಾ ಕಾಣಿಸಿಕೊಳ್ಳುತ್ತಿದ್ದ ರೀತಿ ಇಬ್ಬರ ನಡುವೆ ‘ಏನೋ ನಡೀತಿದೆ’ ಅನ್ನೋದಕ್ಕೆ ಸಾಕ್ಷಿಯಾಗಿತ್ತು. 2025ರ ಜನವರಿಯಲ್ಲಿ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದ ಕೆಲವು ಫೋಟೋಗಳು ಇವರಿಬ್ಬರ ಆತ್ಮೀಯತೆಯನ್ನು ಜಗಜ್ಜಾಹೀರು ಮಾಡಿದ್ದವು. ಆದರೆ ಈಗ ಕೇಳಿಬರುತ್ತಿರುವ ಸುದ್ದಿ ಬೇರೇನೇ ಇದೆ.. 

ಪ್ರೇಮಲೋಕದಿಂದ ಹೊರಬಂದ್ರ ‘ದಂಗಲ್’ ಬೆಡಗಿ? 

ಬಾಲಿವುಡ್‌ನ ಪ್ರತಿಭಾವಂತ ನಟಿ, ‘ದಂಗಲ್’ ಬೆಡಗಿ ಸಾನ್ಯಾ ಮಲ್ಹೋತ್ರಾ (Sanya Malhotra) ಈಗ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸಿನಿಮಾದಿಂದಲ್ಲ, ಬದಲಾಗಿ ತಮ್ಮ ಪರ್ಸನಲ್ ಲೈಫ್‌ನ ಗುಸುಗುಸುವಿನಿಂದ! ಹೌದು, ಕಳೆದ ಕೆಲವು ಸಮಯದಿಂದ ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ (Rishab Rikhiram Sharma) ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದ್ದ ಸಾನ್ಯಾ, ಈಗ ಅವರ ಜೊತೆಗಿನ ಸಂಬಂಧಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಬಿಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ‘ಅನ್‌ಫಾಲೋ’ ಅಸ್ತ್ರ!

ಇಂದಿನ ಕಾಲದಲ್ಲಿ ಒಂದು ಸಂಬಂಧ ಮುಗಿಯಿತು ಅನ್ನೋದಕ್ಕೆ ದೊಡ್ಡ ಸಾಕ್ಷಿ ಅಂದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ‘ಅನ್‌ಫಾಲೋ’ ಮಾಡುವುದು. ಸಾನ್ಯಾ ಮತ್ತು ರಿಷಬ್ ಕೂಡ ಈಗ ಅದೇ ಹಾದಿ ಹಿಡಿದಿದ್ದಾರೆ. ಇಬ್ಬರೂ ಸದ್ದಿಲ್ಲದೆ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇಬ್ಬರೂ ಎಂದೂ ಕೂಡ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಬಾಯಿ ಬಿಟ್ಟಿರಲಿಲ್ಲ.

ಆದರೆ ರಿಷಬ್ ಅವರ ಸಂಗೀತ ಕಚೇರಿಗಳಲ್ಲಿ ಸಾನ್ಯಾ ಕಾಣಿಸಿಕೊಳ್ಳುತ್ತಿದ್ದ ರೀತಿ ಇಬ್ಬರ ನಡುವೆ ‘ಏನೋ ನಡೀತಿದೆ’ ಅನ್ನೋದಕ್ಕೆ ಸಾಕ್ಷಿಯಾಗಿತ್ತು. 2025ರ ಜನವರಿಯಲ್ಲಿ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದ ಕೆಲವು ಫೋಟೋಗಳು ಇವರಿಬ್ಬರ ಆತ್ಮೀಯತೆಯನ್ನು ಜಗಜ್ಜಾಹೀರು ಮಾಡಿದ್ದವು. ಆದರೆ ಈಗ ಕೇಳಿಬರುತ್ತಿರುವ ಸುದ್ದಿಯೆಂದರೆ, ರಿಷಬ್ ಈಗ ಬೇರೆಯವರ ಜೊತೆ ಡೇಟಿಂಗ್ ಆರಂಭಿಸಿದ್ದಾರಂತೆ!

ಬ್ರೇಕಪ್ ನೋವಿನ ನಡುವೆಯೂ ಹೊಸ ಮನೆ ಖರೀದಿ!

ಪರ್ಸನಲ್ ಲೈಫ್‌ನಲ್ಲಿ ಕೊಂಚ ಬೇಸರದ ಸಂಗತಿ ಎದುರಾಗಿದ್ದರೂ, ವೃತ್ತಿ ಬದುಕಿನಲ್ಲಿ ಮಾತ್ರ ಸಾನ್ಯಾ ಸಖತ್ ಸಕ್ಸಸ್ ಕಾಣುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಮಾಯಾನಗರಿ ಮುಂಬೈನಲ್ಲಿ ಒಂದು ಸುಂದರವಾದ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಅದರ ಗೃಹಪ್ರವೇಶದ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದ ಸಾನ್ಯಾ, “ಯಶಸ್ಸಿನ ಮೆಟ್ಟಿಲೇರುತ್ತಿದ್ದೇನೆ” ಎಂಬ ಸಂದೇಶ ನೀಡಿದ್ದರು. ಒಂದು ಕಡೆ ಪ್ರೀತಿಯ ಮನೆಯಿಂದ ಹೊರಬಂದರೂ, ಸ್ವಂತ ಮನೆಯ ಒಡತಿಯಾಗಿ ಸಾನ್ಯಾ ಸಂಭ್ರಮಿಸುತ್ತಿದ್ದಾರೆ.

ಸಿನಿಮಾ ಜಗತ್ತಿನಲ್ಲಿ ಸಾನ್ಯಾ ಹವಾ!

ಸಾನ್ಯಾ ಮಲ್ಹೋತ್ರಾ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಅನುರಾಗ್ ಕಶ್ಯಪ್ ನಿರ್ದೇಶನದ ‘ಬಂದರ್’ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಬಿ ಡಿಯೋಲ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಇದರ ಜೊತೆಗೆ ರಾಜಕುಮಾರ್ ರಾವ್ ಜೊತೆ ‘ಟೋಸ್ಟರ್’ ಎಂಬ ಚಿತ್ರದಲ್ಲೂ ಸಾನ್ಯಾ ನಟಿಸುತ್ತಿದ್ದಾರೆ.

ಒಟ್ಟಿನಲ್ಲಿ, ಬ್ರೇಕಪ್ ವದಂತಿಗಳ ನಡುವೆಯೂ ಸಾನ್ಯಾ ತನ್ನ ವೃತ್ತಿಜೀವನದ ಮೇಲೆ ಫೋಕಸ್ ಮಾಡುತ್ತಿದ್ದಾರೆ. “ಲವ್ ಬ್ರೇಕಪ್ ಆದ್ರೇನಂತೆ, ಲೈಫ್ ಇನ್ನು ಬಾಕಿ ಇದೆ” ಎನ್ನುವಂತೆ ಹೊಸ ಹೊಸ ಪ್ರಾಜೆಕ್ಟ್‌ಗಳ ಮೂಲಕ ಮಿಂಚಲು ರೆಡಿಯಾಗಿದ್ದಾರೆ ಈ ಸುಂದರಿ. ಸಾನ್ಯಾ ಅವರ ಈ ಆತ್ಮವಿಶ್ವಾಸಕ್ಕೆ ಫ್ಯಾನ್ಸ್ ಮಾತ್ರ ಫುಲ್ ಫಿದಾ ಆಗಿದ್ದಾರೆ!



Source link

Leave a Reply

Your email address will not be published. Required fields are marked *