Headlines

Roshan Saldana fraud case: ರೋಷನ್ ಸಲ್ಡಾನ ವಂಚನೆ: 2.85 ಕೋಟಿ ಆಸ್ತಿ ಇ.ಡಿ. ವಶಕ್ಕೆ | Ed Attaches Rs 2 85 Crore Assets Of Roshan Saldanha In Mangaluru Loan Scam

ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮಂಗಳೂರಿನ ರೋಷನ್ ಸಲ್ಡಾನ ಅವರ 2.85 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ. ನೂರಾರು ಕೋಟಿ ಸಾಲ ಕೊಡಿಸುವ ಆಮಿಷವೊಡ್ಡಿ ಉದ್ಯಮಿಗಳಿಂದ ಮುಂಗಡ ಹಣ ಪಡೆದು 200 ಕೋಟಿಗೂ ಅಧಿಕ ವಂಚನೆ ಮಾಡಿದ ಆರೋಪವಿದೆ.

ಮಂಗಳೂರು (ನ.8): ಬಹುಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಂಗಳೂರಿನ ರೋಷನ್ ಸಲ್ಡಾನ ಅವರ ಮನೆ ಮತ್ತು ಬ್ಯಾಂಕ್ ಖಾತೆ ಸೇರಿದಂತೆ 2.85 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಜಾರಿ ನಿರ್ದೇಶನಾಲಯ (ಇ.ಡಿ.) ತಾತ್ಕಾಲಿಕ ಮುಟ್ಟುಗೋಲು ಹಾಕಿದೆ.

ಜಾರಿ ನಿರ್ದೇಶನಾಲಯದ ಮಂಗಳೂರು ಉಪವಲಯ ಕಚೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮುಟ್ಟುಗೋಲು ಹಾಕಿದ್ದಾರೆ.

ರೋಷನ್ ಸಲ್ದಾನ ವಂಚನೆ ಪ್ರಕರಣದ ವಿವರ:

ರೋಷನ್ ಸಲ್ಡಾನ, ಅವರ ಪತ್ನಿ ಢಫ್ನಿ ನೀತು ಹಾಗೂ ಇತರರ ವಿರುದ್ಧ ದಾಖಲಾದ ಎಫ್‌ಐಆರ್ ಆಧಾರದಲ್ಲಿ ಇ.ಡಿ. ತನಿಖೆಯನ್ನು ಪ್ರಾರಂಭಿಸಿದೆ. ರೋಷನ್ ಸಲ್ಡಾನ್ ಕೋಟಿಗಟ್ಟಲೆ ಸಾಲ ಕೊಡಿಸುವ ಆಮಿಷವೊಡ್ಡಿ 200 ಕೋಟಿಗೂ ಅಧಿಕ ವಂಚನೆ ಮಾಡಿದ್ದರು. ದೇಶದ ಐಷಾರಾಮಿ ವ್ಯಕ್ತಿಗಳು ಹಾಗೂ ಉದ್ಯಮಿಗಳನ್ನು ವಂಚಿಸಿರುವ ಆರೋಪಿ, ನೂರಾರು ಕೋಟಿ ಸಾಲ ತೆಗೆಸಿಕೊಡುವುದಾಗಿ ಹೇಳಿ 5 ರಿಂದ 10 ಕೋಟಿ ರೂಪಾಯಿ ಮುಂಗಡ ಹಣ ಪಡೆದು ಮೋಸ ಮಾಡುತ್ತಿದ್ದ. 

ಈ ಪ್ರಕರಣದಲ್ಲಿ ಇಬ್ಬರು ಉದ್ಯಮಿಗಳು ನೀಡಿದ ದೂರಿನ ಆಧಾರದಲ್ಲಿ ಕಳೆದ ಜುಲೈ 17ರಂದು ಮಂಗಳೂರು ಪೊಲೀಸರು ರೋಷನ್ ಸಲ್ಡಾನನನ್ನು ಬಂಧಿಸಿದ್ದರು.

Source link

Leave a Reply

Your email address will not be published. Required fields are marked *