Runout attack ರನೌಟ್ ವಿವಾದಕ್ಕೆ ಅಂಪೈರೆಗೆ ಚಾಕು ಇರಿದ ಅಭಿಮಾನಿ, ದುರಂತ ಸಾವಿನಿಂದ ಕ್ರಿಕೆಟ್ ಜಗತ್ತು ಶಾಕ್ | Cricket Tragedy In Vizag Umpire Stabbed To Death Over Run Out Dispute

Runout attack ರನೌಟ್ ವಿವಾದಕ್ಕೆ ಅಂಪೈರೆಗೆ ಚಾಕು ಇರಿದ ಅಭಿಮಾನಿ, ದುರಂತ ಸಾವಿನಿಂದ ಕ್ರಿಕೆಟ್ ಜಗತ್ತು ಶಾಕ್ | Cricket Tragedy In Vizag Umpire Stabbed To Death Over Run Out Dispute



Runout attack ರನೌಟ್ ವಿವಾದಕ್ಕೆ ಅಂಪೈರೆಗೆ ಚಾಕು ಇರಿದ ಅಭಿಮಾನಿ, ದುರಂತ ಸಾವಿನಿಂದ ಕ್ರಿಕೆಟ್ ಜಗತ್ತು ಶಾಕ್ | Cricket Tragedy In Vizag Umpire Stabbed To Death Over Run Out Dispute

ರನೌಟ್ ವಿವಾದಕ್ಕೆ ಅಂಪೈರೆಗೆ ಚಾಕು ಇರಿದ ಅಭಿಮಾನಿ, ದುರಂತ ಸಾವಿನಿಂದ ಕ್ರಿಕೆಟ್ ಜಗತ್ತು ಶಾಕ್, ಮೈದಾನದಲ್ಲಿ ಶುರುವಾದ ರನೌಟ್ ವಿವಾದ ಕೊಲೆಯಲ್ಲಿ ಅಂತ್ಯಗೊಂಡಿದೆ.  ಏನಿದು ರನೌಟ್ ಹತ್ಯೆ

ವಿಶಾಖಪಟ್ಟಣಂ (ಏ.08) ಕ್ರಿಕೆಟ್‌ನಲ್ಲಿ ಅಂಪೈರ್ ತೀರ್ಮಾನವೇ ಅಂತಿಮ. ಹೀಗೆ ರೋಚಕ ಪಂದ್ಯದ ನಡುವೆ ಬ್ಯಾಟ್ಸ್‌ಮನ್‌ಗೆ ಅಂಪೈರ್ ರನೌಟ್ ತೀರ್ಪು ನೀಡಿದ್ದಾರೆ. ಇದು ವಿವಾದಕ್ಕೆ ಕಾರಣಾಗಿದೆ. ಪಂದ್ಯದ ರೋಚಕ ಘಟ್ಟದಲ್ಲಿ ಅಂಪೈರ್ ನೀಡಿದ ತೀರ್ಪು ಪಂದ್ಯದ ಗತಿಯನ್ನೇ ಬದಲಿಸಿತ್ತು. ಹೀಗಾಗಿ ಮೈದಾನದಲ್ಲಿ ಜಗಳ ಶುರುವಾಗಿದೆ. ವಾಗ್ವಾದ ತಾರಕಕ್ಕೇರಿದೆ. ಎಲ್ಲರನ್ನು ಸಮಾಧಾನ ಮಾಡಿದ ಅಂಪೈರಸ್ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಿದ್ದಾರೆ. ಆದರೆ ಪಂದ್ಯದ ಬಳಿಕ ಇದೇ ರನೌಟ್ ವಿವಾದ ಅಂಪೈರ್ ಜೀವವನ್ನೇ ತೆಗೆದ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

ಏನಿದು ರನೌಟ್ ವಿವಾದ

ವಿಶಾಖಪಟ್ಟಣದ ಸ್ಥಳೀಯ ಕ್ರಿಕೆಟ್ ಟೂರ್ನಿಯಲ್ಲಿ ಈ ದುರಂತ ನಡೆದಿದೆ. ಪಂದ್ಯದಲ್ಲಿ ದೋಲಾ ಅಜಿತ್ ಬಾಬು ಹಾಗೂ ಬುಡುಮುರಿ ಚಿರಂಜೀವಿ ಅಂಪೈರ್ ಆಗಿದ್ದರು. ಪಂದ್ಯ ರೋಚಕ ಘಟ್ಟ ತಲುಪಿದೆ. ಈ ವೇಲೆ ಬ್ಯಾಟರ್ ರನೌಟ್ ಆಗಿದ್ದಾನೆ. ಅಂಪೈರ್ ಅಜಿತ್ ಬಾಬು ನೀಡಿದ ತೀರ್ಪು ವಿವಾದವಾಗಿ ಮಾರ್ಪಟ್ಟಿದೆ. ಇಬ್ಬರು ಬ್ಯಾಟರ್ ವಾಗ್ವಾದ ಶುರು ಮಾಡಿದ್ದಾರೆ. ಬ್ಯಾಟಿಂಗ್ ತಂಡ ಜಗಳ ಶುರುಮಾಡಿದೆ. ಇಬ್ಬರು ಅಂಪೈರ್ ಸಮಾಧಾನ ಮಾಡಿ ಪಂದ್ಯ ಮುಂದುವರಿಸಿದ್ದಾರೆ.

ಕೆರಳಿದ ಅಭಿಮಾನಿಯಿಂದ ದಾಳಿ

ಪಂದ್ಯ ನೋಡುತ್ತಿದ್ದ ಅಭಿಮಾನಿ ಕಾಂತ ಕಿಶೋರ್ ಈ ರನೌಟ್‌ನಿಂದ ತೀವ್ರ ಆಕ್ರೋಶಗೊಂಡಿದ್ದಾರೆ. ಮೈದಾನಕ್ಕೆ ನುಗ್ಗಿದ ಕಾಂತಾ ಕಿಶೋರ್ ಕಿತ್ತಾಡಿದ್ದಾನೆ. ಪಂದ್ಯ ಮುಗಿದ ಬಳಿಕ ಇದೇ ಕಾಂತಾ ಕಿಶೋರ್ ಅಂಪೈರ್‌ಗೆ ಕರೆ ಮಾಡಿ ವಿವಾದ ಸೆಟ್ಲೆಮೆಂಟ್ ಮಾಡಲು ಸೂಚಿಸಿದ್ದಾನೆ. ಇದಕ್ಕಾಗಿ ಬೇರೆ ಜಾಗಕ್ಕೆ ಅಂಪರೈ ಇಬ್ಬರನ್ನು ಕರೆದಿದ್ದಾನೆ. ವಿವಾದ ಮುಂದುವರಿಸುವುದು ಸೂಕ್ತವಲ್ಲ ಎಂದು ಇಬ್ಬರು ಅಂಪೈರ್ ಕಾಂತಾ ಕಿಶೋರ್ ಸೂಚಿಸಿದ ಜಾಗಕ್ಕೆ ತೆರಳಿದ್ದಾರೆ. ಆದರೆ ಮೊದಲೇ ಪ್ಲಾನ್ ಮಾಡಿದ್ದ ಕಾಂತಾ ಕಿಶೋರ್ ದಾಳಿಗೆ ಸಜ್ಜಾಗಿದ್ದ.

ಅಂಪೈರ್ ಸ್ಥಳಕ್ಕೆ ಬರುತ್ತಿದ್ದಂತೆ ಮತ್ತೆ ಕಿಶೋರ್ ಕೆರಳಿದ್ದಾನೆ. ತಂದಿದ್ದ ಚಾಕು ಮೂಲಕ ಅಂಪೈರ್ ಅಜಿತ್ ಬಾಬು ಮೇಲೆ ದಾಳಿ ಮಾಡಿದ್ದಾನೆ. ತಡೆಯಲು ಬಂದ ಮತ್ತೊಬ್ಬ ಅಂಪೈರ್ ಚಿರಂಜೀವಿ ಮೇಲೂ ದಾಳಿ ಮಾಡಿದ್ದಾನೆ. ಅಜಿತ್ ಬಾಬು ಮೇಲೆ ತೀವ್ರ ದಾಳಿಯಾಗಿತ್ತು. ರಂಜಿತ್ ಬಾಬು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಂಜಿತ್ ಬಾಬು ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಬದುಕುಳಿಯಲಿಲ್ಲ.



Source link

Leave a Reply

Your email address will not be published. Required fields are marked *