Headlines

Iran To Surrender ಕೋಮಾಗೆ ಜಾರಿದ ಮಜ್ತೊಬಾ ಖಮೇನಿ, ಶರಣಾಗತಿಯತ್ತ ಇರಾನ್; G7 ನಾಯಕರ ಸಭೆ ಬಳಿ ಟ್ರಂಪ್ ಘೋಷಣೆ | Mojtaba Khamenei In Coma As Donald Trump Tells G7 Leaders Iran Is About To Surrender

Iran To Surrender ಕೋಮಾಗೆ ಜಾರಿದ ಮಜ್ತೊಬಾ ಖಮೇನಿ, ಶರಣಾಗತಿಯತ್ತ ಇರಾನ್; G7 ನಾಯಕರ ಸಭೆ ಬಳಿ ಟ್ರಂಪ್ ಘೋಷಣೆ | Mojtaba Khamenei In Coma As Donald Trump Tells G7 Leaders Iran Is About To Surrender



Iran To Surrender ಕೋಮಾಗೆ ಜಾರಿದ ಮಜ್ತೊಬಾ ಖಮೇನಿ, ಶರಣಾಗತಿಯತ್ತ ಇರಾನ್; G7 ನಾಯಕರ ಸಭೆ ಬಳಿ ಟ್ರಂಪ್ ಘೋಷಣೆ | Mojtaba Khamenei In Coma As Donald Trump Tells G7 Leaders Iran Is About To Surrender

ಕೋಮಾಗೆ ಜಾರಿದ ಮಜ್ತೊಬಾ ಖಮೇನಿ, ಶರಣಾಗತಿಯತ್ತ ಇರಾನ್; G7 ನಾಯಕರ ಸಭೆ ಬಳಿ ಟ್ರಂಪ್ ಘೋಷಣೆ, ಮಾತುಕತೆ ನಡೆಸಲು ಇರಾನ್‌ನಲ್ಲಿ ನಾಯಕರಿಲ್ಲ ಎಂದಿರುವ ಟ್ರಂಪ್, ಜಿ7 ವರ್ಚುವಲ್ ಮೀಟಿಂಗ್ ಭಾರಿ ಮಹತ್ವ ಪಡೆದಿದೆ. 

ವಾಶಿಂಗ್ಟನ್ (ಮಾ.13) ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ಸತತ ದಾಳಿ ಯುದ್ಧ ಭೀತಿ ಹೆಚ್ಚಿಸಿದೆ. ಇತ್ತ ಇರಾನ್ ಕೂಡ ತಿರುಗೇಟು ನೀಡುತ್ತಿದೆ. ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದ ಭಾರತದಲ್ಲಿ ಗ್ಯಾಸ್, ತೈಲ ಕೊರತೆ ಎದುರಾಗಿದೆ. ಭಾರತ ಸೇರಿದಂತೆ ಹಲವು ದೇಶಗಳು ತೈಲ ಬಿಕ್ಕಟ್ಟು ಎದುರಿಸುತ್ತಿದೆ. ಇದರ ನಡುವೆ ಜಿ7 ನಾಯಕರ ಜೊತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಮಹತ್ವದ ಸಭೆ ನಡೆಸಿದ್ದಾರೆ. ಯುದ್ಧ ಆರಂಭಗೊಂಡ 14ನೇ ದಿನಕ್ಕೆ ಇರಾನ್ ಶರಣಾಗತಿಗೆ ಮುಂದಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಜಿ7 ನಾಯಕರ ಜೊತೆ ಸಭೆ ಬಳಿಕ ಟ್ರಂಪ್ ಹೇಳಿಕೆ

ಜಿ7 ನಾಯಕರ ಜೊತೆಗಿನ ಸಭೆ ಬಳಿಕ ಮಾತನಾಡಿದ ಡೋನಾಲ್ಡ್ ಟ್ರಂಪ್ ಇರಾನ್ ಬಳಿ ನಾಯಕರಿಲ್ಲ. 14 ದಿನಗಳ ಯುದ್ಧ ಬಳಿಕ ಇರಾನ್ ಶರಣಾಗಲು ಮುಂದಾಗಿದೆ. ಜಿ7 ನಾಯಕರ ಮಾತುಕತೆಯಲ್ಲಿ ಯುದ್ಧ ಕುರಿತು ಚರ್ಚೆಯಾಗಿದೆ. ಜಿ7 ದೇಶದ ನಾಯಕರು ಪ್ರಮುಖವಾಗಿ ಇರಾನ್ ಬಳಿ ಸ್ಪಷ್ಟ ನಾಯಕತ್ವವಿಲ್ಲ. ಶರಣಾಗಲು, ನಿರ್ದೇಶನ ನೀಡಲು ಯಾರೂ ಇಲ್ಲದಾಗಿದೆ ಅನ್ನೋ ಮಾತುಗಳನ್ನು ಹೇಳಿದ್ದಾರೆ. ಈ ಸಭೆ ಬಳಿಕ ಮಾತನಾಡಿದ ಟ್ರಂಪ್, ಇರಾನ್ ಶರಣಾಗತಿಯತ್ತ ಸಾಗಿದೆ ಎಂದಿದ್ದಾರೆ.

ಶರಣಾಗತಿ ಆದೇಶ ಹೊರಡಿಸಲು ಯಾರೂ ಇಲ್ಲ

ಟೆಹ್ರಾನ್‌ನಲ್ಲಿ ಶರಣಾಗತಿ ಘೋಷಿಸಲು ಯಾವುದೇ ನಾಯಕರಿಲ್ಲ. ಆಯತೊಲ್ಲ ಖಮೇನಿ ನೀಡಿದ ಆದೇಶವನ್ನು ಐಆರ್‌ಜಿಸಿ ಸೇನೆ ಪಾಲಿಸುತ್ತಿದೆ. ಸೇನೆಗೆ ಸೂಚನೆ ನೀಡಲು ಖಮೇನಿ ಕುಟುಂಬವೇ ಉಳಿದಿಲ್ಲ. ಇತ್ತ ಸರ್ವೋಚ್ಚ ನಾಯಕನಾಗಿ ನೇಮಕಗೊಂಡ ಮೊಜ್ತಬಾ ಖಮೇನಿ ಇದೇ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಟ್ರಂಪ್ ಹೇಳಿದ್ದಾರೆ. ಆಯತೊಲ್ಲ ಖಮೇನಿ ಹತ್ಯೆ ದಾಳಿಯಲ್ಲೇ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯೊಗೊಂಡಿದ್ದಾರೆ. ಖಮೇನಿ ಎರಡು ಕಾಲು ಕಟ್ ಆಗಿದೆ. ಹೊಟ್ಟೆ ಹಾಗೂ ಲಿವರ್ ಡ್ಯಾಮೇಜ್ ಆಗಿದೆ. ಮೊಜ್ತಬಾ ಖಮೇನಿ ಜೀವಂತವಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಮೊಜ್ತಬಾ ಖಮೇನಿ ಕೋಮಾಗೆ ಜಾರಿದ್ದಾರೆ ಎಂದಿದ್ದಾರೆ.

ಸಾರ್ವಜನಿಕ ಹೇಳಿಕೆ ಮೇಲೆ ಅನುಮಾನ

ಮೊಜ್ತಬಾ ಖಮೇನಿ ಸರ್ವೋಚ್ಚ ನಾಯಕನಾಗಿ ನೇಮಕಗೊಂಡ ಬಳಿಕ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಯಾವುದೇ ವಿಡಿಯೋ ಸಂದೇಶವನ್ನು ನೀಡಿಲ್ಲ. ಇದರ ನಡುವೆ ಮಾರ್ಚ್ 12ರಂಜು ಮೊಜ್ತಬಾ ಖಮೇನಿ ಸಾರ್ವಜನಿಕ ಹೇಳಿಕೆ ಪ್ರಕಟ ಮಾಡಿದ್ದರು. ಅಮೆರಿಕ ವಿರುದ್ದ ಯುದ್ದ ಮುಂದುವರಿಯಲಿದೆ ಎಂದಿದ್ದರು. ಇಷ್ಟೇ ಅಲ್ಲ ಹೊರ್ಮುಜು ಜಲಸಂಧಿ ಬಂದ್ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದರು. ಆದರೆ ಮೊಜ್ತಬಾ ಖಮೇನಿ ಈಗಾಗಲೇ ಕೋಮಾಗೆ ಜಾರಿದ್ದಾರೆ. ರಹಸ್ಯ ಸ್ಥಳದಲ್ಲಿ ಖಮೇನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ನಿನ್ನೆ ಬಿಡುಗಡೆ ಮಾಡಿದ ಹೇಳಿಕೆ ಮೇಲೆ ಅನುಮಾನಗಳು ವ್ಯಕ್ತವಾಗಿದೆ.



Source link

Leave a Reply

Your email address will not be published. Required fields are marked *