
‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ, ಒಂದಾದ ಚಿರು ಮತ್ತು ದೀಪಾ ಜೋಡಿಯನ್ನು ದೂರದ ಸಂಬಂಧಿಯ ಸಾವಿನ ಸೂತಕದ ಕಾರಣ ನೀಡಿ ಪ್ರತ್ಯೇಕವಾಗಿ ಮಲಗಿಸಲಾಗುತ್ತದೆ. ಈ ಅನಿರೀಕ್ಷಿತ ಬೇರ್ಪಡುವಿಕೆಯಿಂದ ವಿರಹ ವೇದನೆ ಅನುಭವಿಸುವ ದಂಪತಿ, ವಿಡಿಯೋ ಕಾಲ್ ಮೂಲಕ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರಾವಾಹಿಯ ಮಂಗಳವಾರದ ಸಂಚಿಕೆಯಲ್ಲಿ ಕೆಲ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಶುರುವಾಗಿದೆ. ದಿಶಾ ಬಂದ ನಂತರ ದೀಪಾ ಮತ್ತು ಚಿರು ನಡುವೆ ಮನಸ್ತಾಪ ಉಂಟಾಗಿತ್ತು. ದೀಪಾ ಮನವೊಲಿಸಲು ಸಾಮಾನ್ಯ ವ್ಯಕ್ತಿಯಂತೆ ಚಿರು ಜೀವನ ನಡೆಸಿದ್ದನು. ಇದೀಗ ಇಬ್ಬರ ನಡುವಿನ ಮನಸ್ತಾಪ ಕೊನೆಯಾಗಿದೆ. ನರಸಿಂಹ ನೀಡಿದ ಸೈಕಲ್ ತೆಗೆದುಕೊಂಡು ಚಿರು ಮತ್ತು ದೀಪಾ ರಾತ್ರಿ ಹಳ್ಳಿಯೆಲ್ಲಾ ಸುತ್ತಾಡಿದ್ದಾರೆ. ಮನೆಗೆ ಬರುತ್ತಿದ್ದಂತೆ ಸಾವಿನ ಸುದ್ದಿ ಹೇಳಿದ ಮಾವ ಜಯರಾಮ್, ಚಿರು ಮತ್ತು ದೀಪಾಗೆ ಪ್ರತ್ಯೇಕವಾಗಿ ಮಲಗುವಂತೆ ಹೇಳುತ್ತಾನೆ.
ನಮ್ಮ ದೂರದ ಸಂಬಂಧಿ ಸಾವನ್ನಪ್ಪಿದ್ದಾರೆ. ಹಾಗಾಗಿ ಮನೆಯಲ್ಲಿ ಸೂತಕ. ದೇವರಿಗೆ ದೀಪ ಹಚ್ಚುವಂತಿಲ್ಲ ಎಂದು ಪತ್ನಿ ವತ್ಸಲಾಗೆ ಜಯರಾಮ್ ಹೇಳುತ್ತಾನೆ. ಹಾಗೆ ರೂಮ್ಗೆ ತೆರಳುತ್ತಿದ್ದ ಚಿರು ಕೈಹಿಡಿದ ಜಯರಾಮ್, ಅಳಿಯಂದ್ರೆ ಇವತ್ತು ನನ್ನ ರೂಮ್ನಲ್ಲಿ ಮಲಗಿ ಎಂದು ಹೇಳುತ್ತಾನೆ. ಈಗ ತಾನೇ ಚಿರು ಮತ್ತು ದೀಪಾ ನಡುವೆ ಒಲವಿನ ಹೂ ಅರಳಿತ್ತು. ಏಕಾಂತವಾಗಿ ಸಮಯ ಕಳೆಯಲು ಪ್ಲಾನ್ ಮಾಡಿಕೊಂಡಿದ್ದ ಚಿರುಗೆ ನಿರಾಸೆಯಾಗಿತ್ತು.
ಸೂತಕದಿಂದ ಚಿರು-ದೀಪಾಗೆ ವಿರಹ ವೇದನೆ
ಯಾಕೆ ನಿಮ್ಮ ರೂಮ್ ಅಂದಾಗ ಸಾವಿನ ಸೂತಕವಿದ್ದಾಗ ಒಂದು ದಿನ ಗಂಡ ಮತ್ತು ಹೆಂಡತಿ ಜೊತೆಯಾಗಿ ಮಲಗಬಾರದು ಎಂದು ಜಯರಾಮ್ ಹೇಳುತ್ತಾನೆ. ಇತ್ತ ದೀಪಾ ಸಹ ಅತ್ತೆಯೊಂದಿಗೆ ಮಲಗಲು ಹೋಗುತ್ತಾಳೆ. ಅಳಿಯನನ್ನು ಜಯರಾಮ್ ಕರೆದುಕೊಂಡು ಹೋಗುತ್ತಾನೆ. ರೂಮ್ಗೆ ಹೋದ್ಮೇಲೆ ಚಿರು ಮತ್ತು ದೀಪಾ ವಿರಹ ವೇದನೆಯಿಂದ ಚಡಪಡಿಸುತ್ತಾರೆ.
ಇಬ್ಬರು ವಿಡಿಯೋ ಕಾಲ್ ಮಾಡಿಕೊಂಡು ಮಾತನಾಡಲು ಶುರು ಮಾಡುತ್ತಾರೆ. ಈ ವೇಳೆ ಒಬ್ಬರಿಗೊಬ್ಬರು ಏನು ಇಷ್ಟ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇವರಿಬ್ಬರ ಗುಸುಗುಸು ಜಯರಾಮ್ ನಿದ್ದೆಗೆ ಕಿರಿಕಿರಿಯುಂಟು ಮಾಡುತ್ತದೆ. ಕೊನೆಗೆ ಇಬ್ಬರು ವಿಡಿಯೋ ಕಾಲ್ ಕಟ್ ಮಾಡಲು ಒಪ್ಪುತ್ತಿರಲಿಲ್ಲ. ಕೊನೆಗೆ ಜಯರಾಮ್ ಮಧ್ಯೆ ಬಂದು ಮಗಳೇ ದೀಪಾ ನಿದ್ದೆ ಮಾಡು ಅಂತೇಳಿ ಕಾಲ್ ಕಟ್ ಮಾಡುತ್ತಾರೆ. ಕಾಲ್ ಕಟ್ ಬಳಿಕ ಯಾವುದೇ ಹೆಣ್ಣುಮಕ್ಕಳಿಗೆ ಮಲ್ಲಿಗೆ ಮತ್ತು ಮೈಸೂರುಪಾಕ್ ನೀಡಿದ್ರೆ ಅವರು ಖುಷಿ ಆಗ್ತಾರೆ ಎಂದು ಅಳಿಯನಿಗೆ ಮಾವ ಸಲಹೆ ನೀಡಿದ್ದಾನೆ. ಕೊನೆಗೆ ತಾನೂ ಸಹ ಪತ್ನಿ ವತ್ಸಲಾಗೆ ಕಾಲ್ ಮಾಡಿ ಐ ಲವ್ ಯು ಎಂದು ಜಯರಾಮ್ ಹೇಳಿದ್ದಾನೆ.
ಸೂತಕದ ನಂತರ ಏನು ಮಾಡಬಾರದು?
ಸೂತಕದ ನೆಪ ಹೇಳಿ ಗಂಡ-ಹೆಂಡ್ತಿಯನ್ನು ದೂರ ಮಾಡಿರುವ ಕುರಿತು ಕೆಲ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿವೆ. ಸಾವು ಮತ್ತು ಜನನ ಸೂತಕದ ಆಚರಣೆಗಳು ಬೇರೆಯಾಗಿರುತ್ತವೆ. ಸಾವಿನ ಸೂತಕ ಏಳು ತಲೆಮಾರಿನವರೆಗೂ ಇರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಸಾವಿನ ಸೂತಕವಿದ್ದಾಗ ದೇವರ ಪೂಜೆ, ಶುಭ ಕಾರ್ಯಗಳನ್ನು ಮಾಡಲ್ಲ. ಇನ್ನು ಕೆಲವು ಕಡೆ ಸಾವನ್ನಪ್ಪಿದ ಮನೆಯಲ್ಲಿ ಮೂರು ದಿನಗಳವರೆಗೆ ಒಲೆ ಹಚ್ಚಲ್ಲ. ನೆರೆಹೊರೆಯವರು ನೀಡಿದ ಆಹಾರವನ್ನು ಸೇವಿಸುತ್ತಾರೆ.
ಇದನ್ನೂ ಓದಿ: ಇತ್ತೀಚೆಗೆ ಮದುವೆಯಾದ ಗೀತಾ ಭಾರತಿ ಭಟ್ಗೆ ಅಂಥ ಮಾತಾಡಿದ ಮಹಿಳೆ; ಗ್ರಹಚಾರ ಬಿಡಿಸಿದ ‘ಬ್ರಹ್ಮಗಂಟು’ ನಟಿ
ಸಾವು ಸಂಭವಿಸಿದ ಮನೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸದಿದ್ದರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ಈ ಸೂತಕವನ್ನು ಕೂಡ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.
ಬ್ರಹ್ಮಗಂಟು ಸೀರಿಯಲ್ನಲ್ಲಿ ಸೂತಕದ ಕಾರಣ ನೀಡಿ ಚಿರು ಮತ್ತು ದೀಪಾ ಇಬ್ಬರನ್ನು ಪ್ರತ್ಯೇಕವಾಗಿ ಮಲಗುವಂತೆ ಮಾಡಿದ್ದ ಸರಿನಾ ಅಥವಾ ತಪ್ಪಾ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಕರಾವಳಿ ಭಾಗದ ಕೆಲವು ಕಡೆ ಈ ರೀತಿಯ ಆಚರಣೆಗಳಿವೆ ಎಂದು ಹೇಳುತ್ತಾರೆ/ ಈ ಕುರಿತು ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಮೆಂಟ್ ಮಾಡಿ.
ಇದನ್ನೂ ಓದಿ: ತವರಲ್ಲಿ ಯಾರಾದ್ರೂ ಸತ್ತರೆ, ಮನೆ ಮಗಳು ಎಷ್ಟು ದಿನ ಸೂತಕ ಆಚರಿಸಬೇಕು?