Headlines

ಕರೆಂಟ್ ​ಫ್ರೀ ಇದ್ರೂ ಹೆಚ್ಚುವರಿ ದುಡ್ಡು ಬರ್ತಿದ್ಯಾ? ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಹಣ ಕಟ್ಟಲೇಬೇಕಿಲ್ಲ. | Got An Extra Electricity Bill If You Follow These Tips Wont Have To Pay Any Money Suc

ಕರೆಂಟ್ ​ಫ್ರೀ ಇದ್ರೂ ಹೆಚ್ಚುವರಿ ದುಡ್ಡು ಬರ್ತಿದ್ಯಾ? ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಹಣ ಕಟ್ಟಲೇಬೇಕಿಲ್ಲ. | Got An Extra Electricity Bill If You Follow These Tips Wont Have To Pay Any Money Suc



ಕರೆಂಟ್ ​ಫ್ರೀ ಇದ್ರೂ ಹೆಚ್ಚುವರಿ ದುಡ್ಡು ಬರ್ತಿದ್ಯಾ? ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಹಣ ಕಟ್ಟಲೇಬೇಕಿಲ್ಲ. | Got An Extra Electricity Bill If You Follow These Tips Wont Have To Pay Any Money Suc

ಕರ್ನಾಟಕದಲ್ಲಿ  ವಿದ್ಯುತ್  ಉಚಿತವಾಗಿದ್ದರೂ ಹಲವು ಬಾರಿ ಹೆಚ್ಚುವರಿ ಮೊತ್ತ ಬರುತ್ತದೆ.  ಹೆಚ್ಚು ವಿದ್ಯುತ್ ಬಳಸುವ ಉಪಕರಣಗಳನ್ನು ಒಂದೇ ಸಮಯದಲ್ಲಿ ಉಪಯೋಗಿಸುವುದರಿಂದ ಬಿಲ್ ಹೆಚ್ಚಾಗುತ್ತದೆ. ಇವುಗಳನ್ನು ಬೇರೆ ಬೇರೆ ಸಮಯದಲ್ಲಿ ಬಳಸುವ ಮೂಲಕ ನಿಮ್ಮ ಮಾಸಿಕ ವಿದ್ಯುತ್ ಬಿಲ್ ಅನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇದರ ಡಿಟೇಲ್ಸ್​ ಇಲ್ಲಿದೆ. 

ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ವಿದ್ಯುತ್​ ಬಿಲ್​​ ಉಚಿತವಾಗಿದೆ. ವಿದ್ಯುತ್​ ರೇಟ್​ ಹೆಚ್ಚು ಮಾಡಿರುವುದರಿಂದ ವಾಣಿಜ್ಯ ಬಳಕೆಯ ವಿದ್ಯುತ್​ ದರ ಡಬಲ್​ ಕಟ್ಟಬೇಕಾಗುತ್ತಿದೆ. ಇನ್ನು ಗೃಹ ಬಳಕೆಯ ವಿದ್ಯುತ್​ ದರ ಫ್ರೀ ಆಗಿದ್ದರೂ, ಹಲವರಿಗೆ ಹೆಚ್ಚುವರಿ ದುಡ್ಡು ಬರುತ್ತಿದೆ. ನೂರೋ, ಇನ್ನೂರೋ ರೂಪಾಯಿ ಹೆಚ್ಚುವರಿ ಬಿಲ್​​ ಕಟ್ಟುವ ದೊಡ್ಡ ವರ್ಗವೇ ಇದೆ. ಸರ್ಕಾರ ಹೇಳಿರುವ ನಿಗದಿತ ಯೂನಿಟ್​ಗಿಂತ ಹೆಚ್ಚುವರಿ ಬಳಕೆ ಮಾಡಿದರೆ, ಹೆಚ್ಚು ಹಣ ಕಟ್ಟಬೇಕು. ಇದೇ ಕಾರಣಕ್ಕೆ ಬಹಳಷ್ಟು ಮಂದಿಗೆ ಹೆಚ್ಚುವರಿ ಹಣ ಬರುತ್ತಿದೆ. ಇನ್ನು ವಾಣಿಜ್ಯ ಬಳಕೆಯ ಉದ್ದೇಶಕ್ಕೆ ವಿದ್ಯುತ್​ ಖರ್ಚು ಮಾಡುತ್ತಿರುವವರು ಮುಂಚಿಗಿಂತಲೂ ಡಬಲ್​ ಹಣ ನೀಡಬೇಕಿದೆ.

ಸಿಂಪಲ್​​ ಟಿಪ್ಸ್​

ಇಲ್ಲಿ ಸಿಂಪಲ್​ ಒಂದು ಟಿಪ್ಸ್​ ನೀಡಲಾಗಿದೆ. ಹೀಗೆ ಮಾಡಿದ್ರೆ ಗೃಹ ಬಳಕೆಯ ವಿದ್ಯುತ್​ನಲ್ಲಿ ನಿಮಗೆ ಹೆಚ್ಚುವರಿ ಬಿಲ್​ ಬರಲ್ಲ. ಇನ್ನು ವಾಣಿಜ್ಯ ಬಳಕೆಯಲ್ಲಿಯೂ ನೀವು ಇದೇ ತಪ್ಪು ಮಾಡುತ್ತಿದ್ದರೆ, ಈ ಟಿಪ್ಸ್​ ಉಪಯೋಗಿಸಿದರೆ ಅಲ್ಲಿಯೂ ಈಗ ಬರುವಷ್ಟು ಕರೆಂಟ್​ ಬಿಲ್​ ಬರುವುದಿಲ್ಲ. ಅದೇನೆಂದರೆ,ಸಾಮಾನ್ಯವಾಗಿ ವಾಟರ್​ ಹೀಟರ್​ ಅರ್ಥಾತ್​ ಕರೆಂಟ್​ ಗೀಸರ್​ ಬಳಸುತ್ತಿದ್ದರೆ, ಅದು ಅತ್ಯಧಿಕ ಕರೆಂಟ್​ ತೆಗೆದುಕೊಳ್ಳುವ ಕಾರಣ, ಸಾಮಾನ್ಯವಾಗಿ ಕರೆಂಟ್​ ಬಿಲ್​ ಹೆಚ್ಚಾಗುತ್ತದೆ. ಹಾಗೆಂದು ಇದನ್ನು ಬಳಸದೇ ಇರಲು ಆಗುವುದಿಲ್ಲ. ಅದೇ ರೀತಿ ವಾಷಿಂಗ್​ ಮಷಿನ್​ ಕೂಡ ಕರೆಂಟ್​ ಹೆಚ್ಚು ಪಡೆಯುತ್ತದೆ. ಅಂದ ಮಾತ್ರಕ್ಕೆ ವಾಷಿಂಗ್​ ಮಷಿನ್​ ನಿಲ್ಲಿಸಿ ಕೈಯಲ್ಲಿಯೇ ಬಟ್ಟೆ ತೊಳೆಯಿರಿ ಎಂದರೆ ಆದೀತೆ, ಖಂಡಿತಾ ಇಲ್ಲ. ಆದರೆ ಇಲ್ಲೊಂದು ಸಿಂಪಲ್​ ಟೆಕ್ನಿಕ್​ ಇದೆ. ಅದೇನೆಂದರೆ, ಕರೆಂಟ್​ ಬಳಕೆ ಮಾಡುವ ಎರಡೆರಡು ವಸ್ತುಗಳನ್ನು ಒಟ್ಟಿಗೇ ಬಳಸಿದರೆ ಕರೆಂಟ್​ ಹೆಚ್ಚಿಗೆ ಎಳೆಯುವ ಕಾರಣ, ಅದರಿಂದ ಬಿಲ್​ ಹೆಚ್ಚು ಬರುತ್ತದೆ. ಇದರ ಅರ್ಥ ನೀವು ಗೀಜಸ್​, ವಾಷಿಂಗ್​ ಮಷಿನ್​ ಎರಡನ್ನೂ ಒಟ್ಟಿಗೇ ಹಾಕಿದರೆ ಕರೆಂಟ್​ ಹೆಚ್ಚು ಎಳೆಯುವ ಕಾರಣ, ಬಿಲ್​ ಹೆಚ್ಚಿಗೆ ಬರುತ್ತದೆ.

ಒಟ್ಟಿಗೇ ಬಳಕೆ ಬೇಡ

ಎಲ್ಲರ ಮನೆಯಲ್ಲಿಯೂ ಫ್ರಿಜ್​ 24 ಗಂಟೆ ಆನ್​ ಇರುತ್ತದೆ. ವಾಷಿಂಗ್​ ಮಷಿನ್​ ಅಗತ್ಯ ಬಿದ್ದಾಗ ಮಾತ್ರ ಕಾರ್ಯ ಮಾಡುತ್ತೇವೆ. ಆದ್ದರಿಂದ ಇವೆರಡನ್ನೂ ಒಟ್ಟಿಗೇ ಬಳಸಬೇಡಿ ಎನ್ನುವುದು ಕಷ್ಟವಾಗುತ್ತದೆ. ಏಕೆಂದರೆ ಫ್ರಿಜ್​ ಆನ್​ ಇರಲೇಬೇಕು. ಆದರೆ ಸ್ನಾನಕ್ಕೆ ಉಪಯೋಗ ಮಾಡುವಾಗ ಗೀಜಸ್​ ಆನ್​ ಮಾಡಿದ್ದರೆ, ಆ ಸಮಯದಲ್ಲಿ ವಾಷಿಂಗ್​ ಮಷಿನ್​ಗೆ ಬಟ್ಟೆ ಹಾಕಬೇಡಿ. ಅದರಲ್ಲಿಯೂ ಕೆಲವೊಂದು ವಾಷಿಂಗ್​ ಮಷಿನ್​ನಲ್ಲಿ ನೀರು ಬಿಸಿಯಾಗಿ ಅದು ಆನ್​ ಆಗುವ ಕಾರಣ, ಕರೆಂಟ್​ ಹೆಚ್ಚಿಗೆ ಎಳೆಯುತ್ತದೆ. ಈ ಕಾರಣಕ್ಕಾಗಿ, ಕರೆಂಟ್​ ಗೀಸರ್​ ಮತ್ತು ವಾಷಿಂಗ್​ ಮಷಿನ್​ ಎರಡನ್ನೂ ಬೇರೆ ಬೇರೆ ಟೈಮ್​ನಲ್ಲಿ ಆನ್ ಮಾಡಿ ಜಾದೂ ನೋಡಿ.

ಕೂಡಲೇ ಹೀಗೆ ಮಾಡಿ

ಸಾಧ್ಯವಾದರೆ ವಾಷಿಂಗ್​ ಮಷಿನ್​ ಆನ್​ ಮಾಡಿದಾಗ ಇತರ ಕರೆಂಟ್​ ವಸ್ತುಗಳನ್ನು ಆಫ್​ನಲ್ಲಿ ಇಡಲು ಸಾಧ್ಯವೇ ಎಂದು ನೋಡಿ. ಉದಾಹರಣೆಗೆ ಫ್ಯಾನ್​ ಇತ್ಯಾದಿ. ಮೊದಲೇ ಹೇಳಿದಂತೆ ಫ್ರಿಜ್​ ಆಫ್​ ಮಾಡಲು ಆಗುವುದಿಲ್ಲ. ಆದರೆ ಸಾಧ್ಯವಾದಷ್ಟು ಮಟ್ಟಿಗೆ ಎರಡೆರಡು ಇಲೆಕ್ಟ್ರಿಕ್​ ವಸ್ತುಗಳನ್ನು ಒಟ್ಟಿಗೇ ಬಳಕೆ ಮಾಡುವುದನ್ನು ತಪ್ಪಿಸಿ. ಅದರಲ್ಲಿಯೂ ಹೆಚ್ಚು ಕರೆಂಟ್​ ಎಳೆಯುವ ಕರೆಂಟ್​ ಗೀಜಸ್​ ಮತ್ತು ವಾಷಿಂಗ್​ ಮಷಿನ್​ ನೆನಪಿನಲ್ಲಿ ಇಟ್ಟುಕೊಳ್ಳಿ. ಕೂಡಲೇ ಈ ಟಿಪ್ಸ್​ ಫಾಲೋ ಮಾಡಿ, ನಿಮ್ಮ ಮನೆಯ ಮುಂದಿನ ತಿಂಗಳ ಕರೆಂಟ್​ ಬಿಲ್​ ನೋಡಿ. ಅದೇ ರೀತಿ ಅಂಗಡಿ ಇತ್ಯಾದಿ ವಾಣಿಜ್ಯ ಬಳಕೆಗೆ ಕರೆಂಟ್​ ಉಪಯೋಗಿಸುತ್ತಿದ್ದರೂ ಇದೇ ಟಿಪ್ಸ್​ ಫಾಲೋ ಮಾಡಿದರೆ ತಕ್ಕಮಟ್ಟಿಗೆ ಬಿಲ್​ನಲ್ಲಿ ವ್ಯತ್ಯಾಸ ನೋಡಬಹುದು.



Source link

Leave a Reply

Your email address will not be published. Required fields are marked *