Gadag printing industry crisis ಮಧ್ಯಪ್ರಾಚ್ಯ ಯುದ್ಧಕ್ಕೆ ಮುದ್ರಣ ಕಾಶಿ ಗದಗ ತತ್ತರ | Printing Kashi Gadag In Crisis Middle East War Hits Raw Material Supply Rav

Gadag printing industry crisis ಮಧ್ಯಪ್ರಾಚ್ಯ ಯುದ್ಧಕ್ಕೆ ಮುದ್ರಣ ಕಾಶಿ ಗದಗ ತತ್ತರ | Printing Kashi Gadag In Crisis Middle East War Hits Raw Material Supply Rav



Gadag printing industry crisis ಮಧ್ಯಪ್ರಾಚ್ಯ ಯುದ್ಧಕ್ಕೆ ಮುದ್ರಣ ಕಾಶಿ ಗದಗ ತತ್ತರ | Printing Kashi Gadag In Crisis Middle East War Hits Raw Material Supply Rav

ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಕರ್ನಾಟಕದ ಮುದ್ರಣ ಕಾಶಿ ಗದಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಚ್ಚಾ ವಸ್ತುಗಳ ಬೆಲೆ ಶೇ. 25ರಷ್ಟು ಹೆಚ್ಚಾಗಿದ್ದು, ಜಿಎಸ್‌ಟಿ ತೆರಿಗೆಯ ಹೊರೆಯೂ ಸೇರಿ ಮುದ್ರಣ ಸಂಸ್ಥೆಗಳು ಬಾಗಿಲು ಮುಚ್ಚುವ ಆತಂಕದಲ್ಲಿವೆ.

 ಗದಗ (ಏ.5): ಕರ್ನಾಟಕದ ಮುದ್ರಣ ಕಾಶಿ ಗದಗ ಮುದ್ರಣ ಉದ್ಯಮಕ್ಕೆ ಈಗ ಜಾಗತಿಕ ಯುದ್ಧದ ಭೀತಿ ಮತ್ತು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷ ಗದಗಿನ ನೂರಾರು ಮುದ್ರಣ ಸಂಸ್ಥೆಗಳ ಬದುಕನ್ನು ಬೀದಿಗೆ ತಳ್ಳುವ ಆತಂಕ ಮೂಡಿಸಿದೆ.

ಮಧ್ಯಪ್ರಾಚ್ಯ ದೇಶಗಳಿಂದ ಆಮದಾಗುವ ಪೆಟ್ರೋಲಿಯಂ ಉಪ ಉತ್ಪನ್ನಗಳು ಮುದ್ರಣ ಉದ್ಯಮಕ್ಕೆ ಅತ್ಯಗತ್ಯ. ಆದರೆ, ಯುದ್ಧದ ಕಾರಣದಿಂದಾಗಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಲೆಗಳು ಗಗನಕ್ಕೇರಿವೆ.

ಬೆಲೆ ಏರಿಕೆ:

ಪೆಟ್ರೋಲಿಯಂ ಆಧಾರಿತ ಇಂಕ್ ಮತ್ತು ಪ್ಲೇಟ್‌ಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ಕೇವಲ ಎರಡು ತಿಂಗಳ ಅವಧಿಯಲ್ಲಿ ವಿವಿಧ ಕಚ್ಚಾ ವಸ್ತುಗಳ ಬೆಲೆ ಶೇ. 10ರಿಂದ ಶೇ. 25ರಷ್ಟು ಏರಿಕೆಯಾಗಿದೆ.

​ಕೃತಕ ಅಭಾವದ ಆತಂಕ:

ಯುದ್ಧದ ನೆಪವನ್ನಿಟ್ಟುಕೊಂಡು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಸಂಶಯವನ್ನು ಮುದ್ರಕರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ಕಾರಗಳು ಕೂಡಲೇ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮುದ್ರಣ ಕ್ಷೇತ್ರ ಸಂಪೂರ್ಣ ಬಂದ್ ಆಗುವ ಸ್ಥಿತಿ ನಿರ್ಮಾಣವಾಗಲಿದೆ.

ಟ್ಯಾಕ್ಸ್ ಹೊಡೆತ:

ಈಗಾಗಲೇ ಜಿಎಸ್‌ಟಿ ಹೊರೆಯಿಂದ ನಲುಗಿದ್ದ ಉದ್ಯಮಕ್ಕೆ ಹೊಸ ತೆರಿಗೆ ನೀತಿಗಳು ಮತ್ತಷ್ಟು ಪೆಟ್ಟು ನೀಡಿವೆ. 2024ರಿಂದ ಜಾರಿಗೆ ಬರುವಂತೆ ಮುದ್ರಣ ಕಚ್ಚಾ ವಸ್ತುಗಳ ಮೇಲೆ ಸರ್ಕಾರ ಶೇ. 18ರಷ್ಟು ತೆರಿಗೆ ವಿಧಿಸಿದೆ. ​ತೆರಿಗೆಯಿಂದಾಗಿ ತತ್ತರಿಸಿದ್ದ ಮುದ್ರಕರಿಗೆ ಈಗ ಯುದ್ಧದಿಂದ ಉಂಟಾದ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಂಕಿ-ಅಂಶಗಳು:

ಗದಗ ಜಿಲ್ಲೆಯಲ್ಲಿ ಮುದ್ರಣ ಉದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರಿದ್ದಾರೆ. 30ಕ್ಕೂ ಹೆಚ್ಚು ಪ್ರಕಾಶಕರು, 100ಕ್ಕೂ ಹೆಚ್ಚು ಮುದ್ರಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಖ್ಯವಾಗಿ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಬೇಕಾಗುವ ಕ್ಯಾಲೆಂಡರ್, ಪಂಚಾಂಗ, ಪಠ್ಯಪುಸ್ತಕ, ಧಾರ್ಮಿಕ ಗ್ರಂಥಗಳು, ಸಾಹಿತ್ಯಿಕ ಪುಸ್ತಕಗಳು ಪ್ರಮುಖವಾಗಿವೆ. ಇದರೊಟ್ಟಿಗೆ ಮಕ್ಕಳ ಆಟಿಕೆ ಚಾರ್ಟ್‌ಗಳು. ಅಂಕಲಿಪಿ, ಕಥೆ, ಕವನ ಸಂಕಲನಗಳ ಮುದ್ರಣದಲ್ಲಿ ಗದಗ ಜಿಲ್ಲೆ ಮೊದಲ ಸ್ಥಾನದಲ್ಲಿದೆ.

ರಾಜ್ಯಾದ್ಯಂತ ಪಂಚಾಂಗ ಮತ್ತು ಕ್ಯಾಲೆಂಡರ್‌ಗಳಿಗೆ ಗದಗ ಹೆಸರುವಾಸಿ. ಆದರೆ, ಪೇಪರ್ ಮತ್ತು ಇಂಕ್ ಬೆಲೆ ಏರಿಕೆಯಿಂದಾಗಿ ಮುದ್ರಣ ವೆಚ್ಚ ದುಪ್ಪಟ್ಟಾಗಿದೆ. ಮುಂಚಿತವಾಗಿ ಆರ್ಡರ್ ಪಡೆದ ಮುದ್ರಕರಿಗೆ ಈಗಿನ ಬೆಲೆಯಲ್ಲಿ ಮುದ್ರಣ ಮಾಡಿಕೊಡುವುದು ನಷ್ಟದ ಕೆಲಸವಾಗಿ ಪರಿಣಮಿಸಿದೆ.

ಚೇತನ ಖಟವಟೆ. ಎನ್‌.ಆರ್. ಪ್ರಿಂಟರ್ಸ್ ಮಾಲೀಕ, ಗದಗ

ಸರ್ಕಾರ ತಕ್ಷಣವೇ ಮುದ್ರಕರ ಅಳಲನ್ನು ಕೇಳಬೇಕು. ಕಚ್ಚಾ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡಿದರೆ ಮಾತ್ರ ಈ ಉದ್ಯಮ ಉಳಿಯಲು ಸಾಧ್ಯ. ಇಲ್ಲದಿದ್ದರೆ ಮುದ್ರಣ ಕಾಶಿಯ ಈ ಪರಂಪರೆ ಇತಿಹಾಸ ಪುಟ ಸೇರಲಿದೆ.

ವಿವಿಧ ಸಂಸ್ಥೆಯ ಪ್ರಕಾಶಕರು

ಬೆಲೆ ಏರಿಕೆ ವಿವರ

ಇಂಕ್

  • ಹಿಂದಿನ ರೇಟ್ : ಕೆಜಿಗೆ ₹440
  • ಇಂದಿನ ರೇಟ್ : ಕೆಜಿಗೆ ₹470
  • ಹೆಚ್ಚಳ : 9/10 %
  • ಅಲ್ಯೂಮಿನಿಯಂ ಪ್ಲೇಟ್

ಹಿಂದಿನ ರೇಟ್ : (ಪ್ಲೇಟ್‌ಗೆ ) ₹170

ಇಂದಿನ ರೇಟ್ : ₹195

ಹೆಚ್ಚಳ: 15 %

ಲ್ಯಾಮಿನೇಷನ್ ಫಿಲಂ

ಹಿಂದಿನ ರೇಟ್ : ಕೆಜಿಗೆ ₹190

ಇಂದಿನ ರೇಟ್ : ಕೆಜಿಗೆ ₹240

ಹೆಚ್ಚಳ : 25 %

ಲ್ಯಾಮಿನೇಷನ್ ಅಂಟು

ಹಿಂದಿನ ರೇಟ್ : ಕೆಜಿಗೆ ₹130

ಇಂದಿನ ರೇಟ್ : ಕೆಜಿಗೆ ₹150

ಹೆಚ್ಚಳ: 15%

ಆರ್ಟ್ ಪೇಪರ್ (ಪ್ರಿಂಟ್‌ಗೆ ಬಳಸುವ)

ಹಿಂದಿನ ರೇಟ್ : ಕೆಜಿಗೆ ₹72

ಇಂದಿನ ರೇಟ್ : ಕೆಜಿಗೆ ₹80

ಹೆಚ್ಚಳ: 10%

ಮಷಿನ್ ತೊಳೆಯುವ ಕೆಮಿಕಲ್

ಹಿಂದಿ‌ನ ರೇಟ್ : ಲೀಟರ್‌ಗೆ ₹160

ಇಂದಿನ ರೇಟ್ : ಲೀಟರ್‌ಗೆ 200

ಹೆಚ್ಚಳ: 25%



Source link

Leave a Reply

Your email address will not be published. Required fields are marked *