Chamarajanagar: 10 ವರ್ಷದ ಬಾಲಕಿಯನ್ನು ಬಲವಂತದಿಂದ ಹಿಡಿದು ಎದೆ ಮುಟ್ಟಿದ 65ರ ಮುದುಕ | Chamarajanagar Gundlupet Hasaggooli Village 65 Year Old Man Misbehave With 10 Year Old Girl Mrq

ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ 65 ವರ್ಷದ ವೃದ್ಧನೊಬ್ಬ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸರು ಆರೋಪಿ ಮಹದೇವಪ್ಪನನ್ನು ಬಂಧಿಸಿ, ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಾಮರಾಜನಗರ: ಅರವತ್ತೈದು ವರ್ಷದ ವ್ಯಕ್ತಿ ೧೦ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಪ್ಪಿಗೆ ಜೈಲು ಪಾಲಾದ ಘಟನೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ನಡೆದಿದೆ. ಹಸಗೂಲಿ ಗ್ರಾಮದ ಮಹದೇವಪ್ಪ(65) ಆರೋಪಿ. ಈತ ಅದೇ ಗ್ರಾಮದ 10 ವರ್ಷ ವಯಸ್ಸಿನ ಐದನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಎದೆ ಚಿವುಟಿ ಗಾಯಗೊಳಿಸಿದ್ದಾನೆ ಎಂದು ತಾಲೂಕಿನ ಬೇಗೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನ್ಯಾಯಾಂಗ ಬಂಧನ

ಲೈಂಗಿಕ ದೌರ್ಜನ್ಯ ನಡೆಸಿದ ಮಹದೇವಪ್ಪನ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)‌ ಯು/ಎಸ್-‌75(2) ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸಲು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಒಂದು ಕಡೆ ಫೈನಾನ್ಸ್‌ನವರ ಕಾಟ, ಇನ್ನೊಂದು ಕಡೆ 11 ತಿಂಗಳಿಂದ ಸಂಬಳ ಇಲ್ಲ, ಡೆತ್‌ನೋಟ್ ಬರೆದಿಟ್ಟು ವಾಟರ್‌ಮನ್ ದುರಂತ ಸಾವು!

ಬಾಲಕಿಯನ್ನು ಹಿಡಿದು ಎದೆ ಮುಟ್ಟಿದ ಮುದುಕ

ಬಾಲಕಿಯ ತಾಯಿ ನೀಡಿದ ದೂರಿನ ಪ್ರಕಾರ ಭಾನುವಾರ ರಜಾ ದಿನವಾದ್ದರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿ ಹಾಗೂ ಆಕೆಯ ಸಹೋದರಿ ಮನೆಯಲ್ಲಿಯೇ ಇದ್ದರು. ತಂದೆ ಹಾಗೂ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾರೆ. ಭಾನುವಾರ ಮಧ್ಯಾಹ್ನ ಅಂಗಡಿಗೆ ಸೋಪು ತರಲು ಹೋಗಿದ್ದ ಬಾಲಕಿಯನ್ನು ಆರೋಪಿ ಮಹದೇವಪ್ಪ ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತ, ಬಾಲಕಿಯ ಹಿಡಿದು ತಬ್ಬಿಕೊಂಡು ಆಕೆಯ ಎದೆಯನ್ನೆಲ್ಲ ಮುಟ್ಟಿ ಚಿವುಟಿದ್ದಾನೆ. ಬಾಲಕಿ ಕಿರುಚಿಕೊಂಡಾಗ ಬಿಟ್ಟಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಬೇಗೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಋತುಚಕ್ರದ ರಜೆ ನೀಡುವ ಅಧಿಸೂಚನೆ; ಶೋಕಾಸ್‌ ನೋಟಿಸ್‌ ನೀಡದಂತೆ ಹೈಕೋರ್ಟ್‌ ಮೌಖಿಕ ಸೂಚನೆ

Source link

Leave a Reply

Your email address will not be published. Required fields are marked *