Headlines

CJ Roy ಉದ್ಯಮಿ ಸಿಜೆ ರಾಯ್ ಆತ್ಮ**ತ್ಯೆ ಪ್ರಕರಣ, ತನಿಖೆಯಲ್ಲಿ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರೋದು ಪತ್ತೆ | Actress Linked To Honeytrap Allegations In Cj Roy Case Following Police Probe

CJ Roy ಉದ್ಯಮಿ ಸಿಜೆ ರಾಯ್ ಆತ್ಮ**ತ್ಯೆ ಪ್ರಕರಣ, ತನಿಖೆಯಲ್ಲಿ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರೋದು ಪತ್ತೆ | Actress Linked To Honeytrap Allegations In Cj Roy Case Following Police Probe



CJ Roy ಉದ್ಯಮಿ ಸಿಜೆ ರಾಯ್ ಆತ್ಮ**ತ್ಯೆ ಪ್ರಕರಣ, ತನಿಖೆಯಲ್ಲಿ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರೋದು ಪತ್ತೆ | Actress Linked To Honeytrap Allegations In Cj Roy Case Following Police Probe

ಉದ್ಯಮಿ ಸಿಜೆ ರಾಯ್ ಆತ್ಮ**ತ್ಯೆ ಪ್ರಕರಣ, ತನಿಖೆಯಲ್ಲಿ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರೋದು ಪತ್ತೆಯಾಗಿದೆ. ಉದ್ಯಮಿ ಬಳಿಯಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗ ಸಾಕ್ಷ್ಯಗಳು ಲಭ್ಯವಾಗಿದೆ. ಈ ಕುರಿತು ಸ್ಫೋಟಕ ವರದಿ ಇಲ್ಲಿದೆ.

ಬೆಂಗಳೂರು (ಮಾ.25) ಉದ್ಯಮಿ ಸಿಜೆ ರಾಯ್ ದುರಂತ ಅಂತ್ಯ ಪ್ರಕರಣವನ್ನು ವಿಶೇಷ ತನಿಖಾ ದಳ ಪೊಲೀಸರು ನಡೆಸುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ದುರಂತ ಅಂತ್ಯಕಂಡಿದ್ದರು. ಜನವರಿ 30 ರಂದು ಈ ಘಟನೆ ನಡೆದಿತ್ತು. ದೇಶಾದ್ಯಂತ ಈ ಘಟನೆ ಭಾರಿ ಕೋಲಾಹಲಕ್ಕೂ ಕಾರಣವಾಗಿತ್ತು. ಐಟಿ ದಾಳಿ ಹಾಗೂ ಮಾನಸಿಕ ಹಿಂಸೆ ಆರೋಪವೂ ಕೇಳಿಬಂದಿತ್ತು. ಇದೀಗ ಎಸ್‌ಐಟಿ ತಂಡ ತನಿಖೆಯಲ್ಲಿ ಕೆಲ ಸ್ಫೋಟಕ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಸಿಜೆ ರಾಯ್ ಆತ್ಮ**ತ್ಯೆ ಅನ್ನೋದು ತನಿಖೆಯಲ್ಲಿ ದೃಢಪಟ್ಟಿದೆ. ಇದೇ ವೇಳೆ ಸಿಜೆ ರಾಯ್‌ನನ್ನು ಹನಿಟ್ರ್ಯಾಪ್ ಮಾಡಿರುವುದು ಪತ್ತೆಯಾಗಿದೆ. ಸಿನಿಮಾ ನಟಿಯೊಬ್ಬರು ಸಿಜೆ ರಾಯ್‌ನ ಹನಿಟ್ರ್ಯಾಪ್ ಮಾಡಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಎಸ್ಐಟಿ ತನಿಖಾ ತಂಡದ ಮೂಲಗಳು ಹೇಳಿವೆ.

ಸಿಜೆ ರಾಯ್ ಹನಿಟ್ರ್ಯಾಪ್ ಮಾಡಿದ ನಟಿ ಯಾರು?

ಸಿಜೆ ರಾಯ್ ಶ್ರೀಮಂತ ಉದ್ಯಮಿ ಮಾತ್ರವಲ್ಲ ಅತ್ಯಂತ ಜನಪ್ರಿಯವಾಗಿದ್ದರು. ಉದ್ಯಮದ ಹಲವು ಪ್ರಚಾರಗಳಲ್ಲಿ ನಟಿಯರು, ಮಾಡೆಲ್‌ಗಳನ್ನು ಬಳಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ಪ್ರಾಯೋಜಕತ್ವ ಸೇರಿದಂತೆ ಸೆಲೆಬ್ರೆಟಿಗಳ ಜೊತೆಗೂ ಉತ್ತಮ ನಂಟು ಹೊಂದಿದ್ದಾರೆ. ಇದರ ನಡುವೆ ಸಿನಿಮಾ ನಟಿಯೊಬ್ಬರು ಸೆಜೆ ರಾಯ್‌ ಅವರನ್ನು ಹನಿಟ್ರ್ಯಾಪ್ ಖೆಡ್ಡಾದಲ್ಲಿ ಬೀಳಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ.ಸಿಜೆ ರಾಯ್‌ಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ. ಈ ಕುರಿತು ಎಸ್ಐಟಿ ತನಿಖಾ ತಂಡ ತನಿಖೆ ನಡೆಸುತ್ತಿದೆ.

ಒಂದು ರಿಪೋರ್ಟ್‌ಗಾಗಿ ಕಾಯುತ್ತಿರುವ ತಂಡ

ಸಿಜೆ ರಾಯ್ ಆತ್ಮ**ತ್ಯೆ ಅನ್ನೋದು ತನಿಖೆಯಿಂದ ದೃಢಪಟ್ಟಿದೆ. ತನಿಖೆ ಮುಗಿಸಲು ಪೊಲೀಸ್ ತಂಡ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರ ತಂಡದ ವರದಿಗಾಗಿ ಕಾಯುತ್ತಿದೆ. ಸಿ‌ಜೆ.ರಾಯ್ ಶೂಟ್ ಗುಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿರುವುದು ಸಾಬೀತಾಗಿದೆ. ಎಫ್ ಎಸ್ ಎಲ್ ವರದಿ ಹಾಗೂ ಸಾಂದರ್ಭಿಕ ಸಾಕ್ಷಿ ಆಧರಿಸಿ ವರದಿ ತಯಾರಿಸಲಾಗಿದೆ. ಇದೀಗ ಸಿ.ಜೆ.ರಾಯ್ ಕೊನೆಯ ಕ್ಷಣಳಲ್ಲಿನ ಸೈಕಾಲಾಜಿ ಅಧ್ಯಯನ ಮಾಡಿ ನಿಮ್ಹಾನ್ಸ್ ವೈದ್ಯರು ವರದಿ ನೀಡಲಿದ್ದಾರೆ. ಈ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಸಾಯುವ ಮುನ್ನ ಆತನ ಮನಸ್ಥಿತಿ ಹೇಗಿತ್ತು ಎಂಬ ಬಗ್ಗೆ ವೈದ್ಯರ ತಂಡ ಅಧ್ಯಯನ ನಡೆಸಿ ವರದಿ ನೀಡಲಿದೆ. ಸೈಕಾಲಾಜಿ ರಿಪೋರ್ಟ್ ಸ್ಟೇಡಿ ಮಾಡಿ ವರದಿಯನ್ನು ಪೊಲೀಸರಿಗೆ ನೀಡಲಿದೆ.



Source link

Leave a Reply

Your email address will not be published. Required fields are marked *