
ಬಸ್ಸೊಂದು ನದಿ ದಾಟುವುದಕ್ಕೆ ಬೋಟ್‌ಗೆ ಏರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ 25 ಜನರು ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಬಾಂಗ್ಲಾದೇಶದ ರಾಜ್ಬರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ.
ನದಿಗೆ ಉರುಳಿದ ಬಸ್: 25 ಜನರ ಬಲಿ
ಬಸ್ಸೊಂದು ನದಿಗೆ ಉರುಳಿದ ಪರಿಣಾಮ 25 ಜನರು ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಬಾಂಗ್ಲಾದೇಶದ ರಾಜ್ಬರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದ್ದು, ಅಗ್ನಿಶಾಮಕ ಸಿಬ್ಬಂದಿ 23 ಮೃತದೇಹಗಳನ್ನು ಈಗಾಗಲೇ ಮುಳಗಿದ ಬಸ್‌ನಿಂದ ಹೊರತೆಗೆದಿದ್ದಾರೆ.
ದುಲತ್‌ದಿಯಾ ಘಾಟ್ ಬಳಿ ಬೋಟ್‌ಗೆ(ಲಾಂಜ್) ಏರುವ ವೇಳೆ ಬಸ್ ಚಾಳಕನ ನಿಯಂತ್ರಣ ಕಳೆದುಕೊಂಡು ಪದ್ಮಾ ನದಿಗೆ ಉರುಳಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಬಸ್‌ನಲ್ಲಿದ್ದವರಲ್ಲಿ 8 ಜನರನ್ನು ಈಗಾಗಲೇ ರಕ್ಷಿಸಲಾಗಿತ್ತು. ಆದರೆ ಅವರಲ್ಲಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಲೇ ಇದೆ. ಘಟನೆ ನಡೆಯುವ ವೇಳೆ 40 ಜನ ಬಸ್‌ನಲ್ಲಿ ಇದ್ದರು. ಬುಧವಾರ ಸಂಜೆ ಈ ಘಟನೆ ಸಂಭವಿಸಿದ್ದು, ಆರಂಭದಲ್ಲಿ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.
ಬೋಟ್‌ಗೆ ಏರುತ್ತಿದ್ದ ವೇಳೆ ದುರಂತ
ಬಾಂಗ್ಲಾದೇಶದಲ್ಲಿ ನದಿಗಳಲ್ಲಿ ಬಸ್‌ಗಳನ್ನು ಹಾಗೂ ಇತರ ವಾಹನಗಳನ್ನು ಸಾಗಿಸುವುದಕ್ಕೆ ಲಾಂಜ್‌ಗಳನ್ನು ಬಳಸುತ್ತಾರೆ. ಘಟನೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪ್ರಧಾನಿ ತಾರೀಖ್ ರೆಹಮಾನ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. 4 ಅಗ್ನಿಶಾಮಕ ವಾಹನಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಸೇನೆ, ಪೊಲೀಸ್, ಕೋಸ್ಟ್ ಗಾರ್ಡ್, ಬಿಐಡಬ್ಲ್ಯೂಟಿಸಿ ಮತ್ತು ಸ್ಥಳೀಯ ಆಡಳಿತದೊಂದಿಗೆ ಸಮನ್ವಯದಿಂದ ಅಗ್ನಿಶಾಮಕ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಮೃತ 25 ಮಂದಿಯಲ್ಲಿ 22 ಜನರ ಶವಗಳನ್ನು ಅಗ್ನಿಶಾಮಕ ದಳದವರು ಹೊರತೆಗೆದಿದ್ದಾರೆ. ಮೃತರಲ್ಲಿ ಮಹಿಳೆಯರು, ಪುರುಷರು ಮತ್ತು ಚಿಕ್ಕ ಮಕ್ಕಳು ಸೇರಿದ್ದಾರೆ. ಘಟನೆಯ ಬಗ್ಗೆ ತನಿಖೆಗಾಗಿ ಐದು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಮೂರು ದಿನದಲ್ಲಿ ವರದಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ನನ್ನ ಯಾಕೆ ಬಿಟ್ಟೋದೆ: ಮಲತಾಯಿಯ ಕಿರುಕುಳದ ಬಳಿಕ ತಾಯಿ ಸಮಾಧಿ ಬಳಿ ಗೋಳಾಡಿದ ಪುಟ್ಟ ಬಾಲಕಿ
ಹಮ್ಜಾ ಎಂಬ ಹಡಗಿನ ಸಹಾಯದಿಂದ ರಕ್ಷಣಾ ತಂಡವು ಸುಮಾರು 6 ಗಂಟೆಗಳ ಪ್ರಯತ್ನದ ನಂತರ ಬಸ್ಸನ್ನು ನದಿಯಿಂದ ಹೊರತೆಗೆದಿದೆ. ಕಾಣೆಯಾದ ಪ್ರಯಾಣಿಕರಿಗಾಗಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಬಸ್ ಢಾಕಾಗೆ ಹೋಗುತ್ತಿತ್ತು ಬಸ್‌ನಲ್ಲಿದ್ದ ಅನೇಕ ಪ್ರಯಾಣಿಕರು ಮಕ್ಕಳು ತಮ್ಮ ಈದ್ ರಜಾದಿನಗಳನ್ನು ಮುಗಿಸಿ ರಾಜಧಾನಿಗೆ ಹಿಂತಿರುಗುತ್ತಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್‌ನಲ್ಲಿದ್ದ ಅನೇಕರು ಒಂದೇ ಕುಟುಂಬದವರು. ಕೆಲವರು ಹೊರಗೆ ನಿಂತಿದ್ದರಿಂದ ಬದುಕುಳಿದರು, ಆದರೆ ಅವರ ಸಂಬಂಧಿಕರು ಬಸ್‌ನೊಳಗೆ ಸಿಲುಕಿಕೊಂಡರು.
ಇದನ್ನೂ ಓದಿ: ಮಹಿಳೆಯ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಅಮ್ಮನ ಸ್ಕೂಟಿ ಮಾರಲು ಹೋಗಿ ಸಿಕ್ಕಿಬಿದ್ದ ಮಗಳು