Headlines

ರಂಜಾನ್‌ಗೆ ಬಟ್ಟೆ ಕೊಡಿಸಲ್ಲ ಎಂದ ಗಂಡ, 14 ತಿಂಗಳ ಹಸುಗೂಸಿನ ಮುಖಕ್ಕೆ ತಲೆದಿಂಬು ಒತ್ತಿ ಸಾಯಿಸಿದ ಮಹಿಳೆ! | Hyderabad Woman Kills Toddler Daughter Over Ramzan Clothes Dispute With Husband San

ರಂಜಾನ್ ಹಬ್ಬಕ್ಕೆ ಬಟ್ಟೆ ಕೊಡಿಸದ ಗಂಡನ ಮೇಲೆ ಸಿಟ್ಟಾದ ಮಹಿಳೆಯೊಬ್ಬಳು, ಹೈದರಾಬಾದ್‌ನಲ್ಲಿ ತನ್ನ 14 ತಿಂಗಳ ಹೆಣ್ಣು ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಘಟನೆಯ ನಂತರ, ಮಹಿಳೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ.

ಹೈದರಾಬಾದ್‌ (ಮಾ.16): ರಂಜಾನ್‌ ಹಬ್ಬಕ್ಕೆ ಬಟ್ಟೆ ಕೊಡಿಸೋದಿಲ್ಲ ಎಂದು ಗಂಡ ಹೇಳಿದ ಮಾತಿಗೆ ಸಿಟ್ಟಾಗಿದ್ದ ಮಹಿಳೆ, ತನ್ನ 14 ತಿಂಗಳ ಹೆಣ್ಣು ಮಗುವಿನ ಮುಖಕ್ಕೆ ತಲೆದಿಂಬು ಒತ್ತಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ಲ್ಲಿ ನಡೆದಿದೆ. ಹೈದರಾಬಾದ್‌ನ ಗೋಲ್ಕಂಡದಲ್ಲಿ ಘಟನೆ ವರದಿಯಾಗಿದ್ದು, ಆರೋಪಿಯಾಗಿರುವ ಮಹಿಳೆ ಗೌಸಿಯಾ ಬೇಗಮ್‌ ತನ್ನ ಪತಿ, ವೃತ್ತಿಯಲ್ಲಿ ಆಟೋ ಡ್ರೈವರ್‌ ಆಗಿರುವ ಆಮೀರ್‌ ಅಲಿಯೊಂದಿಗೆ ರಿಸಾಲಾ ಬಾಜಾರ್‌ನಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆ ಮಹಿಳೆ ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಅಮೀರ್ ಅವರನ್ನು ಮದುವೆಯಾಗಿದ್ದರು ಮತ್ತು ದಂಪತಿಗೆ ಉಮ್ಮೆ ಐಮನ್ ಮಗಳು 14 ತಿಂಗಳ ಹಿಂದೆ ಜನಿಸಿದ್ದಳು. ರಿಸಾಲಾ ಬಜಾರ್‌ನಲ್ಲಿರುವ ಮನೆಯಲ್ಲಿ ತಮ್ಮ ಪತಿ ಮತ್ತು ಅತ್ತೆಯೊಂದಿಗೆ ವಾಸ ಮಾಡುತ್ತಿದ್ದರು ಎಂದಿದ್ದಾರೆ.

“ಭಾನುವಾರ, ಗೌಸಿಯಾ ತನ್ನ ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ. ನಂತರ ಮಗು ಕಾಣೆಯಾಗಿದೆ ಎಂದು ಕುಟುಂಬ ಸದಸ್ಯರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದಳು, ಆದರೆ ಅವರು ಅಂತಿಮವಾಗಿ ಶಿಶುವನ್ನು ಕೋಣೆಯಲ್ಲಿ ನೋಡಿದ ಬಳಿಕ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಶಿಶು ಸಾವು ಕಂಡಿದೆ ಎಂದು ತಿಳಿಸಿದ್ದರು ” ಎಂದು ಗೋಲ್ಕೊಂಡ ಎಸಿಪಿ ಸೈಯದ್ ಫೈಜ್ ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಪತಿ ಮತ್ತು ಅತ್ತೆ ಮಾವಂದಿರ ಕಿರುಕುಳದಿಂದಾಗಿ ತಾನು ಅಸಮಾಧಾನಗೊಂಡಿದ್ದೇನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಗಂಡನ ಜೊತೆ ಗಲಾಟೆ

ರಂಜಾನ್‌ ಹಬ್ಬಕ್ಕೆ ಬಟ್ಟೆಯ ವಿಚಾರದಲ್ಲಿ ಅಮೀರ್ ಮತ್ತು ಗೌಸಿಯಾ ನಡುವೆ ವಾಗ್ವಾದ ನಡೆದಿತ್ತು ಅನ್ನೋದು ಗೊತ್ತಾಗಿದೆ. ಅಮೀರ್ ಕೋಪದಿಂದ ಮನೆಯಿಂದ ಹೊರಬಂದ ನಂತರ, ಗೌಸಿಯಾ ಬೇಗಂ ತನ್ನ 14 ತಿಂಗಳ ಮಗಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಶಿಶುವನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ, ಗೌಸಿಯಾ ಬೇಗಂ ಗೋಲ್ಕೊಂಡ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಪೊಲೀಸರು ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *