Headlines

ಗೋಯಿಂಗ್ ಡಾರ್ಕ್ ತಂತ್ರ : ಯುದ್ಧ ಆರಂಭವಾದ ಬಳಿಕ ಯಶಸ್ವಿಯಾಗಿ ಹರ್ಮುಜ್ ದಾಟಿ ಭಾರತಕ್ಕೆ ಬಂದ ಮೊದಲ ಹಡಗು | Going Dark Strategy Works First Crude Oil Tanker Reaches India Successfully Crossing Hormuz

ಗೋಯಿಂಗ್ ಡಾರ್ಕ್ ತಂತ್ರ : ಯುದ್ಧ ಆರಂಭವಾದ ಬಳಿಕ ಯಶಸ್ವಿಯಾಗಿ ಹರ್ಮುಜ್ ದಾಟಿ ಭಾರತಕ್ಕೆ ಬಂದ ಮೊದಲ ಹಡಗು | Going Dark Strategy Works First Crude Oil Tanker Reaches India Successfully Crossing Hormuz



ಗೋಯಿಂಗ್ ಡಾರ್ಕ್ ತಂತ್ರ : ಯುದ್ಧ ಆರಂಭವಾದ ಬಳಿಕ ಯಶಸ್ವಿಯಾಗಿ ಹರ್ಮುಜ್ ದಾಟಿ ಭಾರತಕ್ಕೆ ಬಂದ ಮೊದಲ ಹಡಗು | Going Dark Strategy Works First Crude Oil Tanker Reaches India Successfully Crossing Hormuz

ಮಧ್ಯಪ್ರಾಚ್ಯದ ಯುದ್ಧದ ನಡುವೆ, ಭಾರತೀಯ ಕ್ಯಾಪ್ಟನ್ ನೇತೃತ್ವದ ಕಚ್ಚಾ ತೈಲ ಹಡಗು ಇರಾನ್ ನಿಯಂತ್ರಿತ ಹರ್ಮುಜ್ ಜಲಸಂಧಿಯನ್ನು ‘ಡಾರ್ಕ್ ಮೋಡ್’ ತಂತ್ರ ಬಳಸಿ ಯಶಸ್ವಿಯಾಗಿ ದಾಟಿದೆ. 1.35 ಲಕ್ಷ ಟನ್ ತೈಲದೊಂದಿಗೆ ಸೌದಿ ಅರೇಬಿಯಾದಿಂದ ಹೊರಟ ಈ ಹಡಗು ಸುರಕ್ಷಿತವಾಗಿ ಮುಂಬೈ ಬಂದರನ್ನು ತಲುಪಿದೆ. 

ಯುದ್ಧದ ನಡುವೆ ಹರ್ಮುಜ್ ಜಲಸಂಧಿ ದಾಟಿ ಭಾರತ ತಲುಪಿದ ಮೊದಲ ಕಚ್ಚಾತೈಲ ಹಡಗು

ಮುಂಬೈ / ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿನ ಯುದ್ಧದ ನಡುವೆಯೂ ಭಾರತೀಯ ಕ್ಯಾಪ್ಟನ್ ಮುನ್ನಡೆಸುವ, ಲೈಬೀರಿಯನ್ ಧ್ವಜ ಹೊಂದಿರುವ ಕಚ್ಚಾ ತೈಲ ಹಡಗೊಂದು ಇರಾನ್‌ನಿಂದ ನಿರ್ಬಂಧಿತವಾಗಿರುವ ಹರ್ಮುಜ್ ಜಲ ಸಂಧಿಯನ್ನು ದಾಟಿ ಮುಂಬೈ ಬಂದರನ್ನು ತಲುಪಿದೆ. 1.35 ಲಕ್ಷಟನ್ (10 ಲಕ್ಷ ಬ್ಯಾರೆಲ್) ಕಚ್ಚಾ ತೈಲವನ್ನು ಇದು ಹೊತ್ತು ತಂದಿದ್ದು, ಸುರಕ್ಷಿತವಾಗಿ ತಲುಪಿದೆ.

ಯುದ್ಧ ಆರಂಭವಾದ ನಂತರ ಹರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಆಗಮಿಸಿದ ಮೊದಲ ಹಡಗು ಇದಾಗಿದೆ. ಮಾರ್ಗಮಧ್ಯೆ ಇರಾನ್ ದಾಳಿಯಿಂದ ಪಾರಾಗಲೆಂದು ಈ ಹಡಗು ‘ಡಾರ್ಕ್ ಮೋಡ್’ ತಂತ್ರಜ್ಞಾನ ಬಳಸಿದ್ದು ವಿಶೇಷ. ಈ ಮಧ್ಯೆ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಮತ್ತು ಇರಾನ್ ಸಚಿವ ಅಬ್ಬಾಸ್ ಅರಗಿ ನಡುವೆ 3 ಸುತ್ತಿನ ದೂರವಾಣಿ ಮಾತುಕತೆಯ ಫಲವಾಗಿ ಇರಾನ್ ಸರ್ಕಾರವು ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಹರ್ಮುಜ್ ಜಲಸಂಧಿಯ ಮೂಲಕ ಸಾಗಲು ಅವಕಾಶ ನೀಡಿದೆ ಎಂದು ಮೂಲಗಳು ಹೇಳಿವೆ. ಈ ಮೂಲಕ ಹರ್ಮುಜ್‌ನಲ್ಲಿ ಸಿಲುಕಿರುವ ಬಾಕಿ 28 ಭಾರತೀಯ ಹಡಗುಗಳ ಸುರಕ್ಷಿತ ಸಂಚಾರದ ಆಶಾಭಾವನೆ ಮೂಡಿದೆ. ಚೀನಾ ಹಡಗುಗಳ ಬಗ್ಗೆಯೂ ಇರಾನ್ ಹರ್ಮುಜ್‌ನಲ್ಲಿ ಮೃದು ಧೋರಣೆ ತಾಳಿ ಸಾಗಲು ಅವಕಾಶ ನೀಡಿದೆ ಎನ್ನಲಾಗಿದೆ.

ಜಲಸಂಧಿ ಬಂದ್‌ನಿಂದ ಸಂಕಷ್ಟ:

ಇರಾನ್ ಬಳಿಯ ಈ ಹರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಕಡಲ ಮಾರ್ಗಗಳಲ್ಲಿ ಒಂದಾಗಿದೆ. ಯುದ್ಧದ ಕಾರಣ ಹರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿ, ತನ್ನ ಮೇಲೆ ಸಮರ ಸಾರಿರುವ ದೇಶಗಳಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೆ, ಹಲವಾರು ಹಡಗುಗಳ ಮೇಲೆ ದಾಳಿ ಮಾಡಿತ್ತು. ಇದರಿಂದಾಗಿ ವಿಶ್ವದ ಶೇ.20ರಷ್ಟು ತೈಲ/ಅನಿಲ ಹಡಗುಗಳು ಸಾಗುವ ಈ ಮಾರ್ಗದಲ್ಲಿನ ಹಡಗುಗಳು ಸ್ತಬ್ದವಾಗಿ ತೈಲ ಪೂರೈಕೆ ಸಂಕಷ್ಟಕ್ಕೀಡಾಗಿತ್ತು. ವಿಶ್ವದ 3ನೇ ಅತಿದೊಡ್ಡ ತೈಲ ಬಳಕೆದಾರ ರಾಷ್ಟ್ರವಾದ ಭಾರತವು ಪರ್ಯಾಯ ಮಾರ್ಗ ಅನ್ವೇಷಿಸುವಂತೆ ಮಾಡಿತ್ತು.

ಡಾರ್ಕ್ ತಂತ್ರ ಬಳಸಿ ಹೋರ್ಮುಜ್ ದಾಟಿದ ಭಾರತ ಹಡಗು:

ಈ ನಡುವೆ, ಕಚ್ಚಾತೈಲ ತುಂಬಿದ ಲೈಬೀರಿಯಾ ಧ್ವಜ ಹೊಂದಿದ್ದ ‘ತೆನ್ನಾಂಗ್ ಸೂಯೆಜ್‌ ಮ್ಯಾಕ್ಸ್’ ಹೆಸರಿನ ಈ ಹಡಗು ಮಾ.1ರಂದು ಸೌದಿ ಅರೇಬಿಯಾದ ರಾಸ್ ತನುರಾ ಬಂದರಿನಿಂದ ಮುಂಬೈನತ್ತ ಹೊರಟಿತ್ತು. ಮಾ.8ರಂದು ಅಪಾಯಕಾರಿ ಹೋರ್ಮುಜ್ ಜಲಸಂಧಿಗೆ ಹಡಗು ಆಗಮಿಸಿತ್ತು. ಅಪಾಯಕಾರಿ ಜಲಪ್ರದೇಶದಲ್ಲಿ ಸಂಚರಿಸುವಾಗ ಹಡಗು ಸಿಬ್ಬಂದಿ, ಹಡಗಿನ ಸ್ವಯಂಚಾಲಿತ ಗುರುತಿನ ವ್ಯವಸ್ಥೆ (ಎಐಎಸ್) ಮತ್ತು ಟ್ರಾನ್ಸ್ ಪಾಂಡರ್‌ಗಳ ಸ್ವಿಚ್ ಆಫ್ ಮಾಡಿದ್ದರು. ಹೀಗಾಗಿ ಮಾ.8ರಂದು ಹಡಗನ್ನು ಯಾರೂ ಟ್ರಾಕಿಂಗ್ ಮಾಡಲು ಸಾಧ್ಯವಾಗಿಲ್ಲ, ಅರ್ಥಾತ್ ಹರ್ಮುಜ್ ನಲ್ಲಿ ಈ ಹಡಗಿನ ಮೇಲೆ ಯಾರೂ ನಿಗಾ ಇಡಲು ಆಗಿಲ್ಲ ಎಂದು ಮೂಲಗಳು ಹೇಳಿವೆ. ಕೊನೆಗೆ ಅಪಾಯಕಾರಿ ಹೋರ್ಮುಜ್ ಪ್ರದೇಶವನ್ನು ಮಾ.9ಕ್ಕೆ ಯಶಸ್ವಿಯಾಗಿ ದಾಟಿದ ನಂತರ ಹಡಗಿನ ಕಡಲ ಟ್ರ್ಯಾಕಿಂಗ್ ವ್ಯವಸ್ಥೆಗೆ ಮತ್ತೆ ಚಾಲನೆ ನೀಡಲಾಗಿತ್ತು. ಇದೀಗ ಹಡಗು ಸುರಕ್ಷಿತವಾಗಿ ಮುಂಬೈ ಕರಾವಳಿಗೆ ಬಂದಿದೆ. ವಿರೋಧಿಗಳ ನಿಗಾದಿಂದ ಪಾರಾಗಲು ‘ಗೋಯಿಂಗ್ ಡಾರ್ಕ್’ ಎಂದೂ ಕರೆಯಲ್ಪಡುವ ಈ ತಂತ್ರವನ್ನು ಹಡಗುಗಳು ಅಪಾಯಕಾರಿ ವಲಯದಲ್ಲಿ ಹೆಚ್ಚಾಗಿ ಬಳಸುತ್ತವೆ.

ಇದನ್ನೂ ಓದಿ: Karnataka News Live: ಪ್ರಮುಖ ಹದಿನೈದು ಸಚಿವರಿಗೆ 16ರಂದು ಸಿಎಂ ಔತಣಕೂಟ

28 ಹಡಗು ಬಾಕಿ:ಏತನ್ಮಧ್ಯೆ, 28 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪ್ರಸ್ತುತ ವರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 677 ಭಾರತೀಯ ನಾವಿಕರನ್ನು ಹೊತ್ತ 24 ಹಡಗುಗಳು ಹೋರ್ಮುಜ್ ಜಲಸಂಧಿಯ ಪಶ್ಚಿಮಕ್ಕೆ ನೆಲೆಗೊಂಡಿದ್ದರೆ, 101 ಭಾರತೀಯ ನಾವಿಕರನ್ನು ಹೊಂದಿರುವ 4 ಹಡಗುಗಳು ಜಲಸಂಧಿಯ ಪೂರ್ವ ಭಾಗದಲ್ಲಿವೆ. ಭಾರತೀಯ ಹಡಗುಗಳು ಮತ್ತು ನಾವಿಕರ ಸುರಕ್ಷತೆ ಮತ್ತು ಭದ್ರತೆಯನ್ನು 24 ಗಂಟೆಯೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಎಂದು ಭಾರತದ ಹಡಗು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕುಂಭ ಮೇಳದ ಬೆಡಗಿ ಮೊನಾಲಿಸಾ ಮದುವೆಯಾದ ಈ ಫರ್ಮಾನ್ ಖಾನ್ ಯಾರು? ಮಾಡ್ತಿರೋದೇನು?



Source link

Leave a Reply

Your email address will not be published. Required fields are marked *