ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ: ಡ್ರಗ್ಸ್ ಕಂಟ್ರೋಲರ್ ಶ್ಯಾಮಲಾ ಲೋಕಾ ಬಲೆಗೆ | Kolar 35000 Bribe To Renew Medical Store License Drugs Controller Arrested

ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ: ಡ್ರಗ್ಸ್ ಕಂಟ್ರೋಲರ್ ಶ್ಯಾಮಲಾ ಲೋಕಾ ಬಲೆಗೆ | Kolar 35000 Bribe To Renew Medical Store License Drugs Controller Arrested



ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ: ಡ್ರಗ್ಸ್ ಕಂಟ್ರೋಲರ್ ಶ್ಯಾಮಲಾ ಲೋಕಾ ಬಲೆಗೆ | Kolar 35000 Bribe To Renew Medical Store License Drugs Controller Arrested

ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಸಹಾಯಕ ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ ಬಿದ್ದಿದ್ದಾರೆ. ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ಮೂವರು ಬಲೆಗೆ ಬಿದ್ದಿದ್ದಾರೆ.

ಕೋಲಾರ : ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಸಹಾಯಕ ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ ಬಿದ್ದಿದ್ದಾರೆ. ಘಟನೆ ಸಂಬಂಧ ಸಹಾಯಕ ಔಷಧ ನಿಯಂತ್ರಕರಾದ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ಡಿ ಗ್ರೂಪ್ ನೌಕರ ಶ್ರೀನಿವಾಸನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಲಂಚದ ಹಣ ಬಿಸಾಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಆದರೆ ಅವರನ್ನು ಬೆನ್ನಟ್ಟಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ.

ದಲಿತ ಮುಖಂಡ ಹೂಹಳ್ಳಿ ಪ್ರಕಾಶ್ ಹಾಗೂ ಕೃಷ್ಣಯ್ಯ ಎಂಬುವವರು ಇವರ ವಿರುದ್ಧ ದೂರು ನೀಡಿದ್ದರು. ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ ಆರೋಪಿಗಳು 35,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸ್ವೀಕರಿಸಿದ ಹಣವನ್ನು ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಮಾರ್ಗಮಧ್ಯೆ ಎಸೆದಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಹಣಕ್ಕಾಗಿ ತಡರಾತ್ರಿಯವರೆಗೆ ಹುಡುಕಾಡಿದ್ದಾರೆ. ಆದರೆ ಅವರಿಗೂ ಹಣ ಸಿಕ್ಕಿಲ್ಲ, ಹಣ ಸಿಗದ ಹಿನ್ನೆಲೆ ಹಣ ಸ್ವೀಕರಿಸಿರುವ ವಿಡಿಯೋ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ನಿಂಗೆ ಮಗಳನ್ನ ಕೊಡಲ್ಲ ಎಂದಿದ್ದಕ್ಕೆ ಯುವತಿ ತಲೆ ಒಡೆದು ಆಕೆಯ ಮನೆಯವರ ಮೇಲೆ ಹಲ್ಲೆ ಮಾಡಿದ ಕಿರಾತಕ

ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆದಿದ್ದು, ಈ ವೇಳೆ ಅಧಿಕಾರಿಗಳನ್ನು ಕಂಡು ಎಡಿಸಿ ಶ್ಯಾಮಲಾ ಹಾಗೂ ಮತ್ತಿಬ್ಬರು ಎಸ್ಕೇಪ್​​ ಆಗಿದ್ದರು. ಇವರ ಕಾರನ್ನು ಬೆನ್ನಟ್ಟಿದ್ದ ಲೋಕಾಯುಕ್ತ ಪೊಲೀಸರು ಮೂವರನ್ನೂ ಅಂತಿಮವಾಗಿ ಬಂಧಿಸಿದ್ದರು. ಆದರೆ ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆಂದು ಪಡೆದಿದ್ದ 35 ಸಾವಿರ ರೂಪಾಯಿ ಲಂಚದ ಹಣವನ್ನು ಮಾರ್ಗ ಮಧ್ಯದಲ್ಲಿಯೇ ಇವರು ಎಸೆದಿದ್ದರು.

ಸದ್ಯ ಸಹಾಯಕ ಔಷಧ ನಿಯಂತ್ರಕಿ ಶ್ಯಾಮಲಾ, ನಿವೃತ್ತ ಡಿಗ್ರೂಪ್ ನೌಕರ ಶ್ರೀನಿವಾಸ್, ಹಾಗೂ ಡ್ರೈವರ್ ಮಹಂತೇಶ್ ಸದ್ಯ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ: ಇವಿ ಕಾರು ಚಾರ್ಜಿಂಗ್ ವೇಳೆ ದುರಂತ: ಬೆಂಕಿ ಮನೆಗೆ ಹಬ್ಬಿ 8 ಜನ ಸಜೀವ ದಹನ



Source link

Leave a Reply

Your email address will not be published. Required fields are marked *