ಪಂಜರದಿಂದ ಹೊರಬರಲು ಪವಿತ್ರಾ ಗೌಡ ನಾನಾ ಕಸರತ್ತು! ದರ್ಶನ್‌ರನ್ನೇ ಲಾಕ್ ಮಾಡಿಸಲು ಪ್ಲಾನ್? | Renukaswamy Case Pavithra Gowda Denied Bail Again Despite Daughter Exam Plea Kvn

ಪಂಜರದಿಂದ ಹೊರಬರಲು ಪವಿತ್ರಾ ಗೌಡ ನಾನಾ ಕಸರತ್ತು! ದರ್ಶನ್‌ರನ್ನೇ ಲಾಕ್ ಮಾಡಿಸಲು ಪ್ಲಾನ್? | Renukaswamy Case Pavithra Gowda Denied Bail Again Despite Daughter Exam Plea Kvn


ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ A-1 ಆರೋಪಿ ಪವಿತ್ರಾ ಗೌಡ, ಮಗಳ ಪರೀಕ್ಷೆಯ ಕಾರಣ ನೀಡಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಹಿಂದೆ ತಾಯಿಯ ಅನಾರೋಗ್ಯದ ಕಾರಣ ನೀಡಿದ್ದರೂ ಜಾಮೀನು ಸಿಕ್ಕಿರಲಿಲ್ಲ.  

ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಕೇಸ್ ನಲ್ಲಿ A-1 ಆಗಿರೋ ಪವಿತ್ರಾ ಗೌಡ ಬೇಲ್ ಪಡೆಯೋಕೆ ನಾನಾ ಕಸರತ್ತು ಮಾಡ್ತಾನೆ ಇದ್ದಾರೆ. ಮಗಳ ಪರೀಕ್ಷೆ ನೆಪ ಒಡ್ಡಿ ತನಗೆ ಬೇಲ್ ಕೊಡಿ ಅಂತ ಕೇಳಿದ್ದ ಪವಿತ್ರಾ ಗೌಡ ಅರ್ಜಿಯನ್ನ ಕೋರ್ಟ್ ನಿರಾಕರಿಸಿದೆ.ಮತ್ತೊಮ್ಮೆ ಬೇಲ್ ಗಾಗಿ ಅರ್ಜಿ ಸಲ್ಲಿಸಿದ್ದ ಪವಿತ್ರಾಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ.

ಪವಿತ್ರಾ ಬೇಲ್, ಪರೀಕ್ಷೆ ಫೇಲ್, ಮತ್ತೆ ನಿರಾಸೆ!

ಎಸ್ ಹೊರಗಿದ್ದಾಗ ಚೆಂದ ಚೆಂದದ ಬಟ್ಟೆ ತೊಟ್ಟು ಚಿಟ್ಟೆ ತರಹ ರೀಲ್ಸ್ ಮಾಡ್ತಾ ಹಾಯಾಗಿದ್ದ ಪವಿತ್ರಾ ಗೆ ಜೈಲು ವಾಸ ನರಕದಂತೆ ಭಾಸ ಆಗ್ತಾ ಇದೆ. ಯಾವಾಗಲಾದರೂ ಈ ಪಂಜರ ದಿಂದ ಹೊರ ಬರ್ತೀನಿ ಅಂತ ಗಿಣಿ ಪರಿತಪಿಸ್ತಾ ಇದೆ. ರೇಣುಕಾಸ್ವಾಮಿ ಕೇಸ್ ನಲ್ಲಿ A-2 ಆಗಿರೋ ದರ್ಶನ್ , ಸುಪ್ರೀಂ ನಿಂದ ಬೇಲ್ ರದ್ದಾದ ಮೇಲೆ ಸೈಲೆಂಟ್ ಆಗಿದ್ದಾರೆ. ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸೋ ಗೋಜಿಗೆ ಹೋಗಿಲ್ಲ. ಆದ್ರೆ A-1 ಪವಿತ್ರಾ ಮಾತ್ರ ಬೇಲ್ ರದ್ದಾದ ಮೇಲೆ ಎರಡು ಬಾರಿ ಬೇಲ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಎರಡು ಸಾರಿನು ಅವರ ಅಟೆಂಪ್ಟ್ ಫೇಲ್ ಆಗಿದೆ.

ಮಗಳ ಪರೀಕ್ಷೆ ನೆಪ, ಪವಿತ್ರಾ ಜಮೀನು ಜಪ!

ಹೌದು ಪವಿತ್ರಾ ಇತ್ತಿಚಿಗೆ ತನ್ನ ಮಗಳು ಖುಷಿಯ ಬೋರ್ಡಿಂಗ್ ಪರೀಕ್ಷೆಗಳು ಆರಂಭ ಆಗ್ತಾ ಇವೆ. ಆ ಸಂದರ್ಭದಲ್ಲಿ ತಾಯಿ ಆಗಿ ನಾನು ಜೊತೆಗಿರಬೇಕು ಸೋ 25 ದಿನಗಳ ಮಟ್ಟಿಗೆ ಜಾಮೀನು ಕೊಡಿ ಅಂತ ಅರ್ಜಿ ಸಲ್ಲಿಸಿದ್ರು. ಆದ್ರೆ ಇದಕ್ಕೆ 57ನೇ cch ಕೋರ್ಟ್ ನೋ ಅಂದಿದೆ. ಈ ಹಿಂದೆ ವಯಸ್ಸಾದ ತಾಯಿ ಯನ್ನ ನೋಡಿಕೋಬೇಕು ಬೇಲ್ ಕೊಡಿ ಅಂತ ಪವಿತ್ರ ಅರ್ಜಿ ಸಲ್ಲಿಸಿದ್ರು. ಆದ್ರೆ ಅದಕ್ಕೂ ಕೋರ್ಟ್ ಅಸ್ತು ಅಂದಿರಲಿಲ್ಲ. ಮದರ್ ಸೆಂಟಿಮೆಂಟ್ ವರ್ಕ್ ಆಗ್ಲಿಲ್ಲ ಅಂತ daughter ಸೆಂಟಿಮೆಂಟ್ ಮೊರೆ ಹೋಗಿದ್ರೂ ಪವಿತ್ರಾ. ಆದ್ರೆ ಆಕೆಯ ದುರದೃಷ್ಟಕ್ಕೆ ಅದೂನು ವರ್ಕ್ ಆಗಿಲ್ಲ.

ಅಸಲಿಗೆ ಪವಿತ್ರಾ ಗೌಡ ಪರ ವಕೀಲರು ಈ ಕೊ*ಲೆಯಲ್ಲಿ ಪವಿತ್ರಾ ಪಾತ್ರ ಇಲ್ಲ. ಯಾಕಂದ್ರೆ ಆಕೆ ಮಾರಣಾಂತಿಕ ಹಲ್ಲೆ ಮಾಡಿಲ್ಲ. ಮಾಡಿದ್ದೆಲ್ಲ ಬೇರೆಯವರು. ತನಗೆ ಅಶ್ಲೀಲ ಮೆಸೇಜ್ ಮಾಡಿದ ವ್ಯಕ್ತಿಗೆ ಜಸ್ಟ್ ಒಂದೇಟು ಹೊಡೆದಿದ್ದು ಬಿಟ್ರೆ ಪವಿತ್ರಾ ಜೀವ ಹೋಗುವಂತಾದೇನು ಮಾಡಿಲ್ಲ. ಸೋ ಆಕೆಗೆ ಬೇಲ್ ಕೊಡಬೇಕು ಅಂತ ವಾದ ಮಾಡಿದ್ರು.

ಎಲ್ಲೋ ಒಂದು ಕಡೆ ದಾಸ ನನ್ನ ಲಾಕ್ ಮಾಡಿಸಿ ತಾನು ಬಚಾವ್ ಆಗೋದಕ್ಕೆ ಪವಿತ್ರಾ ಪ್ಲಾನ್ ಮಾಡಿದಂತೆ ಕಾಣ್ತಾ ಇತ್ತು. ಆದ್ರೆ ಈ ಇಡೀ ಪ್ರಹಸನದ ಕೇಂದ್ರ ಬಿಂದುವೇ ಪವಿತ್ರಾ. ರೇಣುಕಾಸ್ವಾಮಿ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ದ. ದರ್ಶನ್ ಜೊತೆಗೆ ಪವಿತ್ರಾ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ರು. ತನ್ನ ಗೆಳೆತಿಗಾಗಿ ದರ್ಶನ್ ಈ ಕೇಸ್ ನಲ್ಲಿ ಎಂಟ್ರಿ ಆದ್ರೆ , ದರ್ಶನ್‌ಗಾಗಿ ಉಳಿದವರು ಎಂಟ್ರಿ ಆಗಿದ್ರು.

ಸೋ ಹೇಗೆ ನೋಡಿದ್ರೂ ಇದರ ಕಾರಣಕರ್ತೆ ಪವಿತ್ರಾ ಗೌಡ. ಈ ಕಾರಣಕ್ಕೇನೆ ಪವಿತ್ರಾನ ಈ ಕೇಸ್ ನಲ್ಲಿ A-1 ಮಾಡಲಾಗಿದೆ. ಆದ್ರೆ ಪವಿತ್ರಾ ಮಾತ್ರ ಉಳಿದವರು ಏನಾದ್ರೂ ಆಗಲಿ ತಾನು ಬಚಾವ್ ಆಗಬೇಕು ಅಂತ ಪ್ರಯತ್ನ ಮಾಡ್ತಾ ಇರುವಂತೆ ಕಾಣ್ತಾ ಇದೆ. ಆದ್ರೆ ಅದೆಷ್ಟು ಬಾರಿ ಬೇಲ್ ಸಲ್ಲಿಸಿದ್ರು ಕೋರ್ಟ್ ಮಾತ್ರ ಪವಿತ್ರಾ ಆಸೆಗೆ ತಣ್ಣೀರು ಎರೆಚ್ತಾನೇ ಇದೆ..!

ಅಮಿತ್ ದೇಸಾಯಿ, ಏಷ್ಯಾ ನೆಟ್ ಸುವರ್ಣ ನ್ಯೂಸ್.



Source link

Leave a Reply

Your email address will not be published. Required fields are marked *