
ಶಿವಮೊಗ್ಗದಲ್ಲಿ ಸ್ನೇಹಿತನನ್ನು ರಕ್ಷಿಸಲು ಹೋಗಿ ಅಪ್ರಾಪ್ತರಿಂದ ಹ*ತ್ಯೆಯಾದ ಸಂಕೇತ್ ಘಟನೆಯು, ಅಪ್ರಾಪ್ತ ಅಪರಾಧಿಗಳಿಗೆ ನಮ್ಮ ಕಾನೂನಿನಲ್ಲಿ ಸಿಗುವ ರಕ್ಷಣೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಗಂಭೀರ ಅಪರಾಧ ಎಸಗಿದರೂ ಅಪ್ರಾಪ್ತರಿಗೆ ಸಿಗುವ ಕಾನೂನು ವಿನಾಯಿತಿ ಮತ್ತು ಅದರ ದುರ್ಬಳಕೆಯ ಕರಾಳ ಸತ್ಯ ಇಲ್ಲಿದೆ
ಶಿವಮೊಗ್ಗದ ಸಂಕೇತ್ ಎಂಬ ಮುಗ್ಧ ಬಾಲಕನ ಬಗ್ಗೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಈ ಕಂದನ ಮುಖ ನೋಡಿದರೆ ಮನುಷ್ಯತ್ವ ಎನ್ನುವುದು ಸ್ವಲ್ಪನಾದರೂ ಇದ್ದವರ ಕರುಳು ಚುರುಕ್ ಎನ್ನದೇ ಇರಲಾರದು. ಮೂವರು ಮುಸ್ಲಿಂ ಬಾಲಕರು ಸೇರಿ ಇವನನ್ನು ಅನ್ಯಾಯವಾಗಿ ಕೊಂದು ಹಾಕಿದರು. ಅಷ್ಟಕ್ಕೂ ಈ ಸಂಕೇತ್ ಮಾಡಿದ್ದ ತಪ್ಪು ಒಂದೇ. ಅದು ತನ್ನ ಸ್ನೇಹಿತ ಗಿರೀಶ್ ಎನ್ನುವವನ್ನು ಇದೇ ಬಾಲಕರು ಹೊಡೆಯುತ್ತಿದ್ದಾಗ ತಪ್ಪಿಸಲು ಹೋಗಿದ್ದು. ಸಂಕೇತ್ನ ಎದೆಗೆ ಗುದ್ದಿದ ಈ ಬಾಲಕರು ಅಲ್ಲಿಯೇ ಆತನ ಜೀವ ತೆಗೆದಿದ್ದಾರೆ. ಇದು ಕೋಮು ಸ್ವರೂಪ ಪಡೆದುಕೊಳ್ಳಬಾರದು ಎಂದು ಹೈ ಅಲರ್ಟ್ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಕೇತ್ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಎಲ್ಲರೂ ಶಾಂತವಾಗಿರಿ ಎಂದಿದ್ದಾರೆ. ಅಲ್ಲಿಗೆ ಒಂದಷ್ಟು ದಿನ ಈ ಘಟನೆ ಚರ್ಚೆಗೆ ಬಂದು, ಜನರು ಬಾಲಕನ ಕುಟುಂಬಕ್ಕೆ ಕಂಬನಿ ಮಿಡಿಯುತ್ತಾರೆ. ಕೆಲವು ದಿನವಾದ ಮೇಲೆ ಈ ಘಟನೆ ಮರೆಯುತ್ತಾರೆ!
ಕಾನೂನಿನಲ್ಲಿ ರಕ್ಷಣೆ
ಆದರೆ, ಹಿಂದೆಯೂ, ಇಂದು ಹಾಗೂ ಮುಂದು… ಅಪ್ರಾಪ್ತರ ಹೆಸರಿನಲ್ಲಿ ಇರುವ ಇಂಥ ಕೊ*ಲೆಗೆಡುಕರಿಗೆ ನಮ್ಮ ಭಾರತದ ಕಾನೂನಿನಲ್ಲಿ ಸದಾ ರಕ್ಷಣೆ ಸಿಗುತ್ತದೆ. ಏಕೆಂದರೆ ಅವರಿಗೆ 18 ತುಂಬಿಲ್ಲ. ಅವರು ಕೊ*ಲೆಯೇ ಮಾಡಲಿ, ಅತ್ಯಾ*ಚಾರವೇ ಮಾಡಲಿ ಯಾವುದೇ ರೀತಿಯ ರಾಕ್ಷಸೀ ಕೃತ್ಯವೇ ಮಾಡಲಿ ಅವರು ಕಾನೂನಿನ ಪ್ರಕಾರ ಅಪ್ರಾಪ್ತರು. ಅವರಿಗೆ 18 ತುಂಬುವವರೆಗೆ ಎಲ್ಲಾ ಸೌಲಭ್ಯ ನೀಡಿ ರಿಮಾಂಡ್ ಹೋಮ್ನಲ್ಲಿ ಇಟ್ಟು ಅವರನ್ನು ಒಳ್ಳೆಯವರನ್ನಾಗಿ ಮಾಡುವ ಪ್ರಯತ್ನ(?) ನಡೆಯುತ್ತದೆ. ಅವರು ರಿಮಾಂಡ್ ಹೋಮ್ನಿಂದ ಹೋಗುವಾಗ ಅವರ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿರುವ ಕುಟುಂಬಗಳು ಅಯ್ಯೋ ವಿಧಿಯೇ ಎಂದು ಗೋಳಾಡುವ ರೀತಿಯಲ್ಲಿ, ಈ ಪಾಪಿಗಳಿಗೆ ವಿವಿಧ ಸೌಲಭ್ಯ ನೀಡಿ ಬಿಡುಗಡೆ ಮಾಡಲಾಗುತ್ತದೆ. ಏಕೆಂದರೆ ಘಟನೆ ನಡೆದಾಗ ಅವರು ಅಪ್ರಾಪ್ತರು!
ನಿರ್ಭಯಾ ಕೇಸ್ನ ಅಪ್ರಾಪ್ತ
ನಿರ್ಭಯಾ ಕೇಸ್ನಲ್ಲಿ ಇಡೀ ದೇಶವೇ ತಲ್ಲಣಗೊಳ್ಳುವ ಘಟನೆ ನಡೆದಾಗಲೂ ಅದರಲ್ಲಿ ಇದ್ದವ ಇದೇ ರೀತಿಯ ಅಪ್ರಾಪ್ತ. ಆತನಿಗೆ 18 ತುಂಬಿದಾಗ ಒಳ್ಳೆಯ ಮನುಷ್ಯನಾಗು ಎಂದು ಹೇಳಿ ಬಿಡುಗಡೆ ಮಾಡಲಾಗಿತ್ತು. ಬೆಂಗಳೂರಿನ ಜಗಜೀವನರಾಮ್ ನಗರದಲ್ಲಿ ನಡೆದ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲುತೂರಾಟ, ಚಿಕ್ಕಮಗಳೂರಲ್ಲಿ ಮಹಿಳೆಯ ಮನೆ ಮೇಲೆ ಕಲ್ಲು ತೂರಾಟ, ಮುರುಡೇಶ್ವರದಲ್ಲಿ ಮನೆಗಳ ಮೇಲೆ ಕಲ್ಲುತೂರಾಟ, ಬಾಗಲಕೋಟೇಲಿ ಶಿವಾಜಿ ಜಯಂತಿಯ ಮೆರವಣಿಗೆ ಮೇಲೆ ಕಲ್ಲುತೂರಾಟ… ಹೀಗೆ ಎಲ್ಲೆಲ್ಲೂ ಇದ್ದಿದ್ದು ಇದೇ ಅಪ್ರಾಪ್ತರು! ಆದರೆ ಆಗಿದ್ದೇನು?
ಇಲ್ಲಿದೆ ಘೋರ ಸತ್ಯ
ಈ ಘಟನೆಗಳ ಕರಾಳ ಸತ್ಯ, ನಮ್ಮ ಕಾನೂನು, ಎಲ್ಲಾ ಅಪ್ರಾಪ್ತ ಅಪರಾಧಿಗಳಿಗೆ ಸಿಗುವ ಅನುಕೂಲ, ಪೈಶಾಚಿಕ ಕೃತ್ಯಗಳನ್ನು ಮಾಡುವಾಗ ಅಪ್ರಾಪ್ತರನ್ನೇ ಮುಂದು ಮಾಡುತ್ತಿರುವ ಉದ್ದೇಶ… ಇವೆಲ್ಲವುಗಳ ಬಗ್ಗೆ ಫೇಸ್ಬುಕ್ ಬಳಕೆದಾರರಾಗಿರುವ ಸುಧೀರ್ ಸಾಗರ್ ಎನ್ನುವವರು ಕಠೋರ ಸತ್ಯವನ್ನು ತೆರೆದಿಟ್ಟಿದ್ದಾರೆ. ನಿರ್ಭಯಾ ಕೇಸ್ನಲ್ಲಿ ಆಕೆಯನ್ನು ಹರಿದು ಮುಕ್ಕಿದ ಅಪ್ರಾಪ್ತನಿಗೆ ಕೊನೆಗೆ ಸಿಕ್ಕ ಸೌಲಭ್ಯದಿಂದ ಹಿಡಿದು ಮುಗ್ಧ ಸಂಕೇತ್ನನ್ನು ಸಾಯಿಸಿದ ಅದೇ ಅಪ್ರಾಪ್ತರಿಗೆ ಮುಂದೆ ಸಿಗಬಹುದಾದ ಸೌಲಭ್ಯಗಳನ್ನು ಮನೋಜ್ಞವಾಗಿ ವರ್ಣಿಸಿದ್ದಾರೆ ನೋಡಿ…. ಲಿಂಕ್ ಈ ಕೆಳಗಿದೆ…