ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ ‘ಜನನಾಯಗನ್’ ಸೆನ್ಸಾರ್ ವಿವಾದಕ್ಕೆ ಸಿಲುಕಿತ್ತು. ಇಂದು ಚಿತ್ರದ ಮರು-ಸೆನ್ಸಾರ್ ನಡೆಯಲಿದ್ದು, ಅದರ ಭವಿಷ್ಯ ನಿರ್ಧಾರವಾಗಲಿದೆ. ಇದರ ನಡುವೆ ವಿಜಯ್ ಅವರ ವೈಯಕ್ತಿಕ ಜೀವನದ ವಿವಾದಗಳು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದೇ ಎಂಬ ಚರ್ಚೆಯೂ ನಡೆಯುತ್ತಿದೆ.
ಒಂದು ಕಡೆ ದಳಪತಿ ವಿಜಯ್ ಡಿವೋರ್ಸ್ ವಿಷ್ಯ, ತ್ರಿಶಾ ಜೊತೆಗಿನ ಲವ್ವಿ ಡವ್ವಿ ವಿಷ್ಯ ತಮಿಳುನಾಡಿನಲ್ಲಿ ಸಖತ್ ಸದ್ದು ಮಾಡ್ತಾ ಇವೆ. ಇವು ದಳಪತಿ ರಾಜಕೀಯ ಭವಿಷ್ಯಕ್ಕೆ ಏಟು ಕೊಡಬಹುದು ಅನ್ನೋ ಭೀತಿ ವಿಜಯ್ ಫ್ಯಾನ್ಸ್ನ ಕಾಡ್ತಾ ಇದೆ. ಈ ನಡುವೆ ಇವತ್ತು ಜನನಾಯಗನ್ ಸೆನ್ಸಾರ್ ಆಗಲಿದ್ದು ದಳಪತಿ ಕೊನೆ ಚಿತ್ರದ ಭವಿಷ್ಯ ನಿರ್ಧಾರ ಆಗಲಿದೆ.
ದಳಪತಿ ವಿಜಯ್ ಕೊನೆ ಚಿತ್ರದ ಭವಿಷ್ಯ ಇಂದು ನಿರ್ಧಾರ!
ಯೆಸ್ ದಳಪತಿ ವಿಜಯ್ ನಟನೆಯ ಕೊನೆ ಚಿತ್ರ ಜನನಾಯಗನ್ ರಿಲೀಸ್ ಜಟಾಪಟಿ ಕಳೆದ ಎರಡು ತಿಂಗಳಿಂದಲೂ ನಡೀತಾ ಇರೋ ವಿಷ್ಯ ಗೊತ್ತೇ ಇದೆ. ಅಸಲಿಗೆ ಜನವರಿ 9ಕ್ಕೆ ಜನನಾಯಗನ್ ರಿಲೀಸ್ ಫಿಕ್ಸ್ ಆಗಿತ್ತು. ಆದ್ರೆ ಸೆನ್ಸಾರ್ ಮಂಡಳಿ ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಹಾಕಿತ್ತು.
ಚಿತ್ರದ ಕೆಲ ಸನ್ನಿವೇಶಗಳು ರಾಜಕೀಯ ಅಜೆಂಡಾ ಹೊಂದಿವೆ, ಸೇನೆಯ ಬಗ್ಗೆ ಆಕ್ಷೇಪಾರ್ಹ ದೃಶ್ಯಗಳಿವೆ ಅಂತ ಸೆನ್ಸಾರ್ ಮಂಡಳಿ ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕೋದಕ್ಕೆ ಸೂಚಿಸಿತ್ತು. ಆದ್ರೆ ಚಿತ್ರತಂಡ ಇದರ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದ್ರೆ ಸುಪ್ರೀಂ ಕೆಳ ಹಂತದ ಕೋರ್ಟ್ಗೆ ಹೋಗಿ ಅಂತ ವಾಪಾಸ್ ಕಳಿಸಿತ್ತು.
ದಳಪತಿ ಪಾಲಿಟಿಕ್ಸ್ ನಡುವೆ ತನಗೆ ಹೊಡೆತ ಬೀಳ್ತಾ ಇದೆ ಅನ್ನೋದನ್ನರಿತ ಕೆವಿಎನ್ ಪ್ರೊಡಕ್ಷನ್ ಕೇಸ್ ವಾಪಾಸ್ ಪಡೆದು ರಿ ಸೆನ್ಸಾರ್ಗೆ ಅಪ್ಲೈ ಮಾಡಿತ್ತು. ಫೈನಲಿ ಇವತ್ತು ಜನನಾಯಗನ್ ಸೆನ್ಸಾರ್ ಆಗಲಿದೆ. ಬಹುತೇಕ ಸೆನ್ಸಾರ್ ಹೇಳೋ ಕಟ್ಸ್ ಒಪ್ಪಿ ಚಿತ್ರತಂಡ ಸರ್ಟಿಫಿಕೇಟ್ ಪಡೆಯಲಿದೆ.
ಕೆಡಿ , ಟಾಕ್ಸಿಕ್ಗೂ ಮುನ್ನ ಜನನಾಯಗನ್ ರಿಲೀಸ್..?
ಹೌದು ಟಾಕ್ಸಿಕ್ ಮತ್ತು ಕೆಡಿ ಚಿತ್ರಗಳನ್ನ ನಿರ್ಮಾಣ ಮಾಡಿರೋದು ಕೂಡ ಕೆವಿಎನ್ ಪ್ರೊಡಕ್ಷನ್ಸ್. ಇತ್ತೀಚಿಗೆ ಟಾಕ್ಸಿಕ್ ರಿಲೀಸ್ ಜೂನ್ 4ಕ್ಕೆ ಮುಂದಕ್ಕೆ ಹೋಗಿದೆ. ಕೆಡಿ ಏಪ್ರಿಲ್ 30ಕ್ಕೆ ಬರೋದು ಫಿಕ್ಸ್ ಆಗಿದೆ. ಸೆನ್ಸಾರ್ ಆದ್ರೆ ಈ ಎರಡಕ್ಕೂ ಮುನ್ನ ಜನನಾಯಗನ್ ರಿಲೀಸ್ ಮಾಡೋ ಯೋಚನೆಯಲ್ಲಿದೆ ಕೆವಿಎನ್ ಪ್ರೊಡಕ್ಷನ್ಸ್.
ಇನ್ನೂ ತಮಿಳುನಾಡಿನಲ್ಲಿ ಏಪ್ರಿಲ್ ಕೊನೆವಾರ ಅಥವಾ ಮೇ ಮೊದಲ ವಾರ ವಿಧಾನಸಭಾ ಚುನಾವಣೆ ನಡೆಯಲಿದೆ. ದಳಪತಿಯ ಟಿವಿಕೆ ಪಾರ್ಟಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾ ಇದೆ. ಸೋ ಚುನಾಚಣೆಗೂ ಮುನ್ನ ಜನನಾಯಗನ್ ಥಿಯೇಟರ್ ಅಂಗಳದಲ್ಲಿ ಅಬ್ಬರಿಸಲಿದೆ.
ಡಿವೋರ್ಸ್, ತ್ರಿಶಾ ವಿಷ್ಯ, ದಳಪತಿ ರಾಜಕೀಯ ಭವಿಷ್ಯ..!
ಹೌದು ವಿಜಯ್ರ ಕೊನೆ ಚಿತ್ರದ ಭವಿಷ್ಯ ಏನಾಗುತ್ತೆ ಅನ್ನೋದ್ರ ಜೊತೆಗೆ ಅವರ ರಾಜಕೀಯ ಭವಿಷ್ಯದ ಬಗ್ಗೆನೂ ಬಿಸಿ ಬಿಸಿ ಚರ್ಚೆ ತಮಿಳುನಾಡಿನಲ್ಲಿ ನಡೀತಾ ಇದೆ. ಇತ್ತೀಚಿಗೆ ವಿಜಯ್ ಪತ್ನಿ ಡಿವೋರ್ಸ್ಗೆ ಅಪ್ಲೈ ಮಾಡಿರೋದು, ವಿಜಯ್ ತ್ರಿಶಾ ಜೊತೆ ಜೊತೆಯಾಗಿ ಕಾಣಿಸಿಕೊಂಡಿರೋರುವ ಸುದ್ದಿ ದೊಡ್ಡ ಸದ್ದು ಮಾಡಿವೆ. ಇವು ದಳಪತಿ ರಾಜಕೀಯ ಭವಿಷ್ಯದ ಮೇಲೆ ಏನು ಪರಿಣಾಮ ಬೀರುತ್ತೆ ಅನ್ನೋ ಚರ್ಚೆ ಶುರುವಾಗಿದೆ.
ದಳಪತಿ ರಾಜಕೀಯ ಭವಿಷ್ಯ ಏನಾಗುತ್ತೋ ಗೊತ್ತಿಲ್ಲ. ಇವತ್ತು ವಿಜಯ್ ಕೊನೆ ಸಿನಿಮಾದ ಭವಿಷ್ಯವಂತೂ ಗೊತ್ತಾಗಲಿದೆ. ಸೆನ್ಸಾರ್ ಸರ್ಟಿಫಿಕೇಟ್ ಸಿಕ್ರೆ ಸದ್ಯದಲ್ಲೇ ಜನನಾಯಗನ್ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.