ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪತಿಗೆ ಡ್ರಗ್ಸ್, 5ಜಿ ಸಿಮ್ ಸಾಗಿಸಲು ಯತ್ನಿಸಿದ ಪತ್ನಿ ಅಂದರ್! | Bengaluru 2nd Wife Caught Smuggling Drugs In Undergarments To Jail Inmate Rav

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪತಿ ಫರ್ಹಾನ್‌ಗೆ ಅಕ್ರಮವಾಗಿ ಮೊಬೈಲ್ ಸಿಮ್ ಮತ್ತು ಡ್ರಗ್ಸ್ ಪೂರೈಸಲು ಯತ್ನಿಸಿದ ಪತ್ನಿ ರಿತಿಕಾ ರೇ ಅವರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ತನ್ನ ಒಳ ಉಡುಪಿನಲ್ಲಿ ನಿಷೇಧಿತ ವಸ್ತುಗಳನ್ನು ಬಚ್ಚಿಟ್ಟುಕೊಂಡು ಬಂದಿದ್ದ ಆಕೆಯನ್ನು ತಪಾಸಣೆ ವೇಳೆ ಪತ್ತೆಹಚ್ಚಲಾಗಿದೆ.

 ಬೆಂಗಳೂರು (ಮಾ.31): ಜೈಲಿನಲ್ಲಿರುವ ಪತಿಗೆ ಅಕ್ರಮವಾಗಿ ಮೊಬೈಲ್ ಸಿಮ್ ಹಾಗೂ ಡ್ರಗ್ಸ್ ಪೂರೈಸಲು ಯತ್ನಿಸಿದ್ದ ಎರಡನೇ ಪತ್ನಿ ಪರಪ್ಪನ ಅಗ್ರಹಾರ ಕಾರಾಗೃಹದ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾಳೆ.

ಹೆಣ್ಣೂರಿನ ರಿತಿಕಾ ರೇ ಬಂಧಿತಳಾಗಿದ್ದು, ಆಕೆಯಿಂದ 5ಜಿ ಸಿಮ್‌ಗಳು, 27 ಗ್ರಾಂ ಮೆಥಾಂಫೆಟಮೈನ್‌ ಹಾಗೂ ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ಮೂರು ದಿನಗಳ ಹಿಂದೆ ಜೈಲಿನಲ್ಲಿರುವ ಪತಿ ಫರ್ಹಾನ್ ಭೇಟಿಗೆ ರಿತಿಕಾ ತೆರಳಿದ್ದಳು. ಆಗ ಆಕೆಯ ನಡವಳಿಕೆ ಮೇಲೆ ಶಂಕೆಗೊಂಡು ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ನಿಜ ಬಣ್ಣ ಬಯಲಾಗಿದೆ.

ಕೆಲಸ ಅರಸಿ ನಗರಕ್ಕೆ ಬಂದಿದ್ದ ಅಸ್ಸಾಂ ಮೂಲದ ರಿತಿಕಾ, ಕೆಲ ವರ್ಷಗಳ ಹಿಂದೆ ಕ್ರಿಮಿನಲ್ ಹಿನ್ನೆಲೆಯುಳ್ಳ ಫರ್ಹಾನ್‌ ಜತೆ ಎರಡನೇ ವಿವಾಹವಾಗಿದ್ದಳು. ಸುಲಿಗೆ ಪ್ರಕರಣದಲ್ಲಿ ಫರ್ಹಾನ್‌ ಜೈಲು ಸೇರಿದ್ದಾನೆ. ಪತಿ ಭೇಟಿಗೆ ನಾಲ್ಕು ವರ್ಷದ ಮಗು ಜತೆ ಆಕೆ ಬಂದಿದ್ದಳು. ಮಗು ಜತೆ ಬಂದರೆ ಜೈಲಿನೊಳಗೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಡ್ರಗ್ಸ್ ಸಾಗಿಸಬಹುದು ಎಂದು ಆಕೆ ಯೋಜಿಸಿದ್ದಳು.

ಮೂರು ದಿನಗಳ ಹಿಂದೆ ಪತಿ ಭೇಟಿಗೆ ಬಂದ ರಿತಿಕಾ, ತನ್ನ ಒಳ ಉಡುಪಿನಲ್ಲಿ ಸಿಮ್, ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನವನ್ನು ಕವರ್‌ನಲ್ಲಿ ತುಂಬಿಟ್ಟಿಕೊಂಡಿದ್ದಳು. ಜೈಲಿನ ಪ್ರವೇಶ ದ್ವಾರದಲ್ಲಿ ಆಕೆಯನ್ನು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಫ್‌) ಸಿಬ್ಬಂದಿ ತಪಾಸಣೆಗೊಳಪಡಿಸಿದ್ದಾರೆ. ಆ ವೇಳೆ ಆಕೆಯ ಬಳಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಕಾರಾಗೃಹ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Source link

Leave a Reply

Your email address will not be published. Required fields are marked *