Toxic Teaser: ಯಶ್ ‘ಟಾಕ್ಸಿಕ್’ ಟೀಸರ್‌ ನೋಡಿ ರಿಷಬ್ ಶೆಟ್ಟಿ ಫುಲ್ ಫಿದಾ; ಯೋಗರಾಜ್ ಭಟ್ ಹೇಳಿದ್ದೇನು? | Rishab Shetty Appreciates Yash Toxic Teaser And Yogaraj Bhat Post Becomes Viral Now In Social Media

Toxic Teaser: ಯಶ್ ‘ಟಾಕ್ಸಿಕ್’ ಟೀಸರ್‌ ನೋಡಿ ರಿಷಬ್ ಶೆಟ್ಟಿ ಫುಲ್ ಫಿದಾ; ಯೋಗರಾಜ್ ಭಟ್ ಹೇಳಿದ್ದೇನು? | Rishab Shetty Appreciates Yash Toxic Teaser And Yogaraj Bhat Post Becomes Viral Now In Social Media



Toxic Teaser: ಯಶ್ ‘ಟಾಕ್ಸಿಕ್’ ಟೀಸರ್‌ ನೋಡಿ ರಿಷಬ್ ಶೆಟ್ಟಿ ಫುಲ್ ಫಿದಾ; ಯೋಗರಾಜ್ ಭಟ್ ಹೇಳಿದ್ದೇನು? | Rishab Shetty Appreciates Yash Toxic Teaser And Yogaraj Bhat Post Becomes Viral Now In Social Media

ಟೀಸರ್‌ನಲ್ಲಿ ‘ರಾಯಲ್ ಸರ್ಕಸ್’ ಪರಿಕಲ್ಪನೆಯನ್ನು ಅತ್ಯಂತ ಅದ್ಭುತವಾಗಿ, ರಮಣೀಯವಾಗಿ ಚಿತ್ರಿಸಲಾಗಿದೆ. ಕತ್ತಲ ರಾತ್ರಿಯಲ್ಲಿ ಝಗಮಗಿಸುವ ಸರ್ಕಸ್, ಅಲ್ಲಿನ ಜೋಕರ್, ಡ್ಯಾನ್ಸರ್ಸ್ ಮತ್ತು ಆನೆಗಳ ದೃಶ್ಯಗಳು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತವೆ. ರಿಷಬ್ ಶೆಟ್ಟಿ, ಯೋಗರಾಜ್ ಭಟ್ ಏನಂದ್ರು ನೋಡಿ..

ಯಶ್ ‘ಟಾಕ್ಸಿಕ್’ ಅಬ್ಬರಕ್ಕೆ ಸ್ಯಾಂಡಲ್‌ವುಡ್ ಫಿದಾ: 

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ‘ಟಾಕ್ಸಿಕ್’ ಸಿನಿಮಾದ ಎರಡನೇ ಟೀಸರ್ ಬಿಡುಗಡೆಯಾಗಿ ಇಡೀ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಎಲ್ಲಿ ನೋಡಿದರೂ ಈಗ ಬರೀ ‘ಟಾಕ್ಸಿಕ್’ (Toxic) ಸಿನಿಮಾದ್ದೇ ಚರ್ಚೆ. ಯಶ್ ಅವರ ಮಾಸ್ ಲುಕ್ ಮತ್ತು ಖಡಕ್ ಡೈಲಾಗ್ ಡೆಲಿವರಿ ಕಂಡು ಅಭಿಮಾನಿಗಳು ಮಾತ್ರವಲ್ಲದೆ, ಇಡೀ ಚಿತ್ರರಂಗವೇ ದಂಗಾಗಿದೆ. ಟೀಸರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ದಾಖಲೆ ಬರೆದಿರುವುದು ರಾಕಿ ಭಾಯ್ ಅವರ ಜಾಗತಿಕ ಕ್ರೇಜ್‌ಗೆ ಸಾಕ್ಷಿಯಾಗಿದೆ.

ರಿಷಬ್ ಶೆಟ್ಟಿ ಮೆಚ್ಚುಗೆ, ಭಟ್ರು ಹೇಳಿದ ಆ ಒಂದು ಮಾತು ಈಗ ವೈರಲ್!

ಈ ಅದ್ಭುತ ಟೀಸರ್ ಕಂಡು ಸ್ಯಾಂಡಲ್‌ವುಡ್‌ನ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಫುಲ್ ಫಿದಾ ಆಗಿದ್ದಾರೆ. ರಾಕಿಂಗ್ ಅವತಾರಕ್ಕೆ ಮಾರುಹೋಗಿರುವ ರಿಷಬ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಟೀಸರ್ ಹಂಚಿಕೊಂಡು ಯಶ್ ಅವರ ಈ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಕೂಡ ಯಶ್ ಸಾಹಸಕ್ಕೆ ಬೆನ್ನು ತಟ್ಟಿದ್ದಾರೆ. “ಇದೊಂದು ಅಸಾಧಾರಣ ಹೆಜ್ಜೆ. ನಮ್ಮೂರ ಹೆಮ್ಮೆಯ ನಟನ ಅಭೂತಪೂರ್ವ ಸಾಹಸಮಯ ಜಾಗತಿಕ ಜರ್ನಿ ಇದಾಗಿದೆ. ಚಿತ್ರದ ತುಣುಕಿನಲ್ಲೇ ಎಲ್ಲರೂ ತಿರುಗಿ ನೋಡುವಂತೆ ಮಾಡಿದ ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ಭಟ್ರು ತಮ್ಮದೇ ಶೈಲಿಯಲ್ಲಿ ಹಾಡಿ ಹೊಗಳಿದ್ದಾರೆ.

‘ರಾಯಲ್ ಸರ್ಕಸ್’

ಟೀಸರ್‌ನಲ್ಲಿ ‘ರಾಯಲ್ ಸರ್ಕಸ್’ ಎಂಬ ಪರಿಕಲ್ಪನೆಯನ್ನು ಅತ್ಯಂತ ಅದ್ಭುತವಾಗಿ ಮತ್ತು ರಮಣೀಯವಾಗಿ ಚಿತ್ರಿಸಲಾಗಿದೆ. ಕತ್ತಲ ರಾತ್ರಿಯಲ್ಲಿ ಝಗಮಗಿಸುವ ಸರ್ಕಸ್, ಅಲ್ಲಿನ ಜೋಕರ್, ಡ್ಯಾನ್ಸರ್ಸ್ ಮತ್ತು ಆನೆಗಳ ದೃಶ್ಯಗಳು ನೋಡುಗರಿಗೆ ಒಂದು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತವೆ. ವಿಶೇಷವಾಗಿ ಯಶ್ ಅವರ ಡಬಲ್ ರೋಲ್ ಅಥವಾ ಎರಡು ವಿಭಿನ್ನ ಶೇಡ್‌ಗಳು ಕುತೂಹಲದ ಕೇಂದ್ರಬಿಂದುವಾಗಿವೆ. ಮೊದಲ ಟೀಸರ್‌ನಲ್ಲಿ “ಡ್ಯಾಡಿ ಈಸ್ ಹೋಮ್” (Daddy is Home) ಎಂಬ ಡೈಲಾಗ್ ಸದ್ದು ಮಾಡಿತ್ತು. ಆದರೆ ಈಗಿನ ಟೀಸರ್‌ನಲ್ಲಿ “ಡ್ಯಾಡಿ ಐ ಆಮ್ ಹೋಮ್” (Daddy I am Home) ಎನ್ನುವ ಮೂಲಕ ಯಶ್ ಕಥೆಯಲ್ಲಿ ಯಾವುದೋ ದೊಡ್ಡ ಟ್ವಿಸ್ಟ್ ಇರುವುದನ್ನು ಸೂಚಿಸಿದ್ದಾರೆ.

ಮಾರ್ಚ್ 19ಕ್ಕೆ ತೆರೆಗೆ ಬರಲಿರುವ ಈ ಚಿತ್ರಕ್ಕೆ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ತಾಂತ್ರಿಕವಾಗಿ ಮತ್ತು ದೃಶ್ಯ ವೈಭವದಲ್ಲಿ ‘ಟಾಕ್ಸಿಕ್’ ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಟ್ಟಿನಲ್ಲಿ, ಯಶ್ ಅವರ ಈ ಹೊಸ ಅವತಾರ ಸ್ಯಾಂಡಲ್‌ವುಡ್‌ಗೆ ಮತ್ತೊಂದು ದೊಡ್ಡ ಮಟ್ಟದ ಯಶಸ್ಸು ತಂದುಕೊಡುವುದರಲ್ಲಿ ಅನುಮಾನವಿಲ್ಲ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.



Source link

Leave a Reply

Your email address will not be published. Required fields are marked *