
ಬೆಂಗಳೂರಿನಲ್ಲಿ ತ್ರಿಕೋನ ಪ್ರೇಮಕಥೆಯೊಂದು ಕೊಲೆಯಲ್ಲಿ ಅಂತ್ಯಗೊಂಡಿದೆ. ನಟಿ ಹಾಗೂ ಸಹ ನಿರ್ದೇಶಕಿ ಬಿಂದು, ತನ್ನ ಹೊಸ ಪ್ರಿಯಕರನೊಂದಿಗೆ ಸೇರಿ ಹಳೆಯ ಗೆಳೆಯ ಮೋಹನ್ ಕೃಷ್ಣರಾವ್‌ನನ್ನು ಕೊಲೆ ಮಾಡಿದ್ದಾಳೆ. ಈ ಸಂಬಂಧ ಬಾಗಲಗುಂಟೆ ಪೊಲೀಸರು ನಟಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: ತ್ರಿಕೋನ ಪ್ರೇಮಕಥೆಯಲ್ಲೊಂದು ಹೆಣ ಬಿದ್ದಿದ್ದು, ಬಾಗಲಗುಂಟೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹೊಸ ಇನಿಯನೊಂದಿಗೆ ಸೇರಿಕೊಂಡು ಹಳೆ ಗೆಳೆಯನಿಗೆ ಗುಂಡಿ ತೋಡಿದ್ದ ನಟಿ, ಹಯಗ್ರೀವ್ ಸಿನಿಮಾದ ಸಹ ನಿರ್ದೇಶಕಿ ಬಿಂದು ಪ್ರೇಮಪುರಾಣ ಬೆಚ್ಚಿಬೀಳಿಸುವಂತಿದೆ. ಬಿಂದು @ ಊರ್ವಶಿ, ವಿನಯ್, ಧನುಷ್ ಬಂಧಿತ ಆರೋಪಿಗಳು. ಮೋಹನ್ ಕೃಷ್ಣರಾವ್ ಈ ಮೂವರಿಂದ ಕೊಲೆಯಾದ ವ್ಯಕ್ತಿ. ಈ ಆರೋಪಿ ಬಿಂದು ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾಳೆ. ಮೋಹನ್ ಕೃಷ್ಣರಾವ್ ಬೆಂಗಳೂರಿನ ಮಂಜುನಾಥ ನಗರದ ನಿವಾಸಿಯಾಗಿದ್ದು, ಇದೇ ಏರಿಯಾದಲ್ಲಿಯೇ ಬಿಂದು ಸಹ ವಾಸವಾಗಿದ್ದಳು. ಮೋಹನ್ ಕೃಷ್ಣರಾವ್ ಹೆಂಡತಿಯನ್ನು ಬಿಟ್ಟಿದ್ದ, ಇತ್ತ ಬಿಂದು ಸಹ ಗಂಡನಿಂದ ದೂರವಾಗಿದ್ದಳು. ಇದ್ದ ಮಗುವೊಂದು ಕೋವಿಡ್ ಕಾಲಘಟ್ಟದಲ್ಲಿ ಸಾವನ್ನಪ್ಪಿತ್ತು.
ಜೊತೆಯಲ್ಲೊಬ್ಬ ಇರುವಾಗಲೇ ಮತ್ತೊಬ್ಬನ ಮೇಲೆ ಲವ್
ಒಂಟಿಯಾಗಿ ಜೀವನ ನಡೆಸುತ್ತಿದ್ದ ಬಿಂದು ಮತ್ತು ಮೋಹನ್ ಕೃಷ್ಣರಾವ್ ಜಂಟಿಯಾಗಿ ಜೀವನ ನಡೆಸಲು ಬಯಸಿದ್ದರು. ಆದ್ರೆ ಬಿಂದು ಜೊತೆ ವಾಸ ಮಾಡಲು ಆರಂಭಿಸಿದ ಎರಡೇ ತಿಂಗಳಲ್ಲಿ ಮೋಹನ್ ಕೃಷ್ಣರಾವ್ ಹೆಣ ಬಿದ್ದಿದೆ. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಬಿಂದು ಮತ್ತು ಮೋಹನ್ ಜೊತೆಯಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೋಹನ್ ಜೊತೆಯಿರಲು ಆರಂಭಿಸಿದ ಎರಡನೇ ತಿಂಗಳಲ್ಲಿ ಬಿಂದಗೆ ವಿನಯ್ ಎಂಬಾತನ ಪರಿಚಯವಾಗಿತ್ತು.
ಈ ವಿನಯ್ ಕೂಡ ಮಂಜುನಾಥ ನಗರದ ನಿವಾಸಿಯಾಗಿದ್ದರಿಂದ ಬಿಂದುಳ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಪ್ರೀತಿಗೆ ಮರಳು ಹೆಚ್ಚು ಸಮಯ ಬೇಕಾಗಿರಲಿಲ್ಲ. ಮೋಹನ್ ಕೃಷ್ಣರಾವ್ ಜೊತೆಯಲ್ಲಿದ್ರೂ ಬಿಂದು ಮನಸ್ಸು ಮಾತ್ರ ವಿನಯ್‌ನತ್ತ ಜಾರಿತ್ತು. ಇತ್ತ ವಿನಯ್ ಮತ್ತು ಬಿಂದು ನಡುವಿನ ಸಂಬಂಧ ಮೋಹನ್ ಕೃಷ್ಣರಾವ್‌ಗೂ ತಿಳಿದಿತ್ತು. ಇದೇ ವಿಷಯವಾಗಿ ಮನೆಯಲ್ಲಿ ಬಿಂದು ಜೊತೆ ಮೋಹನ್ ಜಗಳ ಮಾಡಲು ಶುರು ಮಾಡಿದ್ದನು.
ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಲು ಪ್ರಯತ್ನ
ಇದೇ ವಿಷಯವಾಗಿ ಫೆಬ್ರವರಿ 18ರ ರಾತ್ರಿ ಬಿಂದು ಮತ್ತು ಮೋಹನ್ ಕೃಷ್ಣರಾವ್ ಜೊತೆ ಜಗಳ ನಡೆದಿದೆ. ಮದ್ಯದ ನಶೆಯಲ್ಲಿದ್ದ ಮೋಹನ್ ಕೃಷ್ಣರಾವ್ ಬಲವಂತವಾಗಿ ಬಿಂದು ಜೊತೆ ಲೈಂ*ಗಿಕ ಸಂಪರ್ಕ ಬೆಳೆಸಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಬಿಂದು ಹೊಸ ಗೆಳೆಯ ವಿನಯ್‌ಗೆ ಕಾಲ್ ಮಾಡಿ ಕರೆಸಿಕೊಂಡಿದ್ದಾಳೆ. ವಿನಯ್ ಜೊತೆ ಧನುಷ್ ಸಹ ಬಂದಿದ್ದಾನೆ.
ಇದನ್ನೂ ಓದಿ: Mandya: ಲವ್ ಮ್ಯಾರೇಜ್‌ಗೆ ಸಹಾಯ; ಯುವತಿ ತಂದೆಯಿಂದ ಸೈಜ್ ಗಲ್ಲಿನಿಂದ ಕಾಲು ಜಜ್ಜಿ ಕ್ರೌರ್ಯ
ಮದ್ಯದ ಅಮಲಿನಲ್ಲಿ ಬೆತ್ತಲಾಗಿ ಕುಳಿತಿದ್ದ ಮೋಹನ್ ಕೃಷ್ಣರಾವ್ ಹಿಂಭಾಗದ ಮೇಲೆ ಚಾಕುವಿನಿಂದ ದಾಳಿ ನಡೆಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಮೋಹನ್ ಕೃಷ್ಣರಾವ್ ಕೂಗಾಟ ನಡೆಸುತ್ತಿದ್ದಂತೆ ಕೈಕಾಲು ಕಟ್ಟಿ ಬಾಯಿಗೆ ಟೇಪ್ ಸುತ್ತಿ ಚಾಕುವಿನಿಂದ ಹಾಗೂ ರಾಡ್ ನಿಂದ ಇರಿದು ಕೊಲೆ ಮಾಡಿದ್ದಾರೆ. ಮೋಹನ್ ಕೊಲೆ ಬಳಿಕ ಮೂವರು ಎಸ್ಕೇಪ್ ಆಗಿದ್ದರು. ಇದೀಗ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Mandya: ಎರಡು ಮಕ್ಕಳ ತಂದೆಯೊಂದಿಗೆ 19ರ ಯುವತಿ ಲವ್; ಮಗಳೊಂದಿಗೆ ನೇಣು ಬಿಗಿದುಕೊಂಡ ಅಮ್ಮ