Headlines

Suryakumar Yadav ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಭಾರತ ಪಾಕಿಸ್ತಾನ ಪಂದ್ಯದಲ್ಲಿ ಇರಲೇ ಇಲ್ಲ ಸ್ಲೆಡ್ಜಿಂಗ್ | India Pakistan T20 Watch Video Suryakumar Yadav Asked Teammates Not To Slege

Suryakumar Yadav ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಭಾರತ ಪಾಕಿಸ್ತಾನ ಪಂದ್ಯದಲ್ಲಿ ಇರಲೇ ಇಲ್ಲ ಸ್ಲೆಡ್ಜಿಂಗ್ | India Pakistan T20 Watch Video Suryakumar Yadav Asked Teammates Not To Slege



Suryakumar Yadav ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಭಾರತ ಪಾಕಿಸ್ತಾನ ಪಂದ್ಯದಲ್ಲಿ ಇರಲೇ ಇಲ್ಲ ಸ್ಲೆಡ್ಜಿಂಗ್ | India Pakistan T20 Watch Video Suryakumar Yadav Asked Teammates Not To Slege

ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಇದರ ಪರಿಣಾಮ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ರೋಚಕತೆ ಹೆಚ್ಚಿಸುವ ಸ್ಲೆಡ್ಜಿಂಗ್ ಇರಲೇ ಇಲ್ಲ. ಎಲ್ಲವು ಶಾಂತವಾಗಿತ್ತು. ಅಷ್ಟಕ್ಕೂ ಸೂರ್ಯಕುಮಾರ್ ವಾರ್ನಿಂಗ್ ಏನು? 

ಕೊಲಂಬೊ(ಫೆ.16) ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ, ಯಾವುದೇ ಕ್ರೀಡೆಯಾಗಿದ್ದದರೂ ಸರಿ ಅದು ರೋಚಕತೆ ಹೆಚ್ಚಿಸುತ್ತದೆ. ಆಟಗಾರರ ಸ್ಲೆಡ್ಜಿಂಗ್, ತಳ್ಳಾಟ, ನೂಕೂಟ ಇದ್ದೇ ಇರುತ್ತೆ. ಮಾತಿನ ಚಕಮಕಿ, ಸವಾಲು,ತಿರುಗೇಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಆದರೆ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಡೋ ಪಾಕ್ ಪಂದ್ಯದಲ್ಲಿ ಸ್ಲೆಡ್ಜಿಂಗ್ ಇರಲೇ ಇಲ್ಲ. ಪಾಕಿಸ್ತಾನ ಬ್ಯಾಟಿಂಗ್ ಮಾಡದೇ ಮಕಾಡೆ ಮಲಗಿತ್ತು. ಕನಿಷ್ಠ ಭಾರತ ಬ್ಯಾಟಿಂಗ್ ಮಾಡುವಾಗಲೂ ಶಾಂತವಾಗಿ ಪಂದ್ಯ ನಡೆದಿತ್ತು. ಇದರ ಹಿಂದೆ ಸೂರ್ಯಕುಮಾರ್ ಯಾದವ್ ಮಾಡಿದ ಪ್ಲಾನ್ ಇತ್ತು. ಈ ಕುರಿತ ವಿಡಿಯೋವನ್ನು ಬಿಸಿಸಿಐ ಬಹಿರಂಗಪಡಿಸಿದೆ.

ಮಾತಿನ ಚಕಮಕಿ ಬೇಡ, ಆಟದಿಂದಲೇ ಉತ್ತರ

ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸಹ ಆಟಗಾರರಿಗೆ ಮಹತ್ವದ ಸೂಚನೆ ನೀಡಿದ್ದರು. ನಮ್ಮ ಉತ್ತರ ಏನಿದ್ದರು ಅದು ಆಟದ ಮೂಲಕವೇ ಇರಬೇಕು. ಮಾತಿನ ಚಕಮಕಿ, ತಳ್ಳಾಟ ನೂಕಾಟ, ಸವಾಲುಗಳು ಬೇಡ ಎಂದು ಖಡಕ್ ಸೂಚನೆ ನೀಡಿದ್ದರು. ನಾವು ಪಾಕಿಸ್ತಾನವನ್ನು ಸ್ಲೆಡ್ಜಿಂಗ್‌ನಿಂದ ಎದುರಿಸುವ ಅವಶ್ಯಕತೆ, ಅನಿವಾರ್ಯತೆ ನಮಗಿಲ್ಲ. ನಮ್ಮ ಪರ್ಫಾಮೆನ್ಸ್ ಅದಕ್ಕಿಂತ ಸಾವಿರ ಪಟ್ಟು ಮೇಲಿದೆ. ನಮ್ಮ ಉತ್ತರ ಏನಿದ್ದರೂ ನಮ್ಮ ಗೇಮ್ ಮೂಲಕವೇ ಇರಬೇಕು, ಕೆಣಕಿದರೂ ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಸೂರ್ಯಕುಮಾರ್ ಯಾದವ್ ಖಡಕ್ ಸೂಚನೆಯನ್ನು ಟೀಂ ಇಂಡಿಯಾ ಆಟಗಾರರಿಗೆ ನೀಡಿದ್ದರು.

ಪಂದ್ಯದ ದೃಶ್ಯ, ಸೂರ್ಯಕುಮಾರ್ ಯಾದವ್ ಪೆಪ್ ಟಾಕ್ ಸೇರಿದಂತೆ ಇಂಡೋ ಪಾಕ್ ಪಂದ್ಯದ ಕೆಲ ತುಣುಕುಗಳನ್ನು ಬಿಸಿಸಿಐ ಪೋಸ್ಟ್ ಮಾಡಿದೆ. ಈ ಪೈಕಿ ಸೂರ್ಯಕುಮಾರ್ ಪೆಪ್ ಟಾಕ್ ಭಾರಿ ಮಹತ್ವ ಪಡೆದುಕೊಂಡಿದೆ. ಓವರ್‌ಗಳ ಮಧ್ಯೆ ಬೇಗ ಫೀಲ್ಡಿಂಗ್ ಪೊಸಿಷನ್‌ಗೆ ಹೋಗಿ. ಯಾರ ಜೊತೆನೂ ಮಾತಾಡೋಕೆ ನಿಲ್ಬೇಡಿ. ನಾವು ಒಳ್ಳೆ ಕ್ರಿಕೆಟ್ ಆಡಬೇಕು. ನಮ್ಮ ಆಟದಿಂದ, ಈ ಮ್ಯಾಚ್ ಗೆಲ್ಲೋಣ.” ಎಂದು ಸೂರ್ಯ ಹೇಳಿದ್ದಾರೆ. ಈ ಪಂದ್ಯಕ್ಕೂ ಮುನ್ನ, ಪಾಕಿಸ್ತಾನ ತಂಡವು ಟೂರ್ನಿಯಿಂದ ಹಿಂದೆ ಸರಿಯುವ ಬೆದರಿಕೆ ಹಾಕಿತ್ತು ಮತ್ತು ಭಾರತದ ‘ನೋ ಹ್ಯಾಂಡ್‌ಶೇಕ್ ಪಾಲಿಸಿ’ ಕೂಡ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ, ಮೈದಾನದಲ್ಲಿ ಯಾವುದೇ ಅನಗತ್ಯ ಗಲಾಟೆಗಳು ಆಗಬಾರದು ಎಂಬುದು ಸೂರ್ಯಕುಮಾರ್ ಯಾದವ್ ನಿಲುವಾಗಿತ್ತು.

ಇದೇ ವೇಳೆ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಪಾಕ್ ಆಟಗಾರ ಬಾಬರ್ ಅಜಮ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2022ರ ವಿಶ್ವಕಪ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿ ಆಡಿದ್ದ ಐತಿಹಾಸಿಕ ಇನ್ನಿಂಗ್ಸ್ ಅನ್ನು ಪಠಾಣ್ ಉಲ್ಲೇಖಿಸಿದರು. ”ಅಷ್ಟು ದೊಡ್ಡ ಒತ್ತಡದಲ್ಲಿ ಬಾಬರ್ ಎಂದಾದರೂ ಇಂಥದ್ದೊಂದು ಇನ್ನಿಂಗ್ಸ್ ಆಡಿದ್ದಾರಾ? ಎಷ್ಟು ಬಾರಿ ಅವರು ಒತ್ತಡವನ್ನು ಮೀರಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ?” ಎಂದು ಪಠಾಣ್ ಪ್ರಶ್ನಿಸಿದ್ದಾರೆ.ವಿಕೆಟ್‌ಗಳು ಸತತವಾಗಿ ಬೀಳುತ್ತಿದ್ದಾಗ, ಸಿಂಗಲ್ಸ್ ಮತ್ತು ಡಬಲ್ಸ್ ತೆಗೆದುಕೊಂಡು ಆಟವನ್ನು 15ನೇ ಓವರ್‌ವರೆಗೆ ಕೊಂಡೊಯ್ಯಬೇಕಿತ್ತು. ದೊಡ್ಡ ಹೊಡೆತಕ್ಕೆ ಯತ್ನಿಸುವ ಬದಲು, ಬಾಬರ್ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಬೇಕಿತ್ತು. ಸ್ಪಿನ್ನರ್‌ಗಳ ವಿರುದ್ಧ ಸ್ಟ್ರೈಕ್ ರೊಟೇಟ್ ಮಾಡಲು ಬಾಬರ್ ಕಷ್ಟಪಡುತ್ತಿದ್ದಾರೆ. ಭಾರತ 175 ರನ್ ಗಳಿಸಿದಾಗಲೇ ಪಂದ್ಯ ಪಾಕಿಸ್ತಾನದ ಕೈಯಿಂದ ಜಾರಿಹೋಗಿತ್ತು. ಪಾಕಿಸ್ತಾನದ ಬ್ಯಾಟಿಂಗ್ ಲೈನ್-ಅಪ್‌ಗೆ ಅಷ್ಟು ದೊಡ್ಡ ಗುರಿಯನ್ನು ಬೆನ್ನಟ್ಟುವ ಶಕ್ತಿ ಇಲ್ಲ ಎಂದಿದ್ದಾರೆ.



Source link

Leave a Reply

Your email address will not be published. Required fields are marked *