ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಲ್ಯಾಂಬೋರ್ಗಿನಿ ‘ಡ್ರಿಫ್ಟಿಂಗ್’, RC ಕ್ಯಾನ್ಸಲ್‌ಗೆ ಪೊಲೀಸ್‌ ನಿರ್ಧಾರ! | Bangalore Lamborghini Drifting Anil Kumble Circle Ka05nr0009 Police Fir Rc Cancel San

ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಲ್ಯಾಂಬೋರ್ಗಿನಿ ‘ಡ್ರಿಫ್ಟಿಂಗ್’, RC ಕ್ಯಾನ್ಸಲ್‌ಗೆ ಪೊಲೀಸ್‌ ನಿರ್ಧಾರ! | Bangalore Lamborghini Drifting Anil Kumble Circle Ka05nr0009 Police Fir Rc Cancel San



ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಲ್ಯಾಂಬೋರ್ಗಿನಿ ‘ಡ್ರಿಫ್ಟಿಂಗ್’, RC ಕ್ಯಾನ್ಸಲ್‌ಗೆ ಪೊಲೀಸ್‌ ನಿರ್ಧಾರ! | Bangalore Lamborghini Drifting Anil Kumble Circle Ka05nr0009 Police Fir Rc Cancel San

ಬೆಂಗಳೂರಿನ ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಲ್ಯಾಂಬೋರ್ಗಿನಿ ಕಾರು ಚಾಲಕನೊಬ್ಬ ಅಪಾಯಕಾರಿ ಡ್ರಿಫ್ಟಿಂಗ್ ಸ್ಟಂಟ್ ನಡೆಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಬೆಂಗಳೂರು (ಮಾ.21): ಸಿಲಿಕಾನ್ ಸಿಟಿಯ ರಸ್ತೆಗಳು ರಾತ್ರಿಯಾಗುತ್ತಲೇ ಐಷಾರಾಮಿ ಕಾರುಗಳ ರೇಸಿಂಗ್ ಮತ್ತು ಸ್ಟಂಟ್ ಅಖಾಡಗಳಾಗಿ ಮಾರ್ಪಡುತ್ತಿವೆ. ಇಂದು ಬೆಳಗಿನ ಜಾವ ನಗರದ ಹೃದಯಭಾಗವಾದ ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಐಷಾರಾಮಿ ಲ್ಯಾಂಬೋರ್ಗಿನಿ (Lamborghini) ಕಾರಿನಲ್ಲಿ ಅಪಾಯಕಾರಿ ರೀತಿಯಲ್ಲಿ ‘ಡ್ರಿಫ್ಟಿಂಗ್’ ಮಾಡಿ ಪುಂಡಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಇಂದು ಬೆಳಗಿನ ಜಾವ ಸುಮಾರು 2 ರಿಂದ 3 ಗಂಟೆಯ ಸಮಯದಲ್ಲಿ, KA05NR0009 ನೋಂದಣಿ ಸಂಖ್ಯೆಯ ಲ್ಯಾಂಬೋರ್ಗಿನಿ ಕಾರು ಚಾಲಕ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಸಾರ್ವಜನಿಕರ ಓಡಾಟದ ನಡುವೆಯೇ ಎರಡು-ಮೂರು ಬಾರಿ ಕಾರನ್ನು ರಸ್ತೆಯಲ್ಲೇ ಗಿರಗಿರನೆ ತಿರುಗಿಸಿ (ಡ್ರಿಫ್ಟಿಂಗ್) ಅಪಾಯಕಾರಿ ಸ್ಟಂಟ್ ಮಾಡಿದ್ದಾನೆ. ಸ್ಟಂಟ್ ಮಾಡಿದ ಬಳಿಕ ಚಾಲಕ ಅತೀ ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಸೋಶೀಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಫ್‌ಐಆರ್‌ ದಾಖಲಿಸಿದ ಪೊಲೀಸ್‌

ಈ ಘಟನೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಜಾಗರೂಕತೆ ಮತ್ತು ಅಪಾಯಕಾರಿ ಚಾಲನೆಯ ಮೂಲಕ ಸಾರ್ವಜನಿಕರ ಜೀವಕ್ಕೆ ತೊಂದರೆ ನೀಡಿದ ಆರೋಪದಡಿ ಕಾರು ಮಾಲೀಕನ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗದ ಸಂಚಾರ ಪ್ರಭಾರ ಡಿಸಿಪಿ ಸಾಹಿಲ್ ಬಾಗ್ಲಾ, ‘ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಡ್ರಿಫ್ಟಿಂಗ್ ಮಾಡಿರುವುದು ರೆಕಾರ್ಡ್ ಆಗಿದೆ. ಕಾರಿನ ಮಾಲೀಕ ಯಾರು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಬೆಂಗಳೂರಿನ ರಸ್ತೆಗಳಲ್ಲಿ ಈ ರೀತಿ ಸ್ಟಂಟ್ ಮಾಡಲು ಯಾರಿಗೂ ಅವಕಾಶವಿಲ್ಲ. ಇದು ಕಾನೂನುಬಾಹಿರ ಮತ್ತು ಅಪಾಯಕಾರಿ. ಆರೋಪಿಗಳನ್ನು ಪತ್ತೆ ಹಚ್ಚಿ ಕೇವಲ ದಂಡ ಮಾತ್ರವಲ್ಲದೆ, ಕಾರಿನ ಆರ್.ಸಿ (RC – Registration Certificate) ಕ್ಯಾನ್ಸಲ್ ಮಾಡಲು ಶಿಫಾರಸು ಮಾಡುತ್ತೇವೆ,” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಕಾರಿನ ಮಾಲೀಕರ ಬಗ್ಗೆ ಸಿಗದ ಮಾಹಿತಿ

ಕಾರ್‌ನ ನೋಂದಣಿ ಸಂಖ್ಯೆ ಸಿಕ್ಕ ಬೆನ್ನಲ್ಲಿಯೇ ಹಲವರು ಈ ಕಾರ್‌ನ ಮಾಲೀಕರು ಯಾರು ಅನ್ನೋದರ ಪರೀಕ್ಷೆ ಮಾಡಿದ್ದಾರೆ. ಹಲವು ವೆಬ್‌ಸೈಟ್‌ಗಳಲ್ಲಿ, ಬೆಂಗಳೂರು ಟ್ರಾಫಿಕ್‌ ಪೊಲೀಸರ ವೆಬ್‌ಸೈಟ್‌ನಲ್ಲಿ ಕಾರ್ನ್ ನೋಂದಣಿ ಸಂಖ್ಯೆ ಹಾಕಿ ಪರಿಶೀಲಿಸಿದ್ದು, ಎಲ್ಲಿಯೂ ಅದರ ಮಾಲೀಕರು ಯಾರು ಅನ್ನೋದ ಮಾಹಿತಿ ಸಿಕ್ಕಿಲ್ಲ. ಇದರ ನಡುವೆ ಕಾರ್‌ ಕರ್ನಾಟಕದಲ್ಲಿ ನೋಂದಣಿ ಆಗಿರುವುದೇ ಅನುಮಾನ. ಸುಳ್ಳು ನಂಬರ್‌ ಪ್ಲೇಟ್‌ ಹಾಕಿಕೊಂಡು ಓಡಾಡುತ್ತಿರಬಹುದು ಎಂದು ಜನ ಅಂದಾಜಿಸಿದ್ದಾರೆ.



Source link

Leave a Reply

Your email address will not be published. Required fields are marked *