ಈ ಹೊಟೇಲ್ ಉಳಿದ ಫುಡ್ ಬಳಸೋ ರೀತಿಗೆ ನೆಟ್ಟಿಗರು ಫುಲ್ ಖುಷ್, ಎಲ್ರೂ ಹಿಂಗ್ ಮಾಡಿದ್ರೆ ಬಡವರ ಹೊಟ್ಟೆ ತುಂಬುತ್ತೆ | Viral Video This Jaipur Hotel Wins Hearts Online For Distributing Leftover Food

ಈ ಹೊಟೇಲ್ ಉಳಿದ ಫುಡ್ ಬಳಸೋ ರೀತಿಗೆ ನೆಟ್ಟಿಗರು ಫುಲ್ ಖುಷ್, ಎಲ್ರೂ ಹಿಂಗ್ ಮಾಡಿದ್ರೆ ಬಡವರ ಹೊಟ್ಟೆ ತುಂಬುತ್ತೆ | Viral Video This Jaipur Hotel Wins Hearts Online For Distributing Leftover Food



ಈ ಹೊಟೇಲ್ ಉಳಿದ ಫುಡ್ ಬಳಸೋ ರೀತಿಗೆ ನೆಟ್ಟಿಗರು ಫುಲ್ ಖುಷ್, ಎಲ್ರೂ ಹಿಂಗ್ ಮಾಡಿದ್ರೆ ಬಡವರ ಹೊಟ್ಟೆ ತುಂಬುತ್ತೆ | Viral Video This Jaipur Hotel Wins Hearts Online For Distributing Leftover Food

ಹೊಟೇಲ್ ಗಳು ಮಿಕ್ಕ ಆಹಾರವನ್ನು ಕಸಕ್ಕೆ ಎಸೆಯೋದು ನೋಡಿದ್ರೆ ಹೊಟ್ಟೆ ಉರಿಯುತ್ತೆ. ಆಹಾರ ಇಲ್ದೆ ಜನ ಪರದಾಡ್ತಿದ್ದರೆ ಇನ್ನೊಂದು ಕಡೆ ಹೆಚ್ಚಾದ ಆಹಾರ ಕಸ ಸೇರ್ತಿದೆ. ಇದಕ್ಕೆ ಜೈಪುರ ಹೊಟೇಲ್ ಒಂದು ಪರಿಹಾರ ಕಂಡ್ಕೊಂಡಿದೆ. 

ಆಹಾರ ವ್ಯರ್ಥವಾಗೋದು ದೊಡ್ಡ ಸಮಸ್ಯೆಯಾಗಿದೆ. ಪ್ರತಿ ದಿನ ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಮಾತ್ರವಲ್ಲ ಮನೆಯಲ್ಲೂ ಒಂದಿಷ್ಟು ಆಹಾರ (Food)ವನ್ನು ಕಸಕ್ಕೆ ಹಾಕ್ತೇವೆ. ಮನೆಯಲ್ಲಿ ಎಷ್ಟೇ ಕಡಿಮೆ ಪ್ರಮಾಣದಲ್ಲಿ ಆಹಾರ ತಯಾರಿಸಿದ್ರೂ ಹೆಚ್ಚಾಗ್ಬಿಡುತ್ತೆ. ಇನ್ನು ಹೊಟೇಲ್ ಕಥೆ ಕೇಳ್ಬೇಕಾ? ಒಂದ್ಕಡೆ ಒಂದು ಹೊತ್ತಿನ ಊಟಕ್ಕೆ ಪರದಾಡುವ ಜನ ಇದ್ರೆ ಇನ್ನೊಂದು ಕಡೆ ರಾಶಿ ರಾಶಿ ಆಹಾರ ಕಸದ ಬುಟ್ಟಿ ಸೇರ್ತಿದೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಒಂದು ವೀಡಿಯೊ ವೈರಲ್ ಆಗಿದೆ. ಜೈಪುರದಲ್ಲಿಆಹಾರ ಹಾಳಾದಗಂತೆ ಒಂದು ಪರಿಹಾರ ಕಂಡ್ಕೊಳ್ಳಲಾಗಿದೆ.

ಗಮನ ಸೆಳೆದ ಹೊಟೇಲ್‌

@sachinnancyvlogs ಹೆಸರಿನ ಇನ್ಸ್ಟಾಗ್ರಾಮ್ (Instagram) ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅವರ ಸರಳ ಚಿಂತನೆ ಎಲ್ಲರ ಗಮನ ಸೆಳೆದಿದೆ. ಪ್ರತಿ ದಿನ ಹಾಳಾಗ್ತಿದ್ದ ಆಹಾರ ಇದ್ರಿಂದ ಉಳಿದಿದೆ. ಹೊಟೇಲ್ ನಲ್ಲಿ ಉಳಿದುಕೊಂಡಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋ ಮಾಡಿದ್ದಾರೆ. ನಾನು ಉಳಿದುಕೊಂಡಿದ್ದ ಜೈಪುರದ ಈ ಹೊಟೇಲ್ ನಲ್ಲಿ ಬೆಳಿಗ್ಗೆ ಉಪಹಾರ ವಿತರಿಸಲಾಗ್ತಿದೆ. ಭಾರತದಲ್ಲಿ ಯಾರೂ ಹಸುವಿನಿಂದ ಇರೋದಿಲ್ಲ ಎನ್ನುವ ಶೀರ್ಷಿಕೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.

ಹೋಟೆಲ್ ರೂಮ್ ನ ಕಿಟಕಿಯಿಂದ ವಿಡಿಯೋ ಶೂಟ್ ಮಾಡಲಾಗಿದೆ. ಹೋಟೆಲ್ ಸಿಬ್ಬಂದಿ ಬೀದಿಯಲ್ಲಿ ನಿಂತಿರುವುದನ್ನು ಕಾಣ್ಬಹುದು. ಸಮವಸ್ತ್ರ ಧರಿಸಿ, ದಾರಿಯಲ್ಲಿ ಹೋಗುವವರಿಗೆ ಆಹಾರ ಪ್ಯಾಕೆಟ್ ನೀಡ್ತಿದ್ದಾರೆ. ಡ್ರೈವರ್ ಗಳಿಂದ ಹಿಡಿದು ಸೈಕ್ಲಿಸ್ಟ್ಗಳು ಮತ್ತು ಪಾದಚಾರಿಗಳವರೆಗೆ ಎಲ್ಲರನ್ನೂ ನಿಲ್ಸಿ ಅವರಿಗೆ ಆಹಾರ ನೀಡ್ತಿದ್ದಾರೆ.

ಹಳೆ ಕಾಲ ನೆನಪಿಸುವ ಖುರ್ಚಿ, ರುಚಿಯಾದ ಆಹಾರ – ಬೆಂಗಳೂರಿನಲ್ಲಿದೆ ಮೈಸೂರು ಡೈನಿಂಗ್ ಹಾಲ್

ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಂತಹ ಉಪಾಯ. ಎಲ್ಲರೂ ಇದನ್ನು ಮಾಡಲು ಪ್ರಾರಂಭಿಸಿದರೆ, ಯಾರೂ ಹಸಿವಿನಿಂದ ಬಳಲುತ್ತಿರಲಿಲ್ಲ. ಇದು ಆಹಾರ ವ್ಯರ್ಥವನ್ನು ಹೇಗೆ ಕಡಿಮೆ ಮಾಡ್ಬಹುದು ಎಂಬುದನ್ನು ತೋರಿಸುತ್ತಿದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಕಾಮೆಂಟ್ಗಳಲ್ಲಿ, ಬಳಕೆದಾರರು ಹೋಟೆಲ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ದಿ ಫರ್ನ್ ಹ್ಯಾಬಿಟ್ಯಾಟ್ ಜೈಪುರ ಹೊಟೇಲ್ ಈ ರೀತಿ ಕೆಲ್ಸ ಮಾಡ್ತಿದೆ. ಹೊಟೇಲ್ ನಲ್ಲಿ ಬೆಳಿಗ್ಗೆ ಉಳಿದ ಆಹಾರವನ್ನು ಕಸಕ್ಕೆ ಹಾಕೋದಿಲ್ಲ. ಇಲ್ಲ ಮಧ್ಯಾಹ್ನ, ಸಂಜೆಗೆ ಕ್ಯಾರಿ ಮಾಡೋದಿಲ್ಲ. ಅದನ್ನು ದಾರಿಯಲ್ಲಿ ಓಡಾಡುವ ಜನರಿಗೆ ನೀಡಲಾಗುತ್ತದೆ.

ಬಟ್ಟೆ-ಟಿಶ್ಯೂ ಪೇಪರ್ ಏನೂ ಬೇಡ.. 2 ಚಮಚವಿದ್ದರೆ ಸಾಕು ಒಂದೂ ಚಪಾತಿಯೂ ಒದ್ದೆಯಾಗಲ್ಲ, ಅಂಟಲ್ಲ

ಬಳಕೆದಾರರು ಹೊಟೇಲ್ ಮಾಲೀಕರನ್ನು ಹೊಗಳಿದ್ದಾರೆ. ಹೋಟೆಲ್ ಮಾಲೀಕರು ಜೀವನದಲ್ಲಿ ನಿಜವಾಗಿಯೂ ಸಕ್ಸಸ್ ಕಂಡಿದ್ದಾರೆ ಎಂದು ಬಳಕೆದಾರರು ಬರೆದಿದ್ದಾರೆ. ಪ್ರತಿಯೊಬ್ಬ ಹೊಟೇಲ್ ಮಾಲೀಕರು, ಪಾರ್ಟಿ ನಡೆಸುವವರು ಈ ಕೆಲ್ಸ ಮಾಡ್ಬೇಕು ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಅನೇಕ ಬಳಕೆದಾರ ಮೇಲೆ ಈ ವಿಡಿಯೋ ಪ್ರಭಾವ ಬೀರಿದೆ. ಜೈಪುರಕ್ಕೆ ಹೋದ್ರೆ ಇದೇ ಹೊಟೇಲ್ ನಲ್ಲಿ ಉಳಿದುಕೊಳ್ತೇವೆ ಅಂತ ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಸರಳ ವಿಚಾರ, ಸ್ವಲ್ಪ ಪ್ರಯತ್ನ ಅರ್ಥಪೂರ್ಣ ವ್ಯತ್ಯಾಸವನ್ನುಂಟುಮಾಡುತ್ತದೆ . ಆಹಾರ ವ್ಯರ್ಥವನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಇದು ಉತ್ತಮ ನಿದರ್ಶನ.



Source link

Leave a Reply

Your email address will not be published. Required fields are marked *