
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಟೋ ಚಾಲಕಿ ಪಕ್ಕದಲ್ಲೊಂದು ಪುಟಾಣಿ ಸೀಟ್ ಇದೆ. ಮೂರು ವರ್ಷದ ಮಗುವೊಂದು ಇಡೀ ದಿನ ಅಮ್ಮನ ಜೊತೆ ಕುಳಿತು ಆಟೋ ಪ್ರಯಾಣ ಬೆಳೆಸ್ತಾಳೆ. ಕಾರಣ ಏನು ಗೊತ್ತಾ?
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಡಿಯೋಗಳು ಹೃದಯವನ್ನು ಭಾರಗೊಳಿಸುತ್ತೆ. ಕಣ್ಣಂಚಲ್ಲಿ ನೀರು ತುಂಬಿಸುತ್ತೆ. ಕೆಲ ದಿನಗಳ ಹಿಂದೆ ಆಟೋ ಚಾಲಕನೊಬ್ಬ ತನ್ನ ಮಗಳನ್ನು ಆಟೋ ಹಿಂದೆ ಮಲಗಿಸಿ ಆಟೋ ಚಾಲನೆ ಮಾಡ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಚಾಲಕಿ ವಿಡಿಯೋ ವೈರಲ್ ಆಗಿದೆ. ಮಗಳ ಭವಿಷ್ಯಕ್ಕಾಗಿ ಆಟೋ ಏರಿರುವ ಮಹಿಳೆ, ಮಗಳ ರಕ್ಷಣೆ ಹೊಣೆಯನ್ನೂ ಹೊತ್ತಿದ್ದಾರೆ.
ಹೋರಾಟದ ಕಥೆ
ಪ್ರತಿಯೊಬ್ಬ ಆಟೋ ಚಾಲಕಿಯರ ಹಿಂದೊಂದು ಹೋರಾಟದ ಕಥೆ ಇರುತ್ತೆ. ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಚಾಲಕಿ ಕಥೆ ಕೂಡ ಭಿನ್ನವಾಗಿಲ್ಲ. ಈ ಆಟೋ ಚಾಲಕಿ ಹೆಸರು ಕೋಮಲ್ ಗಾಯಕ್ವಾಡ್. ಪರ್ಭಾನಿಯಲ್ಲಿ ಜನಿಸಿದ್ದ ಕೋಮಲ್ ಕನಸು ದೊಡ್ಡದಾಗಿರ್ಲಿಲ್ಲ. ಉತ್ತಮ ವಿದ್ಯಾಭ್ಯಾಸ, ಒಂದು ಕೆಲ್ಸ, ಗಂಡ – ಮಕ್ಕಳ ಜೊತೆ ಜೀವನ ನಡೆಸುವ ಕನಸು ಕಂಡಿದ್ರು. ಆದ್ರೆ ಆರಂಭದಲ್ಲಿಯೇ ಅವರ ಕನಸಿಗೆ ವಿಘ್ನವಾಗಿತ್ತು. ಆರ್ಥಿಕ ಸಮಸ್ಯೆ ಕಾರಣಕ್ಕೆ 10ನೇ ತರಗತಿ ಮುಗಿಸಿ ಕೋಮಲ್ ಮನೆಯಲ್ಲಿ ಉಳಿಯಬೇಕಾಯ್ತು. ಮನೆಯವರ ಸೂಚನೆಯಂತೆ ಮದುವೆ ಕೂಡ ಆದ್ರು. ಮದುವೆ ಆದ್ಮೇಲೆ ಕೋಮಲ್ 2018ರಲ್ಲಿ ಕಲ್ಯಾಣ್ ಗೆ ಬಂದ್ರು. 2022ರಲ್ಲಿ ಅವರಿ ಮಡಿಲಿಗೆ ಮಗು ಬಂದಿತ್ತು. ತೇಜು ಅಂತ ಕೋಮಲ್ ನಾಮಕರಣ ಮಾಡಿದ್ರು. ಆದ್ರೆ ಮಗಳಿಗೆ 18 ತಿಂಗಳಾಗ್ತಿದ್ದಂತೆ ಎಲ್ಲ ಬದಲಾಗಿತ್ತು.
ಭಾರತದ Gen Z ಹುಡುಗಿಯರಿಗೆ ಮದುವೆಗಿಂತ ಸೋಲೋ ಟ್ರಿಪ್, ನೆಮ್ಮದಿ ಮುಖ್ಯ! ಆದ್ರೆ, ಒಂದು ಗಿಲ್ಟ್ ಭಾರೀ ಕಾಡುತ್ತಂತೆ!
ಪರ್ಭಾನಿಗೆ ಹೋಗಿ ಬರ್ತೇನೆ ಎಂದಿದ್ದ ಗಂಡ ವಾರ, ತಿಂಗಳಾದ್ರೂ ಮನೆಗೆ ಬರಲಿಲ್ಲ. ಒಂದೊಂದೇ ನೆಪ ಹೇಳಿ ಮನೆಗೆ ಬರೋದನ್ನು ಗಂಡ ಬಿಟ್ಟಿದ್ದ. ಕೋಮಲ್ ಗೆ ಜೀವನ ಕಷ್ಟವಾಗಿತ್ತು. ಮಗಳ ಜವಾಬ್ದಾರಿ ಹೆಗಲ ಮೇಲಿತ್ತು. ಮಗಳಿಗಾಗಿ ದುಡಿಮೆ ಅನಿವಾರ್ಯವಾಯ್ತು. ಕೋಮಲ್, ಸೆಕ್ಯೂರಿಟಿ ಗಾರ್ಡ್ ಆಗಿ ಕೆಲ್ಸಕ್ಕೆ ಸೇರಿಕೊಂಡರು. ಆದ್ರೆ ತೇಜುಳನ್ನು ಮನೆಯಲ್ಲೇ ಬಿಟ್ಟು ಹೋಗ್ಬೇಕಾಗಿತ್ತು. ಆಗ ಕೋಮಲ್ ಆಟೋ ಓಡಿಸುವ ಮಹತ್ವದ ನಿರ್ಧಾರ ತೆಗೆದುಕೊಂಡ್ರು.
ನಗರದಲ್ಲಿ ಅನೇಕ ಮಹಿಳೆಯರು ಆಟೋ ಓಡಿಸೋದನ್ನು ನೋಡಿದ್ದ ಕೋಮಲ್, ಬಾಡಿಗೆಗೆ ಆಟೋ ಪಡೆದ್ರು. ಮಗಳನ್ನು ಹಿಂದೆ ಮಲಗಿಸಿಕೊಂಡು ಆಟೋ ಓಡಿಸ್ತಿದ್ರು ಕೋಮಲ್. ಮಗಳು ದೊಡ್ಡವಳಾಗ್ತಿದ್ದಂತೆ ಅದು ಅಸಾಧ್ಯವಾಯ್ತು. ಹಾಗಾಗಿ ತಮ್ಮ ಪಕ್ಕದಲ್ಲೇ ಒಂದು ಚಿಕ್ಕ ಸೀಟ್ ಸಿದ್ಧಪಡಿಸಿದ ಕೋಮಲ್, ಮಗಳ ಜೊತೆ ಆಟೋ ಓಡಿಸ್ತಾರೆ.
ಎಲ್ಲ ಮಕ್ಕಳು ಬೆಳಿಗ್ಗೆ 6.30ಕ್ಕೆ ಗಾಢ ನಿದ್ರೆಯಲ್ಲಿದ್ರೆ ತೇಜು ಮಾತ್ರ ಅಮ್ಮನ ಜೊತೆ ಆಟೋ ಹತ್ತಿರ್ತಾಳೆ. ಇಡೀ ದಿನ ಆಟೋದಲ್ಲಿ ಕುಳಿತುಕೊಳ್ತಾಳೆ. ತಿಂಡಿಯಿಂದ ಹಿಡಿದು ನಿದ್ರೆಯವರೆಗೆ ಎಲ್ಲವೂ ಆಟೋದಲ್ಲಿಯೇ ನಡೆಯುತ್ತೆ. ಕೋಮಲ್ ದಿನಕ್ಕೆ 400- 500 ರೂಪಾಯಿ ಸಂಪಾದನೆ ಮಾಡ್ತಾರೆ. ಆದ್ರೆ ಮನೆ ಬಾಡಿಗೆ, ದಿನಸಿಗೆ ಎಲ್ಲ ಖರ್ಚಾಗ್ತಿದೆ. ಮಗಳ ಭವಿಷ್ಯಕ್ಕಾಗಿ ಸಣ್ಣ ಮೊತ್ತವನ್ನು ಕೂಡಿಡುವ ಪ್ರಯತ್ನ ಮಾಡ್ತಿದ್ದಾರೆ ಕೋಮಲ್.
ಮದುವೆಗೆ ಸಂಬಳ, ಆಸ್ತಿ, ಅಂದ-ಚೆಂದ ಬೇಡ; ಆ ರೀತಿ ಇದ್ರೆ ಕಾಂಟ್ಯಾಕ್ಟ್ ಮಾಡಿ; ಹುಡುಗಿ ಡಿಮ್ಯಾಂಡ್ಗೆ ದಂಗಾದ ಜನರು
ಸ್ವಂತ ರಿಕ್ಷಾ ಖರೀದಿ
ಕೋಮಲ್ ಪರಿಶ್ರಮಕ್ಕೆ ಫಲ ಸಿಗ್ತಿದೆ. ಐದು ತಿಂಗಳ ಹಿಂದೆ ಇಎಂಐ ಮೂಲಕ ಕೋಮಲ್ ರಿಕ್ಷಾ ಖರೀದಿಸಿದ್ದಾರೆ. ಒಂದು ದಿನ ಆಟೋ ಮೇಲೆ ಕುಳಿತಿದ್ದ ತಾಯಿ, ಮಗಳ ರೀಲ್ ಪೋಸ್ಟ್ ಮಾಡಿದ್ದರು ಕೋಮಲ್. ಅದು ವೇಗವಾಗಿ ವೈರಲ್ ಆಗಿತ್ತು. ನೆಟ್ಟಿಗರು ಇದನ್ನು ಮೆಚ್ಚಿದ್ದರು. ಅಲ್ಲಿಂದ ಕೋಮಲ್ ರಿಕ್ಷಾ ಓಡಿಸೋದು ಮಾತ್ರವಲ್ಲ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಜೀವನದ ಸಣ್ಣ ಸಣ್ಣ ಘಟನೆಗಳನ್ನು ವಿಡಿಯೋ ಮಾಡಿ ಪೋಸ್ಟ್ ಮಾಡ್ತಿದ್ದಾರೆ.