Headlines

Road ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಹೊಟ್ಟೆ ಉರಿದುಕೊಳ್ತಿದ್ದಾರೆ ಬೆಂಗಳೂರಿಗರು | No Patholes In Jm Road Pune Last 50 Years People Urge Same Quality In Bengaluru

Road ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಹೊಟ್ಟೆ ಉರಿದುಕೊಳ್ತಿದ್ದಾರೆ ಬೆಂಗಳೂರಿಗರು | No Patholes In Jm Road Pune Last 50 Years People Urge Same Quality In Bengaluru



Road ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಹೊಟ್ಟೆ ಉರಿದುಕೊಳ್ತಿದ್ದಾರೆ ಬೆಂಗಳೂರಿಗರು | No Patholes In Jm Road Pune Last 50 Years People Urge Same Quality In Bengaluru

ಭಾರತದ ಈ ಸಿಟಿ ರಸ್ತೆಯಲ್ಲಿ 50 ವರ್ಷದಿಂದ ಗುಂಡಿಯೇ ಇಲ್ಲ, ಈ ರಸ್ತೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಬೆಂಗಳೂರಿಗರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ರಸ್ತೆ ಮಾಡಿಸಿದ ನಾಯಕ, ಕಾಂಟ್ರಾಕ್ಟರ್ ಕರೆಸಿ ಇಲ್ಲಿ ರಸ್ತೆ ಮಾಡಿಸಿ ಎಂದು ಸಲಹೆ ನೀಡುತ್ತಿದ್ದಾರೆ. 

ಬೆಂಗಳೂರು (ಫೆ.01) ಗುಂಡಿ ಬಿದ್ದ ರಸ್ತೆ ದೇಶದ ಎಲ್ಲಾ ಕಡೆ ಇದೆ. ಆದರೆ ಬೆಂಗಳೂರಲ್ಲಿ ತುಸು ಹೆಚ್ಚಿದೆ. ಗುಂಡಿ ಬಿದ್ದ ರಸ್ತೆಗಳಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಕಾಡಿ ಬೇಡಿ ರಸ್ತೆ ಸರಿಮಾಡಿಸಿದರೂ ನಾಲ್ಕು ತಿಂಗಳು ಸರಿಯಾಗಿರುತ್ತೆ ಅನ್ನೋ ಗ್ಯಾರೆಂಟಿಯೂ ಇಲ್ಲ. ಇದರ ನಡುವೆ ಬೆಂಗಳೂರಿಗರು ಹೊಟ್ಟೆ ಉರಿದುಕೊಳ್ಳುವಂತ ರಸ್ತೆ ಭಾರಿ ಸದ್ದು ಮಾಡುತ್ತಿದೆ. ಭಾರತದ ಈ ನಗರದಲ್ಲಿರುವ ರಸ್ತೆ ಬರೋಬ್ಬರಿ 50 ವರ್ಷದಿಂದ ಒಂದೇ ಒಂದು ಗುಂಡಿ ಬಿದ್ದಿಲ್ಲ. ರಸ್ತೆ ಎಲ್ಲೂ ಹಾಳಾಗಿಲ್ಲ. ಹೊಸ ರಸ್ತೆಯಿಂದ ಹೊಳೆಯುತ್ತಿದೆ. ಈ ರಸ್ತೆ ಇರುವುದು ಪಣೆ ನಗರದಲ್ಲಿ.ಪುಣೆಯ ಜೆಎಂ ರಸ್ತೆ ದಾಖಲೆ ಬರೆದಿದೆ.

ಜಂಗ್ಲಿ ಮಹಾರಾಜ ರಸ್ತೆ ದಾಖಲೆ

ಪುಣೆಯ ಜಂಗ್ಲಿ ಮಹಾರಾಜ ರಸ್ತೆ ಹಲವು ದಾಖಲೆ ಬರೆದಿದೆ. ಇದು ಎಂಜಿನೀಯರ್ಸ್ ಹಾಗೂ ಕಾಂಟ್ರಾಕ್ಟರ್ಸ್ ಯಾವುದೇ ಕಮಿಷನ್ ಇಲ್ಲದೆ, ಭ್ರಷ್ಟಾಚಾರ ರಹಿತವಾಗಿ ನಿರ್ಮಿಸಿದ ರಸ್ತೆ. ಇದೇ ಕಾರಣದಿಂದ ರಸ್ತೆ ಈಗಲೂ ಯಾವುದೇ ಸಮಸ್ಯೆ ಇಲ್ಲದೆ ರಸ್ತೆ ಸಂಪರ್ಕ ನೀಡುತ್ತಿದೆ. 1976ರಲ್ಲಿ ಪುಣೆಯ ಜಂಗ್ಲಿ ಮಹರಾಜ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಇದು ಪುಣೆಯ ಪ್ರಮುಖ ರಸ್ತೆ. ಇದೇ ಕಾರಣಕ್ಕೆ 70ರ ದಶಕದಲ್ಲೇ ಡಾಂಬರು ಹಾಕಲಾಗಿದೆ. ಭಾರಿ ಘನವಾಹಗಳು, ಇತರ ವಾಹನಗಳು ಪ್ರತಿ ದಿನ ಸಂಚಾರ ಮಾಡುತ್ತದೆ. ಆದರೆ ರಸ್ತೆ ಅಷ್ಟೇ ಉತ್ತಮವಾಗಿದೆ. ಒಂದೇ ಒಂದು ಗುಂಡಿ ಬಿದ್ದಿಲ್ಲ.

2014ರಲ್ಲಿ ಮರು ಡಾಂಬರೀಕರಣ

2014ರಲ್ಲಿ ಪುಣೆಯ ಕೆಲ ರಸ್ತೆಗಳ ಡಾಂಬರೀಕರಣ ಮಾಡಲಾಗಿತ್ತು. ಈ ವೇಳೆ ಜೆಎಂ ರಸ್ತೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅಕ್ಕ ಪಕ್ಕದ ರಸ್ತೆಗಳು ಡಾಂಬರೀಕರಣ ಮಾಡಿರುವ ಕಾರಣ, ಜೆಎಂ ರಸ್ತೆಗೂ ಮಾಡಲಾಗಿತ್ತು. ಜೆಎಂ ರಸ್ತೆಯಲ್ಲಿ ಯಾವುದೇ ಗುಂಡಿ, ಸಮಸ್ಯೆ ಇಲ್ಲದಿದ್ದರೂ ಡಾಂಬರೀಕರಣ ಮಾಡಲಾಗಿತ್ತು.

ಜೆಎಂ ರಸ್ತೆ ಕುರಿತು ಸ್ಥಳೀಯರ ಹಲವು ನೆನಪು ಬಿಚ್ಚಿಟ್ಟಿದ್ದಾರೆ. ಡಾಂಬರೇ ಕಾಣದ ಸಮಯದಲ್ಲಲಿ ಜೆಎಂ ರಸ್ತೆ ಡಾಂಬರು ಕಂಡಿತ್ತು. ಉತ್ತಮ ರಸ್ತೆ ನಿರ್ಮಾಣ ಮಾಡಲಾಗಿತ್ತು. ಇದಾದ ಬಳಿಕ ಹಲವು ರಸ್ತೆಗಳು ಡಾಂಬರು ಮಾಡಲಾಗಿದೆ. ಆದರೆ ಕೆಲವೇ ವರ್ಷದಲ್ಲಿ ಸಂಪೂರ್ಣ ಹಾಳಾಗಿದೆ. ಆದರೆ ಜೆಎಂ ರಸ್ತೆ ಯಾವುದೇ ಸಮಸ್ಯೆ ಇಲ್ಲದೆ ಸಾಗುತ್ತಿದೆ ಎಂದು 70 ವರ್ಷದ ಉಪೇಂದ್ರ ಲಕ್ಷ್ಮೇಶ್ವರ್ ಹೇಳಿದ್ದಾರೆ. ದಶಕಗಳ ಹಿಂದೆ ಹೆಚ್ಚು ವಾಹನಗಳಿಲ್ಲದ ಸಂದರ್ಭದಲ್ಲಿ 130ರ ವೇಗದಲ್ಲಿ ಈ ರಸ್ತೆಯಲ್ಲಿ ಸಾಗಿದ್ದೇನೆ ಎಂದು ಲಕ್ಷ್ಮೇಶ್ವರ್ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *