Headlines

ಹುಬ್ಬಳ್ಳಿ ಕೇಸ್ ಬಳಿಕ ಎಚ್ಚೆತ್ತ ಪೊಲೀಸ್; ಲವ್ ಜಿಹಾದ್‌ಗಳ ಅಡ್ಡೆ ಆಗ್ತಿರೋ ಜಿಮ್‌ಗಳ ಮೇಲೆ ಖಾಕಿ ಕಣ್ಣು | In Light Of The Ongoing Incidents At Gyms In Hubballi Dharwad What Are The Criteria For Becoming A Gym Trainer Mrq

ಹುಬ್ಬಳ್ಳಿ ಕೇಸ್ ಬಳಿಕ ಎಚ್ಚೆತ್ತ ಪೊಲೀಸ್; ಲವ್ ಜಿಹಾದ್‌ಗಳ ಅಡ್ಡೆ ಆಗ್ತಿರೋ ಜಿಮ್‌ಗಳ ಮೇಲೆ ಖಾಕಿ ಕಣ್ಣು | In Light Of The Ongoing Incidents At Gyms In Hubballi Dharwad What Are The Criteria For Becoming A Gym Trainer Mrq



ಹುಬ್ಬಳ್ಳಿ ಕೇಸ್ ಬಳಿಕ ಎಚ್ಚೆತ್ತ ಪೊಲೀಸ್; ಲವ್ ಜಿಹಾದ್‌ಗಳ ಅಡ್ಡೆ ಆಗ್ತಿರೋ ಜಿಮ್‌ಗಳ ಮೇಲೆ ಖಾಕಿ ಕಣ್ಣು | In Light Of The Ongoing Incidents At Gyms In Hubballi Dharwad What Are The Criteria For Becoming A Gym Trainer Mrq

ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಜಿಮ್ ಟ್ರೇನರ್‌ಗಳಿಂದ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದಾಗಿ ಪೊಲೀಸರು ಜಿಮ್‌ಗಳ ಮೇಲೆ ಗುಮಾನಿ ವ್ಯಕ್ತಪಡಿಸಿದ್ದಾರೆ. ಈ ಘಟನೆಗಳು ಜಿಮ್‌ಗಳ ಸುರಕ್ಷತೆ, ತರಬೇತುದಾರರ ಅರ್ಹತೆ ಮತ್ತು ಅವುಗಳ ಪರವಾನಗಿ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. 

ಶಿವಾನಂದ ಗೊಂಬಿ

ಹುಬ್ಬಳ್ಳಿ: ಅಲ್ಪ ಅವಧಿಯಲ್ಲಿ ಎರಡು ಲೈಂಗಿಕ ದೈರ್ಜನ್ಯದ ಪ್ರಕರಣಗಳು ಬೆಳಕಿಗೆ ಬಂದು ಜಿಮ್‌ ಟ್ರೇನರ್‌ಗಳ ಸುತ್ತ ಗಿರಕಿ ಹೊಡೆಯುತ್ತಿದ್ದರಿಂದ ಪೊಲೀಸರಿಗೆ ಈಗ ಜಿಮ್‌ಗಳ ಮೇಲೆ ಗುಮಾನಿ ಶುರುವಾಗಿದೆ! ಹುಬ್ಬಳ್ಳಿ-ಧಾರವಾಡದಲ್ಲಿ ಜಿಮ್‌ಗಳಲ್ಲಿ ನಡೆದ, ನಡೆಯುತ್ತಿರುವ ಪ್ರಕರಣಗಳಿಂದಾಗಿ ಜಿಮ್‌ ಟ್ರೇನರ್‌ಗಳಾಗಲು ಇರುವ ಮಾನದಂಡಗಳೇನು? ಅವುಗಳನ್ನು ಎಲ್ಲ ಜಿಮ್‌ ಪಾಲಿಸುತ್ತಿವೆಯೇ? ಎಂಬ ಪ್ರಶ್ನೆಯೂ ಹುಟ್ಟುಕೊಂಡಿದೆ.

ಆಗಿರುವುದೇನು?

ಕಳೆದ 15 ದಿನಗಳಿಂದ ಜಿಮ್ ಟ್ರೇನರ್‌ಗಳ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಧಾರವಾಡದಲ್ಲಿ ಜಿಮ್‌ ಟ್ರೇನರ್‌ಯೊಬ್ಬ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿ ಬಂದು ದೂರು ಸಹ ದಾಖಲಾಗಿತ್ತು. ಇದಾಗಿ ಎರಡ್ಮೂರು ದಿನದಲ್ಲಿಯೇ ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಸದ್ದು ಮಾಡಿತು. ಘಟನೆಗೆ ಸಂಬಂಧಿಸಿದಂತೆ ಜಿಮ್‌ ಟ್ರೈನರ್‌ ಹಾಗೂ ಯುವತಿ ಕುಟುಂಬದ ನಡುವೆ ಮಾರಾಮಾರಿ ನಡೆಯಿತು. ಬಳಿಕ ಆರೋಪಿ ಜೈಲು ಪಾಲಾಗಿದ್ದಾನೆ. ಇದರ ಮರುದಿನವೇ ಮತ್ತೊಂದು ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇರೆಗೆ ಮತ್ತೊಮ್ಮ ಜೈಲು ಪಾಲಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಎರಡು ದಿನದಲ್ಲಿ ಮೂರು ಹೇಳಿಕೆ ಬದಲಾಯಿಸಿದ್ದಾಳೆ. ಈ ಎಲ್ಲ ಘಟನೆಯಿಂದ ಅವಳಿ ನಗರದ ಜಿಮ್‌ಗಳನ್ನು ನಾಗರಿಕರು ಸಂಶಯದಿಂದ ನೋಡುವಂತೆ ಮಾಡಿವೆ.

ಜಿಮ್‌ ಎಷ್ಟು ಸುರಕ್ಷಿತ?

ಆರೋಗ್ಯ ಕಾಳಜಿಗಾಗಿ ಇತ್ತೀಚಿಗೆ ಜಿಮ್‌ ಸೇರುವುದು ಸಾಮಾನ್ಯವಾಗಿದೆ. ಅಲ್ಲಿಗೆ ಹೋಗುವ ಮಹಿಳೆಯರು ಎಷ್ಟು ಸುರಕ್ಷಿತ? ಎಷ್ಟು ಜಿಮ್‌ ಪರವಾನಗಿ ಪಡೆದು ನಡೆಯುತ್ತಿವೆ? ಟ್ರೈನರ್‌ಗಳಾಲು ಯಾವ ಅರ್ಹತೆ ಬೇಕು? ಇದನ್ನು ಇಲಾಖೆ ಪರಿಶೀಲಿಸುತ್ತಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಮಹಾನಗರದಲ್ಲಿ 150ಕ್ಕೂ ಹೆಚ್ಚು ಜಿಮ್‌ಗಳಿದ್ದು, ಈ ಪೈಕಿ 50 ಬಾಡಿ ಬಿಲ್ಡರ್‌ ಅಸೋಸಿಯೇಷನ್‌ ಸದಸ್ಯತ್ವ ಪಡೆದಿವೆ. ಉಳಿದವು ಖಾಸಗಿ, ಹೈಟೆಕ್‌ ಜಿಮ್‌ಗಳಾಗಿವೆ. ಜಿಮ್‌ ತೆರೆಯಲು ಪಾಲಿಕೆ, ಪೊಲೀಸ್‌, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಇವುಗಳಲ್ಲಿ ಎಷ್ಟು ಜಿಮ್‌ ಅನುಮತಿ ಪಡೆದಿವೆ ಎಂಬುದೇ ಇದೀಗ ಯಕ್ಷಪ್ರಶ್ನೆ.

ಟ್ರೇನರ್‌ ಅರ್ಹತೆ ಏನು?

ಜಿಮ್‌ ಟ್ರೇನರ್‌ ಆಗಬೇಕೆಂದರೆ ಕೆ- 11 ಫಿಟ್‌ನೆಸ್‌ ಅಕಾಡೆಮಿ, ಐಎಫ್‌ಎಸ್‌ಐ (Integrated Fitness & Sports Institute), ಐಜಿಎಂಪಿಐ (Centre for Nutrition and Dietetics Studies) ಸೇರಿ ವಿವಿಧ ಸಂಘ ಸಂಸ್ಥೆಗಳು ನೀಡುವ ತರಬೇತಿ ಪಡೆದು ಸರ್ಟಿಫಿಕೆಟ್‌ ಪಡೆದುಕೊಳ್ಳಬೇಕು. ಇಲ್ಲವೇ ಬಾಡಿ ಬಿಲ್ಡಿಂಗ್‌ ಅಸೋಸಿಯೇಷನ್‌ನಲ್ಲಿ ತರಬೇತಿ ಪಡೆದು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು ಎಂಬುದು ನಿಯಮ.

ಆದರೆ, ಇತ್ತೀಚಿಗೆ ಕೆಲವೊಂದಿಷ್ಟು ಸಂಘ-ಸಂಸ್ಥೆಗಳು ಆನ್‌ಲೈನ್‌ ಮೂಲಕವೇ ತರಬೇತಿ ಕೊಟ್ಟು ಸರ್ಟಿಫಿಕೆಟ್‌ ಕೊಡುತ್ತಿವೆ. ಈ ರೀತಿ ಆನ್‌ಲೈನ್‌ ತರಬೇತಿ ಪಡೆದು ಸರ್ಟಿಫಿಕೆಟ್‌ ಪಡೆದ ತರಬೇತಿದಾರರೇ ಹೆಚ್ಚಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ಇಂಥವರಿಗೆ ಮಾಹಿತಿಯೂ ಇರುವುದಿಲ್ಲ ಎಂಬುದು ಬಾಡಿ ಬಿಲ್ಡರ್‌ ಅಸೋಸಿಯೇಷನ್‌ನ ಆರೋಪ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬೆಳಗ್ಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದಿದ್ದ ಯುವತಿಯೇ ರಾತ್ರಿ ಉಲ್ಟಾ!

ಇನ್ನಾದರೂ ಜಿಮ್‌ಗಳ ಪೊಲೀಸ್‌, ಪಾಲಿಕೆ, ಅಗ್ನಿ ಶಾಮಕ ದಳ, ಕಾರ್ಮಿಕ ಇಲಾಖೆ ಪರಿಶೀಲಿಸಿ ಅನಧಿಕೃತ ಜಿಮ್‌ ಮುಚ್ಚಬೇಕು. ಅರ್ಹತೆ ಇಲ್ಲದ ಟ್ರೇನರ್‌ ಹಾಗೂ ಆ ಜಿಮ್‌ ಮಾಲೀಕರ ಮೇಲೆ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರದ್ದು.

ಬಹುತೇಕ ಟ್ರೇನರ್‌ಗಳು ಆನ್‌ಲೈನ್‌ನಲ್ಲಿ ತರಬೇತಿ ಪಡೆದು ಟ್ರೇನರ್‌ಗಳಾಗಿದ್ದಾರೆ. ಇಂಥವರಿಂದ ಸರಿಯಾದ ತರಬೇತಿ ನಿರೀಕ್ಷಿಸುವುದು ಅಸಾಧ್ಯ. ಈ ಬಗ್ಗೆ ಪೊಲೀಸ್‌ ಇಲಾಖೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಬಾಡಿ ಬಿಲ್ಡರ್‌ ಅಸೋಸಿಯೇಷನ್‌ನ ಖಜಾಂಚಿ ಕೃಷ್ಣ ಚಿಕ್ಕತುಂಬಳ ಹೇಳಿದ್ದಾರೆ.

ಇದನ್ನೂ ಓದಿ: Love Jihadಗೆ ಹೊಸ ರೂಪ ಕೊಟ್ಟ ಸಮೀರ್ ಫ್ಯಾಮಿಲಿ! ಡೌಟೇ ಬರದಂತೆ ಮನೆಯಲ್ಲಿ ಹಿಂದೂ ದೇವರ ಪೂಜೆ



Source link

Leave a Reply

Your email address will not be published. Required fields are marked *