
RSS Chief Mohan Bhagwat Urges India to Forge Its Own Path Amid US Tariffs ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಅಮೆರಿಕದಂತಹ ದೇಶಗಳ ನೀತಿಗಳನ್ನು ಅನುಸರಿಸದೆ, ಭಾರತವು ತನ್ನದೇ ಆದ ಶಾಶ್ವತ ದೃಷ್ಟಿಕೋನದ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದ್ದಾರೆ.
ನವದೆಹಲಿ (ಸೆ.22): ಅಮೆರಿಕದ ಸುಂಕ ಬೆದರಿಕೆ ಮತ್ತು ವಲಸೆ ನಿರ್ಧಾರಗಳ ಹಿನ್ನೆಲೆಯಲ್ಲಿ ಭಾರತವು ತನ್ನದೇ ಆದ ಹಾದಿಯನ್ನು ರೂಪಿಸಿಕೊಂಡು, ಶಾಶ್ವತ ದೃಷ್ಟಿಕೋನದ ಮೂಲಕ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಗತಿಕ ಸಮಸ್ಯೆಗಳ ಮೂಲ ಕಾರಣವು ಕಳೆದ 2000 ವರ್ಷಗಳಿಂದಲೂ ಅನುಸರಿಸಲಾಗುತ್ತಿರುವ ವಿಭಜಿತ ದೃಷ್ಟಿಕೋನ ಎಂದು ತಿಳಿಸಿದರು.
ಈ ಪರಿಸ್ಥಿತಿ ಎದುರಿಸಲು ಭಾರತ ಎಲ್ಲಕ್ಕೂ ಸಿದ್ಧವಾಗಬೇಕು:
ಈ ಸಮಸ್ಯೆಗಳಿಂದ ಹೊರಬರಲು ಭಾರತ ಏನು ಬೇಕಾದರೂ ಮಾಡಬೇಕು, ಆದರೆ ಕುರುಡಾಗಿ ಮುಂದುವರಿಯುವಂತಿಲ್ಲ. ಭವಿಷ್ಯದಲ್ಲಿ ಇಂತಹ ಸವಾಲುಗಳನ್ನು ಎದುರಿಸಲು, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಜೀವನದ ನಾಲ್ಕು ಗುರಿಗಳನ್ನು ಆಧರಿಸಿದ ಭಾರತದ ಸಾಂಪ್ರದಾಯಿಕ ದೃಷ್ಟಿಕೋನವನ್ನು ಅನುಸರಿಸಬೇಕು ಎಂದರು.
ಪ್ರತಿಯೊಬ್ಬರಿಗೂ ವಿಭಿನ್ನ ಹಿತಾಸಕ್ತಿಗಳಿವೆ. ಆದ್ದರಿಂದ ಸಂಘರ್ಷ ಮುಂದುವರಿಯುತ್ತದೆ. ಆದರೆ ನಂತರ, ಕೇವಲ ರಾಷ್ಟ್ರೀಯ ಹಿತಾಸಕ್ತಿಗಳು ಮುಖ್ಯವಲ್ಲ. ತನ್ನ ಹಿತಾಸಕ್ತಿಗಳು ಸಹ ಮುಖ್ಯ. ತಾನು ಎಲ್ಲವನ್ನೂ ನನ್ನ ಕೈಯಲ್ಲಿ ಇಟ್ಟುಕೊಳ್ಳಲು ಬಯಸುತ್ತೇನೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸಿದೆ ಹೇಳಿದರು.
ಭಾರತ ವಿಶ್ವಗುರು, ವಿಶ್ವಾಮಿತ್ರನಾಗಲು ತನ್ನದೇ ದೃಷ್ಟಿಕೋನ ಹೊಂದಬೇಕು:
ಪರಿಸರ ಸಮಸ್ಯೆಗಳ ಕುರಿತು ಭಾರತವು ತನ್ನ ಬದ್ಧತೆಗಳನ್ನು ಪೂರೈಸಿದ ಏಕೈಕ ದೇಶ ಎಂದು ಭಾಗವತ್ ತಿಳಿಸಿದರು. ಆಹಾರ ಸರಪಳಿಯ ಕೆಳಭಾಗದಲ್ಲಿರುವುದು ಅಪರಾಧ. ಭಾರತವು ತನ್ನ ಶಾಶ್ವತ ದೃಷ್ಟಿಕೋನದಿಂದ ಮುನ್ನಡೆಯಬೇಕು, ಇದು ಸಾವಿರಾರು ವರ್ಷಗಳ ಪೂರ್ವಜರ ಅನುಭವದಿಂದ ರೂಪುಗೊಂಡಿದೆ ಎಂದು ಅವರು ಹೇಳಿದರು. ವಿಶ್ವಗುರು ಮತ್ತು ವಿಶ್ವಾಮಿತ್ರನಾಗಲು ಭಾರತವು ತನ್ನ ಸಾಂಪ್ರದಾಯಿಕ ದೃಷ್ಟಿಕೋನವನ್ನು ಆಧರಿಸಿ, ಧರ್ಮದ ನೆಲೆಯಲ್ಲಿ ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಭಾಗವತ್ ಕರೆ ನೀಡಿದರು.