ಬೆಂಗಳೂರಲ್ಲಿ ವಾಕಿಂಗ್ ಹೋದ ಮಹಿಳೆ 25 ಅಡಿ ಗುಂಡಿಗೆ ಬಿದ್ದು ಪರದಾಟ; ಮೊಬೈಲ್ ಟ್ರ್ಯಾಕ್ ಲೊಕೇಶನ್ ಮೂಲಕ ರಕ್ಷಣೆ! | Bangalore Police Rescue Woman From 25 Feet Pit Nagarabhavi Hoysala Heroics Sat

ಬೆಂಗಳೂರಲ್ಲಿ ವಾಕಿಂಗ್ ಹೋದ ಮಹಿಳೆ 25 ಅಡಿ ಗುಂಡಿಗೆ ಬಿದ್ದು ಪರದಾಟ; ಮೊಬೈಲ್ ಟ್ರ್ಯಾಕ್ ಲೊಕೇಶನ್ ಮೂಲಕ ರಕ್ಷಣೆ! | Bangalore Police Rescue Woman From 25 Feet Pit Nagarabhavi Hoysala Heroics Sat



ಬೆಂಗಳೂರಲ್ಲಿ ವಾಕಿಂಗ್ ಹೋದ ಮಹಿಳೆ 25 ಅಡಿ ಗುಂಡಿಗೆ ಬಿದ್ದು ಪರದಾಟ; ಮೊಬೈಲ್ ಟ್ರ್ಯಾಕ್ ಲೊಕೇಶನ್ ಮೂಲಕ ರಕ್ಷಣೆ! | Bangalore Police Rescue Woman From 25 Feet Pit Nagarabhavi Hoysala Heroics Sat

ಬೆಂಗಳೂರಿನ ನಾಗರಭಾವಿಯಲ್ಲಿ 56 ವರ್ಷದ ಮಹಿಳೆಯೊಬ್ಬರು 25 ಅಡಿ ಆಳದ ಗುಂಡಿಗೆ ಬಿದ್ದು ಅಪಾಯಕ್ಕೆ ಸಿಲುಕಿದ್ದರು. ಮಗ ನೀಡಿದ ದೂರಿನ ಮೇರೆಗೆ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದ ಚಂದ್ರಾ ಲೇಔಟ್ ಪೊಲೀಸರು, ಸಾರ್ವಜನಿಕರ ನೆರವಿನಿಂದ ಮಹಿಳೆಯನ್ನು ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಬೆಂಗಳೂರು (ಮಾ.06): ಸಿಲಿಕಾನ್ ಸಿಟಿಯ ಚಂದ್ರಾ ಲೇಔಟ್ ಪೊಲೀಸ್ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಅತ್ಯಂತ ರೋಚಕ ರಕ್ಷಣಾ ಕಾರ್ಯಾಚರಣೆಯೊಂದು ನಡೆದಿದೆ. ಸುಮಾರು 25 ಅಡಿ ಆಳದ ಗುಂಡಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 56 ವರ್ಷದ ಮಹಿಳೆಯನ್ನು ಬೆಂಗಳೂರು ಪೊಲೀಸರು ಸಿನಿಮೀಯ ಮಾದರಿಯಲ್ಲಿ ರಕ್ಷಿಸುವ ಮೂಲಕ ಅವರ ಜೀವ ಉಳಿಸಿದ್ದಾರೆ.

ಏನಿದು ಘಟನೆ?

ಸುಧಾ ಪರಿಮಳ (56) ಎಂಬ ಮಹಿಳೆ ಇಂದು ಬೆಳಗಿನ ಜಾವ ನಾಗರಭಾವಿ ಪಾರ್ಕ್ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಅಗೆಯಲಾಗಿದ್ದ ಸುಮಾರು 25 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಗುಂಡಿ ತೀವ್ರ ಆಳವಾಗಿದ್ದರಿಂದ ಹೊರಬರಲು ಸಾಧ್ಯವಾಗದೆ ಸುಧಾ ಅವರು ಅಲ್ಲಿಯೇ ಪರದಾಡಿದ್ದಾರೆ. ಬೆಳಗಿನ ಜಾವವಾಗಿದ್ದರಿಂದ ಅಲ್ಲಿ ಜನಸಂಚಾರವೂ ವಿರಳವಾಗಿತ್ತು. ಗುಂಡಿಯೊಳಗೆ ಬಿದ್ದ ಆಘಾತದಿಂದ ಸುಧಾ ಅವರು ಅಸ್ವಸ್ಥರಾಗಿ ಅಲ್ಲಿಯೇ ಬಿದ್ದಿದ್ದರು.

ರಕ್ಷಣೆಗೆ ಧಾವಿಸಿದ ಮೊಬೈಲ್ ತಂತ್ರಜ್ಞಾನ:

ಇತ್ತ ಸುಧಾ ಅವರು ಸಮಯಕ್ಕೆ ಸರಿಯಾಗಿ ಮನೆಗೆ ಮರಳದಿದ್ದಾಗ ಗಾಬರಿಗೊಂಡ ಅವರ ಮಗ ಕೂಡಲೇ ‘112’ (ನಮ್ಮ 100) ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಂದ್ರಾ ಲೇಔಟ್ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ, ಮಹಿಳೆಯ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದ್ದಾರೆ. ಮೊಬೈಲ್ ಸಿಗ್ನಲ್ ನಾಗರಭಾವಿ ಪಾರ್ಕ್ ಬಳಿಯೇ ಇರುವುದನ್ನು ಪತ್ತೆಹಚ್ಚಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದಾರೆ.

ಸಾರ್ವಜನಿಕರ ಸಹಾಯದಿಂದ ಯಶಸ್ವಿ ಕಾರ್ಯಾಚರಣೆ:

ಹುಡುಕಾಟದ ವೇಳೆ ಪಾರ್ಕ್ ಬಳಿ ಅಗೆಯಲಾಗಿದ್ದ ಆಳವಾದ ಗುಂಡಿಯೊಳಗೆ ಮಹಿಳೆ ಅಸ್ವಸ್ಥರಾಗಿ ಬಿದ್ದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯ ಸಾರ್ವಜನಿಕರ ಸಹಾಯ ಪಡೆದ ಹೊಯ್ಸಳ ಸಿಬ್ಬಂದಿ, ಹರಸಾಹಸ ಪಟ್ಟು 25 ಅಡಿ ಆಳದ ಗುಂಡಿಯಿಂದ ಸುಧಾ ಅವರನ್ನು ಮೇಲೆತ್ತಿದ್ದಾರೆ. ತೀವ್ರವಾಗಿ ಸುಸ್ತಾಗಿದ್ದ ಮತ್ತು ಅಸ್ವಸ್ಥರಾಗಿದ್ದ ಸುಧಾ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ನಿರ್ಲಕ್ಷ್ಯದ ಬಗ್ಗೆ ತನಿಖೆ:

ನಾಗರಭಾವಿಯಂತಹ ಜನನಿಬಿಡ ಪ್ರದೇಶದಲ್ಲಿ ಇಷ್ಟು ಆಳದ ಗುಂಡಿಯನ್ನು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅಗೆದಿದ್ದು ಯಾರು? ಎಂಬ ಬಗ್ಗೆ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ. ಬಿಬಿಎಂಪಿ ಅಥವಾ ಬೇರೆ ಯಾವುದಾದರೂ ಇಲಾಖೆಯ ಕಾಮಗಾರಿ ನಡೆದಿದೆಯೇ? ಅಲ್ಲಿ ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕಗಳನ್ನು ಯಾಕೆ ಹಾಕಿಲ್ಲ? ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಸಂಬಂಧಪಟ್ಟ ಗುತ್ತಿಗೆದಾರರು ಅಥವಾ ಇಲಾಖೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಪೊಲೀಸರ ಈ ಸಮಯಪ್ರಜ್ಞೆ ಮತ್ತು ತಾಂತ್ರಿಕತೆಯನ್ನು ಬಳಸಿಕೊಂಡು ಮಹಿಳೆಯನ್ನು ಪತ್ತೆಹಚ್ಚಿದ ರೀತಿಯನ್ನು ಬೆಂಗಳೂರು ನಾಗರಿಕರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ‘ನಮ್ಮ ಪೊಲೀಸರು ಸರಿಯಾದ ಸಮಯಕ್ಕೆ ಲೊಕೇಶನ್ ಟ್ರ್ಯಾಕ್ ಮಾಡದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ವೇಳೆ ಸರಿಯಾದ ಸುರಕ್ಷತಾ ಮುನ್ನೆಚ್ಚರಿಕೆ ವಹಿಸದಿದ್ದರೆ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆಯಿದ್ದು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.



Source link

Leave a Reply

Your email address will not be published. Required fields are marked *