Headlines

ಕುಂಭಮೇಳದ ಹುಡುಗಿ ಮೊನಾಲಿಸಾಗೆ ಜಗತ್ತಿನಲ್ಲಿ ರಕ್ಷಣೆ ಸಿಗುವ ಏಕೈಕ ಸ್ಥಳ ಕೇರಳ; ಸಿಪಿಎಂ ನಾಯಕಿ! | Monalisa Bhosle Kumbh Mela Beautiful Girl Marries Farman Khan Kerala Safety Sat

ಕುಂಭಮೇಳದ ಹುಡುಗಿ ಮೊನಾಲಿಸಾಗೆ ಜಗತ್ತಿನಲ್ಲಿ ರಕ್ಷಣೆ ಸಿಗುವ ಏಕೈಕ ಸ್ಥಳ ಕೇರಳ; ಸಿಪಿಎಂ ನಾಯಕಿ! | Monalisa Bhosle Kumbh Mela Beautiful Girl Marries Farman Khan Kerala Safety Sat



ಕುಂಭಮೇಳದ ಹುಡುಗಿ ಮೊನಾಲಿಸಾಗೆ ಜಗತ್ತಿನಲ್ಲಿ ರಕ್ಷಣೆ ಸಿಗುವ ಏಕೈಕ ಸ್ಥಳ ಕೇರಳ; ಸಿಪಿಎಂ ನಾಯಕಿ! | Monalisa Bhosle Kumbh Mela Beautiful Girl Marries Farman Khan Kerala Safety Sat

ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಲೇ ವೈರಲ್ ಆಗಿದ್ದ ಮೊನಾಲಿಸಾ, ಫರ್ಹಾನ್ ಖಾನ್‌ನನ್ನು ಪ್ರೀತಿಸಿ ಕೇರಳದಲ್ಲಿ ಮದುವೆಯಾಗಿದ್ದಾರೆ. ಜಗತ್ತಿನಲ್ಲಿ ತಮಗೆ ರಕ್ಷಣೆ ನೀಡುವ ಸ್ಥಳ ಕೇರಳ ಎಂದು ಭಾವಿಸಿ ಇಲ್ಲಿಗೆ ಬಂದಿದ್ದಾರೆ ಎಂದು ಸಿಎಂ ನಾಯಕಿ ಶ್ರೀಮತಿ ಟೀಚರ್ ಹೇಳಿದ್ದಾರೆ.

ವಿಶ್ವ ಪ್ರಸಿದ್ಧ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಾ ವೈರಲ್ ಆಗಿದ್ದ ಹುಡುಗಿ ಮೊನಾಲಿಸಾ ಭೋಸ್ಲೆ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಕಳೆದೊಂದೂವರೆ ವರ್ಷದಿಂದ ಅನ್ಯಕೋಮಿನ ಮಹಾರಾಷ್ಟ್ರದ ಯುವಕ ಫರ್ಮಾನ್ ಖಾನ್‌ನನ್ನು ಪ್ರೀತಿ ಮಾಡುತ್ತಿದ್ದ ಮೊನಾಲಿಸಾಗೆ ಜಗತ್ತಿನ ಯಾವ ಮೂಲೆಯಲ್ಲಾದರೂ ರಕ್ಷಣೆ ಸಿಗುತ್ತದೆ ಎಂದರೆ ಅದು ಕೇರಳ ಮಾತ್ರ ಎಂದು ನಿರ್ಧಿಸಿದಳು. ಹಾಗಾಗಿ, ಕೇರಳಕ್ಕೆ ಬಂದು ಫರ್ಹಾನ್ ಜೊತೆಗೆ ಮದುವೆ ಮಾಡಿಕೊಂಡಿದ್ದಾಳೆ ಎಂದು ಸಿಎಂ ನಾಯಕಿ ಪಿ.ಕೆ. ಶ್ರೀಮತಿ ಟೀಚರ್ ಹೇಳಿದ್ದಾರೆ.

ಹೌದು, ಕಳೆದ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುವಾಗ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಅವರು ಕೇರಳದಲ್ಲಿ ಮದುವೆಯಾಗಿದ್ದಾರೆ. ಈ ಬಗ್ಗೆ ಸಿಪಿಎಂ ಕೇಂದ್ರ ಸಮಿತಿ ಸದಸ್ಯೆ ಪಿಕೆ ಶ್ರೀಮತಿ ಟೀಚರ್ ಪ್ರತಿಕ್ರಿಯೆ ನೀಡಿದ್ದಾರೆ.

ಮೊನಾಲಿಸಾ, ಮಹಾರಾಷ್ಟ್ರ ಮೂಲದ ಮೊಹಮ್ಮದ್ ಫರ್ಮಾನ್ ಅವರನ್ನು ತಿರುವನಂತಪುರದ ಪೂವಾರ್ ಬಳಿಯ ಅರುಮನೂರ್ ನೈನಾರ್ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವರಿಸಿದ್ದಾರೆ. ‘ಜಗತ್ತಿನ ಯಾವ ಮೂಲೆಯಲ್ಲಿ ತಮಗೆ ರಕ್ಷಣೆ ಸಿಗುತ್ತದೆ ಎಂದು ಆಕೆಯ ಮನಸ್ಸು ಹುಡುಕಾಡಿತು. ಅದು ಕೇರಳವೇ ಎಂದು ಅವರಿಗೆ ಖಚಿತವಾಗಿ ತಿಳಿದಿತ್ತು. ಹಾಗಾಗಿಯೇ ಅವರು ಇಲ್ಲಿಗೆ ಬಂದು ಮದುವೆಯಾದರು’ ಎಂದು ಪಿ.ಕೆ. ಶ್ರೀಮತಿ ಟೀಚರ್ ಹೇಳಿದ್ದಾರೆ.

ಶಾಲೆ ಮೆಟ್ಟಿಲೇರದ ಮೊನಾಲಿಸಾಗೆ ಕೇರಳ ರಕ್ಷಣೆ

ಧಾರ್ಮಿಕ ಸೌಹಾರ್ದತೆಗೆ ಹೆಸರುವಾಸಿಯಾದ ಕೇರಳ. ದೇವರ ಸ್ವಂತ ನಾಡಿನಲ್ಲಿ ಮೊನಾಲಿಸಾಗೆ ಮದುವೆ. ಶಾಲೆಯ ಮೆಟ್ಟಿಲನ್ನೇ ಹತ್ತದ ಆ ಹುಡುಗಿ ಮೊನಾಲಿಸಾ. ಜಗತ್ತಿನ ಯಾವ ಮೂಲೆಯಲ್ಲಿ ರಕ್ಷಣೆ ಸಿಗುತ್ತದೆ ಎಂದು ಅವರ ಮನಸ್ಸು ಹುಡುಕಾಡಿತು. ಅದು ಕೇರಳವೇ ಎಂದು ಅವರಿಗೆ ಖಚಿತವಾಗಿ ತಿಳಿದಿತ್ತು. ಅವರು ಬಂದರು. ಮದುವೆಯಾದರು. ಸಂತೋಷ. ಅರುಮನೂರ್ ದೇವಸ್ಥಾನದ ಆಡಳಿತ ಮಂಡಳಿಗೆ ಧನ್ಯವಾದಗಳು’ ಎಂದು ಪಿಕೆ ಶ್ರೀಮತಿ ಟೀಚರ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಚಿವರೇ ಮುಂದೆ ನಿಂತು ಮದುವೆ ಮಾಡಿಸಿದರು

ಇಂದು ಬೆಳಗ್ಗೆ, ತಮ್ಮ ತಂದೆ ಬಲವಂತವಾಗಿ ಊರಿಗೆ ವಾಪಸ್ ಕರೆದೊಯ್ಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮೊನಾಲಿಸಾ, ತಿರುವನಂತಪುರದ ತಂಪನೂರ್ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೋರಿದ್ದರು. ಪೂವಾರ್‌ನ ಶೂಟಿಂಗ್ ಸ್ಥಳದಿಂದ ಗೆಳೆಯ ಫರ್ಮಾನ್ ಜೊತೆ ಬಂದಿದ್ದ ಮೊನಾಲಿಸಾಳನ್ನು, ಆಕೆಯ ಸ್ವಂತ ಇಚ್ಛೆಯಂತೆ ಪೊಲೀಸರು ಕಳುಹಿಸಿಕೊಟ್ಟರು. ಬಳಿಕ, ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರೇ ಖುದ್ದಾಗಿ ದೇವಸ್ಥಾನಕ್ಕೆ ಬಂದು ಮದುವೆ ನೆರವೇರಿಸಿದರು. ಮೊನಾಲಿಸಾ ಕುಟುಂಬ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ, ಈ ಜೋಡಿ ಕೇರಳದಲ್ಲಿ ಆಶ್ರಯ ಪಡೆದಿತ್ತು. ಕೇರಳದಲ್ಲೇ ಮದುವೆಯಾಗಲು ಬಯಸುವುದಾಗಿ ಮೊನಾಲಿಸಾ ಮತ್ತು ಫರ್ಮಾನ್ ತಿಳಿಸಿದ್ದರು.



Source link

Leave a Reply

Your email address will not be published. Required fields are marked *