Headlines

SSLC ತೃತೀಯ ಭಾಷೆ ಗ್ರೇಡಿಂಗ್ ನೀತಿ ಬಗ್ಗೆ ಮರುಪರಿಶೀಲಿಸಿ: ಸಿಎಸ್‌ ಶಾಲಿನಿಗೆ ಗೌರ್‍ನರ್‌ ಪತ್ರ! | Third Language Grading Row Governor Asks Karnataka Govt To Re Examine Decision Rav

SSLC ತೃತೀಯ ಭಾಷೆ ಗ್ರೇಡಿಂಗ್ ನೀತಿ ಬಗ್ಗೆ ಮರುಪರಿಶೀಲಿಸಿ: ಸಿಎಸ್‌ ಶಾಲಿನಿಗೆ ಗೌರ್‍ನರ್‌ ಪತ್ರ! | Third Language Grading Row Governor Asks Karnataka Govt To Re Examine Decision Rav



SSLC ತೃತೀಯ ಭಾಷೆ ಗ್ರೇಡಿಂಗ್ ನೀತಿ ಬಗ್ಗೆ ಮರುಪರಿಶೀಲಿಸಿ: ಸಿಎಸ್‌ ಶಾಲಿನಿಗೆ ಗೌರ್‍ನರ್‌ ಪತ್ರ! | Third Language Grading Row Governor Asks Karnataka Govt To Re Examine Decision Rav

ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಪಾಸ್-ಫೇಲ್ ಬದಲು ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯಪಾಲರು ಮಧ್ಯಪ್ರವೇಶಿಸಿ, ವಿದ್ಯಾರ್ಥಿಗಳು ಮತ್ತು ರಾಜ್ಯದ ಶೈಕ್ಷಣಿಕ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ನಿರ್ದೇಶನ 

ಬೆಂಗಳೂರು (ಏ.4): ಎಸ್ಸೆಸ್ಸೆಲ್ಸಿಯಲ್ಲಿ ಹಿಂದಿ ಸೇರಿ ತೃತೀಯ ಭಾಷಾ ವಿಷಯಗಳಲ್ಲಿ ಪಾಸ್‌-ಫೇಲ್‌ ಪದ್ಧತಿ ಕೈ ಬಿಟ್ಟು ಗ್ರೇಡಿಂಗ್‌ ನೀತಿ ಜಾರಿಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಪರ-ವಿರೋಧ ಚರ್ಚೆಗೆ ಒಳಗಾಗಿರುವ ನಡುವೆಯೇ ಈ ವಿಚಾರದಲ್ಲಿ ರಾಜ್ಯಪಾಲರೂ ಮಧ್ಯಪ್ರವೇಶಿಸಿದ್ದಾರೆ.

ಈ ವಿಷಯವನ್ನು ಪರಿಶೀಲಿಸಿ ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇತರೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಸಮಾಲೋಚಿಸಿ ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಜ್ಯದ ಶೈಕ್ಷಣಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಈ ಸಂಬಂಧ ರಾಜ್ಯಪಾಲರ ಆದೇಶಾನುಸಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್‌.ಪ್ರಭುಶಂಕರ್‌ ಶುಕ್ರವಾರ ಪತ್ರ ಬರೆದಿದ್ದಾರೆ. ಬೆಂಗಳೂರಿನ ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘಟನೆಯ ಪ್ರತಿನಿಧಿಗಳು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿ ಆಧರಿಸಿ ಈ ಪತ್ರ ಬರೆಯಲಾಗಿದೆ. ಸಂಘಟನೆಯ ಪತ್ರದಲ್ಲಿ ವಿದ್ಯಾರ್ಥಿಗಳಲ್ಲಿ ಭಾಷಾ ವೈವಿಧ್ಯತೆ, ಅರಿವು ಮತ್ತು ಬೌದ್ಧಿಕ ಬೆಳವಣಿಗೆ ಬೆಳೆಸುವಲ್ಲಿ ತೃತೀಯ ಭಾಷೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಲಾಗಿದೆ.

ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲು ಕೇವಲ ಗ್ರೇಡ್‌ ನೀಡುವ ಪ್ರಸ್ತಾವವು ವಿದ್ಯಾರ್ಥಿಗಳಲ್ಲಿ ಅಜಾಗರೂಕತೆ ಉಂಟುಮಾಡಿ ಆ ಭಾಷಾ ವಿಷಯಗಳ ಕಲಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಪ್ರೇರೇಪಿಸಬಹುದು. ಇದು ಶೈಕ್ಷಣಿಕ ಮಹತ್ವವನ್ನೂ ಕುಗ್ಗಿಸಬಹುದು. ಇಂತಹ ನೀತಿ ನಿರ್ಧಾರದಿಂದ ರಾಜ್ಯದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟ ಮತ್ತು ಒಳಗೊಳ್ಳುವಿಕೆ ಮೇಲೆ ಆಗುವ ದೀರ್ಘಕಾಲೀನ ಪರಿಣಾಮಗಳ ಕುರಿತು ಶಿಕ್ಷಕರು, ಪೋಷಕರು ಮತ್ತು ಶಿಕ್ಷಣತಜ್ಞರಲ್ಲೂ ಆತಂಕವಿದೆ ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೃತೀಯ ಭಾಷಾ ವಿಷಯದಲ್ಲಿ ಕೈಗೊಂಡಿರುವ ನಿರ್ಧಾರವನ್ನು ಸಮಗ್ರವಾಗಿ ಪರಿಶೀಲಿಸಬೇಕೆಂದು ಬಯಸಿದ್ದಾರೆ. ಹಾಗಾಗಿ ಈ ವಿಷಯವನ್ನು ಪರಿಶೀಲಿಸಿ ಶಾಲಾ ಶಿಕ್ಷಣ ಇಲಾಖೆ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಸಮಾಲೋಚಿಸಿ ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ರಾಜ್ಯದ ಶೈಕ್ಷಣಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿರುವುದಾಗಿ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *